ಸಂಬಂಧದಲ್ಲಿ ಬೇರ್ ಮಿನಿಮಮ್ ಎಂಬ ಪದವಿದೆ. ಅಂದರೆ, ಸಂಬಂಧ ಕಾಪಾಡಿಕೊಳ್ಳಲು ಕನಿಷ್ಠ ಪ್ರಯತ್ನವನ್ನೂ ಹಾಕದಿರುವುದು. ಅಂದರೆ, ಸಂಬಂಧದಲ್ಲಿ ಪ್ರಯತ್ನ, ತಿಳುವಳಿಕೆ ಮತ್ತು ಅನ್ಯೋನ್ಯತೆಯ ಅನುಪಸ್ಥಿತಿಯ ಸಂಕೇತವಾಗಿದೆ.
ಯಾವುದೇ ಸಂಬಂಧಕ್ಕೆ ಅಡಿಪಾಯವೇ ನಂಬಿಕೆ , ಸಂವಹನ, ತಿಳಿವಳಿಕೆ. ಆದರೆ, ಬೇರ್ ಮಿನಿಮಮ್ ಸಾಮಾನ್ಯವಾಗಿ ಪ್ರಯತ್ನದ ಕೊರತೆ, ಭಾವನಾತ್ಮಕ ಹೂಡಿಕೆ ಇಲ್ಲದಿರುವುದು ಅಥವಾ ಸಂಬಂಧದಲ್ಲಿ ಬದ್ಧತೆಯ ಯೋಚನೆ ಇಲ್ಲದಿರುವುದನ್ನು ಸೂಚಿಸುತ್ತದೆ.
ಈ ಕೆಳಗಿನ ಚಿಹ್ನೆಗಳು ಸಂಬಂಧದ ಸಮಸ್ಯೆಗಳಿಗೆ ಅಥವಾ ಸಂಬಂಧ ಒಡೆಯಲು ಕಾರಣವಾಗಬಹುದು. ಅವು ನಿಮ್ಮ ಸಂಬಂಧದಲ್ಲೂ ಕಂಡುಬರುತ್ತಿದ್ದರೆ, ಕೂಡಲೇ ಪರಿಹಾರದ ಕಡೆ ಗಮನ ಹರಿಸಿ.
ಕನಿಷ್ಠ ದೈಹಿಕ ಪ್ರೀತಿ: ಅಪ್ಪುಗೆಗಳು ಅಥವಾ ಚುಂಬನಗಳಂತಹ ದೈಹಿಕ ಸ್ಪರ್ಶವನ್ನು ಕಡಿಮೆ ಮಾಡುವುದು ಸಂಬಂಧದಲ್ಲಿ ಬೇರ್ ಮಿನಿಮಮ್‌ನ ಚಿಹ್ನೆಯಾಗಿರಬಹುದು. ದೈಹಿಕ ಅನ್ಯೋನ್ಯತೆಯು ಆಳವಾದ ಸಂಪರ್ಕಗಳಿಗೆ ಕಾರಣವಾಗುತ್ತದೆ ಮತ್ತು ಅದರ ಅನುಪಸ್ಥಿತಿಯು ಸಂಬಂಧದ ಮೇಲೆ ಪರಿಣಾಮ ಬೀರಬಹುದು.
ಕೃತಜ್ಞತೆಯನ್ನು ವ್ಯಕ್ತಪಡಿಸಲು ವಿಫಲವಾಗುವುದು: ಇತರರ ಕಾರ್ಯಗಳಿಗೆ ಮೆಚ್ಚುಗೆ ಅಥವಾ ಕೃತಜ್ಞತೆಯನ್ನು ತೋರಿಸದಿರುವುದು ಸಂಬಂಧದಲ್ಲಿ ಅನಾರೋಗ್ಯಕರ ಅಂಶವಾಗಿದೆ.
ಭರವಸೆಗಳನ್ನು ಮುರಿಯುವುದು: ಆಡುವ ಮಾತಿಗೂ ಮಾಡುವ ಕೆಲಸಕ್ಕೂ ಹೊಂದಿಕೆಯಾಗದಿದ್ದಾಗ, ನಾವು ಪಾಲುದಾರರ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತೇವೆ. ಇದು ನಿಧಾನವಾಗಿ ಸಂಬಂಧವನ್ನು ದೂರ ಮಾಡುತ್ತದೆ.
ಭಾವನಾತ್ಮಕ ಬೆಂಬಲ ನೀಡಲು ವಿಫಲ: ನಾವು ಸಂಬಂಧದಲ್ಲಿ ಸಹಾನುಭೂತಿ ಮತ್ತು ತಿಳುವಳಿಕೆಯನ್ನು ಹೊಂದಿರಬೇಕು. ಪಾಲುದಾರರ ಭಾವನೆಗಳಿಗೆ ಸ್ಪಂದಿಸದೆ ಹೋದಾಗ ನಿಧಾನವಾಗಿ ಅವರ ಮನಸ್ಸಿನಿಂದ ದೂರಾಗಲು ಆರಂಭವಾಗುತ್ತೇವೆ.
ಪಾಲುದಾರರ ವಿಷಯದಲ್ಲಿ ಆಸಕ್ತಿಯ ಕೊರತೆ: ಸಂಗಾತಿಯ ಜೀವನದಲ್ಲಿ ಆಸಕ್ತಿಯನ್ನು ತೋರಿಸದಿರುವುದು, ಅವರೇನು ಮಾಡುತ್ತಿದ್ದಾರೆ, ಯಾಕೆ ಮಾಡುತ್ತಿದ್ದಾರೆ, ಯಾವ ಭಾವನೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದಕ್ಕೆ ಆಸಕ್ತಿಯೇ ತೋರಿಸದಿರುವುದು ಸಂಬಂಧದಲ್ಲಿ ಪ್ರಮುಖ ಕೆಂಪು ಧ್ವಜವಾಗಿದೆ.
ಜವಾಬ್ದಾರಿ ಹಂಚಿಕೆಯಲ್ಲಿ ವ್ಯತ್ಯಯ: ಮನೆಯ ಜವಾಬ್ದಾರಿಗಳನ್ನು ಅಥವಾ ಹಣಕಾಸಿನ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತಿರಲಿ, ಪಾಲುದಾರನು ಸಂಬಂಧದಲ್ಲಿ ಸಮಾನವಾಗಿ ಹಂಚಿಕೊಳ್ಳಲು ವಿಫಲವಾದಾಗ, ಅದು ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು.