ಪ್ರೇಮಿಗಳ ದಿನದ ಸನಿಹದಲ್ಲಿ, ಕನ್ನಡದ ಜನಪ್ರಿಯ ಸೀರಿಯಲ್‌ಗಳ ನಾಯಕಿಯರು ತಮ್ಮ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸುತ್ತಾರೆ ಎಂಬುದನ್ನು ಈ ಲೇಖನದಲ್ಲಿ ತೋರಿಸಲಾಗಿದೆ. ಅಮೃತಧಾರೆ , ಬ್ರಹ್ಮಗಂಟು ಮುಂತಾದ ಧಾರಾವಾಹಿಗಳಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವ ವಿಭಿನ್ನ ಶೈಲಿಗಳನ್ನು ಇಲ್ಲಿ ವಿವರಿಸಲಾಗಿದೆ.
ಇನ್ನೇನು ಕೆಲವೇ ದಿನಗಳಲ್ಲಿ ಪ್ರೇಮಿಗಳ ದಿನ (Velentines Day) ಬರಲಿದೆ. ಇದಕ್ಕೆ ಪೂರ್ವದಲ್ಲಿ ಇದಾಗಲೇ ದಿನಕ್ಕೊಂದರಂತೆ ಡೇಗಳು ಬರುತ್ತಿವೆ. ಅಷ್ಟಕ್ಕೂ ಪ್ರೇಮಿಗಳಿಗೆ ಐ ಲವ್ ಯು (I LOVE YOU) ಎಂದು ಹೇಳಿಕೊಡಬೇಕೆಂದೇನೂ ಇಲ್ಲ. ಇದು ಗುರು ಇಲ್ಲದೇ ಕೇವಲ ಗುರಿ ಮಾತ್ರ ಇದ್ದು ಒಲಿಯುವ ವಿದ್ಯೆ!
26
ರೊಮ್ಯಾಂಟಿಕ್ ದೃಶ್ಯಗಳು
ಆದರೂ ಇಂದು ಸೀರಿಯಲ್ ಹುಚ್ಚು ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸೀರಿಯಲ್ ನೋಡಿ ಅಲ್ಲಿಯ ಲವ್ ಸೀನ್ಗಳನ್ನು ನೋಡಿ, ತಮ್ಮ ಜೀವನದಲ್ಲಿಯೂ ಇಂಥದ್ದೇ ನಡೆಯಬಾರದೇ ಎಂದು ಅಂದುಕೊಳ್ಳುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ರೊಮ್ಯಾಂಟಿಕ್ ದೃಶ್ಯಗಳು ಬಂದಾಗ ವೀಕ್ಷಕರು ಪುಳಕಿತರಾಗುವುದು ಇದೆ.
36
ಕನಸು ಕಾಣುವ ಮಂದಿ
ಅಲ್ಲಿ ಬರುವ ದೃಶ್ಯಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಂಡು ಕನಸು ಕಾಣುವ ದೊಡ್ಡ ವರ್ಗವೂ ಇದೆ. ಇದೇ ಕಾರಣಕ್ಕೆ ಸೀರಿಯಲ್ಗಳಲ್ಲಿ ಇಂದು ಬಗೆಬಗೆ ರೂಪದಲ್ಲಿ ರೊಮ್ಯಾಂಟಿಕ್ ದೃಶ್ಯಗಳನ್ನು ಸೃಷ್ಟಿ ಮಾಡುತ್ತಾರೆ.
ಇದೀಗ ಪ್ರೇಮಿಗಳ ದಿನದ ಮುನ್ನ ಕೆಲವು ದಿನಗಳು ಬರುವ ಹಿನ್ನೆಲೆಯಲ್ಲಿ, ಒಂದೊಂದು ದಿನಕ್ಕೆ ಒಂದೊಂದು ರೀತಿಯ ಲವ್ ದೃಶ್ಯಗಳನ್ನು ಕಿರುತೆರೆ ಕಲಾವಿದರಿಂದ ತೋರಿಸಲಾಗಿದೆ.
56
ಹೀಗೆಲ್ಲಾ ಹೇಳ್ತಾರೆ
ಇದರಲ್ಲಿ ಸೀರಿಯಲ್ ನಟಿಯರು ನಟನಿಗೆ ಐ ಲವ್ ಯು ಎಂದು ಹೇಗೆಲ್ಲಾ ಹೇಳುತ್ತಾರೆ ಎನ್ನುವುದನ್ನು ನೋಡಬಹುದಾಗಿದೆ. ಒಂದೊಂದು ಸೀರಿಯಲ್ನಲ್ಲಿ ಒಂದೊಂದು ರೀತಿಯ ಕ್ಯಾರೆಕ್ಟರ್ ಇರುವ ಕಾರಣ, ಆ ಪಾತ್ರಕ್ಕೆ ತಕ್ಕಂತೆ ಪ್ರೇಮ ನಿವೇದನೆ ಮಾಡಿಕೊಳ್ಳುವ ಪರಿಯನ್ನು ಇದರಲ್ಲಿ ನೋಡಬಹುದು.
66
ನಟಿಯರೇ ಮುಂದು
ಒಂದು ಕುತೂಹಲದ ಸಂಗತಿ ಎಂದರೆ, ಇಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವುದು ನಟಿಯರೇ. ಅಮೃತಧಾರೆ, ಬ್ರಹ್ಮಗಂಟು, ಕರ್ಣ, ಅಣ್ಣಯ್ಯ ಸೀರಿಯಲ್ಗಳಲ್ಲಿ ನಟಿಯರೇ ಪ್ರೇಮ ನಿವೇದನೆ ಮಾಡಿಕೊಂಡರೆ, ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಮಾತ್ರ ಸಿದ್ದೇಗೌಡ್ರು ಭಾವನಾಗೆ ಪ್ರೇಮ ನಿವೇದನೆ ಮಾಡಿಕೊಂಡಿರುವುದನ್ನು ನೋಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.