ಕುಕ್ಕರ್ ಮದುವೆಯಾದ ಪುಣ್ಯಾತ್ಮ ನಾಲ್ಕೇ ದಿನಕ್ಕೆ  ಡಿವೋರ್ಸ್ ಕೊಟ್ಟ!

First Published Oct 1, 2021, 6:12 PM IST

ಇಂಡೋನೆಷಿಯಾ(ಅ. 01)  ಕಾಲ ಬದಲಾದಂತೆ ಮದುವೆಯ ವ್ಯಾಖ್ಯಾನ ಬದಲಾಗಿದೆ. ಗಂಡು-ಹೆಣ್ಣು ಮದುವೆಯಾಗುವುದು ವಾಡಿಕೆ. ಅದನ್ನು ಮೀರಿ ಈಗ ಸಲಿಂಗಿಗಳು ಸತಿ-ಪತಿಗಳಾಗುತ್ತಿದ್ದಾರೆ. ಕಾನೂನು ಮಾನ್ಯತೆಯೂ ಸಿಕ್ಕಿದೆ. ಅದೆಲ್ಲ ಒತ್ತಟ್ಟಿಗೆ ಇರಲಿ ಇಲ್ಲೊಂದು ಕುಕ್ಕರ್ ಮದುವೆ ಕತೆ ಹೇಳ್ತೇವೆ ಕೇಳಿ. ತಾನು ಆಹಾರ ಬೇಯಿಸಲು ಬಳಸುತ್ತಿದ್ದ ಕುಕ್ಕರ್ ಮೇಲೆ ಈತನಿಗೆ ಪ್ರೀತಿ ಹುಟ್ಟಿದೆ. ಸರಿ ಎಂದು ಮದುವೆಯೇ ಆಗಿಬಿಟ್ಟಿದ್ದಾನೆ.

ಕುಕ್ಕರ್ ನೊಂದಿಗೆ ಮದುವೆಯಾದ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಹವಾ  ಸೃಷ್ಟಿ ಮಾಡಿದ್ದಾನೆ. ಆದರೆ ನಾಲ್ಕೇ ದಿನದಲ್ಲಿ ಕುಕ್ಕರ್ ಗೆ ಡೀವೋರ್ಸ್ ಸಹ ನೀಡಿದ್ದಾನೆ. ಇಂಡೋನೇಷಿಯಾಆದ ಉದ್ಯಮಿ ರೈಸ್ ಕುಕ್ಕರ್ ಮದುವೆಯಾದ ಪುಣ್ಯಾತ್ಮ.  ಖೋಯ್ ರುಲ್ ಅನಮ್ ಎಂಬಾತ ಈ ಮದುಮಗ.

ಕುಕ್ಕರ್ ನ್ನು ನವವಧುವಿನಂತೆ ಅಲಂಕಾರ ಮಾಡಿಸಿ ಮದುವೆಯಾಗಿದ್ದ. ಮದುವೆಯಾದ ಸಂಭ್ರಮದಲ್ಲಿ ಕುಕ್ಕರ್ ಗೆ ಮುತ್ತಿಟ್ಟಿದ್ದ. ಬೆಳ್ಳಗಿದೆ, ಹೇಳಿದ ಮಾತು ಕೇಳುತ್ತದೆ, ಗುಡ್ ಲುಕಿಂಗ್ ಆಗಿದೆ ಈ ಕಾರಣದಿಂದ ಮದುವೆಯಾಗುತ್ತಿದ್ದೇನೆ ಎಂದು ಹೇಳಿದ್ದಾನೆ. 

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಹತ್ತು ಸಾವಿರ ಲೈಕ್ ಜತೆ ಕಮೆಂಟ್‌ಸ್ ಗಳನ್ನು ಈ ಪೋಟೋಗಳು ಪಡೆದುಕೊಂಡಿವೆ. ಕುಕ್ಕರ್ ಕೇವಲ ಅಡುಗೆ ಕೆಲಸ ಬಿಟ್ಟರೆ ಬೇರೆ ಏನೂ ಮಾಡುವುದಿಲ್ಲ ಎಂದು 'ಪತ್ನಿ;ಗೆ ನಾಲ್ಕೇ ದಿನದಲ್ಲಿ ಡಿವೋರ್ಸ್ ನೀಡಿದ್ದಾನೆ.

ಸೋಶಿಯಲ್  ಮೀಡಿಯಾದಲ್ಲಿ ಜನರ ಅಟೆಂಶನ್ ಪಡೆದುಕೊಳ್ಳಲು ಇಂಥ ಕೆಲಸ ಮಾಡಿದ್ದ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಪರ ಮತ್ತು ವಿರೋಧ ಏನೇ ಇದ್ದರೂ ಕುಕ್ಕರ್ ಮದುವೆ ನೋಡುವ ಭಾಗ್ಯ ಎಲ್ಲರಿಗೂ ಸಿಕ್ಕಿದೆ. 

click me!