The Tattoo Ghost divorce: ಡಿವೋರ್ಸ್ ತಗೊಳ್ಳಲು ಸಾಕಷ್ಟು ಕಾರಣಗಳು ಇರುತ್ತವೆ. ಕೆಲವರು ಡಿವೋರ್ಸ್ ತಗೊಂಡೆವು ಎಂದು ಕೂಡ ಹೇಳೋದಿಲ್ಲ. ಇನ್ನೂ ಕೆಲವರು ಇದರಿಂದ ಹೊರಗಡೆ ಬರಲು ತುಂಬ ಸಮಯ ತಗೊಳ್ತಾರೆ. ಆದರೆ ಇಲ್ಲೊಂದು ಜೋಡಿಯೊಂದು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
“ಇವತ್ತು ನನ್ನ ಜೀವನದಲ್ಲಿ ಮರೆಯೋಕಾಗದಿರೋಂಥ ದಿನ, ನಾನೀಗ ಶಿವಮೊಗ್ಗದಲ್ಲಿ ಕೋರ್ಟ್ ಹತ್ರ ಇದ್ದೀನಿ. ಐದು ವರ್ಷದ ನಂತರ ನಾನು ಇವರನ್ನು ಭೇಟಿ ಆಗ್ತಿದೀನಿ” ಎಂದು ದಿ ಟ್ಯಾಟೂ ಘೋಸ್ಟ್ ಅವರು ಹೇಳಿಕೊಂಡಿದ್ದಾರೆ.
ಇವರು ಟ್ಯಾಟೂ ಶಾಪ್ ಹೊಂದಿದ್ದಾರೆ, ಇವರ ನಿಜವಾದ ಹೆಸರಿನ ಬಗ್ಗೆ ಮಾಹಿತಿ ಇಲ್ಲ, ಆದರೆ ನಟನೆಯಲ್ಲಿ ಆಸಕ್ತಿ ಇದೆಯಂತೆ. ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ನಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
24
ನಾನು, ನನ್ನ ಗಂಡನ ಕೊನೆಯ ಹೆಜ್ಜೆ
ನಾನು, ನನ್ನ ಗಂಡನ ಕೊನೆಯ ಹೆಜ್ಜೆ ಇದು. ನಾನು ಇವರ ಪತ್ನಿ ಎಂದು ಕಾವ್ಯ ಅವರು ವಿಡಿಯೋದಲ್ಲಿ ಹೇಳಿದ್ದಾರೆ.
“ಕಾರಣಾಂತರಗಳಿಂದ ಫ್ರೆಂಡ್ಸ್ ಆಗಿ ಉಳ್ಕೊಂಡಿದ್ದೀವಿ. ಕೆಲವೊಂದು ಸನ್ನಿವೇಶಗಳು ಯಾವ ತರ ಆಗತ್ತೆ ಅಂತಂದ್ರೆ ಫ್ರೆಂಡ್ರಿಪ್ ಅಲ್ಲಿದ್ದು ದೂರ ಇರದೇ ಒಳ್ಳೆಯದು. ಇಬ್ರು ಕೂಡ ಡಿವೋರ್ಸ್ ತಗೊಳ್ತಿದ್ದೀವಿ” ಎಂದು ದಿ ಟ್ಯಾಟೂ ಘೋಸ್ಟ್ ಹೇಳಿದ್ದಾರೆ.
34
ಡಿವೋರ್ಸ್ ಬಳಿಕ ವಿಶ್ ಮಾಡಿದ್ರು
ಬೆಸ್ಟ್ ಆಫ್ ಲಕ್, ನಿಮ್ಮ ಭವಿಷ್ಯ ಚೆನ್ನಾಗಿರಲಿ ಎಂದು ಮಾಜಿ ಪತ್ನಿಗೆ ಹೇಳಿದ್ದಾರೆ. ಅಂದಹಾಗೆ ಮಾಜಿ ಪತ್ನಿ ಕೂಡ “ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ ಎಂದು ಗೊತ್ತಿದೆ, ಚೆನ್ನಾಗಿರು” ಎಂದು ಕಾವ್ಯ ಹೇಳಿದ್ದಾರೆ.
ಇವರಿಬ್ಬರು ಫ್ಯಾನ್ಸಿ ಸ್ಟೋರ್‌ಗೆ ಹೋಗಿ, ಹಾರ್ಟ್ ಸಿಂಗೋಲ್ ಇರೋ ಕೀ ಚೈನ್ ತಗೊಂಡು, ಆಮೇಲೆ ಹೋಟೆಲ್‌ನಲ್ಲಿ ಟೀ ಕುಡಿದಿದ್ದಾರೆ, ಬೈಕ್ ಸವಾರಿ ಮಾಡಿದ್ದಾರೆ, ಆಮೇಲೆ ಆಟೋದಲ್ಲಿ ಕೂಡ ಸ್ವಲ್ಪ ಓಡಾಡಿದ್ದು ವಿಡಿಯೋ ಮಾಡಿದ್ದಾರೆ.
ಮಿಲನ ಸಿನಿಮಾದಲ್ಲಿ ಆಕಾಶ್ ಹಾಗೂ ಅಂಜಲಿ ಖುಷಿಯಿಂದ ಫ್ರೆಂಡ್ಸ್ ಆಗಿರೋಣ ಎಂದು ಹೇಳಿ ಡಿವೋರ್ಸ್ ತಗೊಂಡಿರೋ ತರ ಇವರು ವಿಡಿಯೋ ಮಾಡಿರೋದು ಅಚ್ಚರಿ ಮೂಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.