ಒಂದು ರೊಮ್ಯಾಂಟಿಕ್ ಹಗ್, ಒಂದು ಸ್ಪರ್ಶ.... ಆರೋಗ್ಯದಲ್ಲಿ ಏನೆಲ್ಲಾ ಬದಲಾಯಿಸುತ್ತೆ ನೋಡಿ

First Published Oct 4, 2021, 8:39 PM IST

ಪ್ರೀತಿಯಲ್ಲಿ ಬಿದ್ದಾಗ (fall in love) ಜಗತ್ತು ಸಂತೋಷದಿಂದಿರುವಂತೆ ಕಾಣುತ್ತದೆ. ಎಲ್ಲವೂ ಚೆನ್ನಾಗಿ ಮತ್ತು ಉತ್ತಮವಾಗಿ ಕಾಣುತ್ತದೆ. ಎಲ್ಲಾ ಸಮಯದಲ್ಲೂ ಉತ್ಸಾಹವಿರುತ್ತದೆ, ಮನಸ್ಸು ಎಂಜಾಯ್ ಮಾಡೋ ಮೂಡಿನಲ್ಲಿ ಇರುತ್ತದೆ. ಹೊಟ್ಟೆಯಲ್ಲಿ ಚಿಟ್ಟೆಗಳು (butterflies in stomach) ಹಾರಾಡುತ್ತಿರುತ್ತವೆ. ಪ್ರೀತಿ ಜೀವನಕ್ಕೆ ಸಂತೋಷವನ್ನು ತರುತ್ತದೆ ಎಂದು ಅನೇಕ ಜನರು ಯಾವಾಗಲೂ ನಂಬಿದ್ದರೂ, ಈಗ ವಿಜ್ಞಾನವು ಯಾರನ್ನಾದರೂ ಪ್ರೀತಿಸುವುದು ದೇಹಕ್ಕೆ ಮಾತ್ರವಲ್ಲದೆ ಹೃದಯಕ್ಕೂ ಪ್ರಯೋಜನಕಾರಿ ಎಂದು ನಂಬುತ್ತದೆ. ಈ ಕಲ್ಪನೆಯನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ತಜ್ಞರ ಪ್ರಕಾರ, ನೀವು ಆರೋಗ್ಯಕರ ಸಂಬಂಧದಲ್ಲಿರುವ ಈ ಸಮಯದಲ್ಲಿ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಅನುಭವಿಸುತ್ತೀರಿ ಎಂದು ಹೇಳುತ್ತಾರೆ. ಈಗ ವಿಜ್ಞಾನವು ಸಹ ಯಾರನ್ನಾದರೂ ಪ್ರೀತಿಸುವುದು ದೇಹಕ್ಕೆ ಪ್ರಯೋಜನಕಾರಿ ಎಂದು ಭಾವಿಸುತ್ತಿದೆ. ಇದು  ಹೃದಯವನ್ನು (Heart) ಆರೋಗ್ಯಕರವಾಗಿರಿಸುತ್ತದೆ ಎಂದು ಹೇಳುತ್ತದೆ. 

ಮೊದ ಮೊದಲ ಆಕರ್ಷಣೆಗಳು 
ಪ್ರೀತಿಯಲ್ಲಿ ಬಿದ್ದಾಗ ಆಕರ್ಷಣೆ ಮೂಡಿದಾಗ ನಮ್ಮ ದೇಹವು ತಕ್ಷಣದ ಪ್ರತಿಕ್ರಿಯೆಯಾಗಿ ನಾರ್ಪೆನೆಫ್ರಿನ್ (norepinephrine) ಮತ್ತು ಅಡ್ರಿನಾಲಿನ್ ನಂತಹ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ನಮ್ಮನ್ನು ಉತ್ತೇಜಿಸುತ್ತದೆ. ರೊಮ್ಯಾಂಟಿಕ್ ಆಗಿ ಆಕರ್ಷಿತರಾದ ವ್ಯಕ್ತಿಯನ್ನು ನೋಡಿದಾಗ, ಹೃದಯ ಬಡಿತ ಹೆಚ್ಚಾಗುತ್ತದೆ, ನಾಡಿ ಬಡಿತ ಹೆಚ್ಚಾಗುತ್ತದೆ. 

ಹಳೆಯ ಮತ್ತು ದೀರ್ಘಕಾಲೀನ ಸಂಬಂಧ
ನೀವು ಆ ವ್ಯಕ್ತಿಯನ್ನು ಚೆನ್ನಾಗಿ ತಿಳಿದಾಗ ಮತ್ತು ಅವನೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಾಗ. ಆದ್ದರಿಂದ ಆ ಸಮಯದಲ್ಲಿ ನಮ್ಮ ಮೆದುಳು ಎಂಡಾರ್ಫಿನ್ ಗಳು (endorphins), ವಾಸೊಪ್ರೆಸಿನ್ (vasopressin) ಮತ್ತು ಆಕ್ಸಿಟೋಸಿನ್ (oxytocin) ಅನ್ನು ಬಿಡುಗಡೆ ಮಾಡುತ್ತದೆ. ಇವು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಹಾರ್ಮೋನುಗಳು.

