ಇದೇ ರೀಸನ್‌ಗೆ ಮದ್ವೆಯಾಗಿ ವರ್ಷ ಕಳಿತ್ತಿದ್ದಂತೆ ದಂಪತಿ ನಡುವೆ ಆಕರ್ಷಣೆ ಕಡಿಮೆಯಾಗೋದು
ಸಂಬಂಧದಲ್ಲಿನ ಈ ಬದಲಾವಣೆಯು ಇದ್ದಕ್ಕಿದ್ದಂತೆ ಬರುವುದಿಲ್ಲ. ಆದರೆ ಕ್ರಮೇಣ ಮತ್ತು ದಂಪತಿಗಳು ತಿಳಿಯದೆ ಮಾಡುವ ತಪ್ಪುಗಳಿಂದಾಗಿ ಬರುತ್ತದೆ.

ಆಕರ್ಷಣೆ ಏಕೆ ಕಡಿಮೆಯಾಗುತ್ತೆ?
ಮದುವೆಯಾದ ಕೆಲವು ವರ್ಷಗಳ ನಂತರ ದಂಪತಿ ನಡುವೆ ಆಕರ್ಷಣೆ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆರಂಭವು ತುಂಬಾ ಸುಂದರವಾಗಿರುತ್ತದೆ, ಗಂಡ ಮತ್ತು ಹೆಂಡತಿಯ ನಡುವೆ ಸಾಕಷ್ಟು ಪ್ರೀತಿ, ಪ್ರೇಮ ಮತ್ತು ಪ್ರಣಯ ಇರುತ್ತದೆ. ಆದರೆ ಕಾಲಾನಂತರದಲ್ಲಿ ಕೆಲಸ, ಜವಾಬ್ದಾರಿ, ಮಕ್ಕಳು ಮತ್ತು ಕುಟುಂಬದಿಂದಾಗಿ ಅನೇಕ ದಂಪತಿಗಳ ನಡುವೆ ಗ್ಯಾಪ್ ಆಗುತ್ತಾ ಹೋಗುತ್ತೆ. ಇದರ ಪರಿಣಾಮವಾಗಿ ದಂಪತಿಗಳ ನಡುವೆ ಯಾವುದೇ ದೈಹಿಕ ಆಕರ್ಷಣೆಯೂ ಉಳಿಯುವುದಿಲ್ಲ. ಸಂಬಂಧದಲ್ಲಿನ ಈ ಬದಲಾವಣೆಯು ಇದ್ದಕ್ಕಿದ್ದಂತೆ ಬರುವುದಿಲ್ಲ. ಆದರೆ ಕ್ರಮೇಣ ಮತ್ತು ದಂಪತಿಗಳು ತಿಳಿಯದೆ ಮಾಡುವ ತಪ್ಪುಗಳಿಂದಾಗಿ ಬರುತ್ತದೆ. ಹಾಗಾದರೆ ಇಂದು ಮದುವೆಯ ನಂತರ ದಂಪತಿ ನಡುವೆ ಆಕರ್ಷಣೆ ಏಕೆ ಕಡಿಮೆಯಾಗುತ್ತದೆ ಎಂದು ನೋಡೋಣ..
ಸಮಯ ಕೊಡಲ್ಲ
ನಿಜ ಹೇಳಬೇಕೆಂದ್ರೆ ಹೊಸದಾಗಿ ಮದುವೆಯಾದಾಗ ದಂಪತಿ ಪರಸ್ಪರ ಸಾಕಷ್ಟು ಸಮಯವನ್ನು ಕೊಡುತ್ತಾರೆ. ಗುಣಮಟ್ಟದ ಸಮಯವನ್ನು ಕಳೆಯಲು ಪ್ರಯತ್ನಿಸುತ್ತಾರೆ. ಆದರೆ ಕಾಲಾನಂತರದಲ್ಲಿ ಕೆಲಸದ ಹೊರೆ, ಕುಟುಂಬ ಮತ್ತು ಜವಾಬ್ದಾರಿಗಳು ಹೆಚ್ಚಾಗುತ್ತವೆ. ಇದರಿಂದಾಗಿ ದಂಪತಿಗಳ ನಡುವಿನ ಗುಣಮಟ್ಟದ ಸಮಯ ಕಡಿಮೆಯಾಗುತ್ತದೆ.
