ತಾಯಿಯಾದ ತೇಜ್‌ ಪ್ರತಾಪ್ ಯಾದವ್ ಪ್ರೇಯಸಿ ಅನುಷ್ಕಾ ಯಾದವ್: ನನಗೂ ಮಗುವಿಗೂ ಸಂಬಂಧ ಇಲ್ಲ ಎಂದ ಲಾಲೂ ಪುತ್ರ

Published : Feb 09, 2026, 12:04 PM IST

ಆರ್‌ಜೆಡಿ ಉಚ್ಚಾಟಿತ ನಾಯಕ ತೇಜ್ ಪ್ರತಾಪ್ ಯಾದವ್, ತಮ್ಮ ಪ್ರೇಯಸಿ ಎನ್ನಲಾದ ಅನುಷಾ ಯಾದವ್‌ಗೆ ಜನಿಸಿದ ಮಗುವಿಗೆ ತಾನು ತಂದೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದ್ದು, ವೈರಲ್ ಫೋಟೋ ಸುದ್ದಿ ಸುಳ್ಳು ಎಂದು ಅವರು ಹೇಳಿದ್ದಾರೆ.

PREV
16
ತೇಜ್ ಪ್ರತಾಪ್ ಯಾದವ್ ಪ್ರೇಯಸಿಗೆ ಹೆಣ್ಣು ಮಗು

ಬಿಹಾರದಲ್ಲಿ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪುತ್ರ, ಆರ್‌ಜೆಡಿಯಿಂದ ಉಚ್ಛಾಟಿತಗೊಂಡಿರುವ ತೇಜ್‌ ಪ್ರತಾಪ್ ಯಾದವ್ ಅವರ ಪ್ರೇಯಸಿ ಎನ್ನಲಾದ ಅನುಷಾ ಯಾದವ್ ಅವರು ನಿನ್ನೆ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ತೇಜ್ ಪ್ರತಾಪ್ ಯಾದವ್ ನನಗೂ, ಅನುಷ್ಕಾ ಅವರಿಗಾಗಲಿ ಅವರು ಜನ್ಮ ನೀಡಿದ ಮಗುವಿಗಾಗಲಿ ಯಾವುದೇ ಸಂಬಂದ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಸುದ್ದಿಗೋಷ್ಠಿಯನ್ನು ನಡೆಸಿರುವ ಅವರು ಹೀಗೆ ವದಂತಿ ಹಬ್ಬಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಹೇಳಿದ್ದಾರೆ.

26
ಮಗು ನನ್ನದಲ್ಲ ಎಂದ ತೇಜ ಪ್ರತಾಪ್ ಯಾದವ್

ಕಳೆ ವರ್ಷ ಎಂದರೆ 2025 ರ ಮೇ 24 ರಂದು ತೇಜ್ ಪ್ರತಾಪ್ ಯಾದವ್ ಅವರು ಫೇಸ್‌ಬುಕ್‌ನಲ್ಲಿ ಅನುಷ್ಕಾ ಯಾದವ್ ಎಂಬ ಮಹಿಳೆಯೊಂದಿಗಿನ ತಮ್ಮ ಫೋಟೋವನ್ನು ಹಂಚಿಕೊಂಡು, ನಾವು 12 ವರ್ಷಗಳಿಂದ ಪ್ರೇಮ ಸಂಬಂಧದಲ್ಲಿದ್ದೇವೆ ಎಂದು ಹೇಳಿಕೊಂಡಿದ್ದರು. ಈ ಪೋಸ್ಟ್ ಕಾಡ್ಗಿಚ್ಚಿನಂತೆ ವೈರಲ್ ಆಗಿತ್ತು. ಇದು ಅವರ ಪಕ್ಷದಲ್ಲಿ ಅಂತರಿಕ ಉದ್ವಿಗ್ನತೆಗೆ ಕಾರಣವಾಗಿತ್ತು. ಹೀಗಿರುವಾಗ ಈಗ ಅನುಷ್ಕಾ ಯಾದವ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

36
ಹೆಣ್ಣು ಮಗುವಿಗೆ ಜನ್ಮ ನೀಡಿದ ಅನುಷ್ಕಾ

ಫೆಬ್ರವರಿ 8ರಂದು ಭಾನುವಾರ ಅಂದರೆ ನಿನ್ನೆ ಅನುಷ್ಕಾ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ತೇಜ್ ಪ್ರತಾಪ್ ಯಾದವ್ ಅವರು ತಂದೆಯಾಗಿದ್ದಾರೆ ಎಂಬ ಸುದ್ದಿ ಹಬ್ಬುವುದಕ್ಕೆ ಕಾರಣವಾಯ್ತು. ಆದರೆ ತೇಜ್ ಪ್ರತಾಪ್ ಯಾದವ್ ಅವರು ಈಗ ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಅನುಷ್ಕಾ ಅಥವಾ ಅವರ ಮಗುವಿನ ಜೊತೆಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

