ಈ ದೇಶದಲ್ಲಿ ಡಿವೋರ್ಸ್‌ ಜಾಸ್ತಿಯಂತೆ; ಅತಿ ಹೆಚ್ಚು ವಿಚ್ಛೇದನ ಆಗೋ ದೇಶಗಳಿವು

First Published | May 9, 2024, 7:01 PM IST

ಮದುವೆ ಎಂಬ ವ್ವವಸ್ಥೆಯು  ಜೀವನಕ್ಕಾಗಿ ಇಬ್ಬರನ್ನು ಒಟ್ಟಿಗೆ  ಬಂಧಿಸುತ್ತದೆ. ಆದಾಗ್ಯೂ ಕೆಲವೊಮ್ಮೆ ಇದು ಕೆಲಸ ಮಾಡುವುದಿಲ್ಲ ಮತ್ತು ಜನರು ವಿಚ್ಛೇದನವನ್ನು ಪಡೆಯುತ್ತಾರೆ. ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ದೇಶಗಳ ಪಟ್ಟಿ ಇಲ್ಲಿದೆ.  

ಮದುವೆ ಸಮಾಜದ ಒಂದು ಮೂಲಭೂತವಾದ ಸಂಸ್ಥೆಯಾಗಿದೆ ಮತ್ತು ಎಲ್ಲಾ ದೇಶದಲ್ಲೂ ಸಾರ್ವತ್ರಿಕವಾಗಿದೆ.  ಪ್ರೀತಿ, ಒಡನಾಟ, ಕುಟುಂಬವನ್ನು ಕಟ್ಟುವ ಬಯಕೆ, ಆರ್ಥಿಕ ಸ್ಥಿರತೆ, ಸಾಮಾಜಿಕ ಸ್ಥಾನಮಾನ ಮತ್ತು ಧಾರ್ಮಿಕ ನೆರವೇರಿಕೆ ಸೇರಿದಂತೆ ಅನೇಕ ಕಾರಣಗಳಿಗಾಗಿ ಜನರು ಮದುವೆಯಾಗುತ್ತಾರೆ.

ಅದೇ ರೀತಿ ದಾಂಪತ್ಯ ದ್ರೋಹ, ಹಣಕಾಸಿನ ಸಮಸ್ಯೆಗಳು, ಅನ್ಯೋನ್ಯತೆಯ ಕೊರತೆ, ನಿಂದನೆ, ಬದ್ಧತೆಯ ಕೊರತೆ, ನೈತಿಕ ಅಥವಾ ಧಾರ್ಮಿಕ ವ್ಯತ್ಯಾಸಗಳು ಸೇರಿದಂತೆ ಹಲವು ಸಂಭವನೀಯ ಕಾರಣಗಳಿಂದಾಗಿ ವಿಚ್ಛೇದನವು ನಡೆಯುತ್ತದೆ. ವಿಚ್ಛೇದನವು ಪ್ರಪಂಚದಾದ್ಯಂತ ನಡೆಯುತ್ತದೆ.

Tap to resize

ಅತಿ ಹೆಚ್ಚು ವಿಚ್ಛೇದನ ದರ ಹೊಂದಿರುವ ದೇಶಗಳ ಪಟ್ಟಿ ಇಲ್ಲಿದೆ.  ವಿಶ್ವ ಜನಸಂಖ್ಯೆಯ ವಿಮರ್ಶೆ ಪ್ರಕಾರ. ಈ ಪಟ್ಟಿಯು  ದೇಶದಲ್ಲಿ  ಪ್ರತಿ 1000 ಜನರಿಗೆವಿಚ್ಛೇದನ ದರಗಳನ್ನು ಪ್ರತಿನಿಧಿಸುತ್ತದೆ.

ಜಾರ್ಜಿಯಾ
ಜಾರ್ಜಿಯಾ ದೇಶವು ವಿಶ್ವದಲ್ಲೇ ಅತಿ ಹೆಚ್ಚು ವಿಚ್ಛೇದನ ದರವನ್ನು ಹೊಂದಿದೆ. ಇಲ್ಲಿ  ಪ್ರತಿ 1000 ಜನರಿಗೆ 3.8% ಜನ ಡಿವೋರ್ಸ್‌ ಪಡೆಯುತ್ತಾರೆ.

ಮಾಲ್ಡೋವಾ:
ಮಾಲ್ಡೋವಾ ದೇಶದಲ್ಲಿ ಪ್ರತಿ ಸಾವಿರ ಜನರಿಗೆ 3.7ರಷ್ಷು ಜನ ಡೀವೊರ್ಸ್‌ ಪಡೆಯುತ್ತಾರೆ ಮತ್ತು ಇದು  ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಲಾಟ್ವಿಯಾ:
2.9 ವಿಚ್ಛೇದನ ದರದೊಂದಿಗೆ ಲಾಟ್ವಿಯಾ ದೇಶವು ಅತಿ ಹೆಚ್ಚು ಡಿವೋರ್ಸ್‌ ಪಡೆಯುವ ದೇಶಗಳ ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿದೆ.

ಡೊಮಿನಿಕನ್ ರಿಪಬ್ಲಿಕ್ ಮತ್ತು ಗ್ರೀನ್ಲ್ಯಾಂಡ್:
ಡೊಮಿನಿಕನ್ ರಿಪಬ್ಲಿಕ್ ಮತ್ತು ಗ್ರೀನ್ಲ್ಯಾಂಡ್ ಕೂಡ 2.7 ರ ವಿಚ್ಛೇದನ ದರದೊಂದಿಗೆ ಅತಿ ಹೆಚ್ಚು ವಿಚ್ಛೇದನ ಹೊಂದಿರುವ ದೇಶಗಳ ಪಟ್ಟಿಯಲ್ಲಿವೆ.

ಲಿಥುವೇನಿಯಾ ಮತ್ತು ಕೋಸ್ಟರಿಕಾ:
ಲಿಥುವೇನಿಯಾ ಮತ್ತು ಕೋಸ್ಟರಿಕಾ  ದೇಶಗಳು 2.3 ವಿಚ್ಛೇದನ ದರದೊಂದಿಗೆ ಅತಿ ಹೆಚ್ಚು ಡಿವೋರ್ಸ್‌ ದರವನ್ನು ಹೊಂದಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿವೆ.

ಟರ್ಕಿ ಮತ್ತು ಫಿನ್‌ಲ್ಯಾಂಡ್:
ಟರ್ಕಿ ಮತ್ತು ಫಿನ್‌ಲ್ಯಾಂಡ್‌ ದೇಶಗಳು  ಪ್ರತಿ 1000 ಜನರಿಗೆ ಕ್ರಮವಾಗಿ 2.1 ಮತ್ತು 2.0 ವಿಚ್ಛೇದನ ದರವನ್ನು ಹೊಂದಿದ್ದು ಈ ಪಟ್ಟಿಯಲ್ಲಿ  ನಂತರದ ಸ್ಥಾನದಲ್ಲಿವೆ.

Latest Videos

click me!