Chanakya life lessons: ಆಚಾರ್ಯ ಚಾಣಕ್ಯರು ತಮ್ಮ 'ನೀತಿ ಶಾಸ್ತ್ರ' ಪುಸ್ತಕದಲ್ಲಿ ಮಾನವ ನಡವಳಿಕೆಗೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಹೇಗೆ ವರ್ತಿಸಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತೀಯ ಅರ್ಥಶಾಸ್ತ್ರ ಮತ್ತು ನೀತಿಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಆಚಾರ್ಯ ಚಾಣಕ್ಯರ ಬಗ್ಗೆ ತಿಳಿದಿಲ್ಲದವರು ಯಾರೂ ಇಲ್ಲ. ಅವರನ್ನು ಇಪ್ಪತ್ತನೇ ಶತಮಾನದ ಅತ್ಯಂತ ಬುದ್ಧಿವಂತ ವಿದ್ವಾಂಸರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರ ಜೀವಿತಾವಧಿಯಲ್ಲಿ ಚಾಣಕ್ಯರು ಅನೇಕ ಮಾನವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಂಡರು. ಅವುಗಳಲ್ಲಿ ಅವರು ಮಾನವೀಯತೆಯ ಕಲ್ಯಾಣಕ್ಕಾಗಿ ಅನೇಕ ಪ್ರಮುಖ ವಿಷಯಗಳನ್ನು ವಿವರಿಸಿದರು.
27
ಯಾರೇ ಅಗಲಿ ಪ್ರತಿಕ್ರಿಯಿಸಲೇಬೇಕು
ಚಾಣಕ್ಯರು ತಮ್ಮ ನೀತಿ ಶಾಸ್ತ್ರ ಪುಸ್ತಕದಲ್ಲಿ ಮಾನವ ನಡವಳಿಕೆಗೆ ಸಂಬಂಧಿಸಿದ ಅನೇಕ ಪ್ರಮುಖ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲಿ ಒಬ್ಬ ವ್ಯಕ್ತಿಯು ಹೇಗೆ ವರ್ತಿಸಬೇಕು ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಯಾರೇ ಅಗಲಿ ಪ್ರತಿಕ್ರಿಯಿಸಲೇಬೇಕು ಎಂದು ಸೂಚಿಸಿದ್ದಾರೆ. ಅಂತಹ ಸಂದರ್ಭಗಳಲ್ಲಿ ಯಾರೂ ಎಂದಿಗೂ ಮೌನವಾಗಿರಬಾರದು. ಈ ಸಂದರ್ಭಗಳಲ್ಲಿ ಯಾರಾದರೂ ಮೌನವಾಗಿದ್ದರೆ ಅದು ಅವರ ಮೂರ್ಖತನವನ್ನು ತೋರಿಸುತ್ತದೆ.
37
ಅನ್ಯಾಯ ನಡೆಯುತ್ತಿರುವಾಗ
ಚಾಣಕ್ಯ ನೀತಿಯ ಪ್ರಕಾರ, ಯಾರಾದರೂ ನಿಮ್ಮ ಮುಂದೆ ಅನ್ಯಾಯವಾಗಿ ವರ್ತಿಸುತ್ತಿದ್ದರೆ ನೀವು ಎಂದಿಗೂ ಮೌನವಾಗಿರಬಾರದು. ಅಂತಹ ಪರಿಸ್ಥಿತಿಯಲ್ಲಿ ನೀವು ಮಾತನಾಡಬೇಕು. ಒಂದು ವೇಳೆ ನೀವು ಮೌನವಾಗಿದ್ದರೆ ನಿಮ್ಮ ವ್ಯಕ್ತಿತ್ವವನ್ನು ರಾಜಿ ಮಾಡಿಕೊಂಡಂತೆ.
ಚಾಣಕ್ಯರ ಪ್ರಕಾರ, ಯಾರಾದರೂ ನಿಮ್ಮ ಹಕ್ಕುಗಳನ್ನು ಅಥವಾ ಸವಲತ್ತುಗಳನ್ನು ಕಸಿದುಕೊಳ್ಳುತ್ತಿದ್ದಾಗ ಮೌನವಾಗಿ ನೋಡುತ್ತಿದ್ದರೆ, ಹೋಗಲಿ ಬಿಡಿ ಎಂದು ಬಿಡುವುದು ತುಂಬಾ ಮೂರ್ಖತನವೆಂದು ಪರಿಗಣಿಸಲಾಗುತ್ತದೆ. ನೀವು ಅದನ್ನು ಎಂದಿಗೂ ಮೌನವಾಗಿ ನಡೆಯಲು ಬಿಡಬಾರದು. ನೀವು ಅಂತಹ ವಿಷಯಗಳನ್ನು ಬಹಿರಂಗವಾಗಿ ವಿರೋಧಿಸಬೇಕು.
57
ಸಂಬಂಧಗಳನ್ನು ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ
ಚಾಣಕ್ಯ ನೀತಿಯ ಪ್ರಕಾರ, ಸಂಬಂಧವನ್ನು ಕಾಪಾಡಿಕೊಳ್ಳುವ ವಿಷಯಕ್ಕೆ ಬಂದಾಗ ನೀವು ಮುಕ್ತವಾಗಿ ಮಾತನಾಡಬೇಕು. ಸಂಬಂಧವನ್ನು ಕಾಪಾಡಿಕೊಳ್ಳಲು ನೀವು ಯಾವಾಗಲೂ ಹಿಂಜರಿಕೆಯಿಲ್ಲದೆ ಮಾತನಾಡಬೇಕು. ನಿಮ್ಮ ಆಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬೇಕು.
67
ನ್ಯಾಯವಿದ್ದಾಗ...
ಚಾಣಕ್ಯ ನೀತಿಯ ಪ್ರಕಾರ, ನ್ಯಾಯ ಮತ್ತು ಅನ್ಯಾಯದ ವಿಷಯಕ್ಕೆ ಬಂದಾಗ ನೀವು ನ್ಯಾಯಕ್ಕಾಗಿ ನಿಮ್ಮ ಅಭಿಪ್ರಾಯಗಳನ್ನು ಹಿಂಜರಿಕೆ ಅಥವಾ ಭಯವಿಲ್ಲದೆ ವ್ಯಕ್ತಪಡಿಸಬೇಕು. ನೀವು ನ್ಯಾಯವನ್ನು ರಕ್ಷಿಸಿದಾಗ ಸಮಯ ಬಂದಾಗ ನ್ಯಾಯವು ನಿಮ್ಮನ್ನು ರಕ್ಷಿಸುತ್ತದೆ.
77
ಜೀವನದಲ್ಲಿ ದೊಡ್ಡ ಬದಲಾವಣೆ
ನಿಜ ಹೇಳಬೇಕೆಂದರೆ ಚಾಣಕ್ಯ ರಾಜಕೀಯ ಮತ್ತು ರಾಜತಾಂತ್ರಿಕತೆಯಲ್ಲಿ ಚೆನ್ನಾಗಿ ಪಾರಂಗತರಾಗಿದ್ದರು. ಅವರು ವೈಯಕ್ತಿಕ ಅಭಿವೃದ್ಧಿಗೆ ಅನೇಕ ಸಲಹೆಗಳನ್ನು ಸಹ ನೀಡಿದರು. ನೀವು ಚಾಣಕ್ಯ ನೀತಿಯ ಈ ಐದು ನಿಯಮಗಳನ್ನು ಅನುಸರಿಸಿದರೆ ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯನ್ನು ತರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.