ಹಳೆಯ ಮತ್ತು ದೀರ್ಘಕಾಲೀನ ಸಂಬಂಧ
ನೀವು ಆ ವ್ಯಕ್ತಿಯನ್ನು ಚೆನ್ನಾಗಿ ತಿಳಿದಾಗ ಮತ್ತು ಅವನೊಂದಿಗೆ ಭಾವನಾತ್ಮಕವಾಗಿ ಅಂಟಿಕೊಂಡಾಗ. ಆದ್ದರಿಂದ ಆ ಸಮಯದಲ್ಲಿ ನಮ್ಮ ಮೆದುಳು ಎಂಡಾರ್ಫಿನ್ ಗಳು (endorphins), ವಾಸೊಪ್ರೆಸಿನ್ (vasopressin) ಮತ್ತು ಆಕ್ಸಿಟೋಸಿನ್ (oxytocin) ಅನ್ನು ಬಿಡುಗಡೆ ಮಾಡುತ್ತದೆ. ಇವು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ ಹಾರ್ಮೋನುಗಳು.

ಬಂಧಕ್ಕೆ ಕಾರಣವಾದ ಹಾರ್ಮೋನುಗಳು
ಎಂಡಾರ್ಫಿನ್ ಗಳು ನಮಗೆ ಸಂತೋಷ (Happy) ಮತ್ತು ತೃಪ್ತಿಯನ್ನು (Satisfaction) ಉಂಟುಮಾಡುತ್ತವೆ ಎಂದು ವೈದ್ಯರು ಹೇಳುತ್ತಾರೆ. ವಿಶೇಷ ವ್ಯಕ್ತಿಯೊಂದಿಗೆ ಸುರಕ್ಷಿತವೆಂದು ಭಾವಿಸಿದಾಗ ಇದು ಸಂಭವಿಸುತ್ತದೆ. ವಾಸ್ತವವಾಗಿ, ಆಕ್ಸಿಟೋಸಿನ್ ಮತ್ತು ವಾಸೊಪ್ರೆಸಿನ್ ಇಬ್ಬರು ವ್ಯಕ್ತಿಗಳ ನಡುವೆ ಸಂಬಂಧವನ್ನು ಬೆಳೆಸಲು ಸಹಾಯ ಮಾಡುತ್ತದೆ. ಈ ರಾಸಾಯನಿಕಗಳು ಪೋಷಕರು ಮತ್ತು ಮಕ್ಕಳ ನಡುವಿನ ಬಂಧಕ್ಕೆ ಕಾರಣವಾಗಿವೆ.

ಪ್ರೀತಿಯಿಂದ ಬಿಪಿ ಮತ್ತು ಹಾರ್ಟ್ ರೇಟ್ ಕಡಿಮೆಯಾಗುತ್ತೆ
ಈ ಹಾರ್ಮೋನುಗಳು ಒಬ್ಬರ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹ ಕಾರಣವಾಗಿವೆ. ಜನರು ತಮ್ಮ ಸಂಗಾತಿಯೊಂದಿಗೆ ಸಮಯ ಕಳೆದಾಗ, ಅವರ ರಕ್ತದೊತ್ತಡ ಮತ್ತು ಹೃದಯ ಬಡಿತವು (heart beat)  ಕಡಿಮೆಯಾಗುತ್ತದೆ ಎಂದು ವಿಜ್ಞಾನವು ದೃಢಪಡಿಸುತ್ತದೆ.

ಸ್ಪರ್ಶವು ಬಿಪಿಯನ್ನು ಕಡಿಮೆ ಮಾಡುತ್ತದೆ
"ದೈಹಿಕ ಸ್ಪರ್ಶದಿಂದ ಸಾಕಷ್ಟು ಪ್ರಯೋಜನಗಳಿವೆ" ಎಂದು ವೈದ್ಯರು ಹೇಳುತ್ತಾರೆ. ಜನರು ಒಬ್ಬರನ್ನೊಬ್ಬರು ತಬ್ಬಿಕೊಂಡಾಗ, ಆಕ್ಸಿಟೋಸಿನ್,  ಹಾರ್ಮೋನ್ ಬಿಡುಗಡೆಮಾಡುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಸ್ಥಿರವಾದ ದೀರ್ಘಕಾಲೀನ ಸಂಬಂಧವು ಒಬ್ಬ ವ್ಯಕ್ತಿಗೆ ಸುರಕ್ಷಿತ ನೆಲೆಯನ್ನು ಸೃಷ್ಟಿಸುತ್ತದೆ, ಇದು ಅವರಿಗೆ ನಂಬಿಕೆ ಮತ್ತು ಸಹಾನುಭೂತಿಯಿಂದ ಇರಲು ಸಹಾಯ ಮಾಡುತ್ತದೆ. 

ಆದರೆ ಸಂಬಂಧಗಳ ಮತ್ತೊಂದು ಅಂಶವೂ ಇದೆ, ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ತಜ್ಞರ ಪ್ರಕಾರ, ಯಾರಾದರೂ ಮೋಸಹೋದಾಗ, ಯಾರಾದರೂ ತನ್ನನ್ನು ಕಳೆದುಕೊಂಡಾಗ,  ಪ್ರೀತಿಯಿಂದ ದೂರವಾದಾಗ, ಅದು  ತುಂಬಾ ಒತ್ತಡದ ಸಮಯವಾಗಿದೆ. ಆ ಸಮಯದಲ್ಲಿ, ವ್ಯಕ್ತಿಯ ಮೇಲಿನ ಒತ್ತಡವು ಎಷ್ಟು ಹೆಚ್ಚಾಗಿರುತ್ತದೆ ಎಂದರೆ ಚೇತರಿಸಿಕೊಳ್ಳಲು ಕೆಲವೊಮ್ಮೆ ತಿಂಗಳುಗಳು ಅಥವಾ ವರ್ಷಗಳು ತೆಗೆದುಕೊಳ್ಳುತ್ತದೆ.

click me!