ಕರ್ನಾಟಕದ ಕುರಿತು ಕನ್ನಡಿಗರಾದ ನಿಮಗೆ ಈ ಮಾಹಿತಿ ತಿಳಿದಿದ್ಯಾ?

Published : Feb 13, 2026, 09:01 PM IST

Know About Karnataka: ನಮ್ಮ ಕರ್ನಾಟಕದ ಕುರಿತು ನಮಗೆ ಗೊತ್ತಿರದ ಹಲವಾರು ಅಂಶಗಳಿವೆ. ಇವತ್ತು ನಿಮಗೆ ಗೊತ್ತಿರದ ಒಂದಷ್ಟು ವಿಚಾರಗಳನ್ನು ತಿಳಿಸ್ತೀವಿ. ನೀವು ಕನ್ನಡಿಗರಾಗಿದ್ದು, ಕರ್ನಾಟಕದ ಬಗ್ಗೆ ಒಂದಷ್ಟು ಮಾಹಿತಿ ತಿಳಿಯುವ ಆಸಕ್ತಿ ಇದ್ದರೆ ಇಲ್ಲಿದೆ ಗೊತ್ತಿರದ ಒಂದಷ್ಟು ವಿಷಯಗಳು. 

PREV
19
ಕರ್ನಾಟಕದ ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕ ಕೇವಲ ಒಂದು ರಾಜ್ಯವಲ್ಲ - ಅದು ಒಂದು ನಾಗರಿಕತೆ. ಕಾಲಾತೀತ ಜ್ಞಾನವನ್ನು ಪಿಸುಗುಟ್ಟುವ ಪ್ರಾಚೀನ ಕಲ್ಲಿನ ದೇವಾಲಯಗಳಿಂದ ಹಿಡಿದು, ಶಾಂತಿ ಮತ್ತು ಚಿಂತನೆಯಲ್ಲಿ ಬೇರೂರಿರುವ ಬುದ್ಧ ಮತ್ತು ಜೈನ ಪರಂಪರೆಗಳವರೆಗೆ. ಜಗತ್ತನ್ನು ಎಚ್ಚರಗೊಳಿಸುವ ಕಾಫಿ ತೋಟಗಳಿಂದ ಹಿಡಿದು, ಭೂಮಿಯನ್ನು ರೂಪಿಸುವ ರೈತರವರೆಗೆ. ಅರಣ್ಯ ಪರಂಪರೆಯನ್ನು ಕಾಪಾಡುವ ಆನೆಗಳಿಂದ ಹಿಡಿದು, ತೇಲಿಸುವಂತೆ ಮಾಡುವ ಶಾಸ್ತ್ರೀಯ ಸಂಗೀತದವರೆಗೂ ಕರ್ನಾಟಕದಲ್ಲಿ ಎಲ್ಲಾ ಇದೆ. ಆದ್ರೆ ಕರ್ನಾಟಕದಲ್ಲೇ ಇದ್ದು, ಕನ್ನಡಿಗರಾಗಿ ನಿಮಗೇ ಗೊತ್ತಿರದ ನಮ್ಮ ರಾಜ್ಯದ ಕೆಲವು ಮಹತ್ವದ ಸಂಗತಿಗಳನ್ನು ನೀವು ಇಂದು ತಿಳಿಯಿರಿ.

29
ಆರಂಭಿಕ ಜೀವನದ ತೊಟ್ಟಿಲು

ಹನ್ಸ್ಗಿವ್ಯಾಲಿಯನ್ನು ಭಾರತದ ಆರಂಭಿಕ ಜೀವನದ ತೊಟ್ಟಿಲು ಎನ್ನಲಾಗುತ್ತದೆ. ಕರ್ನಾಟಕದ ಯಾದಗಿರಿ ಜಿಲ್ಲೆಯಲ್ಲಿರುವ ಹನ್ಸ್ಗಿ, ಆರಂಭಿಕ ಮಾನವ ವಾಸಸ್ಥಳ ಮತ್ತು ಕಾರ್ಖಾನೆ ತಾಣವೆಂದು ಕರೆಯಲ್ಪಡುವ ಲೋ ಪ್ಯಾಲಿಯೊಲಿಥಿಕ್ ಯುಗದ ಮಹತ್ವದ ಪುರಾತತ್ತ್ವ ಶಾಸ್ತ್ರದ ತಾಣವಾಗಿದೆ. ಒಂದು ಮಿಲಿಯನ್ ವರ್ಷಕ್ಕೂ ಹಿಂದಿನ ಕಲ್ಲಿನ ಸಲಕರಣೆಗಳು ಇಲ್ಲಿ ಲಭ್ಯವಾಗಿದೆ. ಈ ಕುರಿತು ನಿಮಗೆ ಮಾಹಿತಿ ಇತ್ತಾ?

