ಸರಣಿ ಕಾಮದಾಟದ 'ಕಲಾಕಾರ' ಈ ಕಮಲಾಕರ ಭಟ್: ಸುಚಿತ್ರಾಗೂ ಮೊದಲೇ, ಮುಸ್ಲಿಂ ಮಹಿಳೆ ಸೇರಿ ನಾಲ್ವರೊಂದಿಗೆ ಪಲ್ಲಂಗದಾಟ!

Published : Feb 09, 2026, 02:39 PM IST

ಸಿದ್ದಾಪುರದ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ಕಮಲಾಕರ ಭಟ್, ಸಹ ಆರೋಪಿ ಸುಚಿತ್ರಾಳಿಗಿಂತ ಮುಂಚೆಯೇ ಹಲವು ಮಹಿಳೆಯರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಸತ್ಯ ಬಯಲಾಗಿದೆ. ಹಳೆಯ ಪ್ರಿಯತಮೆಯೊಂದಿಗೆ ಜಗಳವಾಡುವ ಆಡಿಯೋ ವೈರಲ್ ಆಗಿದೆ.

PREV
15
ಹಲವು ಮಹಿಳೆಯರೊಂದಿಗೆ ಪಲ್ಲಂಗದಾಟ

ಉತ್ತರ ಕನ್ನಡ (ಫೆ.09): ಇಡೀ ರಾಜ್ಯದ ಜನತೆಯ ಮುಂದೆ ಕುಳಿತು ಬೆಳ್ಳಂಬೆಳಗ್ಗೆ ಜ್ಯೋತಿಷ್ಯ ಹೇಳುತ್ತಿದ್ದ ಗುರೂಜಿ ಕಮಲಾಕರ ಭಟ್ ಭಲೇ ಕಲಾಕಾರ ಎಂಬ ಸತ್ಯ ಹೊರಬಿದ್ದಿದೆ. ಇದೀಗ ವಿವಾಹಿತ ಮಹಿಳೆ ಸುಚಿತ್ರಾಳೊಂದಿಗೆ ಅನೈತಿಕ ಸಂಬಂಧದಿಂದ ಕೊಲೆ ಆರೋಪಿ ಆಗಿರುವ ಕಮಲಾಕರ್ ಭಟ್, ಸುಚಿತ್ರಾಳಿಗಿಂತಲೂ ಮೊದಲು ಬೆಂಗಳೂರು, ಶಿರಸಿ, ಸಾಗರ ಸೇರಿದಂತೆ ಹಲವು ಮಹಿಳೆಯರೊಂದಿಗೆ ಪಲ್ಲಂಗದಾಟ ಆಡಿದ್ದಾರೆ. ಇದರಲ್ಲಿ ಮುಸ್ಲಿಂ ಮಹಿಳೆಯರೂ ಇದ್ದರು ಎಂಬ ಸತ್ಯ ಸ್ಪೋಟಗೊಂಡಿದೆ.

25
ಜ್ಯೋತಿಷಿ ಕಮಲಾಕರ ಭಟ್‌ನ ಬಣ್ಣದ ಬದುಕು

ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅವರೆಕೊಪ್ಪ ವಸಂತ ನಾಯ್ಕ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಜ್ಯೋತಿಷಿ ಕಮಲಾಕರ ಭಟ್‌ನ ಬಣ್ಣದ ಬದುಕಿನ ಒಂದೊಂದೇ ಪುಟಗಳು ಈಗ ತೆರೆದುಕೊಳ್ಳುತ್ತಿವೆ. ಹತ್ಯೆಗೀಡಾದ ವ್ಯಕ್ತಿಯ ತಮ್ಮನ ಪತ್ನಿ ಸುಚಿತ್ರಾ ಜೊತೆಗಷ್ಟೇ ಅಲ್ಲದೆ, ಈತ ಈ ಹಿಂದೆ ಮುಸ್ಲಿಂ ಮಹಿಳೆ ಸೇರಿದಂತೆ ಹಲವರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎಂಬ ಸ್ಫೋಟಕ ಮಾಹಿತಿ ಆಡಿಯೋ ಕ್ಲಿಪ್‌ಗಳ ಮೂಲಕ ಬಹಿರಂಗವಾಗಿದೆ.

35
ವೈರಲ್ ಆದ ಆಡಿಯೋದಲ್ಲಿ ಏನಿದೆ?

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಮಲಾಕರ ಭಟ್ ತನ್ನ ಹಳೆಯ ಪ್ರಿಯತಮೆಯೊಂದಿಗೆ (ಸೆಟ್‌ಅಪ್) ಜಗಳವಾಡುವ ಆಡಿಯೋ ವೈರಲ್ ಆಗಿದೆ. ಸುಚಿತ್ರಾಳ ಮೋಹದ ಬಲೆಯಲ್ಲಿ ಬಿದ್ದಿದ್ದ ಕಮಲಾಕರ, ತನ್ನ ಹಳೆಯ ಪ್ರಿಯತಮೆಗೆ ಅವಾಜ್ ಹಾಕಿದ್ದಾನೆ. 'ನಾನು ಜೀವನ ಪೂರ್ತಿ ಇರೋದಾದ್ರೆ ಸುಚಿತ್ರಾ ಜೊತೆಗೆ ಮಾತ್ರ ಇರುತ್ತೇನೆ. ಅವಳೇನು 8-10 ದಿನ ನಿಮ್ಮಂತೆ ನನ್ನ ಜೊತೆಗೆ ಇರೋಕೆ ಡೈಲಿ ವೇಜಸ್ (ದಿನಗೂಲಿ) ಅಲ್ಲ. ಅವಳು ಹಾಕುವ ಚಪ್ಪಲಿ ಎಷ್ಟಿದೆ, ಅದರ ಬೆಲೆ ಏನು ಎಂಬುದು ನನಗೆ ಗೊತ್ತಿದೆ. ಸುಮ್ಮನೆ ಏನೇನೋ ಹೇಳುವ ಅವಸ್ಥೆಗೆ ಹೋಗಬೇಡ' ಎಂದು ತನ್ನ ಹಳೆಯ ಸಂಗಾತಿಗೆ ಎಚ್ಚರಿಕೆ ನೀಡಿದ್ದಾನೆ.

