"ಮೋಸ ಮಾಡೋದು..." ಅನ್ನೋದೆ ಒಂದು ನೆಗೆಟಿವ್ ಪದ. ಇಂದಿನ ಕಾಲದಲ್ಲಿ ಗಂಡ ಹೆಂಡತಿಗೆ ಅಥವಾ ಹುಡುಗಿ ಹುಡುಗನಿಗೆ ಮೋಸ ಮಾಡುವುದು ತುಂಬಾ ಕಾಮನ್ ಆಗ್ತಿದೆ. ಆದರೆ ಅದರ ಬಗ್ಗೆ ಗಂಭೀರ ಚರ್ಚೆಗಳು ಬಹಳ ವಿರಳ. ಯಾರಾದರೂ ಮೋಸ ಮಾಡಿದಾಗ ಮಾತ್ರ ನಾವುಗಳು "ಅವ್ರ ಜೊತೆ ಒಡನಾಟ ಅಷ್ಟಕಷ್ಟೇ" ಅಥವಾ "ನಿಮ್ಮಿಂದಲೇ ಏನೋ ತಪ್ಪಾಗಿಬೋರ್ದು" ಎಂದು ಹೇಳುತ್ತೇವೆ. ಆದರೆ ಸಂಬಂಧ ಆ ಹಂತವನ್ನು ತಲುಪಲು ಏನಾಯ್ತು ಎಂಬುದನ್ನು ಯಾರೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲ.
27
ಅಷ್ಟಕ್ಕೂ ಸಂಬಂಧಗಳಲ್ಲಿ ಮೋಸ ಹೆಚ್ಚುತ್ತಿರುವುದು ಏಕೆ?
ಸಂಬಂಧದಲ್ಲಿ ಇದು ಮುಖ್ಯ ಸಂಬಂಧಗಳು ಬಹಳ ಸೂಕ್ಷ್ಮ. ಯಾವುದೇ ಸಂಬಂಧದಲ್ಲಿ ನಂಬಿಕೆ, ಪಾರದರ್ಶಕತೆ ಮತ್ತು ಭಾವನಾತ್ಮಕತೆ, ಪ್ರಾಮಾಣಿಕತೆ ಇದ್ದರೆ ಮಾತ್ರ ದೀರ್ಘಕಾಲ ಉಳಿಯುತ್ತದೆ. ಇವುಗಳಲ್ಲಿ ಯಾವುದಾದರೂ ಒಂದಕ್ಕೂ ಏಟು ಬಿದ್ದರೂ ಸಂಬಂಧವು ಒಳಗಿನಿಂದ ಟೊಳ್ಳಾಗುತ್ತದೆ.
37
ಚೀಟಿಂಗ್ ಗುರ್ತಿಸೋದು ಕಷ್ಟ
ತಂತ್ರಜ್ಞಾನವು ಭಾವನಾತ್ಮಕ ಅಂತರವನ್ನು ಹೆಚ್ಚಿಸಿದೆ. ಹೌದು, ನೀವು ನಿಮ್ಮ ಸಂಗಾತಿಯೊಂದಿಗೆ ಒಂದೇ ಕೋಣೆಯಲ್ಲಿ ಇರಬಹುದು, ಆದರೆ ಅವರ ಮನಸ್ಸು ಮತ್ತು ಮೊಬೈಲ್ ಪರದೆಯು ಬೇರೆಯವರೊಂದಿಗೆ ಇರಬಹುದು. ಅಂತಹ ಸಮಯದಲ್ಲಿ ಮೋಸ ಮಾಡುತ್ತಿರುವುದನ್ನು ಗುರುತಿಸುವುದು ಕಷ್ಟಕರವಾಗುತ್ತದೆ.
ಯಾರೇ ಆಗ್ಲಿ ಮೋಸ ಮಾಡಿ ಸಿಕ್ಕಿಬಿದ್ದಾಗ ಅಥವಾ ಮೋಸ ಮಾಡುವಾಗ ಒಪ್ಪಿಕೊಳ್ಳಲ್ಲ. ಬದಲಾಗಿ "ನನಗೆ ಒತ್ತಡವಿತ್ತು", "ನನಗೆ ಗಮನ ಬೇರೆಡೆ ಸೆಳೆಯಿತು" ಅಥವಾ "ನಾನು ನಿನ್ನನ್ನು ಮಾತ್ರ ಪ್ರೀತಿಸುತ್ತೇನೆ" ಎಂಬಂತಹ ನೆಪ ಹೇಳಲು ಪ್ರಾರಂಭಿಸುತ್ತಾರೆ. ಕೆಲವೊಮ್ಮೆ ಸಂಗಾತಿ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಲು ಸಹ ಸಿದ್ಧರಿರುವುದಿಲ್ಲ. ಸಮರ್ಥಿಸಿಕೊಳ್ಳುತ್ತಾರೆ. ಪ್ರಾಮಾಣಿಕವಾಗಿ ಮಾತನಾಡುವುದಿಲ್ಲ.
57
ರಾತ್ರೋರಾತ್ರಿ ಸಂಭವಿಸಲ್ಲ
ದ್ರೋಹವು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಅದು ನಿಧಾನವಾಗಿ ಪ್ರಾರಂಭವಾಗುತ್ತದೆ. ಅವರು ತಮ್ಮ ಹೃದಯ, ಭಾವನೆ ಮತ್ತು ಸತ್ಯಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಪ್ರಾರಂಭಿಸಿದಾಗ...ಅದು ಆ ಸಂಬಂಧದಿಂದ ದೂರವಿರುವ 'ಆರಂಭ'. ಒಂದು ವೇಳೆ ಇಬ್ಬರ ನಡುವೆ ನಿಜವಾದ ಸಂಬಂಧವಿದ್ದರೆ ಇಬ್ಬರೂ ಅದನ್ನು ಒಟ್ಟಿಗೆ ಕಾಪಾಡಿಕೊಳ್ಳಬೇಕು. ನಂಬಿಕೆಯನ್ನು ಕಾಪಾಡಿಕೊಳ್ಳುವುದು, ಭಾವನೆಗಳಿಗೆ ಬೆಲೆ ಕೊಡುವುದು ಮತ್ತು ಪರಸ್ಪರ ಪ್ರಾಮಾಣಿಕವಾಗಿರುವುದು ಬಲವಾದ ಸಂಬಂಧದ ಅಡಿಪಾಯವಾಗಿದೆ.
67
ಅಗತ್ಯವಿದ್ದರೆ ಮಾತ್ರ ದೂರವಾಗಿ
ನೀವು ಇನ್ನು ಮುಂದೆ ನಿಮ್ಮ ಸಂಗಾತಿಯೊಂದಿಗೆ ಬದುಕಲು ಬಯಸುವುದಿಲ್ಲ ಅಥವಾ ಈ ಸಂಬಂಧವು ನಿಮಗೆ ಸಂತೋಷವನ್ನು ನೀಡುವುದಿಲ್ಲ ಎಂದು ಭಾವಿಸಿದರೆ ಮುಕ್ತವಾಗಿ ಮಾತನಾಡಬಹುದು. ಅಗತ್ಯವಿದ್ದರೆ ಮಾತ್ರ ನೀವು ಬೇರ್ಪಡಬಹುದು. ಆದರೆ ಯಾರೊಬ್ಬರ ನಂಬಿಕೆಯನ್ನು ಮುರಿಯುವುದು, ಭಾವನೆಗಳೊಂದಿಗೆ ಆಟವಾಡುವುದು ಮತ್ತು ಗಡಿಗಳನ್ನು ದಾಟುವುದು ಯಾವುದೇ ಸಂದರ್ಭದಲ್ಲೂ ಸರಿಯಲ್ಲ.
77
ನೀವೇ ನಿರ್ಧರಿಸಿ
ನಿಮ್ಮ ಸಂಬಂಧವು ಬ್ರೇಕಪ್ ಹಂತದಲ್ಲಿದ್ದರೆ ಕೂತು ಚರ್ಚಿಸಬಹುದು. ಸಂಬಂಧವನ್ನು ಉಳಿಸಿಕೊಳ್ಳಲು ಪ್ರಾಮಾಣಿಕತೆಯಿಂದ ನಡೆದುಕೊಳ್ಳಿ. ನೀವು ಯಾವ ದಿಕ್ಕಿನಲ್ಲಿ ಹೋಗಬೇಕೆಂದು ನೀವೇ ನಿರ್ಧರಿಸಿ.