ಪೋಷಕರು ಈ ಕೆಲಸಗಳನ್ನು ಮಾತ್ರ ಮಕ್ಕಳ ಮುಂದೆ ಮಾಡಬಾರದು!

First Published | Oct 2, 2021, 4:28 PM IST

ಮಕ್ಕಳು ತಮ್ಮ ಹೆತ್ತವರೊಂದಿಗೆ ಮನೆಯಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಮತ್ತು ಅವರಿಂದ ಹೆಚ್ಚಿನ ವಿಷಯಗಳನ್ನು ಕಲಿಯುತ್ತಾರೆ. ಒಳ್ಳೆಯ ಅಥವಾ ಕೆಟ್ಟ ಪೋಷಕರು ಅವರಿಗೆ ಎಲ್ಲದಕ್ಕೂ ಉದಾಹರಣೆಗಳಾಗುತ್ತಾರೆ. ಪೋಷಕರು ಮಕ್ಕಳಿಗೆ ಸರಿಯಾದ ವಿಷಯಗಳನ್ನು ಕಲಿಸಲು ದೀರ್ಘ ಸಮಯ ತೆಗೆದುಕೊಳ್ಳುತ್ತಾರೆ, ಆದರೆ ತಿಳಿಯದೆ ಮಕ್ಕಳ ಮೇಲೆ ತುಂಬಾ ನಕಾರಾತ್ಮಕ ಪರಿಣಾಮ ಬೀರುವ ಕೆಲವು ಕೆಟ್ಟ ವಿಷಯಗಳನ್ನು ಸಹ ಕಲಿಸುತ್ತಾರೆ. 
 

ತಂದೆ ತಾಯಿ ಹೇಳಕೋಡದೆ ಮಕ್ಕಳ ಮೇಲೆ ಮಾನಸಿಕ ಪರಿಣಾಮ (Psychological Effect) ಬೀರುವ ವಿಷಯಗಳು ಯಾವುವು? ಅದರಿಂದ ಮಕ್ಕಳಿಗೆ ಏನಾಗುತ್ತವೆ? ಮಕ್ಕಳೊಂದಿಗೆ ಹೇಗೆ ವ್ಯವಹರಿಸಬೇಕು? ಎಂಬ ಪ್ರಮುಖ ಮಾಹಿತಿಗಳು ಇಲ್ಲಿವೆ. ಅವುಗಳನ್ನು ತಿಳಿದುಕೊಂಡು ಮಕ್ಕಳೊಂದಿಗೆ ಮಕ್ಕಳಾಗಿ ಇರಿ. ಯಾವ ತಪ್ಪುಗಳನ್ನು ಮಕ್ಕಳ ಮುಂದೆ ಮಾಡಬಾರದು ನೋಡೋಣ. 

ವಾದಿಸುವುದು (Arguments) :
ನೀವು ಪ್ರತಿದಿನ ವಾದಿಸುತ್ತಿರುವುದನ್ನು ಅಥವಾ ಆಗಾಗ್ಗೆ ಮನೆಯಲ್ಲಿ ಜಗಳವಾಡುವುದನ್ನು ಮಗು (Child) ನೋಡಿದರೆ, ಅವನ ನಡವಳಿಕೆ ಸ್ವಯಂಚಾಲಿತವಾಗಿ ಹಿಂಸಾತ್ಮಕವಾಗುತ್ತದೆ. ಮನೆಯಲ್ಲಿನ ಜಗಳವಾಗುವುದನ್ನು ನೋಡಿದಾಗ ಮಕ್ಕಳು ಎಲ್ಲೋ ತಮ್ಮನ್ನು ದೂಷಿಸಲು (Blaming) ಪ್ರಾರಂಭಿಸುತ್ತಾರೆ. 

Tap to resize

ಪೋಷಕರು ಏನನ್ನಾದರೂ ವಿವಾದ ಮಾಡಿದರೂ, ಮಗುವಿನ ಮುಂದೆ ಅದನ್ನು ಚೆನ್ನಾಗಿ ಪರಿಹರಿಸಲು ಪ್ರಯತ್ನಿಸಿ. ಜಗಳವಿಲ್ಲದೆ ಏನನ್ನಾದರೂ ಶಾಂತಿಯುತವಾಗಿ ಪರಿಹರಿಸಬಹುದು ಎಂದು ಇದು ಮಗುವಿಗೆ ಕಲಿಸುತ್ತದೆ. ಜೊತೆಗೆ ಮಗುವಿಗೆ ಪೋಷಕರ ಮೇಲೆ ಗೌರವ ಹೆಚ್ಚುತ್ತದೆ. 

ಹೊಡೆಯುವುದು :
ಮನೆಯಲ್ಲಿ ಯಾವುದೇ ಹಿಂಸೆಯು (Violence) ಮಗುವಿನ ಜೀವನವನ್ನು ಶಾಶ್ವತವಾಗಿ ಹಾಳುಮಾಡುತ್ತದೆ. ನಿಂದನಾತ್ಮಕವಾಗಿರಲಿ ಅಥವಾ ದೈಹಿಕವಾಗಿರಲಿ, ಯಾವುದೇ ರೀತಿಯ ಹಿಂಸೆಯು ಮಾನಸಿಕವಾಗಿ ಬೆಳೆಯುತ್ತಿರುವ ಮಕ್ಕಳ ಮೇಲೆ ಆಳವಾದ ಪರಿಣಾಮ ಬೀರುತ್ತದೆ. 

ಬೆಳೆಯುತ್ತಿರುವ ಮಕ್ಕಳು ಪೋಷಕರನ್ನು ನೋಡಿ ಒಂದೊಂದೇ ಕಲಿಯುತ್ತಾರೆ. ಮಕ್ಕಳು ಮೊದಲು ತಮ್ಮ ಹೆತ್ತವರಿಂದ ನಿಂದನೆ ಮಾಡಲು ಕಲಿಯುತ್ತವೆ. ಅಂತಹ ಮಕ್ಕಳು ದೊಡ್ಡವರಾದಾಗ ಮಾದಕ ದ್ರವ್ಯ ಅಥವಾ ಆಲ್ಕೋಹಾಲ್ ಗೆ ವ್ಯಸನಿಗಳಾಗುವ (Addicts) ಸಾಧ್ಯತೆ ಹೆಚ್ಚು. ಆದುದರಿಂದ ಮಕ್ಕಳ ಜೊತೆ ಅಥವ ಮಕ್ಕಳ ಮುಂದೆ ಪ್ರೀತಿಯಿಂದಲೇ ವರ್ತಿಸಿ. 


ಕಟ್ಟುನಿಟ್ಟಾದ ಶಿಸ್ತು (Hard Disciplining) : 
ಪೋಷಕರು ತಮ್ಮ ಮಕ್ಕಳಿಗೆ ಶಿಸ್ತನ್ನು ಹೇಗೆ ಕಲಿಸುತ್ತಾರೆ ಎಂಬುದು ಮಗುವಿನ ನಡವಳಿಕೆಯ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ. ಪೋಷಕರು ಮಗುವನ್ನು ಯಾವುದಾದರೂ ವಿಷಯದ ಮೇಲೆ ಒತ್ತಡಕ್ಕೆ ತಳ್ಳಿದಾಗ, ಮಗುವಿನ ನಡವಳಿಕೆ ಬದಲಾಗಲು ಪ್ರಾರಂಭಿಸುತ್ತದೆ. 

ಮಕ್ಕಳಿಗೆ ಶಿಸ್ತು ಕಲಿಸುವುದು ತುಂಬಾನೆ ಮುಖ್ಯ. ಆದರೆ ಕಠಿಣ ಶಿಸ್ತು ಮಗುವಿಗೆ ಮುಳುವಾಗಬಹುದು ಮತ್ತು ಅವನು ಕ್ರಮೇಣ ತನ್ನ ಹೆತ್ತವರಿಂದ ದೂರ ಸರಿಯಲು ಪ್ರಾರಂಭಿಸುತ್ತಾನೆ. ಕಟ್ಟುನಿಟ್ಟಾದ ಶಿಸ್ತಿನಲ್ಲಿ, ಮಕ್ಕಳು ಹೆಚ್ಚಾಗಿ ಆಕ್ರಮಣಕಾರಿಯಾಗುತ್ತಾರೆ ಮತ್ತು ಅವರ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ (Negative Effect) ಬೀರುತ್ತಾರೆ. 

ಸಮಾಜ ಘಾತುಕ (Being Anti-Social) : 
ನೀವು ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವ ಸಮಾಜ ವಿರೋಧಿ ಪೋಷಕರಾಗಿದ್ದರೆ, ನಿಮ್ಮ ಮಕ್ಕಳು ನಿಮ್ಮಿಂದ ಈ ಕೆಟ್ಟ ಅಭ್ಯಾಸವನ್ನು ಕಲಿಯುವ ಮತ್ತು  ಉಳಿದ ಜೀವನವನ್ನು ಈ ರೀತಿ ಕಳೆಯುವ ಸಾಧ್ಯತೆ ಹೆಚ್ಚು. ಯಾಕೆಂದರೆ ಮಕ್ಕಳು ಮೊದಲಿನಿಂದಲೂ ಪೋಷಕರಲ್ಲಿ ಅದೇ ಗುಣವನ್ನು ನೋಡಿ ಬೆಳೆದಿರುತ್ತಾರೆ. 

ಮಕ್ಕಳು ಪೋಷಕರಂತೆಯೇ ಅಭ್ಯಾಸಗಳನ್ನು ಅನುಸರಿಸುತ್ತಾರೆ, ಮತ್ತು ಅವರ ಸಮಾಜವಿರೋಧಿತ್ವವು ಮಕ್ಕಳ ಮೇಲೆ ಅದೇ ರೀತಿಯಲ್ಲಿ ಪರಿಣಾಮ ಬೀರುತ್ತದೆ. ಇದು ಮಕ್ಕಳ ಸಾಮಾಜಿಕ ಕೌಶಲ್ಯಗಳನ್ನು ಹಾಳುಮಾಡುತ್ತದೆ ಮತ್ತು ಅವರು ಯಾರನ್ನೂ ಭೇಟಿಯಾಗದಂತೆ ತಡೆಯುತ್ತದೆ. 

ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದಿರುವುದು (Not Handling Stress Well)
ಪೋಷಕರು ಯಾವುದೇ ಒತ್ತಡ ಅಥವಾ ಮಾನಸಿಕ ಒತ್ತಡವನ್ನು ಹೇಗೆ ತೆಗೆದುಕೊಳ್ಳುತ್ತಾರೆ ಎಂಬುದರ ಬಗ್ಗೆ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ. ನೀವು ಬೇಗ ಅಸಮಾಧಾನಗೊಂಡರೆ ಮತ್ತು ಆಗಾಗ್ಗೆ ಒತ್ತಡಕ್ಕೆ ಒಳಗಾದರೆ,  ಮಗು ಸಹ ಯಾವುದೇ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಅವರು ನಿಮ್ಮಂತೆ ವರ್ತಿಸುತ್ತಾರೆ. ಕೋಪದಲ್ಲಿ ಕೂಗುವುದು, ಬೈಗುಳ ಇದನ್ನೆಲ್ಲಾ ಮಕ್ಕಳ ಮುಂದೆ ಮಾಡಬೇಡಿ.  

Parenting

ಮಕ್ಕಳು ಬೆಳೆಯಬಹುದು ಆದರೆ ಪೋಷಕರು ಯಾವಾಗಲೂ ಅವರಿಗೆ ಪರಿಪೂರ್ಣ ರೋಲ್ ಮಾಡೆಲ್. ಪೋಷಕರು ಯಾವಾಗಲೂ ಮಕ್ಕಳಿಗೆ ಉತ್ತಮ ಮಾದರಿಯನ್ನು ರೂಪಿಸಬೇಕಾಗಿದೆ. ನಿಮ್ಮ ಕೆಲವು ತಪ್ಪು ಅಭ್ಯಾಸಗಳು ಮಗುವಿನ ಜೀವನವನ್ನು ಶಾಶ್ವತವಾಗಿ ಹಾಳುಮಾಡಬಹುದು.  ಮಕ್ಕಳಲ್ಲಿ ಉತ್ತಮ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಿ ಮತ್ತು ಉತ್ತಮ ಪೋಷಕರಾಗಲು ಪ್ರಯತ್ನಿಸಿ.  

Latest Videos

click me!