ನಿಮ್ಮ ಕಳೆದ ಶತ್ರುವೇ ಈ ಜನ್ಮದಲ್ಲಿ ನಿಮ್ಮ ಗಂಡ / ಹೆಂಡತಿಯಾಗಿರ್ತಾರೆ; ಸತ್ಯ ಬಿಚ್ಚಿಟ್ಟ ಆಧ್ಯಾತ್ಮಿಕ ಗುರು

Published : Jun 14, 2026, 04:25 PM IST

Enemy Of Your Past Life Is Your Husband or Wife: ಕಳೆದ ಜನ್ಮದ ಶತ್ರುವೇ ಈ ಜನ್ಮದ ಸಂಗಾತಿ! ಈ ಮಾತು ಕೇಳಿ ಕಂಗಾಲಾಗಬೇಡಿ. ಇದು ಮದುವೆಯೋ ಅಥವಾ ಕರ್ಮದ ಜಾಲವೋ? ಹೌದು, ಈ ಡೌಟ್‌ ಬರೋದು ಸಹಜ. Dr Manmit ಎನ್ನುವ ಆಧ್ಯಾತ್ಮಿಕ ಗುರು ಈ ಬಗ್ಗೆ ಮಾತನಾಡಿದ್ದಾರೆ.

PREV
15
ಮನಸ್ತಾಪ ಇದ್ರೂ ದೂರ ಆಗೋಕೆ ಆಗೋದಿಲ್ಲ?

"ಮದುವೆಗಳು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ" ಎಂಬ ಮಾತಿದೆ. ಆದರೆ ಇಂದು ಶೇಕಡಾ 90 ರಷ್ಟು ಮದುವೆಗಳನ್ನು ನೋಡಿದಾಗ, ‘ಇದು ಸ್ವರ್ಗವೋ ಅಥವಾ ನರಕವೋ?’ ಎಂಬ ಪ್ರಶ್ನೆ ಮೂಡುತ್ತದೆ. ಪ್ರೀತಿಯಿಂದ ಆರಂಭವಾಗುವ ಸಂಬಂಧಗಳು ಕ್ರಮೇಣ ಜಗಳ, ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತವೆ. ಜನರು ಒಂದೇ ಮನೆಯಲ್ಲಿ ಇರುತ್ತಾರೆ, ಆದರೆ ಅವರ ಮಧ್ಯೆ ಯಾವುದೇ ಪ್ರೀತಿ ಇರುವುದಿಲ್ಲ. ಶತ್ರುಗಳಂತೆ ಬದುಕುತ್ತಿದ್ದರೂ, ಅವರಿಂದ ಆ ಸಂಬಂಧವನ್ನು ಬಿಟ್ಟು ಹೊರಬರಲು ಸಾಧ್ಯವಾಗುವುದಿಲ್ಲ. ಯಾಕೆ ಹೀಗಾಗುತ್ತದೆ?

ಆಧ್ಯಾತ್ಮಿಕ ತಜ್ಞರು, ಆಕಾಶಿಕ ರೆಕಾರ್ಡ್ಸ್ (Akashic Records) ಪ್ರಕಾರ, ನಿಮ್ಮ ಕಳೆದ ಜನ್ಮದ ಅತ್ಯಂತ ದೊಡ್ಡ ಶತ್ರುವೇ ಈ ಜನ್ಮದಲ್ಲಿ ನಿಮ್ಮ ಗಂಡ ಅಥವಾ ಹೆಂಡತಿಯಾಗಿ ಬಂದಿರುತ್ತಾರೆ!

25
ಶತ್ರುಗಳೇ ಯಾಕೆ ಸಂಗಾತಿಯಾಗುತ್ತಾರೆ?

ಹಿಂದಿನ ಜನ್ಮದಲ್ಲಿ ಯಾರೊಂದಿಗಾದರೂ ನಮಗೆ ದ್ವೇಷ, ವಂಚನೆ ಅಥವಾ ಹಗೆತನ ಇದ್ದಾಗ, ಆ ಋಣ ಹಾಗೆಯೇ ಉಳಿದುಬಿಡುತ್ತದೆ. ಆ ಜನ್ಮದಲ್ಲಿ ಶತ್ರು ಎದುರಾದಾಗ ನಾವು ಕೋಪದಿಂದಲೋ ಅಥವಾ ಅಸಹಾಯಕತೆಯಿಂದಲೋ ಪ್ರತಿಕಾರ ತೀರಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಆದರೆ ಪ್ರಕೃತಿಯ ನಿಯಮದಂತೆ, ಬಾಕಿ ಉಳಿದ ಲೆಕ್ಕವನ್ನು ಚುಕ್ತಾ ಮಾಡಲೇಬೇಕು.

