ನಿಮ್ಮ ಮನಸ್ಸಿನಲ್ಲಿ ಆಗಾಗ್ಗೆ ಬರುವ ಪ್ರಶ್ನೆಯೆಂದರೆ ಪ್ರಪಂಚವು ಎಲ್ಲಿ ಕೊನೆಗೊಳ್ಳುತ್ತದೆ ಅನ್ನೋದು ಅಲ್ವಾ? ಪ್ರಪಂಚದ ಕೊನೆಯ ರಸ್ತೆಯ ನಂತರ ಆ ದೃಶ್ಯ ಹೇಗೆ ಕಾಣುತ್ತದೆ? ಅನ್ನೋದೆಲ್ಲಾ ನಿಮ್ಮ ತಲೆಯಲ್ಲಿ ಮೂಡುತ್ತೆ. ಆದರೆ ಈ ಪ್ರಶ್ನೆಗಳಿಗೆ ಯಾರ ಬಳಿಯೂ ಉತ್ತರಗಳಿರುವುದಿಲ್ಲ, ಆದರೆ ಇಂದು ನಾವು ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲಿದ್ದೇವೆ.
ಯುರೋಪಿಯನ್ ದೇಶ ನಾರ್ವೆಯಲ್ಲಿ (European country Norway) ಒಂದು ರಸ್ತೆ ಇದೆ, ಇದನ್ನು ವಿಶ್ವದ ಕೊನೆಯ ರಸ್ತೆ ಅಥವಾ ಲಾಸ್ಟ್ ರೋಡ್ ಎಂದು ಕರೆಯಲಾಗುತ್ತದೆ. ಈ ರಸ್ತೆಯ ಅಂತ್ಯದ ನಂತರ, ನೀವು ಸಮುದ್ರ ಮತ್ತು ಹಿಮನದಿಗಳನ್ನು ಮಾತ್ರ ನೋಡುತ್ತೀರಿ ಎಂದು ಹೇಳಲಾಗುತ್ತದೆ. ಇದನ್ನು ಹೊರತುಪಡಿಸಿ, ಎದುರು ನೋಡಲು ಬೇರೆ ಏನೂ ಇರೋದೆ ಇಲ್ಲ. ಈ ರಸ್ತೆಯನ್ನು ಇ-69 ಹೆದ್ದಾರಿ ಎಂದು ಕರೆಯಲಾಗುತ್ತದೆ. ಈ ರಸ್ತೆಯ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿಯೋಣ.
27
ಈ ರಸ್ತೆ ನಾರ್ವೆ ದೇಶವನ್ನು ಸಂಪರ್ಕಿಸುತ್ತೆ
ಉತ್ತರ ಧ್ರುವವು ಭೂಮಿಯ ಅತ್ಯಂತ ದೂರದ ಬಿಂದುವಾಗಿದ್ದು, ಭೂಮಿಯ ಅಕ್ಷವು ತಿರುಗುತ್ತದೆ, ಇದು ನಾರ್ವೆ ದೇಶ ಆಗಿದೆ. ಇ -69 ಹೆದ್ದಾರಿಯು (E 69 Highway) ಭೂಮಿಯ ತುದಿಗಳನ್ನು ನಾರ್ವೆಗೆ ಸಂಪರ್ಕಿಸುತ್ತದೆ. ಕೊನೆಯ ರಸ್ತೆಯ ಬಗ್ಗೆ ಹೇಳೋದಾದ್ರೆ, ಇಲ್ಲಿಂದ ಈ ರಸ್ತೆ ನೀವು ಮುಂದೆ ಯಾವುದೇ ಮಾರ್ಗವನ್ನು ನೋಡದ ಸ್ಥಳದಲ್ಲಿ ಕೊನೆಗೊಳ್ಳುತ್ತದೆ. ಪ್ರತಿ ಬದಿಯಲ್ಲಿ ನೀವು ಹಿಮವನ್ನು ಮಾತ್ರ ನೋಡುತ್ತೀರಿ, ರಸ್ತೆಯ ಉದ್ದವು ಸುಮಾರು 14 ಕಿ.ಮೀ.ಇದೆ.
37
ನೀವು ಏಕಾಂಗಿಯಾಗಿ ವಾಹನ ಚಲಾಯಿಸಲು ಅಥವಾ ಹೋಗಲು ಸಾಧ್ಯವಿಲ್ಲ.
ನೀವು ಇ -69 ಹೆದ್ದಾರಿಯಲ್ಲಿ ಏಕಾಂಗಿಯಾಗಿ ಹೋಗಲು ಯೋಚಿಸುತ್ತಿದ್ದರೆ ಆ ಯೋಚನೆ ಬಿಡಿ, ಯಾಕಂದ್ರೆ, ಇಲ್ಲಿ ಒಬ್ಬರೆ ಟ್ರಾವೆಲ್ ಮಾಡಲು ಸಾಧ್ಯವಿಲ್ಲ ಮತ್ತು ವಿಶ್ವದ ಕೊನೆಯ (Last raod of the world) ತುದಿಯನ್ನು ಹತ್ತಿರದಿಂದ ನೋಡಲು ಬಯಸಿದರೆ, ಇದಕ್ಕಾಗಿ ನೀವು ಒಂದು ಗ್ರೂಪ್ ಮಾಡಬೇಕು, ಆಗ ಮಾತ್ರ ನೀವು ಇಲ್ಲಿಗೆ ತಲುಪಲು ಸಾಧ್ಯವಾಗುತ್ತೆ.