39
ಭಾರತೀಯ ಗಣಿತಶಾಸ್ತ್ರದ ಜನ್ಮ ಸ್ಥಳ

ಭಾಸ್ಕರ II ಅಲ್ಲದೇ ಹಲವು ಗಣಿತ ವಿದ್ವಾಂಸರು ಕರ್ನಾಟಕದಲ್ಲಿ ಹುಟ್ಟಿದ್ದಾರೆ. ಸೊನ್ನೆಯ ಆರಂಭಿಕ ಕೆಲಸ, ಬೀಜಗಣಿತ, ಅಂಕಗಣಿತ ಮತ್ತು ಆರಂಭಿಕ ಭಾರತ ಮತ್ತು ಜಾಗತಿಕ ಕಲನಶಾಸ್ತ್ರದ ಆಕಾರಗಳನ್ನು ನೀಡಿದ್ದು, ಕರ್ನಾಟಕ.

49
ದಕ್ಷಿಣದಲ್ಲಿ ಬೌಧ ಮತ ಮತ್ತು ಜೈನ ಧರ್ಮ

ಬೌಧ ಧರ್ಮ, ಜೈನ ಧರ್ಮ, ಗುಹೆಗಳು, ಶಾಸನಗಳು ಎಲ್ಲವೂ ದಕ್ಷಿಣ ಭಾರತದಲ್ಲಿ ಹರಡಿದ್ದು ಕರ್ನಾಟಕದ ಮೂಲಕವೇ. ಶತಮಾನಗಳ ಹಿಂದಿನ ಜೈನ ಮತ್ತು ಬೌಧ ಪರಂಪರೆಯ ಇತಿಹಾಸವನ್ನು ನಾವು ಇಲ್ಲಿ ಕಾಣಬಹುದು.

59
ಹಂಪಿ

ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿನ ವೈಭವವನ್ನು ಇತಿಹಾಸಗಳ ಮೂಲಕ ಹಾಗೂ ಅಳಿದುಳಿದ ವಾಸ್ತುಶಿಲ್ಪದ ಮೂಲಕ ಪತ್ತೆ ಮಾಡಬಹುದು. ಇದು ಭಾರತದ ಶ್ರೀಮಂತ ನಗರವಾಗಿತ್ತು, ಇಲ್ಲಿನ ಐಕಾನಿಕ್ ಕಲ್ಲಿನ ದೇವಾಲಯಗಳು, ಮುಂದುವರಿದ ನಗರ ಯೋಜನೆ, ಕರಕುಶಲತೆ ಎಲ್ಲವೂ ಅದ್ಭುತವಾಗಿದೆ.

69
ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರು

ಬ್ರಿಟೀಷ್ ಸರ್ಕಾರದ ವಿರುದ್ಧ ಭಾರತದಲ್ಲಿ ಆರಂಭದಲ್ಲಿ ಶಸ್ತ್ರ ಹಿಡಿದು ಹೋರಾಡಿದವರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಒಬ್ಬರು. ಇವರಲ್ಲದೇ ಸಂಗೊಳ್ಳಿ ರಾಯಣ್ಣ, ಟಿಪ್ಪು ಸುಲ್ತಾನ, ಕಾರ್ನಾಡ್ ಸದಾಶಿವ ರಾವ್, ಕಮಲಾದೇವಿ ಚಟ್ಟೋಫಾಧ್ಯಾಯ ಇವರೆಲ್ಲರೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ನಮ್ಮ ಕನ್ನಡಿಗರು.

79
ಭಾಷೆ ಮತ್ತು ಸಾಹಿತ್ಯ

ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದು ಕನ್ನಡ. ಕರ್ನಾಟಕದ ಸಾಹಿತ್ಯಗಳು, ಕವನಗಳ, ಕವಿಗಳು, ಸಾಹಿತಿಗಳು, ಲೇಖಕರು ಭಾರತೀಯ ಸಾಹಿತ್ಯ ಪರಂಪರೆಯನ್ನು ಪೋಷಿಸಿತು.

89
ವಿಜ್ಞಾನ ಮತ್ತು ಬಾಹ್ಯಾಕಾಶ

ಭಾರತದ ಬಾಹ್ಯಾಕಾಶ ಮಿಶನ್ ಡಿಸೈನ್ ಆಗಿರುವುದು ಮತ್ತು ನಿಯಂತ್ರಣದಲ್ಲಿಡುವುದು ಕರ್ನಾಟಕ. ಉಪಗ್ರಹಗಳಿಂದ ಹಿಡಿದು, ಮಂಗಳ ಗ್ರಹಗಳವರೆಗೂ ಎಲ್ಲವೂ ಕರ್ನಾಟಕದ ಇಸ್ರೋದಲ್ಲಿ ಕಾರ್ಯ ನಿರ್ವಹಿಸುತ್ತದೆ.

99
ವನ್ಯ ಜೀವಿ ಮತ್ತು ಪ್ರಕೃತಿ

ಪ್ರಪಂಚದ ಶ್ರೀಮಂತ ಜೀವವೈವಿಧ್ಯ ಇರುವ ಪಶ್ಚಿಮ ಘಟ್ಟಗಳ ಮುಖ್ಯ ತಾಣ ಕರ್ನಾಟಕದಲ್ಲಿದೆ. ಕರ್ನಾಟಕವು ಆನೆಗಳು, ಹುಲಿಗಳು ಮತ್ತು ಸ್ಥಳೀಯ ಪ್ರಭೇದಗಳಿಗೆ ನೆಲೆಯಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories