How to save money on IRCTC: ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಹೀಗೆ IRCTC ಮೂಲಕ ಟಿಕೆಟ್ ಬುಕ್ ಮಾಡುವಾಗ ನಮಗೆ ಗೊತ್ತಿಲ್ಲದೆಯೇ ಹೆಚ್ಚು ಹಣ ಖರ್ಚು ಮಾಡುತ್ತೇವೆ. ಕೆಲವು ಸರಳ ಟಿಪ್ಸ್ ಮೂಲಕ ಟಿಕೆಟ್ ಬುಕಿಂಗ್‌ನಲ್ಲಿ ಹಣ ಉಳಿಸಬಹುದು. ಅದು ಹೇಗೆಂದು ನೋಡೋಣ.
ಟ್ರೈನ್ ಟಿಕೆಟ್ ಬುಕಿಂಗ್ ಟೈಮಲ್ಲಿ ಉಪಯೋಗಕ್ಕೆ ಬರುವ ಟಿಪ್ಸ್
ಕಡಿಮೆ ಖರ್ಚಿನಲ್ಲಿ ಆರಾಮವಾಗಿ ಪ್ರಯಾಣಿಸಲು ರೈಲ್ವೆ ಅತ್ಯುತ್ತಮ ಆಯ್ಕೆ. ಆದರೆ, ಟಿಕೆಟ್ ಬುಕ್ ಮಾಡುವಾಗ ಕೆಲವು ಸರಳ ಟಿಪ್ಸ್ ಪಾಲಿಸಿದರೆ ಪ್ರಯಾಣದ ಖರ್ಚನ್ನು ಇನ್ನಷ್ಟು ಕಡಿಮೆ ಮಾಡಬಹುದು. ಅದರಲ್ಲೂ IRCTC ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವವರು ಈ ಟಿಪ್ಸ್ ಪಾಲಿಸಿದರೆ ದೊಡ್ಡ ಮೊತ್ತದ ಹಣ ಉಳಿತಾಯ ಮಾಡಬಹುದು. ಆ ಟಿಪ್ಸ್ ಯಾವುವು ನೋಡೋಣ.
26
ಮುಂಚಿತವಾಗಿ ಟಿಕೆಟ್ ಬುಕ್ ಮಾಡಿಕೊಳ್ಳುವುದು
ಪ್ರಯಾಣದ ದಿನಾಂಕ ನಿಗದಿಯಾದ ತಕ್ಷಣವೇ ಟಿಕೆಟ್ ಬುಕ್ ಮಾಡುವುದು ಉತ್ತಮ. ಅನೇಕರು ಕೊನೆ ಕ್ಷಣದಲ್ಲಿ ಟಿಕೆಟ್ ಬುಕ್ ಮಾಡಲು ಪ್ರಯತ್ನಿಸುತ್ತಾರೆ. ಹಾಗೆ ಮಾಡಿದರೆ ಕನ್ಫರ್ಮ್ ಟಿಕೆಟ್ ಸಿಗದೇ ಇರಬಹುದು, ಜೊತೆಗೆ ತತ್ಕಾಲ್ ಟಿಕೆಟ್ ಬುಕ್ ಮಾಡಬೇಕಾಗಬಹುದು. ತತ್ಕಾಲ್ ಟಿಕೆಟ್‌ಗಳಿಗೆ ಹೆಚ್ಚುವರಿ ಶುಲ್ಕವಿರುತ್ತದೆ. ಹೀಗಾಗಿ, ಸಾಧ್ಯವಾದಷ್ಟು ವಾರಗಳ ಮುಂಚೆಯೇ ಟಿಕೆಟ್ ಬುಕ್ ಮಾಡಿದರೆ ಹಣ ಉಳಿತಾಯವಾಗುತ್ತದೆ.
36
ಸರಿಯಾದ ಕ್ಲಾಸ್ ಆಯ್ಕೆ ಮಾಡಿಕೊಳ್ಳುವುದು
ಅನೇಕ ಪ್ರಯಾಣಿಕರು ಅಗತ್ಯವಿಲ್ಲದಿದ್ದರೂ, ಮೇಲ್ದರ್ಜೆಯ ಕ್ಲಾಸ್‌ಗಳನ್ನು ಆಯ್ಕೆ ಮಾಡುತ್ತಾರೆ. ಕಡಿಮೆ ದೂರದ ಪ್ರಯಾಣಕ್ಕೆ ಸ್ಲೀಪರ್ ಕ್ಲಾಸ್ ಸಾಕಾಗುವಾಗ, 3AC ಅಥವಾ 2AC ಟಿಕೆಟ್ ಬುಕ್ ಮಾಡಿದರೆ ಖರ್ಚು ಹೆಚ್ಚಾಗುತ್ತದೆ. ನಿಮ್ಮ ಪ್ರಯಾಣದ ಸಮಯ, ಸೌಕರ್ಯದ ಅವಶ್ಯಕತೆ ಮತ್ತು ಬಜೆಟ್‌ಗೆ ಅನುಗುಣವಾಗಿ ಸರಿಯಾದ ಕ್ಲಾಸ್ ಆಯ್ಕೆ ಮಾಡಿಕೊಂಡರೆ ಹಣ ಉಳಿಸಬಹುದು.
IRCTC ಆಗಾಗ ವಿವಿಧ ಬ್ಯಾಂಕ್‌ಗಳು, ಡಿಜಿಟಲ್ ವ್ಯಾಲೆಟ್‌ಗಳು ಮತ್ತು ಇತರ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳೊಂದಿಗೆ ಸೇರಿ ವಿಶೇಷ ಆಫರ್‌ಗಳನ್ನು ನೀಡುತ್ತದೆ. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, UPI ಅಥವಾ ವ್ಯಾಲೆಟ್ ಮೂಲಕ ಪಾವತಿಸುವಾಗ ಕ್ಯಾಶ್‌ಬ್ಯಾಕ್ ಅಥವಾ ರಿಯಾಯಿತಿ ಸಿಗುವ ಸಾಧ್ಯತೆ ಇರುತ್ತದೆ. ಟಿಕೆಟ್ ಬುಕ್ ಮಾಡುವ ಮುನ್ನ ಲಭ್ಯವಿರುವ ಆಫರ್‌ಗಳನ್ನು ಪರಿಶೀಲಿಸುವುದು ಉತ್ತಮ. ಇದು ಸಣ್ಣ ಮೊತ್ತದಂತೆ ಕಂಡರೂ, ಆಗಾಗ ಪ್ರಯಾಣಿಸುವವರಿಗೆ ಹೆಚ್ಚು ಹಣ ಉಳಿಯುತ್ತದೆ.
56
ಸರಿಯಾದ ಟೈಮಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡುವುದು
ಟಿಕೆಟ್ ರದ್ದುಗೊಳಿಸಬೇಕಾದ ಪರಿಸ್ಥಿತಿ ಬಂದರೆ, ಅದನ್ನು ಸರಿಯಾದ ಸಮಯದಲ್ಲಿ ಮಾಡುವುದು ಅವಶ್ಯಕ. ಪ್ರಯಾಣಿಸಲು ಸಾಧ್ಯವಿಲ್ಲ ಎಂದು ಮುಂಚಿತವಾಗಿ ತಿಳಿದಾಗ, ಕೊನೆ ಕ್ಷಣದವರೆಗೆ ಕಾಯದೆ ಟಿಕೆಟ್ ರದ್ದುಗೊಳಿಸಬೇಕು. ರೈಲ್ವೆ ನಿಯಮಗಳ ಪ್ರಕಾರ, ಟಿಕೆಟ್ ರದ್ದುಗೊಳಿಸುವ ಸಮಯವನ್ನು ಆಧರಿಸಿ ಮರುಪಾವತಿ ಮೊತ್ತ ಬದಲಾಗುತ್ತದೆ. ಬೇಗನೆ ಕ್ಯಾನ್ಸಲ್ ಮಾಡಿದರೆ ಹೆಚ್ಚು ಹಣ ವಾಪಸ್ ಪಡೆಯುವ ಅವಕಾಶವಿರುತ್ತದೆ.
66
ವಿಶೇಷ ಸೌಕರ್ಯಗಳನ್ನು ಉಪಯೋಗಿಸಿಕೊಳ್ಳುವುದು
ರೈಲ್ವೆ ಇಲಾಖೆ ನೀಡುವ ವಿಶೇಷ ಕೋಟಾಗಳು ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು, ದಿವ್ಯಾಂಗರು ಮತ್ತು ಇತರ ಅರ್ಹ ವರ್ಗದವರಿಗೆ ವಿಶೇಷ ರಿಯಾಯಿತಿಗಳು ಸಿಗಬಹುದು. ಇದಲ್ಲದೆ, ಕಡಿಮೆ ದೂರದ ಪ್ರಯಾಣಕ್ಕೆ ಸೀಸನ್ ಟಿಕೆಟ್‌ಗಳು ಅಥವಾ ವಿಶೇಷ ಪಾಸ್‌ಗಳು ಲಭ್ಯವಿದೆಯೇ ಎಂದು ಪರಿಶೀಲಿಸಿ. ಆಗಾಗ ಪ್ರಯಾಣಿಸುವವರಿಗೆ ಇವುಗಳಿಂದ ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.