ಸಂಶೋಧನೆಯಲ್ಲಿ ಕಂಡುಬಂದ ಅಚ್ಚರಿಯ ಫಲಿತಾಂಶಗಳು
ಈ ಸಮಯದಲ್ಲಿ, ಸಂಶೋಧನಾ ತಂಡವು ಆಶ್ಚರ್ಯಕರ ವಿಷಯಗಳನ್ನು ಕಂಡುಕೊಂಡಿತು. ಹೆಚ್ಚು ಬುದ್ಧಿವಂತ ಪುರುಷರ ಸಂಬಂಧಗಳು ಸಹ ಆರೋಗ್ಯಕರವಾಗಿವೆ ಎಂದು ತಂಡವು ಕಂಡುಕೊಂಡಿತು. ಅಂದರೆ, ಜಗಳವಾಡುವುದು, ವಾದಿಸುವುದು, ಕುತಂತ್ರ ಮಾಡುವುದು, ಮೋಸ ಮಾಡುವುದು ಅಥವಾ ಇವರು ತಮ್ಮ ಸಂಗಾತಿಗೆ ದೈಹಿಕವಾಗಿ ಒತ್ತಡ ಏರುವುದಿಲ್ಲ ಅನ್ನೋದು ತಿಳಿದು ಬಂದಿತ್ತು. ಅವರ ಸಂಬಂಧಗಳಲ್ಲಿ ತೃಪ್ತಿ ಮತ್ತು ಅವರ ಸಂಗಾತಿಯ ಅಗತ್ಯಗಳಿಗೆ ಆದ್ಯತೆ ನೀಡುವ ಸಾಧ್ಯತೆ ಹೆಚ್ಚಿತ್ತು.