Richest Countries: ವಿಶ್ವದ ದುಬಾರಿ ದೇಶಗಳು ಯಾವುವು ಗೊತ್ತಾ?

First Published | Apr 28, 2022, 2:05 PM IST

ಭಾರತದಲ್ಲಿ ಹಣದುಬ್ಬರದ ಸಮಸ್ಯೆಯು ಪ್ರತಿಬಾರಿಯೂ ಚುನಾವಣೆಗಳ ಜೊತೆಗೆ ಸಾಮಾನ್ಯ ಜನರ ಸಮಸ್ಯೆಯಾಗಿದೆ. ಆದರೆ ಯಾವುದೇ ಸರ್ಕಾರವು ಅದನ್ನು ಸಂಪೂರ್ಣವಾಗಿ ಪರಿಹರಿಸಲು ಸಾಧ್ಯವಾಗಿಲ್ಲ. ನೀವು ವಿಶ್ವದ ಅತ್ಯಂತ ದುಬಾರಿ ದೇಶಗಳ (most expensive countries) ಬಗ್ಗೆ ತಿಳಿದಾಗ, ನೀವು ಆಘಾತಕ್ಕೊಳಗಾಗುತ್ತೀರಿ. ಬಹುಶಃ ಒಂದು ಕ್ಷಣ ನೀವು ಭಾರತದ ಹಣದುಬ್ಬರವು ಕಡಿಮೆ ಇರುವುದನ್ನು ಕಾಣಬಹುದು. 

ನಮ್ಮ ದೇಶದಲ್ಲಿ ಸಾಮಗ್ರಿಗಳಿಗೆ ಬೆಲೆ ಹೆಚ್ಚಾದಾಗ ನಾವೆಲ್ಲರೂ ಅಯ್ಯೋ ಎಂದು ತಲೆ ಚಚ್ಚಿಕೊಳ್ಳುತ್ತೇವೆ.  ಆದರೆ ನಿಮಗೆ ಗೊತ್ತಾ? ವಿಶ್ವದಲ್ಲಿ ಅದೆಷ್ಟೋ ದೇಶಗಳಿವೆ ಅಲ್ಲಿ ಬೆಲೆ ಕೇಳಿದ್ರೆ ಶಾಕ್ ಆಗೋದು ಖಂಡಿತಾ. ಇಲ್ಲಿದೆ ಅಂತಹ ದೇಶಗಳ ಬಗ್ಗೆ ಮಾಹಿತಿ. ವಿಶ್ವದ ಅತ್ಯಂತ ದುಬಾರಿ ದೇಶಗಳ ಬಗ್ಗೆ ತಿಳಿಯಿರಿ...

ಸ್ವಿಟ್ಜರ್ಲೆಂಡ್ : ಸೌಂದರ್ಯಕ್ಕೆ ಹೆಸರುವಾಸಿಯಾದ ಮತ್ತು ದಂಪತಿಗಳ ಹೃದಯಗಳನ್ನು ಆಳುತ್ತಿರುವ ಸ್ವಿಟ್ಜರ್ಲೆಂಡ್ (Switzerland) ಅನ್ನು ಅತ್ಯಂತ ದುಬಾರಿ ದೇಶವೆಂದು ಘೋಷಿಸಲಾಗಿದೆ. ಈ ದೇಶದಲ್ಲಿ ನಿಮ್ಮ ಮನೆಯಲ್ಲಿ ಉಳಿಯಲು ನೀವು ತೆರಿಗೆಯನ್ನು ಸಹ ಪಾವತಿಸಬೇಕಾಗುತ್ತದೆ. ರೆಸ್ಟೋರೆಂಟ್ ಗಳಿಂದ ಹಿಡಿದು ಬಟ್ಟೆಗಳು ಮತ್ತು ದಿನಸಿಗಳವರೆಗೆ ಎಲ್ಲವೂ ಹಣದುಬ್ಬರದ ಮಿತಿಯನ್ನು ಮೀರಿದೆ.

Tap to resize

ಐಸ್ ಲ್ಯಾಂಡ್ :  ಪ್ರಕೃತಿ ಪ್ರಿಯರಿಗೆ ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಮನೆಯನ್ನು ನಿರ್ಮಿಸುವುದು ಇಲ್ಲಿನ ಆಹಾರ ಮತ್ತು ದಿನಸಿಯಷ್ಟು ದುಬಾರಿಯಲ್ಲ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಏಕೆಂದರೆ ಹೆಚ್ಚಿನ ಆಹಾರ ಉತ್ಪನ್ನಗಳು ಆಮದು ರೂಪದಲ್ಲಿ ಇಲ್ಲಿಗೆ ಬರುತ್ತವೆ, ಇದರಿಂದಾಗಿ ಇಲ್ಲಿ ಆಹಾರವನ್ನು ನೀಡುವುದು ತುಂಬಾ ಕಷ್ಟವಾಗುತ್ತದೆ.

