58 ವರ್ಷ ಸಂಸಾರ: ವೃದ್ಧಾಪ್ಯದಲ್ಲಿ ಡಿವೋರ್ಸ್‌ಗೆ ಅರ್ಜಿ: ದಂಪತಿಗೆ ವಿಚ್ಛೇದನ ನೀಡಲು ಕೋರ್ಟ್ ನಿರಾಕರಿಸಿದ್ದೇಕೆ?

Published : Feb 15, 2026, 01:12 PM IST

elderly couple divorce case: 58 ವರ್ಷಗಳ ಕಾಲ ಸುಖವಾಗಿ ದಾಂಪತ್ಯ ನಡೆಸಿದ್ದ ವೃದ್ಧ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ದಂಪತಿಗೆ ವಿಚ್ಚೇದನ ನೀಡಲು ರಾಜಸ್ಥಾನ ಹೈಕೋರ್ಟ್‌ ನಿರಾಕರಿಸಿದ್ದೇಕೆ?

PREV
16
58 ವರ್ಷಗಳ ಸುಖ ದಾಂಪತ್ಯದ ಬಳಿಕ ವಿಚ್ಛೇದನಕ್ಕೆ ಅರ್ಜಿ

58 ವರ್ಷಗಳ ಕಾಲ ಸುಖವಾಗಿ ದಾಂಪತ್ಯ ಜೀವನ ನಡೆಸಿ ವೃದ್ದಾಪ್ಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿಗೆ ಡಿವೋರ್ಸ್ ನೀಡುವುದಕ್ಕೆ ನಿರಾಕರಿಸಿದ್ದ ರಾಜಸ್ಥಾನ ಹೈಕೋರ್ಟ್‌, ಸಣ್ಣಪುಟ್ಟ ಜಗಳಗಳು ಹಾಗೂ ಭಿನ್ನಾಭಿಪ್ರಾಯಗಳು ಕ್ರೌರ್ಯಗಳಾಗುವುದಿಲ್ಲ ಎಂದು ಮಹತ್ವದ ತೀರ್ಪು ನೀಡಿದೆ. ಭರತ್‌ಪುರ ಕೌಟುಂಬಿಕ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತ್ತು. ಈ ಆದೇಶದ ವಿರುದ್ಧ ಪತಿ ಸಲ್ಲಿಸಿದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸುದೇಶ್ ಬನ್ಸಾಲ್ ಮತ್ತು ನ್ಯಾಯಮೂರ್ತಿ ಅನಿಲ್ ಕುಮಾರ್ ಉಪ್ಮನ್ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.

26
1967ರಲ್ಲಿ ಮದುವೆಯಾಗಿದ್ದ ದಂಪತಿ

ವೈವಾಹಿಕ ಜೀವನದಲ್ಲಿ ಸಣ್ಣಪುಟ್ಟ ಏರಿಳಿತಗಳು ಅನಿವಾರ್ಯ ಹಾಗೂ ಸಾಮಾನ್ಯ. ವಿಚ್ಛೇದನ ನೀಡುವುದರಿಂದ ಪತ್ನಿಗೆ ಮಾತ್ರವಲ್ಲದೆ ಇಡೀ ಕುಟುಂಬಕ್ಕೆ ಹಾನಿಯಾಗುತ್ತದೆ ಮತ್ತು ಅವರ ಖ್ಯಾತಿಗೆ ಧಕ್ಕೆ ಉಂಟಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಹೀಗೆ ಇಳಿಗಾಲದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಂಪತಿ 1967ರ ಜೂನ್‌ನಲ್ಲಿ ಮದುವೆಯಾಗಿದ್ದರು.

36
46 ವರ್ಷಗಳ ಕಾಲ ಚೆನ್ನಾಗೇ ಇದ್ದ ಜೋಡಿ

2013 ರವರೆಗೂ ಅಂದರೆ ಸುಮಾರು 46 ವರ್ಷಗಳವರೆಗೆ ಅವರು ಯಾವುದೇ ದೂರುಗಳಿಲ್ಲದೆ ಒಟ್ಟಿಗೆ ವಾಸಿಸುತ್ತಿದ್ದರು. ಆದರೆ 2014ರ ಮೇ 26ರಂದು ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯಲ್ಲಿ ಉಲ್ಲೇಖಿಸಿದಂತೆ 2014 ರಲ್ಲಿ ಅವರ ಪತ್ನಿ ವರದಕ್ಷಿಣೆ ಕಿರುಕುಳದ ದೂರು ದಾಖಲಿಸಿದ್ದಾರೆ ಎಂದು ಪತಿ ಹೇಳಿಕೊಂಡಿದ್ದಾರೆ. ಪೊಲೀಸರು ಇದನ್ನು ಕಟ್ಟುಕಥೆ ಎಂದು ಪರಿಗಣಿಸಿ ತನಗೆ ಅವಮಾನ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