45
9 ವರ್ಷಗಳ ಸಂಬಂಧ ಮುರಿದುಬಿದ್ದಿದ್ದೇಕೆ?

ಆರೋಪಿ ಕಮಲಾಕರ ಭಟ್, ಸುಚಿತ್ರಾಳ ಪರಿಚಯವಾಗುವ ಮುನ್ನ ಸಾಗರ ಮೂಲದ ಮಹಿಳೆಯೊಬ್ಬರ ಜೊತೆ ಬರೋಬ್ಬರಿ 9 ವರ್ಷಗಳ ಕಾಲ ಸಂಬಂಧ ಹೊಂದಿದ್ದನಂತೆ. ಆದರೆ, ಯಾವಾಗ ಸುಚಿತ್ರಾ ಈತನ ಜೀವನದಲ್ಲಿ ಎಂಟ್ರಿ ಕೊಟ್ಟಳೋ, ಆಗ ಹಳೆಯ ಪ್ರಿಯತಮೆಯನ್ನು ಕಡೆಗಣಿಸಲು ಆರಂಭಿಸಿದ್ದಾನೆ. ಆದರೂ ಆ ಮಹಿಳೆ ಕಮಲಾಕರನಿಗೆ ಆಗಾಗ ಕರೆ ಮಾಡುತ್ತಿದ್ದಳು.

ಈ ವಿಷಯ ಸುಚಿತ್ರಾ ಗಮನಕ್ಕೆ ಬಂದಿದೆ. ಕೂಡಲೇ ಆಕೆ ಕಮಲಾಕರನಿಗೆ ಕ್ಲಾಸ್ ತೆಗೆದುಕೊಂಡಿದ್ದಾಳೆ. ಸುಚಿತ್ರಾಳ ಕೋಪ ಮತ್ತು ಭಯಕ್ಕೆ ಬೆದರಿದ ಕಮಲಾಕರ, ಆಕೆಯ ಮುಂದೆಯೇ ಸಾಗರ ಮೂಲದ ಮಹಿಳೆಗೆ ವಾಯ್ಸ್ ಮೆಸೇಜ್ ಕಳುಹಿಸಿ, 'ಇನ್ಮುಂದೆ ನನಗೆ ಫೋನ್ ಮಾಡಬೇಡ' ಎಂದು ಬೈದು ಕಳುಹಿಸಿದ್ದಾನೆ. ಸುಚಿತ್ರಾಳ ಅಣತಿಯಂತೆ ಆತ ಹಳೆಯ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದ್ದ ಎಂಬುದು ಆಡಿಯೋದಲ್ಲಿ ಸ್ಪಷ್ಟವಾಗಿದೆ.

55
ಸರಣಿ ಕಾಮದಾಟದ 'ಕಲಾಕಾರ'

ಕಮಲಾಕರ ಭಟ್ ಕೇವಲ ಸುಚಿತ್ರಾ ಮತ್ತು ಸಾಗರದ ಮಹಿಳೆಗೆ ಮಾತ್ರ ಸೀಮಿತವಾಗಿರಲಿಲ್ಲ. ಈತನ ಕಾಮದಾಟಕ್ಕೆ ಗಡಿಯೇ ಇರಲಿಲ್ಲ ಎನ್ನಲಾಗಿದೆ. ಮೂಲಗಳ ಪ್ರಕಾರ, ಈತ ಮೊದಲು ಮುಸ್ಲಿಂ ಸಮುದಾಯದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಅದಾದ ಬಳಿಕ ಸಾಗರ, ಶಿರಸಿ ಹಾಗೂ ಬೆಂಗಳೂರು ಮೂಲದ ಮಹಿಳೆಯರ ಜೊತೆಗೂ 'ಡಿಂಗ್ ಡಾಂಗ್' ಆಟ ಆಡಿದ್ದ ಎನ್ನಲಾಗಿದೆ. ಒಬ್ಬರ ನಂತರ ಒಬ್ಬರನ್ನು ಬಳಸಿಕೊಂಡು, ನಂತರ ಹೊಸಬರ ಸಹವಾಸಕ್ಕೆ ಬೀಳುತ್ತಿದ್ದ ಈತನ ಚಾಳಿ ಈಗ ಹತ್ಯೆ ಪ್ರಕರಣದ ತನಿಖೆಯ ವೇಳೆ ಒಂದೊಂದಾಗಿ ಹೊರಬರುತ್ತಿದೆ.

ಸದ್ಯ ಪೊಲೀಸರ ಅತಿಥಿಯಾಗಿರುವ ಕಮಲಾಕರ ಮತ್ತು ಸುಚಿತ್ರಾ ಜೋಡಿಯ ಕ್ರಿಮಿನಲ್ ಹಿನ್ನೆಲೆ ಮತ್ತು ಅನೈತಿಕ ಸಂಬಂಧಗಳ ಜಾಲವನ್ನು ಭೇದಿಸಲು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories