ತಮ್ಮ ಪತ್ನಿಯರ ಮೇಲೆ ಈ ಗಂಡಸ್ರಿಗೆ ಏನೆಲ್ಲಾ ದೂರುಗಳಿವೆ ತಿಳಿದಿದ್ಯಾ?

First Published | Mar 29, 2023, 5:35 PM IST

ಗಂಡ ಹೆಂಡತಿ ಅಂದ್ರೆ ಯಾವಾಗ್ಲೂ ಖುಷಿಖುಷಿಯಿಂದ ಸಂಸಾರ ಮಾಡೋರು ಅಂತ ಅರ್ಥ ಅಲ್ಲ. ಅವರಿಬ್ಬರ ನಡುವೆ ಕೂಡ ಸಾಕಷ್ಟು ಡಿಫರೆನ್ಸ್, ಕಂಪ್ಲೇಂಟ್ ಎಲ್ಲಾ ಇರುತ್ತೆ. ಹಾಗಾಗಿ ಅವುಗಳ ಬಗ್ಗೆ ತಿಳಿದುಕೊಳ್ಳೋದ್ರಿಂದ ಏನೆ ಪ್ರಾಬ್ಲಮ್ಸ್ ಇದ್ರೂ, ಇಬ್ರು ಹೇಗೆ ಅಡ್ಜಸ್ಟ್ ಮಾಡ್ಕೊಂಡು ಒಟ್ಟಿಗೆ ಬದುಕಬಹುದು ಅಂತ ತಿಳಿಯೋದೇ ಜೀವನ. 

ಇಲ್ಲಿದೆ ನೋಡಿ ಅನೇಕ ಪತಿಯರಿಗೆ ತಮ್ಮ ಪತ್ನಿಯರ ಮೇಲೆ ಇರೋ ಕಂಪ್ಲೇಂಟ್ಸ್ ಲಿಸ್ಟ್ 
ಮಾತನಾಡೋದೆ(Talk) ಸಮಸ್ಯೆ
ಹೆಚ್ಚಿನ ಸಮಯ ಈ ಗಂಡಂದಿರು ತಮ್ಮ ಹೆಂಡತಿಯರು ಮಾತಾಡಲು ಹೆಣಗಾಡುತ್ತಿದ್ದಾರೆ ಎಂದು ಭಾವಿಸುತ್ತಾರೆ. ಪರಿಣಾಮಕಾರಿಯಾಗಿ ಸಂವಹನ ನಡೆಸಲು ಮತ್ತು ಅವರ ಅಗತ್ಯ ಅಥವಾ ಕಾಳಜಿಗಳ ಬಗ್ಗೆ ಹೆಂಡತಿಯರು ಹೆಚ್ಚು ಯೋಚಿಸೋಲ್ಲ ಎಂದು ಭಾವಿಸುತ್ತಾರೆ.

ಪೇರೆಂಟಿಂಗ್(Parenting) ಶೈಲಿಗಳಲ್ಲಿನ ವ್ಯತ್ಯಾಸಗಳು
ಈಗಿನ ಕಾಲದಲ್ಲಿ ಈ ಸಮಸ್ಯೆ ಹೆಚ್ಚಾಗಿದೆ, ಗಂಡ ಹೆಂಡತಿಯರಿಗೆ ತಮ್ಮ ಮಕ್ಕಳನ್ನು ಬೆಳಸುವಲ್ಲಿ ಮತ್ತು ಶಿಸ್ತು ಕಲಿಸೋದ್ರಲ್ಲಿ ಹೆಚ್ಚಿನ ಡಿಫರೆನ್ಸ್ ಒಪೀನಿಯನ್ ಇದೆ. ಇದನ್ನು ಕಮ್ಮಿ ಮಾಡಲು ಪತಿಪತ್ನಿ ನಡುವೆ ಉತ್ತಮ ಕಮ್ಯುನಿಕೇಷನ್ ಅತ್ಯಗತ್ಯ. 

Tap to resize

ಇಂಟಿಮಸಿ(Intimacy) ಕೊರತೆ 
ಗಂಡಂದಿರು ತಮ್ಮ ಹೆಂಡತಿಯಿಂದ ಫಿಸಿಕಲ್ ಆಫೆಕ್ಷನ್ ಮತ್ತು ಇಂಟಿಮಸಿ ಪಡೆಯದಿದ್ದರೆ ತಾನು ಆ ಕನೆಕ್ಷನ್ ಕಳೆದುಕೊಂಡಿದ್ದೇನೆ ಮತ್ತು ಅವರು ತನ್ನನ್ನು ಪ್ರೀತಿಸ್ತಾನೆ ಇಲ್ಲ ಎಂದು ಅಂದುಕೊಳ್ಳುತ್ತಾರೆ. ಇದರ ಬಗ್ಗೆ ಹೆಂಡ್ತೀರು ಸ್ವಲ್ಪ ಯೋಚನೆ ಮಾಡಬೇಕು.

ಹಣದ(Money) ವಿಷ್ಯದಲ್ಲೂ ಜಗಳ
ಪುರುಷರಿಗೆ ಹಣವನ್ನು ಹೇಗೆ ಖರ್ಚು ಮಾಡೋದು ಅಥವಾ ಉಳಿಸೋದು ಎಂಬುದರ ಬಗ್ಗೆ ತಮ್ಮದೇ ಆದ ಆಲೋಚನೆಗಳನ್ನು ಹೊಂದಿರುತ್ತಾರೆ, ಅದನ್ನು ಅವರು ತಮ್ಮ ಪತ್ನಿ ಜೊತೆ ಹಂಚಿಕೊಳ್ಳಲು ಇಷ್ಟಪಡೋದಿಲ್ಲ. ಇದು ಟೆನ್ಶನ್ ಮತ್ತು ಜಗಳಕ್ಕೆ ಕಾರಣವಾಗುತ್ತೆ.

ಜೀವನಶೈಲಿಯಲ್ಲಿನ (Lifestyle)ವ್ಯತ್ಯಾಸಗಳು
ಕೆಲವು ಸಂದರ್ಭಗಳಲ್ಲಿ ತಮ್ಮ ಹೆಂಡತಿಯರೊಂದಿಗೆ ಆನಂದಿಸಲು ಸಾಮಾನ್ಯ ಚಟುವಟಿಕೆಗಳನ್ನು ಹುಡುಕಲು ಸಹ ಹೆಚ್ಚಿನ ಪುರುಷರು ಹೆಣಗಾಡುತ್ತಾರೆ. ಯಾಕಂದ್ರೆ ಇಬ್ಬರ ಜೀವನ ಶೈಲಿ, ಹವ್ಯಾಸ, ಅಭ್ಯಾಸ ಎಲ್ಲವೂ ವಿಭಿನ್ನವಾಗಿರುತ್ತೆ. ಈ ಬಗ್ಗೆ ಪತಿಗೆ ಯಾವಾಗಲೂ ಕಂಪ್ಲೇಂಟ್ ಇದ್ದೇ ಇರುತ್ತೆ. 

ವರ್ಕ್ ಲೈಫ್ ಬ್ಯಾಲೆನ್ಸ್ (WOrk life balance)
ಗಂಡಂದಿರು ತಮ್ಮ ಹೆಂಡತಿಯ ಕೆಲಸ ಮತ್ತು ಇತರ ಬದ್ಧತೆ ಅವರ ಮದುವೆಯಲ್ಲಿ ಡಿಫರೆನ್ಸ್ ಕ್ರಿಯೇಟ್ ಮಾಡುತ್ತಿವೆ ಎಂದು ಭಾವಿಸುತ್ತಾರೆ. ಹೆಂಡತಿ ಕೆಲಸಕ್ಕೆ ಹೋದ್ರೆ ಅದರಿಂದ ಮನೆ ಮತ್ತು ಮಕ್ಕಳನ್ನು ಸಂಭಾಳಿಸೋದು ಕಷ್ಟ ಆಗುತ್ತೆ ಎಂದು ಪುರುಷರು ಅಂದುಕೊಳ್ಳುತ್ತಾರೆ. 

ಮನೆ ಕೆಲಸ (Household work)
ಹೆಂಡತಿಯರು ಮನೆ ಕೆಲಸದಲ್ಲಿ ಸ್ವಲ್ಪ ಸಹಾಯ ಮಾಡಲು ಕೇಳಿದಾಗ ಹೆಚ್ಚಿನ ಪುರುಷರು ಅದನ್ನು ಇಷ್ಟಡೋದಿಲ್ಲ, ಮತ್ತು ಇದು ಕೋಪ ಮತ್ತು ವಾದಗಳಿಗೆ ಕಾರಣವಾಗುತ್ತೆ. ಮನೆ ಕೆಲಸ ಮಾಡಲು ಹೆಚ್ಚಿನ ಪುರುಷರು ಇಷ್ಟಪಡೋದಿಲ್ಲ, ಅದು ಹೆಂಡ್ತಿಯ ಕೆಲಸ ಎಂದೇ ಅವರು ಅಂದುಕೊಳ್ಳುತ್ತಾರೆ.

ವೈಯಕ್ತಿಕ ವ್ಯತ್ಯಾಸಗಳು(Personal difference)
ಹೆಚ್ಚಿನ ಪುರುಷರರು ತಮ್ಮದೇ ಆದ ನಂಬಿಕೆ ಮತ್ತು ಮೌಲ್ಯಗಳನ್ನು ಹೊಂದಿರುತ್ತಾರೆ. ತಾವು ಮಾಡಿದ್ದೇ ಸರಿ ಎನ್ನುವಂತಹ ಭಾವನೆ ಇರುತ್ತದೆ. ಈ ವೈಯಕ್ತಿಕ ವ್ಯತ್ಯಾಸಗಳೇ ಅವರ ಪತ್ನಿಯರೊಂದಿಗೆ ಸಂಘರ್ಷಕ್ಕೆ ಕಾರಣವಾಗುತ್ತವೆ. ಇಂತಹ ಹಲುವು ವಿಷಯಗಳ ಬಗ್ಗೆ ಗಮನ ಹರಿಸಿದ್ರೆ ಹ್ಯಾಪಿ ಮ್ಯಾರೀಡ್ ಲೈಫ್ ನಿಮ್ಮದಾಗುತ್ತೆ.    

Latest Videos

click me!