47
ಈ ರಸ್ತೆಯಲ್ಲಿ ಯಾವುದೇ ವ್ಯಕ್ತಿಗೆ ಏಕಾಂಗಿಯಾಗಿ ಹೋಗಲು ಅನುಮತಿಸಲಾಗುವುದಿಲ್ಲ ಅಥವಾ ಕಾರು ಇಲ್ಲಿಗೆ ಹೋಗಲು ಸಾಧ್ಯವಿಲ್ಲ. ಕಾರಣವೆಂದರೆ, ಹಲವಾರು ಕಿಲೋಮೀಟರ್ ಗಳವರೆಗೆ ಎಲ್ಲೆಡೆ ದಟ್ಟವಾದ ಮಂಜುಗಡ್ಡೆಯ ರಾಶಿ ಹರಡಿದೆ, ಇದರಿಂದಾಗಿ ಇಲ್ಲಿ ಕಳೆದುಕೊಳ್ಳುವ ಅಪಾಯವಿದೆ. ಹಾಗಾಗಿ ಏಕಾಂಗಿ ಪ್ರಯಾಣಕ್ಕೆ ಅವಕಾಶ ಇಲ್ಲ
57
ಆರು ತಿಂಗಳವರೆಗೆ ಕತ್ತಲೆ (6 months darkness)
ಇಲ್ಲಿ ಹಗಲು ಮತ್ತು ರಾತ್ರಿಯ ಹವಾಮಾನವೂ ತುಂಬಾ ಭಿನ್ನ. ಉತ್ತರ ಧ್ರುವದ ಕಾರಣದಿಂದಾಗಿ, ಚಳಿಗಾಲದಲ್ಲಿ ಆರು ತಿಂಗಳ ಕಾಲ ಕತ್ತಲೆ ಇರುತ್ತದೆ, ಬೇಸಿಗೆಯಲ್ಲಿ, ಸೂರ್ಯನು ಇಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಾನೆ. ಚಳಿಗಾಲದಲ್ಲಿ ಹಗಲು ಇಲ್ಲ ಮತ್ತು ಬೇಸಿಗೆಯಲ್ಲಿ ರಾತ್ರಿ ಇಲ್ಲಿ ಇರೋದೆ ಇಲ್ಲ.
67
ಅಚ್ಚರಿ ವಿಷಯ ಏನಂದ್ರೆ, ಇಂತದ್ದೆಲ್ಲಾ ಸಮಸ್ಯೆ ಇದ್ರೂ ಸಹ, ಅನೇಕ ಕಷ್ಟಗಳ ನಂತರವೂ ಅನೇಕ ಜನರು ಇಲ್ಲಿ ವಾಸಿಸುತ್ತಿದ್ದಾರೆ. ಈ ಸ್ಥಳದ ತಾಪಮಾನವು ಚಳಿಗಾಲದಲ್ಲಿ ಮೈನಸ್ 43 ಡಿಗ್ರಿ ಮತ್ತು ಬೇಸಿಗೆಯಲ್ಲಿ ಶೂನ್ಯ ಡಿಗ್ರಿ ತಲುಪುತ್ತದೆ.
77
ಸೂರ್ಯಾಸ್ತದ ಸೊಬಗು
ಇಲ್ಲಿ ಸೂರ್ಯಾಸ್ತಮಾನ ನೋಡೋದು ಮತ್ತು ಪೋಲಾರ್ ಸೈಟ್ಸ್ ನೋಡೋದು ತುಂಬಾನೆ ಸುಂದಾರವಾಗಿರುತ್ತೆ. ಹಿಂದೆ ಈ ಸ್ಥಳ ನಿರ್ಜನವಾಗಿದ್ದು, ಆದರೆ 1930 ರಿಂದ ಇಲ್ಲಿ ಅಭಿವೃದ್ಧಿ ಪ್ರಾರಂಭವಾಯಿತು. 1934 ರ ಸುಮಾರಿಗೆ ಪ್ರವಾಸಿಗರು ಇಲ್ಲಿಗೆ ಬರಲು ಪ್ರಾರಂಭಿಸಿದರು. ಈಗ ನೀವು ಈ ಸ್ಥಳದಲ್ಲಿ ಅನೇಕ ಹೋಟೆಲ್ ಗಳು ಮತ್ತು ರೆಸ್ಟೋರೆಂಟ್ ಗಳನ್ನು ಸಹ ಕಾಣಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.