ಹೀಗೆಲ್ಲಾ ಆಗ್ತಿದ್ರೆ ನೀವು Love Addict ಆಗಿದ್ದೀರಾ ಎಂದರ್ಥ

Suvarna News   | Asianet News
Published : Mar 21, 2022, 03:32 PM ISTUpdated : Mar 21, 2022, 03:34 PM IST

ಯಾವುದೇ ವಿಷಯ ಅತಿಯಾದರೆ ಅದರಿಂದ ಅಡ್ಡಿಕ್ಷನ್ ಆಗುತ್ತದೆ. ಅಡಿಕ್ಷನ್ ಪ್ರೀತಿಯ ವಿಚಾರದಲ್ಲಾದರೂ ಸರಿಯೇ, ಅದು ಕೆಟ್ಟದ್ದೇ. ಅತಿಯಾದ ಪ್ರೀತಿ ತೊಂದರೆಯ ಮೂಲವಾಗುತ್ತದೆ. ಕೆಲವರು ಯಾರ ಮೇಲಾದರೂ ಎಷ್ಟು ಹುಚ್ಚು ಪ್ರೀತಿಯಲ್ಲಿ ಬೀಳುತ್ತಾರೆ ಎಂದರೆ ಅವರು ಉಳಿದ ಎಲ್ಲವನ್ನೂ ಮರೆತುಬಿಡುತ್ತಾರೆ.ಅದಕ್ಕೆ ಹೇಳುವುದು ಪ್ರೀತಿ ಕುರುಡು ಎಂದು.

PREV
18
ಹೀಗೆಲ್ಲಾ ಆಗ್ತಿದ್ರೆ ನೀವು Love Addict ಆಗಿದ್ದೀರಾ ಎಂದರ್ಥ
love addiction

ರಿಲೇಷನ್ಶಿಪ್(Relationship) ನಲ್ಲಿದ್ದಾಗ, ನೀವು ಯಾವಾಗ ಅದಕ್ಕೆ ವ್ಯಸನಿಗಳಾಗುತ್ತೀರಿ ಎಂದು ತಿಳಿದಿದ್ಯಾ? ಹೌದು ನೀವು ಯಾವಾಗ ಪ್ರೀತಿಯಲ್ಲಿ ಅಡಿಕ್ಟ್ ಆಗುತ್ತೀರಿ ಎನ್ನುವುದೇ ತಿಳಿಯಲು ಕಷ್ಟವಾಗುತ್ತದೆ. ಆದರೆ ನೀವು ಅದನ್ನು ಕೆಲವು ಚಿಹ್ನೆಗಳೊಂದಿಗೆ ಗುರುತಿಸಬಹುದು. ಪ್ರೀತಿಯಲ್ಲಿ ಅಡಿಕ್ಟ್ ಆಗುವ ಮುನ್ನ ನಿಮ್ಮನ್ನು ನೀವು ನಿಯಂತ್ರಿಸಿಕೊಳ್ಳುವುದು ಮುಖ್ಯವಾಗಿದೆ. 

28
love addiction

ನೀವು ಲವ್(Love) ಅಡಿಕ್ಟ್ ಆಗಿದ್ದೀರಿ ಎಂದು ತಿಳಿಸುವ ಕೆಲವೊಂದು ಅಂಶಗಳು ಇಲ್ಲಿವೆ. ಇವುಗಳನ್ನು ನೀವು ಅವಾಯ್ಡ್ ಮಾಡೋದು ತುಂಬಾನೇ ಮುಖ್ಯ. ಇಲ್ಲವಾದರೆ ಮುಂದೆ ನೀವೇ ಸಫರ್ ಆಗಬಹುದು. ಆದುದರಿಂದ ಪ್ರೀತಿ ಮಾಡಿ, ಆದರೆ ಅಡಿಕ್ಟ್ ಆಗಬೇಡಿ. ಅದಕ್ಕಾಗಿ ಈ ವಿಷಯಗಳನ್ನು ನೆನಪಿನಲ್ಲಿಡಿ. 

38
love addiction

ಕೇವಲ ಸಂಗಾತಿ(Companion)ಯ ಬಗ್ಗೆ ಯೋಚಿಸುವುದು

ನೀವು ನಿಮ್ಮ ಸಂಗಾತಿಯ ಬಗ್ಗೆ ಇಪ್ಪತ್ತನಾಲ್ಕು ಗಂಟೆಗಳ ಕಾಲ ಯೋಚಿಸಿದರೆ, ನೀವು ಅವರಿಗೆ ವ್ಯಸನಿಗಳಾಗಿದ್ದೀರಿ ಎಂದರ್ಥ. ನಿಮ್ಮ ಪ್ರೀತಿಯ ಬಗ್ಗೆ ಯೋಚಿಸುವುದು ಸರಿ, ಆದರೆ ಯಾವಾಗಲೂ ನಿಮ್ಮ ಸಂಗಾತಿ ಮತ್ತು ಪ್ರೀತಿಯ ಜೀವನದ ಬಗ್ಗೆ ಯೋಚಿಸುವುದು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸುತ್ತದೆ. ಇದರಿಂದ ಜೀವನದಲ್ಲಿ ಇತರ ವಿಷಯಗಳಲ್ಲಿ ನಿಮಗೆ ನಿಷ್ಪ್ರಯೋಜಕ ಭಾವನೆಯುಂಟಾಗುತ್ತದೆ.
 

48
love addiction

ಆತ್ಮವಿಶ್ವಾಸದ(Confidence) ಕೊರತೆ

ಸಂಬಂಧದ ವ್ಯಸನದ ಬಲಿಪಶುಗಳು ತಮ್ಮನ್ನು ತಾವು ನಂಬಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಅವರು ತಮ್ಮನ್ನು ತಾವು ಕೀಳಾಗಿ ನೋಡುತ್ತಾರೆ, ಕೆಲವೊಮ್ಮೆ ನೀವು ನಿಮ್ಮನ್ನು ಎಷ್ಟು ಕಡಿಮೆ ಅಂದಾಜು ಮಾಡಲು ಪ್ರಾರಂಭಿಸುತ್ತೀರಿ ಎಂದರೆ ಸಂಗಾತಿಯ ಬೆಂಬಲವಿಲ್ಲದೆ ನಿಮ್ಮ ಸಾಮರ್ಥ್ಯಗಳಲ್ಲಿ ನಿಮಗೆ ನಂಬಿಕೆಯುಂಟಾಗುವುದಿಲ್ಲ.

58
love addiction

ಬೇರೆ ಯಾವುದೂ ಅಗತ್ಯವಿಲ್ಲ

ಸಂಬಂಧದಲ್ಲಿ ಜಗಳವಾಡುವುದು ಸಾಮಾನ್ಯ, ಆದರೆ ಪ್ರತಿ ಬಾರಿ ಜಗಳ ಸಂಭವಿಸಿದಾಗ, ಜಗತ್ತಿನಲ್ಲಿ ಇನ್ನು ಮುಂದೆ ಏನೂ ಉಳಿದಿಲ್ಲ ಎಂದು ನೀವು ಭಾವಿಸುತ್ತೀರಿ. ಎಲ್ಲ ವಿಷಯದಲ್ಲೂ ಲೋಕವೇ ಮುಳುಗಿದಂತೆ ಫೀಲ್(Feel) ಮಾಡುತ್ತೀರಿ. ಸಂಬಂಧವು ನಿಮ್ಮ ಜೀವನದಲ್ಲಿ ಕೇಂದ್ರ ಬಿಂದುವಾಗಿದೆ ಮತ್ತು ನೀವು ಅದಕ್ಕೆ ಒಗ್ಗಿಕೊಳ್ಳುತ್ತೀರಿ ಎಂದು ಅರ್ಥ mಮಾಡಿಕೊಳ್ಳಿ. 

68
love addiction

ತುಂಬಾ ಸಂತೋಷ(Happiness) ಅಥವಾ ತುಂಬಾ ದುಃಖವನ್ನು ಅನುಭವಿಸುವುದು

ಸಂಬಂಧದಲ್ಲಿ, ನೀವು ಒಂದು ದಿನ ತುಂಬಾ ಉತ್ಸುಕರಾಗುತ್ತೀರಿ, ನಂತರ ಕೆಲವೊಮ್ಮೆ ನೀವು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಖಿನ್ನತೆಗೆ ಒಳಗಾಗುತ್ತೀರಿ, ಪದೇ ಪದೇ ಇದೆ ಸಂಭವಿಸಿದರೆ ಅಡಿಕ್ಟ್ ಆಗಿದ್ದೀರಿ ಎಂದು ಅರ್ಥ. ಇಂತಹ ಪರಿಸ್ಥಿತಿಯಲ್ಲಿ ನೀವು ಹೆಚ್ಚು ಯೋಚಿಸುವುದನ್ನು ಬಿಡಬೇಕು.

78
love addiction

ನಿಮ್ಮ ಸಂಗಾತಿಯಿಲ್ಲದೆ ಸಂತೋಷವಾಗಿರಲು ನಿಮಗೆ ಕಷ್ಟವಾಗುತ್ತದೆ. ಅವರನ್ನು ನೋಡದೆ, ಮಾತನಾಡದೆ ಇರಲು ಸಾಧ್ಯವೇ ಇಲ್ಲ ಎಂದು ನಿಮಗೆ ಅನಿಸಿದರೆ, ನಿಮ್ಮ ಸಂಗಾತಿಯು ನಿಮ್ಮ ಸಂತೋಷದ ಏಕೈಕ ಮೂಲವಾಗಿರುವಾಗ, ನೀವು ವಿಶೇಷವಾಗಿ ವ್ಯಸನಕ್ಕೆ ಒಳಗಾಗುತ್ತೀರಿ ಎಂದು ಅರ್ಥ ಮಾಡಿಕೊಳ್ಳಿ. 

88
love addiction

ನಿಮ್ಮ ಜೀವನದ ಉಳಿದ ಭಾಗವನ್ನು ನಿರ್ಲಕ್ಷಿಸುತ್ತೀರಿ

ಇದರರ್ಥ ನೀವು ಹವ್ಯಾಸಗಳನ್ನು ಮರೆಯುತ್ತೀರಿ, ಸ್ನೇಹಿತರನ್ನು ನೋಡುವುದನ್ನು ಸಹ ನಿಲ್ಲಿಸಿದ್ದೀರಿ, ಮತ್ತು ವ್ಯಾಯಾಮ(Exercise) ಅಥವಾ ನಿಮಗಾಗಿ ಆರೋಗ್ಯಕರ ಊಟವನ್ನು ಮಾಡಲು ಸಮಯ ತೆಗೆದುಕೊಳ್ಳುವಂತಹ ನಿಮ್ಮ ಕೆಲವು ಸ್ವಯಂ ಆರೈಕೆಯ ದಿನಚರಿಯನ್ನು ಕೈಬಿಟ್ಟಿದ್ದೀರಿ. ಇದರಿಂದ ಸಮಸ್ಯೆಗಳೇ ಹೆಚ್ಚುತ್ತದೆ. 

Read more Photos on
click me!

Recommended Stories