ನಾರ್ವೆಯ (Norway) ಸೌಂದರ್ಯವು ನಿಮ್ಮನ್ನು ಆ ದೇಶದೆಡೆ ಆಕರ್ಷಿಸಬಹುದು, ಆದರೆ ಅಲ್ಲಿಯ ಜೀವನ ವೆಚ್ಚವನ್ನು ತಿಳಿದುಕೊಂಡು ಬಹುಶಃ ನಿಮಗೆ OMG ಎನ್ನುವ ಭಾವನೆಯನ್ನು ಉಂಟುಮಾಡುತ್ತದೆ. ಇಲ್ಲಿ ವ್ಯಾಟ್ ಅನ್ನು 25% ವರೆಗೆ ವಿಧಿಸಲಾಗುತ್ತದೆ. ನೀವು ಆಹಾರ ಪದಾರ್ಥಗಳ ಮೇಲೆ 15% ವರೆಗೆ ತೆರಿಗೆ ಪಾವತಿಸಬೇಕಾಗಬಹುದು. ಇಲ್ಲಿನ ಹಣದುಬ್ಬರದಿಂದಾಗಿ, ಅನೇಕ ಜನರು ಗಡಿಯಾಚೆಯಿಂದ ತಮ್ಮ ಶಾಪಿಂಗ್ ಮಾಡುತ್ತಾರೆ.

ಈ ಬರ್ಮುಡಾ (barmuda) ದ್ವೀಪದ ಸೌಂದರ್ಯವು ಈ ಸ್ಥಳದಲ್ಲಿ ವಾಸಿಸಲು ಅನೇಕ ಜನರನ್ನು ಆಕರ್ಷಿಸುತ್ತದೆ. ಬ್ರಿಟಿಷ್ ಐಲ್ಯಾಂಡ್ ಟೆರಿಟರಿಯ ರಾಜಧಾನಿಯಾದ ಹ್ಯಾಮಿಲ್ಟನ್ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾಗಿದೆ. ಬರ್ಮುಡಾದ ಜೀವನ ವೆಚ್ಚವು ಯುಎಸ್ ಗಿಂತ ತುಂಬಾ ಹೆಚ್ಚಾಗಿದೆ.

ಹೈ-ಫೈ ರೆಸ್ಟೊರೆಂಟ್ ಗಳಿಗೆ ಹೆಸರುವಾಸಿಯಾದ ಡೆನ್ಮಾರ್ಕ್ (Denmark) ಅತ್ಯಂತ ದುಬಾರಿ ದೇಶವಾಗಿದೆ. ಇಬ್ಬರಿಗೆ ಮೂರು ಹೊತ್ತಿನ ಊಟದ ಬೆಲೆ ಸುಮಾರು 6,800 ರೂ. ಇಲ್ಲಿ ನೀವು ಖಂಡಿತವಾಗಿಯೂ ಉತ್ತಮ ಗುಣಮಟ್ಟದ ಜೀವನವನ್ನು ಪಡೆಯುತ್ತೀರಿ, ಆದರೆ ಇದಕ್ಕಾಗಿ ನೀವು ನಿಮ್ಮ ಬ್ಯಾಂಕ್ ಅಕೌಂಟ್ ನ್ನು ಖಾಲಿ ಮಾಡಬೇಕಾಗುತ್ತದೆ. 

ಲಕ್ಸೆಂಬರ್ಗ್ ವಿಶ್ವದ 85% ನಗರಗಳಿಗಿಂತ ಹೆಚ್ಚು ದುಬಾರಿಯಾಗಿದೆ. ಅನೇಕ ಜನರು ತಮ್ಮ ಶಾಪಿಂಗ್ ಗಾಗಿ ಗಡಿಯಾಚೆಗೆ ಹೋಗುತ್ತಾರೆ, ಅಂದರೆ ಫ್ರಾನ್ಸ್ ನಲ್ಲಿ ಹಾಲಿನಿಂದ ಗೋಮಾಂಸದವರೆಗೆ ಎಲ್ಲವೂ ಲಕ್ಸೆಂಬರ್ಗ್ ಗಿಂತ ತುಂಬಾ ಅಗ್ಗವಾಗಿದೆ. ಲಕ್ಸೆಮ್ಬರ್ಗ್ ಗೆ ಪ್ರವಾಸ ಮಾಡಲು ಯೋಚನೆ ಮಾಡೋ ಮುನ್ನ ಸ್ವಲ್ಪ ಯೋಚಿಸಿ.. 

Latest Videos

click me!