ಸ್ವಯಂ ಆರೈಕೆ
ಮದುವೆಯ ನಂತರ ಕೆಲವರು ಅನೇಕ ದೈಹಿಕ ಬದಲಾವಣೆಗಳನ್ನು ಎದುರಿಸುತ್ತಾರೆ. ಸಾಮಾನ್ಯವಾಗಿ ಜನರು ಮದುವೆಯ ನಂತರ ತಮ್ಮ ಬಗ್ಗೆ ತಾವು ತುಂಬಾ ಅಸಡ್ಡೆ ಪಟ್ಟಿಕೊಳ್ಳುತ್ತಾರೆ. ಉದಾಹರಣೆಗೆ ತೂಕ ಹೆಚ್ಚಾಗುವುದು, ಏನೋ ಒಂದು ಧರಿಸುವುದು, ವೈಯಕ್ತಿಕ ನೈರ್ಮಲ್ಯದ ಬಗ್ಗೆ ಗಮನ ಹರಿಸದಿರುವುದು ಇತ್ಯಾದಿ. ಮದುವೆಯಾದ ಕೆಲವು ವರ್ಷಗಳ ನಂತರ ಸಂಬಂಧದಲ್ಲಿನ ದೈಹಿಕ ಆಕರ್ಷಣೆ ಕಡಿಮೆಯಾಗಲು ಇದು ಕೂಡ ಒಂದು ಕಾರಣವಾಗಬಹುದು.
ರೊಮ್ಯಾನ್ಸ್ ಮಾಡೋಕು ಟೈಂ ಕೊಡಲ್ಲ
ಮದುವೆಯ ನಂತರ ದಂಪತಿಗಳು ಎಷ್ಟು ಆರಾಮಾಗಿರುತ್ತಾರೆಂದರೆ ಅವರ ನಡುವಿನ ರೊಮ್ಯಾನ್ಸ್ ಕಡಿಮೆಯಾಗುತ್ತಾ ಹೋಗುತ್ತದೆ. ಸಾಮಾನ್ಯವಾಗಿ ರೊಮ್ಯಾನ್ಸ್ ಕೆಲವು ವರ್ಷಗಳವರೆಗೆ ಮಾತ್ರ ಇರುತ್ತದೆ. ಆದರೆ ಅದರ ನಂತರ ಜನರು ನಿಧಾನವಾಗಿ ರೊಮ್ಯಾನ್ಸ್ ಮಾಡಲೂ ನಿರ್ಲಕ್ಷಿಸುತ್ತಾರೆ. ಆದ್ದರಿಂದ ಮದುವೆಯ ನಂತರದ ವರ್ಷಗಳಲ್ಲಿಯೂ ಸಂಬಂಧದಲ್ಲಿ ಪ್ರಣಯ, ಉತ್ಸಾಹ ಮತ್ತು ಭಾವನಾತ್ಮಕ ಸಂಪರ್ಕ ಉಳಿಸಿಕೊಳ್ಳಬೇಕು.
ಜಗಳಗಳು ಹೆಚ್ಚುವುದು
ಮದುವೆಯ ಆರಂಭಿಕ ದಿನಗಳಲ್ಲಿ ದಂಪತಿಗಳ ನಡುವೆ ಜಗಳಗಳು ಕಡಿಮೆ ಇರುತ್ತದೆ. ಆದರೆ ಕ್ರಮೇಣ ಜಗಳಗಳು ಪ್ರಾರಂಭವಾಗುತ್ತವೆ. ಅನೇಕ ಸಂಬಂಧಗಳಲ್ಲಿ ಈ ಜಗಳಗಳು ಸಂಬಂಧ ಹಾಳಾಗಲು ಕಾರಣವಾಗುತ್ತವೆ. ಕೆಲವು ದಂಪತಿಗಳ ನಡುವೆ ಸಣ್ಣ ಸಣ್ಣ ವಿಷಯಗಳಿಗೆ ವಾದಗಳು, ಅಸಮಾಧಾನ ಅಥವಾ ಕೋಪವು ದೀರ್ಘಕಾಲ ಇರುತ್ತದೆ.