46
ಆಸ್ತಿಗೆ ಸಂಬಂಧಿಸಿದಂತೆ ಗಲಾಟೆ

ತನ್ನ ಪತ್ನಿ ಸ್ಥಿರ ಆಸ್ತಿಯನ್ನು ತಮ್ಮ ಹಿರಿಯ ಮಗನ ಹೆಸರಿಗೆ ವರ್ಗಾಯಿಸಲು ಬಯಸುತ್ತಿದ್ದಾರೆ ಆದರೆ ತಾನು ಅದನ್ನು ತಮ್ಮ ಇಬ್ಬರು ಗಂಡು ಮಕ್ಕಳಿಗೆ ಸಮಾನವಾಗಿ ಹಂಚಲು ಬಯಸುತ್ತಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ ಆಕೆ ತನ್ನನ್ನು ನಿರ್ಲಕ್ಷಿಸಿದ್ದಾಳೆ ಹಾಗೂ ತನ್ನ ವಿರುದ್ಧ ಅಕ್ರಮ ಸಂಬಂಧಗಳ ಆರೋಪಗಳನ್ನು ಮಾಡಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.

56
ಪತಿಯ ಕಿರಿಯ ಸೋದರನ ಕುಮ್ಮಕ್ಕು ಆರೋಪ

ಇತ್ತ ಪತ್ನಿಯ ದೂರಿನ ಪ್ರಕಾರ, ಅವರ ಪತಿ ಕುಟುಂಬದ ಆಸ್ತಿಯನ್ನು ವ್ಯರ್ಥ ಮಾಡುತ್ತಿದ್ದಾರೆ. ಹಾಗೂ ಭಾಗ ಮಾಡಲು ಮುಂದಾಗಿದ್ದಾರೆ. ಪತಿ ಅವರ ಕಿರಿಯ ಸಹೋದರನ ಪ್ರಭಾವದಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತನ್ನ ಪತಿಗೆ ಅಕ್ರಮ ಸಂಬಂಧವಿದೆ ಮತ್ತು ಇನ್ನೊಬ್ಬ ಮಹಿಳೆಯನ್ನು ಅವರು ಅವರ ಕೋಣೆಗೆ ಆಹ್ವಾನಿಸಿದ್ದಾರೆ ಎಂದು ಪತ್ನಿ ಆರೋಪಿಸಿದ್ದಾರೆ. ಇದು ಘರ್ಷಣೆಗೆ ಕಾರಣವಾಯಿತು ಮತ್ತು ಹೀಗಾಗಿ ತಾನು ಎಫ್‌ಐಆರ್ ದಾಖಲಿಸಿದೆ. ಹಾಗೂ ಈಗ ಚರ್ಚೆಯಲ್ಲಿರುವ ಆಸ್ತಿಯೂ ತಾನು ವೈಯಕ್ತಿಕವಾಗಿ ಖರೀದಿಸಿದ್ದಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ನೂತನ ಸರ್ಕಾರದ ಪ್ರಮಾಣವಚನ ಸಮಾರಂಭ : 13 ರಾಷ್ಟ್ರಗಳಿಗೆ ಆಮಂತ್ರಣ ಭಾರತಕ್ಕಿದೆಯಾ ಆಹ್ವಾನ

66
ಡಿವೋರ್ಸ್ ನೀಡಲು ನಿರಾಕರಿಸಿದ ರಾಜಸ್ಥಾನ ಕೋರ್ಟ್

ಈ ದಂಪತಿಗಳು ಹಲವು ದಶಕಗಳ ಕಾಲ ಒಟ್ಟಿಗೆ ಜೀವನ ಮಾಡಿರುವುದರಿಂದ ಇಬ್ಬರ ಮಾನಸಿಕ ಸಹನೆ ಹಾಗೂ ತಿಳುವಳಿಕೆ ಹೆಚ್ಚಿರಬೇಕು ಎಂದು ಹೇಳಿದ ನ್ಯಾಯಾಲಯ ಆಸ್ತಿ ವಿವಾದಗಳು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗಬಹುದು, ಆದರೆ ಅವು ವಿಚ್ಛೇದನ ನೀಡುಷ್ಟು ಕೆಟ್ಟದಾಗಿಲ್ಲ ಎಂದು ಹೇಳಿ ದಂಪತಿಗಳಿಗೆ ಡಿವೋರ್ಸ್ ನೀಡುವುದಕ್ಕೆ ರಾಜಸ್ಥಾನ ಹೈಕೋರ್ಟ್ ನಿರಾಕರಿಸಿದೆ.

ಇದನ್ನೂ ಓದಿ:  ಅಮೆರಿಕಾದಲ್ಲಿ ಬೆಂಗಳೂರಿನ ವಿದ್ಯಾರ್ಥಿ ಸಾವು: ಮಗನ ಸಾವು ಒಪ್ಪಿಕೊಳ್ಳಲಾಗದೇ ಪೋಷಕರ ಗೋಳು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories