ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ತಮ್ಮ 25 ವರ್ಷಗಳ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಜಗಳದ ಸಮಯದಲ್ಲಿ ಪತ್ನಿ ಪ್ರಿಯಾ ಬಳಸುವ ಇಂಗ್ಲಿಷ್ ಪದಗಳನ್ನು ಅರ್ಥಮಾಡಿಕೊಳ್ಳಲು ತಾನು ಗೂಗಲ್ ಬಳಸುತ್ತಿದ್ದೆ ಎಂದು ಸುದೀಪ್ ತಮಾಷೆಯಾಗಿ ಹೇಳಿಕೊಂಡಿದ್ದಾರೆ.
ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ ಅವರದ್ದು 25 ವರ್ಷಗಳ ದಾಂಪತ್ಯದ ಜೀವನ. ಸದಾ ಇಬ್ಬರೂ ಒಬ್ಬರ ಕಾಲನ್ನು ಒಬ್ಬರು ಎಳೆಯುತ್ತಲೇ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸದ್ಯ ಪ್ರಿಯಾ ಸುದೀಪ್ ಸ್ವತಂತ್ರ ನಿರ್ಮಾಪಕಿಯಾಗಿ ಎಂಟ್ರಿಕೊಟ್ಟಿರೋದು ಅಳಿಯ ಸಂಚಿತ್ ಅವರ ಹೊಸ ಚಿತ್ರ ʻಮ್ಯಾಂಗೋ ಪಚ್ಚʼದ ಮೂಲಕ. ಇದಾಗಲೇ ದಂಪತಿ ಇಬ್ಬರೂ ಈ ಸಿನಿಮಾದ ಪ್ರಮೋಷನ್ಗಾಗಿ ಹಲವಾರು ಕಡೆಗಳಲ್ಲಿ ಸಂದರ್ಶನ ನೀಡುತ್ತಿದ್ದಾರೆ.
26
ಜಗಳದ ಬಗ್ಗೆ
ಇದೀಗ ಮನೆಯಲ್ಲಿ ಜಗಳವಾಡುವ ವಿಷಯದ ಕುರಿತು ನಮ್ಮ ಸ್ಯಾಂಡಲ್ವುಡ್ಗೆ ನೀಡಿರುವ ಸಂದರ್ಶನದಲ್ಲಿ ಸುದೀಪ್ ಅವರು ಎಂದಿನಂತೆ ಹಾಸ್ಯದ ರೂಪದಲ್ಲಿ ಮಾತನಾಡಿದ್ದಾರೆ.
36
ತುಂಬಾ ತರ್ಲೆ ಅಂತೆ ಹೌದಾ?
ನೀವು ತುಂಬಾ ತರ್ಲೆ, ಪ್ರಿಯಾ ಅವರು ತುಂಬಾ ಸಾಫ್ಟ್ ಅಂತೆ ಹೌದಾ ಎಂದು ಕೇಳಿದಾಗ, ಸುದೀಪ್ ಒಂದು ಕ್ಷಣ ಮೌನವಾಗಿ, ಪತ್ನಿ ಬಗ್ಗೆ ಏನೂ ಹೇಳಲ್ಲ ಎಂದು ತಮಾಷೆ ಮಾಡಿದರು. ಬಳಿಕ, ಮನೆಯಲ್ಲಿ ಕನ್ನಡ ಮಾತನಾಡುವುದು ಜಗಳವಾಡುವ ವಿಷಯ ಕೇಳಿದಾಗ ಒಂದು ಜೋಕ್ ಹೇಳಿದ್ರು ಸುದೀಪ್.
ಅದೇನೆಂದ್ರೆ, ಹೀಗೆ ಜಗಳವಾಡುವಾಗ ಒಂದೇ ಸಲಕ್ಕೆ ಹೈಫೈ ಇಂಗ್ಲಿಷ್ ಮಾತನಾಡಿ ಬಿಡ್ತಾರೆ. ನನಗೆ ಏನು ಮಾಡಬೇಕು ಎಂದೇ ತಿಳಿಯುವುದಿಲ್ಲ. ಸೈಲೆಂಟ್ ಆಗಿ ಬಿಡ್ತೇನೆ. ಆಮೇಲೆ ಗೂಗಲ್ ಬಂತಲ್ಲ. ಆಗ ಈಸಿ ಆಯ್ತು. ಹೀಗೆ ಇಂಗ್ಲಿಷ್ನಲ್ಲಿ ಮಾತನಾಡಿದಾಗ ಅದರ ಅರ್ಥ ನೋಡಿ ಆಮೇಲೆ ಮಾತನಾಡೋದು ಸುಲಭವಾಯ್ತು ಎಂದು ತಮಾಷೆ ಮಾಡಿದ್ದಾರೆ.
56
ಪ್ರಿಯಾ ಕುರಿತು
ಇನ್ನು ಪ್ರಿಯಾ ಕುರಿತು ಹೇಳುವುದಾದರೆ, ಅವರು 2014ರಲ್ಲಿ ಬಿಡುಗಡೆಯಾದ ಸುದೀಪ್ ನಾಯಕನಾಗಿರುವ ಮಾಣಿಕ್ಯ ಸಿನಿಮಾ ಹಾಗೂ ಜಯರಾಮ್ ಕಾರ್ತಿಕ್ ನಟನೆಯ ಅಶ್ವಿನಿ ನಕ್ಷತ್ರಾ ಧಾರಾವಾಹಿಯನ್ನು ನಿರ್ಮಾಣ ಮಾಡಿದ್ದಾರೆ. ಸುದೀಪ್ ಸಂಬಂಧಿತ ಕಾರ್ಯಕ್ರಮಗಳು, ಕ್ರಿಕೆಟ್ ಮ್ಯಾಚ್ ಸೇರಿ ಅನೇಕ ಕಾರ್ಯಗಳಲ್ಲಿ ಪ್ರಿಯಾ ಅವರ ಹಾಜರಿ ಇದ್ದೇ ಇರುತ್ತದೆ.
66
ಬಹುಮುಖ ಪ್ರತಿಭೆ
ಕ್ಲಾಸಿಕಲ್ ಡ್ಯಾನ್ಸ್, ಸಂಗೀತ ಕಲಿತಿರುವ ಪ್ರಿಯಾ ಅದ್ಭುತವಾಗಿ ಹಾಡುತ್ತಾರೆ. ಕೆಲ ವೇದಿಕೆಗಳಲ್ಲೂ ಅವರು ಹಾಡಿದ್ದಾರೆ. ಬಹಳ ಕಡಿಮೆ ಮಾತನಾಡುವ ಪ್ರಿಯಾ ಸುದೀಪ್, ಪತಿಯ ಪ್ರತಿಯೊಂದು ಕೆಲಸಗಳಿಗೂ ಸಾಥ್ ನೀಡುತ್ತಾರೆ. ಜೊತೆಗೆ 2012ರಲ್ಲಿ ಬೆಂಗಳೂರಿನಲ್ಲಿ 360 ಸ್ಟೇಜ್ ಎಂಬ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿ ಆರಂಭಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.