ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯರಲ್ಲಿ ಲೈಂಗಿಕ ಬಯಕೆ ಹೆಚ್ಚಾಗುತ್ತದಂತೆ ಹೌದಾ?

First Published | Mar 30, 2023, 3:35 PM IST

ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯ ಲೈಂಗಿಕ ಬಯಕೆ ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ನಂಬಲಾಗಿದೆ. ನಾವು ಮಾತ್ರವಲ್ಲ, ಅನೇಕ ಸಂಶೋಧನೆಗಳು ಸಹ ಇದನ್ನು ತೋರಿಸುತ್ತವೆ. ಇದು ಏಕೆ ಸಂಭವಿಸುತ್ತದೆ ಅನ್ನೋದರ ಬಗ್ಗೆ ತಿಳಿಯೋಣ. 

ಜರ್ನಲ್ ಆಫ್ ಹ್ಯೂಮನ್ ರಿಪ್ರೊಡಕ್ಷನ್ ಏನು ಹೇಳುತ್ತೆ?: ಹ್ಯೂಮನ್ ರಿಪ್ರೊಡಕ್ಷನ್ ಜರ್ನಲ್ನಲ್ಲಿ  (human reproduction jurnal) ಪ್ರಕಟವಾದ ಅಧ್ಯಯನದಲ್ಲಿ, ಅಂಡೋತ್ಪತ್ತಿಯ ಸಮಯದಲ್ಲಿ, ಮಹಿಳೆಯ ಲೈಂಗಿಕ ಆಕರ್ಷಣೆಯು ಅವಳ ನಡವಳಿಕೆಯ ಮೂಲಕ ಪ್ರತಿಫಲಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎನ್ವಿರಾನ್ಮೆಂಟಲ್ ಹೆಲ್ತ್ ಸೈನ್ಸಸ್ನ ಅಧ್ಯಯನ (study of National institute of environmental health science) ಮಹಿಳೆಯರ ಆರು ಅತ್ಯಂತ ಫಲವತ್ತಾದ ದಿನಗಳಲ್ಲಿ, 24% ಹೆಚ್ಚು ಸಂಭೋಗಿಸುತ್ತಾರೆ ಎಂದು ಕಂಡುಬಂದಿದೆ. ಅಷ್ಟೇ ಅಲ್ಲ, ಅಂಡೋತ್ಪತ್ತಿ ಸಮಯದಲ್ಲಿ ಅವರ ಲೈಂಗಿಕ ಚಟುವಟಿಕೆ ಉತ್ತುಂಗದಲ್ಲಿರುತ್ತೆ ಎನ್ನಲಾಗುತ್ತೆ.

Tap to resize

ಸೆಕ್ಸ್ ಡ್ರೈವ್ ಹೆಚ್ಚಾಗಿರುತ್ತೆ: ಈ ಲೈಂಗಿಕ ಪ್ರಚೋದನೆಗಳು (sex drive) ಬಯಕೆಯನ್ನು ಪ್ರತಿಬಿಂಬಿಸುತ್ತವೆ ಮತ್ತು ಋತುಚಕ್ರದಲ್ಲಿ ಏರಿಳಿತ ಉಂಟು ಮಾಡುತ್ತೆ. ಕಾಮಾಸಕ್ತಿಯ ಹೆಚ್ಚಳವು ಈಸ್ಟ್ರೊಜೆನ್ ಹಾರ್ಮೋನ್ ಗೆ ಸಂಬಂಧಿಸಿದೆ, ಇದು ಓವ್ಯುಲೇಶನ್ ನ ಹಿಂದಿನ ದಿನಗಳಲ್ಲಿ ಹೆಚ್ಚಾಗಿರುತ್ತದೆ. 

ಅಂಡೋತ್ಪತ್ತಿ ನಂತರ ಏನಾಗುತ್ತದೆ? (After Ovulation): ಓವ್ಯುಲೇಶನ್ ನಂತರ ಈಸ್ಟ್ರೊಜೆನ್ ಮಟ್ಟಗಳು ಕಡಿಮೆಯಾಗುವುದರಿಂದ ಮತ್ತು ಚಕ್ರ ಪ್ರಾರಂಭವಾಗುವುದರಿಂದ ಸೆಕ್ಸ್ ಡ್ರೈವ್ ಕಡಿಮೆಯಾಗುತ್ತದೆ. ಇದರ ನಂತರ, ಹೊಸ ಚಕ್ರವು ಪ್ರಾರಂಭವಾಗುತ್ತದೆ ಮತ್ತು ಲೈಂಗಿಕ ಬಯಕೆಯ ಮಟ್ಟವು ಮತ್ತೆ ಹೆಚ್ಚಾಗಲು ಪ್ರಾರಂಭಿಸುತ್ತದೆ. 

ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ: ಫರ್ಟಿಲಿಟಿ ವಿಂಡೊ (fertility window) ತೆರೆದ ತಕ್ಷಣ, ನಿಮ್ಮ ಶಕ್ತಿಯ ಮಟ್ಟವೂ ತುಂಬಾ ಹೆಚ್ಚಾಗುತ್ತದೆ. ಓವ್ಯುಲೇಶನ್ ಗೆ ಮುಂಚಿನ ದಿನಗಳಲ್ಲಿ ನೀವು ದಣಿದ ಮತ್ತು ಸೋಮಾರಿತನವನ್ನು ಅನುಭವಿಸಿದರೂ, ಆ ಸಮಯದಲ್ಲಿ ಶಕ್ತಿಯ ಮಟ್ಟವು ಹೆಚ್ಚಾಗಿರುತ್ತದೆ. 

ಗರ್ಭಕಂಠದ ಲೋಳೆಯ (Cervical Mucus) ಬದಲಾವಣೆಗಳು: ಅಂಡೋತ್ಪತ್ತಿ ಸಮಯದಲ್ಲಿ ಗರ್ಭಕಂಠದ ಲೋಳೆಯೂ ಬದಲಾಗುತ್ತದೆ. ಮೊದಲಿಗೆ ಇದು ಸ್ಪಷ್ಟವಾಗಿರಬಹುದು, ಆದರೆ ಕೆಲವೊಮ್ಮೆ ಅದು ಆ ಸಮಯದಲ್ಲಿ 'ಮೊಟ್ಟೆಯ ಬಿಳಿ' ಯಂತೆ ಇರುತ್ತದೆ. ಇದು ಸಾಮಾನ್ಯವಾಗಿ ಅಂಡೋತ್ಪತ್ತಿ ದಿನ ಸಮೀಪಿಸುತ್ತಿದೆ ಎಂಬುದರ ಸಂಕೇತವಾಗಿದೆ.

ಮುಖದ ಮೇಲಿನ ಬದಲಾವಣೆಗಳು (Changes in Face): ಓವ್ಯುಲೇಶನ್ ನ ಕೆಲವು ದಿನಗಳ ಮೊದಲು ಅಥವಾ ಆ ಸಮಯದಲ್ಲಿ, ಕೆಲವು ಮಹಿಳೆಯರ ಚರ್ಮವು ಸ್ಪಷ್ಟ ಮತ್ತು ಹೊಳೆಯಬಹುದು. ಇದು ಈಸ್ಟ್ರೊಜೆನ್ ನಿಂದ ಉಂಟಾಗುತ್ತದೆ. ಅದೇ ಸಮಯದಲ್ಲಿ, ಕೆಲವು ಮಹಿಳೆಯರ ಮುಖದ ಮೇಲೆ ಬಿರುಕುಗಳು ಹೊರಬರುತ್ತವೆ. 

Latest Videos

click me!