ಅಪ್ಪನಾದೋನು ಮದ್ವೆಯಾಗೋ ಮಗಂಗೆ ಇವೆಲ್ಲ ಹೇಳಿರಲೇಬೇಕು!

First Published | Mar 29, 2023, 4:40 PM IST

ನಿಮ್ಮ ಮಗನ ಮದ್ವೆ ಸದ್ಯದಲ್ಲೇ ಇದೆ ಅನ್ನೋದಾದ್ರೆ… ನೀವು ಈಗಲೇ ಈ ವಿಷಯಗಳನ್ನು ಮಗನಿಗೆ ಹೇಳಬೇಕು. ಒಬ್ಬ ತಂದೆಯಾಗಿ ಮಗನ ವೈವಾಹಿಕ ಜೀವನ ಚೆನ್ನಾಗಿರುವಂತೆ ನೋಡಿಕೊಳ್ಳುವುದು ನಿಮ್ಮ ಕರ್ತವ್ಯ. ಹಾಗಾಗಿ ಈ ವಿಷಯಗಳನ್ನು ನೀವು ಮಗನಿಗೆ ಹೇಳಲೇಬೇಕು. 

ಪ್ರಯತ್ನಿಸಿ (try your best)
ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೆ ಅದನ್ನು ಪರಿಹರಿಸಲು ಪ್ರಯತ್ನಿಸದೆ ನಿಮ್ಮ ಮದುವೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಅಂದರೆ ಯಾವತ್ತೂ ನಿಮ್ಮ ಪತ್ನಿಯಿಂದ ದೂರ ಆಗಬೇಡಿ. ಕೂತು ಮಾತನಾಡಿದರೆ ಎಲ್ಲಾ ಸಮಸ್ಯೆಗಳೂ ಪರಿಹಾರವಾಗುತ್ತೆ. 
 

ತಾಳ್ಮೆ (patience)
ನಿಮ್ಮ ಸಂಗಾತಿಯೊಂದಿಗೆ ತಾಳ್ಮೆಯಿಂದಿರಿ ಮತ್ತು ಅರ್ಥಮಾಡಿಕೊಳ್ಳಿ, ವಿಶೇಷವಾಗಿ ಕಠಿಣ ಸಮಯದಲ್ಲಿ ಅವರೊಂದಿಗಿರಿ, ಇದರಿಂದ ಜೀವನದಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ.

ವಾದಗಳು (arguments)
ಸಣ್ಣ ವಿಷಯಗಳು ದೊಡ್ಡ ವಾದಗಳಾಗಿ ಬದಲಾಗಲು ಬಿಡಬೇಡಿ. ಸಣ್ಣ ವಿಷಯಗಳನ್ನು ಸಣ್ಣದರಲ್ಲೇ ಮುಗಿಸಿ. ಜಗಳವಾದ ಬಳಿಕ ಇಬ್ಬರೂ ಜೊತೆಯಾಗಿ ಕುಳಿತು ಅದನ್ನು ಪರಿಹರಿಸಿ. ಇದರಿಂದ ಜಗಳ ಬೇಗನೆ ಮುಗಿದು ಇಬ್ಬರೂ ಒಳ್ಳೆಯ ರೀತಿ ಇರಲು ಸಹಾಯವಾಗುತ್ತೆ.

Tap to resize

ಜವಾಬ್ದಾರಿ (responsibility)
ನಿಮ್ಮ ತಪ್ಪುಗಳಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳಿ ಮತ್ತು ಅವುಗಳನ್ನು ಸರಿಪಡಿಸಲು ಕೆಲಸ ಮಾಡಿ. ಇದರಿಂದ ಅವರಿಗೂ ನಿಮ್ಮ ಮೇಲೆ ನಂಬಿಕೆ ಬರುತ್ತೆ, 

ಮೆಚ್ಚುಗೆ (appreciation)
ನಿಯಮಿತವಾಗಿ ನಿಮ್ಮ ಸಂಗಾತಿಗೆ ಮೆಚ್ಚುಗೆ ಮತ್ತು ಕೃತಜ್ಞತೆ ತೋರಿಸಿ. ಇದರಿಂದ ಅವರಿಗೂ ಖುಷಿಯಾಗುತ್ತೆ. ಒಂದು ಸಣ್ಣ ಮೆಚ್ಚುಗೆ ಅವರಿಗೆ ದಿನವಿಡೀ ಸಂತೋಷವನ್ನು ನೀಡುತ್ತೆ.

ವೃತ್ತಿಪರ ಸಹಾಯ (professional help)
ವೈಯಕ್ತಿಕ ಅಥವಾ ದಂಪತಿಗಳ ಸಮಾಲೋಚನೆಗಾಗಿ ಅಗತ್ಯವಿದ್ದರೆ ವೃತ್ತಿಪರ ಸಹಾಯವನ್ನು ಪಡೆಯಲು ಹಿಂಜರಿಯಬೇಡಿ. ಇಬ್ಬರ ಸಂಬಂಧದಲ್ಲಿ ತೊಡಕು ಮೂಡುವ ಮುನ್ನ ಅದನ್ನು ಸರಿಪಡಿಸಿಕೊಳ್ಳುವುದು ಮುಖ್ಯ.

ಕ್ಷಮೆಯಾಚಿಸಿ (apologise)
ನೀವು ತಪ್ಪು ಮಾಡಿದಾಗ ಕ್ಷಮೆಯಾಚಿಸಲು ಮರೆಯದಿರಿ ಮತ್ತು ನಿಮ್ಮ ಸಂಗಾತಿ ತಪ್ಪು ಮಾಡಿದಾಗ ಕ್ಷಮಿಸಿ. ಇದರಿಂದ ಪ್ರೀತಿ ಹೆಚ್ಚುತ್ತೆ. 

ಮಾತಿನ ಮೇಲೆ ಗಮನ 
ನಿಮ್ಮ ಮಾತುಗಳು ಮತ್ತು ಕ್ರಿಯೆಗಳು ನಿಮ್ಮ ಸಂಗಾತಿಯ ಮೇಲೆ ಬೀರುವ ಪರಿಣಾಮದ ಬಗ್ಗೆ ಜಾಗರೂಕರಾಗಿರಿ. ಯಾವಾಗಲೂ ತಾಳ್ಮೆಯಿಂದ ಒಳ್ಳೆಯದನ್ನೆ ಮಾತಾನಾಡಿ

ಬೇಷರತ್ತಾದ ಪ್ರೀತಿ (love unconditionaly)
ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಸಂಗಾತಿಯನ್ನು ಬೇಷರತ್ತಾಗಿ ಪ್ರೀತಿಸಿ ಮತ್ತು ನೀವು ಒಟ್ಟಿಗೆ ಇರುವ ಸಮಯವನ್ನು ಆನಂದಿಸಿ. ನಿಬ್ಬಿಬ್ಬರಿಗೆ ನೀವೆ ಸರ್ವಸ್ವ, ಹಾಗಾಗಿ ಜೊತೆಗಿರುವ ಸಮಯವನ್ನು ಎಂದಿಗೂ ವೇಸ್ಟ್ ಮಾಡಬೇಡಿ.

ಹೋಲಿಕೆಗಳು (comparison)
ನಿಮ್ಮ ಮದುವೆಯನ್ನು ಇತರರೊಂದಿಗೆ ಹೋಲಿಸಬೇಡಿ; ಪ್ರತಿಯೊಂದು ಸಂಬಂಧವೂ ವಿಶಿಷ್ಟವಾಗಿರುತ್ತದೆ. ವಿಭಿನ್ನವಾಗಿರುತ್ತೆ. ಹಾಗಾಗಿ ನಿಮ್ಮ ಜೀವನವನ್ನು ನೀವು ನಿಮಗೆ ಬೇಕಾದಂತೆ ಆನಂದಿಸಿ.

ಗೊಂದಲಗಳು
ಕೆಲಸ ಅಥವಾ ಇತರ ಗೊಂದಲಗಳು ನಿಮ್ಮ ವೈವಾಹಿಕ ಜೀವನಕ್ಕೆ ಅಡ್ಡಿಯಾಗಲು ಬಿಡಬೇಡಿ. ಸಮಸ್ಯೆ ಬಂದರೆ ಅದನ್ನು ಕೂಡಲೇ ಪರಿಹರಿಸಿ. ಆಫೀಸಿನ ಸಮಸ್ಯೆಯನ್ನು ಎಂದಿಗೂ ಮನೆಗೆ ತರುವ ಸಾಹಸ ಮಾಡಬೇಡಿ.

ರಾಜಿ (Compromise)
ಯಾವಾಗಲೂ ರಾಜಿ ಮಾಡಿಕೊಳ್ಳಲು ನೀವೆ ಒಂದು ಪರಿಹಾರ ಕಂಡು ಹಿಡಿಯಿರಿ. ಯಾವತ್ತೂ ಕೋಪ, ಸಿಟ್ಟನ್ನು ತುಂಬಾ ದೂರ ತೆಗೆದುಕೊಂಡು ಹೋಗಬೇಡಿ. ಇದರಿಂದ ಇಬ್ಬರ ಜೀವನ ಹಾಳಾಗುತ್ತೆ. ಹಾಗಾಗಿ ಬೇಗನೆ ರಾಜಿ ಮಾಡಿಕೊಳ್ಳೋದು ಮುಖ್ಯ. 

ಟೇಕನ್ ಫಾರ್ ಗ್ರಾಂಟೆಟ್  (taken for granted)
ನಿಮ್ಮ ಸಂಗಾತಿಯನ್ನು ಎಂದಿಗೂ ಲಘುವಾಗಿ ಪರಿಗಣಿಸಬೇಡಿ. ಅವರನ್ನು ನಿಮಗೆ ಬೇಕಾದ ಹಾಗೆ ಉಪಯೋಗಿಸಿಕೊಳ್ಳಬೇಡಿ. ಬದಲಾಗಿ ಅವರನ್ನು ಅರ್ಥ ಮಾಡಿಕೊಂಡು, ಅವರಿಗೆ ಗೌರವ ನೀಡುತ್ತಾ, ಪ್ರೀತಿಯಿಂದ ಬದುಕಿ.

Latest Videos

click me!