46
ಸೋಶಿಯಲ್ ಮೀಡಿಯಾದಲ್ಲಿ ತೇಜ್ ಪ್ರತಾಪ್ ತಂದೆಯಾದ ಸುದ್ದಿ ವೈರಲ್

ತೇಜ್ ಪ್ರತಾಪ್ ಯಾದವ್ ತಂದೆಯಾಗಿದ್ದಾರೆ ಎಂದು ಹೇಳುವ ಸಾಮಾಜಿಕ ಮಾಧ್ಯಮದ ವರದಿಗಳನ್ನು ಅವರು ನಿರಾಕರಿಸಿದ್ದು, ಇವೆಲ್ಲಾ ಸುಳ್ಳು ಗಾಸಿಪ್‌ಗಳು ಎಂದು ಅವರು ಕರೆದಿದ್ದಾರೆ. ಈ ವದಂತಿಗಳು ಸೋಶೀಯಲ್ ಮೀಡಿಯಾ ತುಂಬ ತೀವ್ರವಾಗಿ ಹಬ್ಬಿದ ಹಿನ್ನೆಲೆ ಪತ್ರಿಕಾಗೋಷ್ಠಿ ನಡೆಸಿದ ಅವರು ಮುಖೇಶ್ ರೋಷನ್, ಸಂಜಯ್ ಯಾದವ್, ರಮೀಜ್, ಶಕ್ತಿ ಸಿಂಗ್ ಮತ್ತು ಸುನಿಲ್ ಸಿಂಗ್ ಜೈಚಂದ್ ಎಂಬುವವರು ಈ ವಿಚಾರವಾಗಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.

56
ಆಕೆ ನನ್ನ ಪ್ರೇಯಸಿ ಅಲ್ಲ, ಹ್ಯಾಕ್ ಆದ ಖಾತೆಯಿಂದ ಫೋಟೋ ಪೋಸ್ಟ್ ಅಗಿತ್ತು ಎಂದ ತೇಜ್ ಪ್ರತಾಪ್

ಇದೇ ವೇಳೆ ಅನುಷ್ಕಾ ಯಾದವ್ ಜೊತೆಗಿನ ವೈರಲ್ ಆದ ತಮ್ಮ ಫೋಟೋ ಬಗ್ಗೆ ಪ್ರತಿಕ್ರಿಯಿಸಿದ ಅವರು, ವೈರಲ್ ಆಗಿರುವ ನನ್ನ ಮತ್ತು ಅನುಷ್ಕಾ ಯಾದವ್ ಅವರ ಫೋಟೋ ಹ್ಯಾಕ್ ಆದ ಖಾತೆಯಿಂದ ಬಂದಿದೆ. ಅಲೋಕ್ ಗುರ್ಜರ್ ಎಂಬಾತ ತಾನು ಹೊಂದಿರುವ ಸಂಬಂಧವನ್ನು ನನ್ನ ಮೇಲೆ ಹೇರಿದ್ದಾನೆ ಎಂದು ತೇಜಪ್ರತಾಪ್ ಯಾದವ್ ಅವರು ಆರೋಪಿಸಿದ್ದಾರೆ. ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

66
ನನ್ನ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ

ನನ್ನ ವಿರುದ್ಧ ಯೋಜಿತ ಪಿತೂರಿ ನಡೆಸುತ್ತಿದ್ದಾರೆ. ನನ್ನ ವರ್ಚಸ್ಸನ್ನು ಹಾಳು ಮಾಡುವುದಕ್ಕೆ ಕೆಲವರು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ. ತಮ್ಮ ಹೆಚ್ಚುತ್ತಿರುವ ಜನಪ್ರಿಯತೆಯಿಂದ ಗಾಬರಿಗೊಂಡಿರುವ ವಿರೋಧಿಗಳು ಹೀಗೆ ಮಾಡುತ್ತಿದ್ದಾರೆ. ಎಂದು ತೇಜ್ ಪ್ರತಾಪ್ ಯಾದವ್ ದೂರಿದರು. ಮಹುವಾದ ಮಾಜಿ ಆರ್‌ಜೆಡಿ ಶಾಸಕ ಮುಖೇಶ್ ರೋಷನ್ ತಮ್ಮ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎಂದು ಆರೋಪಿಸಿದರು. ಸಂಜಯ್ ಯಾದವ್, ಶಕ್ತಿ ಸಿಂಗ್ ಮತ್ತು ಸುನಿಲ್ ಸಿಂಗ್ ಈ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಅವರು ಆರೋಪಿಸಿದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories