ನಟಿ ರಶ್ಮಿಕಾ ಮಂದಣ್ಣ ತಮ್ಮ ಪತಿ ವಿಜಯ್ ದೇವರಕೊಂಡ ಅವರ ಬೆವರನ್ನು ಒರೆಸುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ಪ್ರೀತಿಯ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ಪುರುಷರ ಅಸಮಾಧಾನ ಮತ್ತು ಹೊಟ್ಟೆಕಿಚ್ಚಿಗೆ ಕಾರಣವಾಗಿದ್ದು, ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.
ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ಪ್ರೀತಿಯ ಪ್ರಿಯತಮ ವಿಜಯ್ ದೇವರಕೊಂಡ ಅವರನ್ನು ಮದುವೆಯಾಗಿ ತಿಂಗಳುಗಳೇ ಕಳೆದಿವೆ. ಆದರೆ ಈಗಲೂ ಇವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ.
26
ಪುರುಷರ ಅಸಮಾಧಾನ
ಇದೀಗ ರಶ್ಮಿಕಾ ಮಂದಣ್ಣ ಮತ್ತು ವಿಜಯ ದೇವರಕೊಂಡ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದ್ದು, ಇದು ಪುರುಷ ವರ್ಗದ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
36
ನಮ್ಮದೂ ಒಂದು ಜನ್ಮನಾ?
ಅಷ್ಟಕ್ಕೂ ವೇದಿಕೆ ಮೇಲೆ ರಶ್ಮಿಕಾ ಮಂದಣ್ಣ ಹೀಗೆ ಮಾಡಿರುವ ಪರಿಯಿಂದಾಗಿ ಪುರುಷರು ನೊಂದುಕೊಳ್ಳುತ್ತಿದ್ದಾರೆ, ಹೊಟ್ಟೆ ಉರಿದುಕೊಳ್ಳುತ್ತಿದ್ದಾರೆ. ನಮ್ಮದೂ ಒಂದು ಜನ್ಮನಾ ಎಂದು ಹಳಹಳಿಸುತ್ತಿದ್ದಾರೆ.
ಅಷ್ಟಕ್ಕೂ ಆಗಿರೋದು ಏನೆಂದ್ರೆ, ರಶ್ಮಿಕಾ ಮಂದಣ್ಣ, ಬೆವರುತ್ತಿದ್ದ ತಮ್ಮ ಪತಿ ವಿಜಯ ದೇವರಕೊಂಡ ಅವರ ಹಣೆಯ ಮೇಲಿದ್ದ ಬೆವರನ್ನು ಪ್ರೀತಿಯಿಂದ ಒರೆಸಿದ್ದಾರೆ.ಬಳಿಕ ಅವರ ಮೀಸೆಯನ್ನು ಸರಿ ಮಾಡಿದ್ದಾರೆ.
56
ಪ್ರೀತಿಯ ಧಾರೆ
ಹೇಳಿಕೇಳಿ ಸೆಲೆಬ್ರಿಟಿಗಳ ಮೇಲೆ ಕ್ಯಾಮೆರಾ ಕಣ್ಣು ನೆಟ್ಟಿಯೇ ಇರುತ್ತದೆ. ರಶ್ಮಿಕಾ ಮಂದಣ್ಣ ಹೀಗೆ ಪತಿಯ ಮೇಲೆ ಪ್ರೀತಿಯ ಧಾರೆಯನ್ನೇ ಹರಿಸುತ್ತಿರುವುದು ಕೂಡ ವೈರಲ್ ಆಗುತ್ತಿದೆ. ಇಷ್ಟು ಸುಂದರ ಹೆಂಡ್ತಿಯ ಜೊತೆ ಇಷ್ಟು ಸೇವೆ ಮಾಡುವ ಪತ್ನಿ ಸಿಕ್ಕಿರೋ ವಿಜಯ ದೇವರಕೊಂಡನ ಕಂಡ್ರೆ ಹೊಟ್ಟೆ ಉರಿ ಆಗುತ್ತಿದೆ ಎನ್ನುತ್ತಿದ್ದಾರೆ ಪುರುಷ ನೆಟ್ಟಿಗರು.
66
ಪುರುಷರ ಹೊಟ್ಟೆ ಉರಿ
ಇವನು ಅದ್ಯಾವ ಜನ್ಮದಲ್ಲಿ ಅದೇನು ಪುಣ್ಯ ಮಾಡಿದ್ನೋ ಎಂದು ಕೆಲವರು ಹೇಳುತ್ತಿದ್ದರೆ, ಕ್ಯಾಮೆರಾ ತಮ್ಮ ಮೇಲೆ ನೆಟ್ಟಿರೋದು ತಿಳಿದು ರಶ್ಮಿಕಾ ನಾಟಕವಾಡುತ್ತಿದ್ದಾಳೆ ಅಷ್ಟೇ ಎಂದು ಕೆಲವರು ಟೀಕಿಸುತ್ತಿದ್ದಾರೆ. ಮತ್ತೆ ಕೆಲವರು ಟಿಶ್ಯೂ ಕೊಟ್ಟರೆ, ಅವನೇ ಒರೆಸಿಕೊಳ್ತಿರಲಿಲ್ವಾ, ಇವೆಲ್ಲಾ ನಾಟಕ ಬೇಕಿತ್ತಾ ಎಂದು ಪ್ರಶ್ನಿಸುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.