ಇನ್ನೊಂದು ದೇಶವನ್ನು ಪ್ರವೇಶಿಸಲು ನಿಮಗೆ ವೀಸಾ ಬೇಕು, ಅಥವಾ ಏನಾದರೊಂದು ಪರ್ಮಿಶನ್, ಲೈಸೆನ್ಸ್ ಇರಲೇಬೇಕು ಅನ್ನೋದು ನಿಮಗೆ ಗೊತ್ತಿದೆ. ಆದರೆ ಭಾರತದಲ್ಲಿ ಅನುಮತಿಯಿಲ್ಲದೆ ಹೋಗಲು ಸಾಧ್ಯವಿಲ್ಲದ ಅನೇಕ ನಗರಗಳಿವೆ ಎಂದು ನಿಮಗೆ ತಿಳಿದಿದೆಯೇ? ಭಾರತದ ಸ್ಥಳಗಳಿಗೆ ಅಗತ್ಯವಿರುವ ಅನುಮತಿಯನ್ನು ILP ಅಂದರೆ ಇನ್ನರ್ ಲೈನ್ ಪರ್ಮಿಷನ್ (inner line permission) ಎಂದು ಕರೆಯಲಾಗುತ್ತದೆ. ವರದಿಗಳ ಪ್ರಕಾರ, ಅಂತರರಾಷ್ಟ್ರೀಯ ಗಡಿಯು ಈ ಸ್ಥಳಗಳ ಮೂಲಕ ಹಾದುಹೋಗುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿಗೆ ಪ್ರವೇಶಿಸುವ ಮೊದಲು ಪರವಾನಗಿಯ ಅಗತ್ಯವಿದೆ. ಬನ್ನಿ ಅಂತಹ ಸ್ಥಳಗಳ ಬಗ್ಗೆ ತಿಳಿದುಕೊಳ್ಳೋಣ..
ಲಡಾಖ್ (Ladakh): ಲಡಾಖ್ನಲ್ಲಿ ಕೆಲವು ಸ್ಥಳಗಳು ಗಡಿ ನಿಯಂತ್ರಣ ರೇಖೆಯ (line of control) ಬಳಿ ಇವೆ, ಆದ್ದರಿಂದ ಅಲ್ಲಿಗೆ ಹೋಗಲು ಪರವಾನಗಿ ಅಗತ್ಯವಿದೆ. ಇದಲ್ಲದೆ, ನುಬ್ರಾ ಕಣಿವೆ, ತ್ಸೊ ಮೊರಿರಿ ಸರೋವರ, ಖರ್ದುಂಗ್ಲಾ ಪಾಸ್ ಸಹ ಮೊದಲಾದ ಸ್ಥಳಗಳಿಗೆ, ಪ್ರತಿಯೊಬ್ಬರೂ ಕೇವಲ ಒಂದು ದಿನದ ಪರವಾನಗಿಯನ್ನು ಮಾತ್ರ ಪಡೆಯುತ್ತಾರೆ. ದೇಶ ಮತ್ತು ವಿಶ್ವದೆಲ್ಲೆಡೆಯಿಂದ ಪ್ರತಿ ವರ್ಷ ಲಡಾಖ್ಗೆ ಅನೇಕ ಪ್ರವಾಸಿಗರು ಆಗಮಿಸುತ್ತಾರೆ.
ನಾಗಾಲ್ಯಾಂಡ್ (Nagaland): ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ನಾಗಾಲ್ಯಾಂಡ್ ನ ಸುಂದರ ಕಣಿವೆಗಳನ್ನು ನೋಡಲು ಬರುತ್ತಾರೆ. ಆದರೆ ಕೊಹಿಮಾ, ಮೊಕೊಕ್ಚುಂಗ್, ವೋಖಾ, ದಿಮಾಪುರ್, ಮೋನ್, ಕಿಫಿರ್ ಇತ್ಯಾದಿಗಳಿಗೆ ಹೋಗಲು ನಿಮಗೆ ಅನುಮತಿ ಬೇಕು. ಇಲ್ಲಿ 5 ದಿನಗಳ ಪರವಾನಗಿಯನ್ನು 50 ರೂ.ಗೆ ಮತ್ತು 30 ದಿನಗಳ ಪರವಾನಗಿಯನ್ನು 100 ರೂ.ಗೆ ಪಡೆಯಬಹುದು.
ಅರುಣಾಚಲ ಪ್ರದೇಶ (Arunachal Pradesh): ಈ ರಾಜ್ಯದ ಅನೇಕ ಸ್ಥಳಗಳಿಗೆ ಪ್ರಯಾಣಿಸಲು ಪರ್ಮಿಶನ್ ಅಗತ್ಯವಿದೆ. ಇವುಗಳಲ್ಲಿ ಇಟಾನಗರ, ತವಾಂಗ್, ರೋಯಿಂಗ್, ಪಾಸಿಘಾಟ್, ಭಾಲುಕ್ಪಾಂಗ್, ಬೌಡಿಲಾ, ಝೀರೋ ಇತ್ಯಾದಿಗಳು ಸೇರಿವೆ. ಏಕೆಂದರೆ ಈ ಸ್ಥಳಗಳು ಭೂತಾನ್, ಮ್ಯಾನ್ಮಾರ್ ಮತ್ತು ಚೀನಾ ಗಡಿಗಳನ್ನು ಹೊಂದಿವೆ ಮತ್ತು ಭದ್ರತೆಯ ದೃಷ್ಟಿಯಿಂದ ಪರ್ಮಿಶನ್ ಪಡೆದುಕೊಂಡಿರುವುದು ತುಂಬಾನೆ ಮುಖ್ಯವಾಗಿದೆ.
ಸಿಕ್ಕಿಂ (Sikkim): ಸಿಕ್ಕಿಂನ ಸುಂದರ ಸ್ಥಳಗಳಾದ ತ್ಸೊಂಗ್ಮೋ ಸರೋವರ, ಗೋಯಿಚ್ಲಾ ಟ್ರೆಕ್, ನಾಥುಲ್ಲಾ, ಯುಮ್ಥಾಂಗ್, ಗುರುಡೊಂಗ್ಮಾರ್ ಸರೋವರಕ್ಕೆ ಅನುಮತಿಯಿಲ್ಲದೆ ಭೇಟಿ ನೀಡಲು ಸಾಧ್ಯವಿಲ್ಲ. ಈ ಸ್ಥಳಗಳಿಗೆ ಭೇಟಿ ನೀಡಲು ನಿಮಗೆ ಇನ್ನರ್ ಲೈನ್ ಪರ್ಮಿಟ್ ಅಗತ್ಯವಿದೆ.
ಮಣಿಪುರ (Manipur): ದೇಶದ ಈಶಾನ್ಯ ಭಾಗದ ಸುಂದರ ನಗರವಾದ ಮಣಿಪುರವನ್ನು ನೋಡುವುದು ಅಷ್ಟೊಂದು ಸುಲಭವಲ್ಲ. ಇಲ್ಲಿಗೆ ಹೋಗಲು ನಿಮಗೆ ಪರ್ಮಿಶನ್ ಬೇಕು. ಆದ್ದರಿಂದ ಪಾಸ್ಪೋರ್ಟ್ ಗಾತ್ರದ ಫೋಟೋ ಮತ್ತು ಆಧಾರ್ ಕಾರ್ಡ್ ಅನ್ನು ನಿಮ್ಮೊಂದಿಗೆ ತೆಗೆದುಕೊಳ್ಳಿ. ಇಲ್ಲಾಂದ್ರೆ ನೋ ಎಂಟ್ರಿ.
ಲಕ್ಷದ್ವೀಪ (Lakshadweep): ಈ ಶಾಂತ ದ್ವೀಪದಲ್ಲಿ ಸಮಯ ಕಳಿಯಬೇಕು ಅನ್ನೋದಾದ್ರೆ ಪ್ರವಾಸಿಗರು ಪರ್ಮಿಶನ್ ಸಹ ತೆಗೆದುಕೊಳ್ಳಬೇಕಾಗುತ್ತದೆ. ಪರ್ಮಿಟ್ ಗಾಗಿ, ನೀವು ಹತ್ತಿರದ ಪೊಲೀಸ್ ಠಾಣೆಯಿಂದ ಪ್ರಮಾಣಪತ್ರ ಪಡೆಯಬೇಕು. ನಿಮ್ಮ ಕಾಗದಪತ್ರಗಳನ್ನು ಸಹ ಪರಿಶೀಲಿಸಲಾಗುತ್ತದೆ. ನೀವು ಪರವಾನಗಿ ಪಡೆದರೆ, ಲಕ್ಷದ್ವೀಪವನ್ನು ತಲುಪಿದ ನಂತರ ಅದನ್ನು ಸ್ಟೇಷನ್ ಹೌಸ್ ಆಫೀಸರ್ ಗೆ ಸಲ್ಲಿಸಿ. ಇದಲ್ಲದೆ, ನೀವು ಆನ್ ಲೈನ್ ನಲ್ಲಿ ಪರ್ಮಿಶನ್ ಗಾಗಿ ಅರ್ಜಿ ಸಲ್ಲಿಸಬಹುದು.