ಮೂರೂವರೆ ಗಂಟೆಗಳಲ್ಲಿ ಓಮನ್(Oman)
ಓಮನ್ ನ ಸೌಂದರ್ಯ ನಿಮ್ಮನ್ನು ಹುಚ್ಚು ಹಿಡಿಸುವಂತೆ ಮಾಡೋದು ಖಂಡಿತಾ. ಇಲ್ಲಿನ ಸುಂದರ ನೋಟ, ಶಾಂತ ವಾತಾವರಣ ಮತ್ತು ವಿಶ್ವದರ್ಜೆಯ ರೆಸಾರ್ಟ್ ಅನ್ನು ನೋಡಿ, ಜನರು ಒಮನ್ ಅನ್ನು ನೋಡಲು ತೆರಳುತ್ತಾರೆ. ಒಮನ್ ಗೆ ಬಂದ ನಂತರ, ಸಾಂಪ್ರದಾಯಿಕ ಗುಡ್ಡಗಾಡು ಗ್ರಾಮವಾದ ಮಿಸ್ಫತ್ ಅಲ್-ಅಬ್ರಾಯಿನ್, ಜೆಬಾಲ್ ನಲ್ಲಿ ಹೈಕಿಂಗ್ ಮತ್ತು ಮಸ್ಕತ್ ನ ವಸ್ತುಸಂಗ್ರಹಾಲಯ, ಕಡಲತೀರಗಳು ಮತ್ತು ಪ್ರಸಿದ್ಧ ಸ್ಥಳಗಳಿಗೆ ಭೇಟಿ ನೀಡಲು ಮರೆಯಬೇಡಿ. ನವದೆಹಲಿ ವಿಮಾನ ನಿಲ್ದಾಣದಿಂದ ಮಸ್ಕತ್ ವಿಮಾನ ನಿಲ್ದಾಣಕ್ಕೆ ಕೇವಲ ಮೂರೂವರೆ ಗಂಟೆಗಳ ಅಂತರವಿದೆ.