ಅದಕ್ಕಾಗಿಯೇ, ಪ್ರಕೃತಿಯು ಆ ಇಬ್ಬರು ಶತ್ರುಗಳ ಆತ್ಮವನ್ನು ಈ ಜನ್ಮದಲ್ಲಿ ಅತ್ಯಂತ ಹತ್ತಿರದ ಸಂಬಂಧವಾದ 'ಗಂಡ-ಹೆಂಡತಿ' ರೂಪದಲ್ಲಿ ಒಂದಾಗಿಸುತ್ತದೆ. ಏಕೆಂದರೆ, ದೂರವಿದ್ದರೆ ನೀವು ಸೇಡು ತೀರಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಒಂದೇ ಮನೆಯಲ್ಲಿ ಇದ್ದಾಗ ದಿನದ 24 ಗಂಟೆಯೂ ಒಬ್ಬರನ್ನೊಬ್ಬರು ಕಾಡಬಹುದು!

35
ಮದುವೆ ಎನ್ನುವುದು 'ಕರ್ಮಭೂಮಿ'

ಮದುವೆ ಎಂಬುದು ಕೇವಲ ರೊಮ್ಯಾನ್ಸ್, ಸುಖದ ತಾಣವಲ್ಲ, ಅದು ನಿಮ್ಮ ಕರ್ಮಭೂಮಿ. ಹಿಂದಿನ ಜನ್ಮದ ಪಾಪ-ಪುಣ್ಯಗಳ ಲೆಕ್ಕವನ್ನು ತೀರಿಸುವ ವೇದಿಕೆ. ನಿಮ್ಮ ಸಂಗಾತಿ ನಿಮ್ಮನ್ನು ಯಾವುದೋ ಒಂದು ವಿಷಯಕ್ಕೆ ದಿನಾ ಚುಚ್ಚಿ ಮಾತನಾಡುತ್ತಿದ್ದರೆ (ಉದಾಹರಣೆಗೆ: ನಿನ್ನ ಬಣ್ಣ, ನಿನ್ನ ಸಂಬಳ, ನಿನ್ನ ಮನೆತನ ಇತ್ಯಾದಿ), ಅದು ಅವರ ತಪ್ಪು ಮಾತ್ರವಲ್ಲ. ನಿಮ್ಮೊಳಗಿರುವ 'Self Respect' ಎಂಬ ಹಳೆಯ ಗಾಯವನ್ನು ಅವರು ಕೆಣಕುತ್ತಿದ್ದಾರೆ. ನಿಮ್ಮ ಯೋಗ್ಯತೆ ಮತ್ತೊಬ್ಬರ ಮಾತಿನ ಮೇಲೆ ನಿರ್ಧಾರವಾಗುವುದಿಲ್ಲ ಎಂಬ ಪಾಠವನ್ನು ನೀವು ಕಲಿಯುವವರೆಗೂ ಅವರು ನಿಮ್ಮನ್ನು ಚುಚ್ಚುತ್ತಲೇ ಇರುತ್ತಾರೆ.

ಮದುವೆಯಲ್ಲಿ ಒಬ್ಬರು ಅತ್ಯಂತ ಕೋಪಿಷ್ಟರಾಗಿದ್ದರೆ, ಇನ್ನೊಬ್ಬರು ಸಹನೆಯನ್ನು ಕಲಿಯಬೇಕಾಗುತ್ತದೆ. ಈ ಜನ್ಮದಲ್ಲಿ ನಿಮ್ಮ ಅಹಂಕಾರವನ್ನು ಮುರಿದು, ನಿಮ್ಮನ್ನು ಒಬ್ಬ ಪರಿಪೂರ್ಣ ಆತ್ಮವನ್ನಾಗಿ ರೂಪಿಸಲು ನಿಮ್ಮ ಸಂಗಾತಿ 'ಶಿಕ್ಷಕ'ನ ರೂಪದಲ್ಲಿ ಬಂದಿರುತ್ತಾರೆ.

45
ಯಾಕೆ ಡಿವೋರ್ಸ್‌ ತಗೋಬಾರದು?

ಇಂದಿನ ತಲೆಮಾರು ಸಣ್ಣಪುಟ್ಟ ಜಗಳಗಳಿಗೂ ಡಿವೋರ್ಸ್ ಪಡೆದು ಸಂಬಂಧದಿಂದ ಎಸ್ಕೇಪ್ ಆಗಲು ನೋಡುತ್ತದೆ. ಆದರೆ ಆಧ್ಯಾತ್ಮಿಕವಾಗಿ ಇದು ತಪ್ಪು.

ನೀವು ಈ ಜನ್ಮದ ಸಂಗಾತಿಯಿಂದ ಓಡಿಹೋಗಿ ಮತ್ತೊಂದು ಮದುವೆಯಾದರೂ, ಕೆಲವೇ ದಿನಗಳಲ್ಲಿ ಆ ಹೊಸ ಸಂಗಾತಿಯೂ ಅದೇ ಹಳೆಯ ಗುಣಗಳನ್ನೇ ಪ್ರದರ್ಶಿಸಲು ಶುರುಮಾಡುತ್ತಾನೆ/ತಾಳೆ. ನೀವು ಕಲಿಯಬೇಕಾದ ಪಾಠವನ್ನು ಕಲಿಯುವವರೆಗೂ, ಪ್ರಕೃತಿಯು ಅದೇ ರೀತಿಯ ವ್ಯಕ್ತಿಗಳನ್ನು ಬೇರೆ ಬೇರೆ ಅವತಾರಗಳಲ್ಲಿ ನಿಮ್ಮ ಮುಂದೆ ತಂದು ನಿಲ್ಲಿಸುತ್ತಲೇ ಇರುತ್ತದೆ.

ಆದ್ದರಿಂದ, ನಿಮ್ಮ ಕರ್ಮಭೂಮಿಯನ್ನು ಬಿಟ್ಟು ಓಡಿಹೋಗಬೇಡಿ. ಆ ಕರ್ಮದ ಋಣವನ್ನು ಇಲ್ಲೇ ತೀರಿಸಿ ಮುಕ್ತರಾಗಬೇಕು.

55
ಈ ಕರ್ಮದಿಂದ ಮುಕ್ತಿ ಪಡೆಯುವುದು ಹೇಗೆ?

ಸ್ವೀಕಾರ ಮನೋಭಾವ  

"ಇವನು/ಇವಳು ನನ್ನ ಶತ್ರುವಲ್ಲ, ನನ್ನ ಹಳೆಯ ಕರ್ಮವನ್ನು ಕಳೆಯಲು ಬಂದಿರುವ ಮಾಧ್ಯಮ" ಎಂದು ಮನಸ್ಸನ್ನು ಒಪ್ಪಿಸಿ. ನಿಮ್ಮನ್ನು ನೀವು ಸಂಶಯ ಪಡುವುದನ್ನು (Victim Mode) ನಿಲ್ಲಿಸಿ.

ಕ್ಷಮಾಗುಣ 

ಕ್ಷಮೆ ಎಂದರೆ ಅವರ ಮುಂದೆ ಹೋಗಿ ಕೇಳುವುದಲ್ಲ. ನಿಮ್ಮ ಮನಸ್ಸಿನಲ್ಲೇ ಅವರನ್ನು ಸಂಪೂರ್ಣವಾಗಿ ಕ್ಷಮಿಸಿಬಿಡಿ. ಅವರ ಮೇಲಿನ ದ್ವೇಷವನ್ನು ಬಿಟ್ಟಾಗ ನಿಮ್ಮ ಕರ್ಮದ ಕಾಂಟ್ರಾಕ್ಟ್ (Soul Contract) ಕೊನೆಗೊಳ್ಳುತ್ತದೆ.

ಮಂತ್ರದ ರಕ್ಷಾಕವಚ

ಸಂಗಾತಿ ನಿಮ್ಮ ಮೇಲೆ ಕಿರುಚಾಡುವಾಗ, ಗಲಾಟೆ ಮಾಡುವಾಗ ನೀವು ಮೌನವಾಗಿ ನಿಮ್ಮ ಮನಸ್ಸಿನಲ್ಲಿ 'ಓಂ ನಮಃ ಶಿವಾಯ' ಅಥವಾ ನಿಮ್ಮ ಇಷ್ಟ ದೈವದ ಮಂತ್ರವನ್ನು ಜಪಿಸಿ. ನಿಮ್ಮ ಸುತ್ತ ಒಂದು ಸಕಾರಾತ್ಮಕ ಶಕ್ತಿಯ ಗೋಡೆಯನ್ನು ಕಲ್ಪಿಸಿಕೊಳ್ಳಿ. ಅವರ ಕೆಟ್ಟ ಮಾತುಗಳು ಆ ಗೋಡೆಗೆ ಬಡಿದು ವಾಪಸ್ ಹೋಗಲಿ, ನಿಮ್ಮ ಆತ್ಮವನ್ನು ಮುಟ್ಟದಿರಲಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories