Relationship Tips: ಈ ಅಭ್ಯಾಸಗಳು ಪ್ರೀತಿಯ ಜೀವನವನ್ನು ಹಾಳುಮಾಡಬಹುದು, ಹುಷಾರ್!!

First Published | Apr 10, 2022, 2:15 PM IST

Love Relationship Tips in Kannada: ಸಂಬಂಧ ಏಕೆ ಮುರಿದು ಬೀಳುತ್ತದೆ? ಇದಕ್ಕೆ ಕಾರಣಗಳನ್ನು ಹುಡುಕಿಕೊಂಡು ಹೋದಂತೆ ಹಲವಾರು ವಿಷಯಗಳು ತೆರೆದುಕೊಳ್ಳುತ್ತದೆ. ಸಂಬಂಧ ಮುರಿದು ಬೀಳುವುದಕ್ಕೆ ಬಹಳಷ್ಟು ಕಾರಣಗಳಿರಬಹುದು, ಆದರೆ ಇವುಗಳಲ್ಲಿ ಅತ್ಯಂತ ಸಾಮಾನ್ಯವಾದದ್ದು ನಿಮ್ಮ ಈ ಕೆಟ್ಟ ಅಭ್ಯಾಸಗಳು.
 

ಸಂಗಾತಿಯನ್ನು ನಿಯಂತ್ರಿಸುವುದು(Control) 
ಸಲಹೆಗಳನ್ನು ನೀಡುವುದು ಅಥವಾ ಸಂಗಾತಿಯೊಂದಿಗೆ ಮಾತನಾಡುವುದನ್ನು ನಿಲ್ಲಿಸುವುದು ಅಥವಾ ಸಂಬಂಧವನ್ನು ಅಡ್ಡಿಪಡಿಸುವುದು ಸಂಬಂಧದಲ್ಲಿ ಹುಳಿಯಾಗಲು ಕಾರಣವಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಸಂಗಾತಿಯನ್ನು ನಿಯಂತ್ರಿಸಲು ಹೋಗಬೇಡಿ. 

ಡಿಪೆಂಡ್(Depend) ಆಗಬೇಡಿ 
ನೀವು ಇಲ್ಲದೆ ತಾನು ಬದುಕಲು ಸಾಧ್ಯವಿಲ್ಲ ಎಂದು ಸಂಗಾತಿಗೆ ಮನವರಿಕೆ ಮಾಡಿಕೊಡುವುದು ಸಂಬಂಧವನ್ನು ಹಾಳುಮಾಡಬಹುದು. ಸಂಗಾತಿ ಮೇಲೆ ಹೆಚ್ಚು ಡಿಪೆಂಡ್ ಆಗಬೇಡಿ, ಇಬ್ಬರು ಜೊತೆಯಾಗಿ ಬದುಕುವುದು ಮುಖ್ಯ, ಆದರೆ ತುಂಬಾನೇ ಅವಲಂಬಿಸುವುದು ಸರಿಯಲ್ಲ. 

Tap to resize

ಸ್ಟಾಕ್ ಮಾಡಬೇಡಿ 
ಸಂಗಾತಿಯನ್ನು ಎಲ್ಲೆಡೆ ಸ್ಟಾಕ್ ಮಾಡುವುದು ನಂಬಿಕೆಯನ್ನು ಮುರಿಯುತ್ತದೆ, ಇದು ಸಂಬಂಧವನ್ನು ಮುರಿಯುತ್ತದೆ. ಸಂಗಾತಿಯ ಮೇಲೆ ಹೆಚ್ಚು ಸಂಶಯ(Doubt) ಪಡಬೇಡಿ, ಇದರಿಂದ ಇಬ್ಬರ ನಡುವೆ ಅಂತರ ಹೆಚ್ಚುತ್ತಾ ಹೋಗುತ್ತದೆ. ಇದರಿಂದ ಜಗಳ ಕೂಡ ಹೆಚ್ಚಬಹುದು. 

ಹಿಂಸೆ ನೀಡಬೇಡಿ 
ಸಂಬಂಧದಲ್ಲಿ ಸಣ್ಣ ವಿಷಯಗಳಿಗೆ ಸಂಬಂಧಿಸಿದಂತೆ ಪರಸ್ಪರರ ವಿರುದ್ಧ ಹಿಂಸಾತ್ಮಕವಾಗಿ ವರ್ತಿಸುವುದು ಸಹ ಸಂಬಂಧ ಮುರಿಯಲು ಕಾರಣವಾಗುತ್ತದೆ. ಅದೇನೇ ವಿರಸ ಇದ್ದರೂ ಸಹ ಇಬ್ಬರು ಮಾತನಾಡಿ ಬಗೆಹರಿಸಿ, ಇಲ್ಲವಾದರೆ ಜಗಳವಾಗಿ(Fight), ಅದು ಹಿಂಸಾಚಾರಕ್ಕೆ ತಿರುಗುವ ಸಾಧ್ಯತೆ ಇದೆ. 

ಪದೇ ಪದೇ ಬೆದರಿಕೆ
ತಿಳಿದಿರುವ ವಿಷಯದ ಬಗ್ಗೆ ಸಂಗಾತಿಯನ್ನು ಬೆದರಿಸುವುದು ಸಂಬಂಧದ ಮೇಲೆ ಹೊರೆಯಾಗಬಹುದು. ಬ್ಲ್ಯಾಕ್ ಮೇಲ್(Blackmail) ಮಾಡುವುದರಿಂದ ಸಂಬಂಧದಲ್ಲಿ ಪ್ರೀತಿ, ನಂಬಿಕೆ ಏನು ಉಳಿಯಲು ಸಾಧ್ಯವಿಲ್ಲ. ಆದುದರಿಂದ ಬೆದರಿಕೆ ಹಾಕುವ ಬಗ್ಗೆ ಯೋಚನೆ ಮಾಡಬೇಡಿ. ಬದಲಾಗಿ ವಿಷ್ಯ ಏನು? ಅದಕ್ಕೆ ಕಾರಣ ಏನು ? ಅನ್ನೋದನ್ನು ತಿಳಿಯಿರಿ... 

ಗೌರವಿಸದೆ(Disrespect) ಇರುವುದು 
ಯಾವುದೇ ಸಂಬಂಧದಲ್ಲಿ ಪರಸ್ಪರರನ್ನು ಗೌರವಿಸದಿರುವುದು ಅಡೆತಡೆಗಳನ್ನು ತರುತ್ತದೆ. ಸಂಬಂಧದಲ್ಲಿ ಒಬ್ಬರನ್ನೊಬ್ಬರು ಗೌರವಿಸುವುದು ಮುಖ್ಯವಾಗಿದೆ. ಗೌರವ ಇದ್ದರೆ ಮಾತ್ರ ಒಬ್ಬರನ್ನೊಬ್ಬರು ಪ್ರೀತಿ, ಅನ್ಯೋನ್ಯತೆಯಿಂದ ಬಾಳಲು ಸಾಧ್ಯವಾಗುತ್ತದೆ. 

ಮಾಜಿಯೊಂದಿಗೆ ಸಂಬಂಧ
ಹೊಸ ಸಂಬಂಧದಲ್ಲಿರುವಾಗ Xನೊಂದಿಗೆ ಸಂವಹನ ನಡೆಸುವುದು ಪ್ರೀತಿಯ ಜೀವನವನ್ನು ಹಾಳುಮಾಡಬಹುದು. ಜೀವನದಲ್ಲಿ ಒಂದಲ್ಲ ಒಂದು ಬಾರಿ ಹೆಚ್ಚಿನ ಜನರ ಜೀವನದಲ್ಲಿ ಪ್ರೀತಿ(Love) ಹುಟ್ಟಿ ಯಾವುದೋ ಕಾರಣಕ್ಕೆ ಬ್ರೇಕ್ ಅಪ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದರೆ ಪ್ರಸ್ತುತ ಜೀವನದಲ್ಲಿ ಮಾಜಿ ಸಂಗಾತಿಯ ಬಗ್ಗೆ ಮಾತನಾಡುವುದು ಸರಿಯಲ್ಲ. 

ತಪ್ಪುಗಳನ್ನು ಪುನರಾವರ್ತಿಸಬೇಡಿ 
ಹಳೆಯ ತಪ್ಪುಗಳನ್ನು ಮತ್ತೆ ಮತ್ತೆ ಪುನರಾವರ್ತಿಸುವುದು ಸಂಬಂಧವನ್ನು ಅಪಾಯಕ್ಕೆ ಸಿಲುಕಿಸಬಹುದು. ಹಿಂದೆ ಮಾಡಿದ ತಪ್ಪನ್ನು ತಿದ್ದಿ ಮುಂದೆ ಸರಿಯಾದ ದಾರಿಯಲ್ಲಿ ನಡೆಯುವುದು ಮುಖ್ಯವಾಗಿದೆ. ಹಿಂದೆ ಮಾಡಿದ ತಪ್ಪನ್ನೇ ಮತ್ತೆ ಮಾಡಿದರೆ ಇದರಿಂದ ಸಂಬಂಧ(Relationship) ಹಾಳಾಗುತ್ತದೆ. 

Latest Videos

click me!