ಪ್ರಿಯಾಂಕಾ ಯಶಸ್ಸಿನಿಂದಾಗಿ ಮಗನಿಗೆ ಸರಿಯಾದ ಆರೈಕೆ ಸಿಗಲಿಲ್ಲ, ಒಬ್ಬಂಟಿಯಾಗೇ ಬೆಳೆದ: ತಾಯಿ ಮಧು ಚೋಪ್ರಾ ಬೇಸರ

Published : Jan 21, 2026, 11:55 AM IST

ಪ್ರಿಯಾಂಕಾ ಚೋಪ್ರಾ ಅವರ ಯಶಸ್ಸು ಅವರ ಕುಟುಂಬದ ಮೇಲೆ, ವಿಶೇಷವಾಗಿ ಅವರ ಸಹೋದರ ಸಿದ್ಧಾರ್ಥ್ ಚೋಪ್ರಾ ಮೇಲೆ ಬೀರಿದ ಪರಿಣಾಮವನ್ನು ಅವರ ತಾಯಿ ಮಧು ಚೋಪ್ರಾ ವಿವರಿಸಿದ್ದಾರೆ. ಮಗ ಸಿದ್ಧಾರ್ಥ್ ಪೋಷಕರ ಹೆಚ್ಚಿನ ಗಮನವಿಲ್ಲದೆ ಏಕಾಂಗಿಯಾಗಿ ಬೆಳೆಯಬೇಕಾಯಿತು ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. 

PREV
16
ಮಗಳ ಯಶಸ್ಸಿನ ಪರಿಣಾಮದ ಬಗ್ಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಾತು

ಕುಟುಂಬದಲ್ಲಿ ಒಬ್ಬರು ನೆಗೆಟಿವ್ ಇರಲಿ ಅಥವಾ ಪಾಸಿಟಿವ್ ಇರಲಿ ಅದರ ಪರಿಣಾಮ ಎಲ್ಲರ ಮೇಲಾಗುವುದು ಸಹಜ. ಮನೆಯಲ್ಲಿ ಮೊದಲು ಜನಿಸಿದ ಮಕ್ಕಳು ಸಾಕಷ್ಟು ಯಶಸ್ವಿಯಾದರೆ ನಂತರ ಜನಿಸಿದ ಮಕ್ಕಳು ಇದರ ಪರಿಣಾಮವನ್ನು ಸಾಕಷ್ಟು ಎದುರಿಸುತ್ತಾರೆ. ಅವರಂತೆ ಇವರು ಆಗಬೇಕು ಎಂಬ ಪೋಷಕರ ನಿರೀಕ್ಷೆ ಆ ಮಕ್ಕಳ ಮೇಲೆ ತೀವ್ರವಾಗಿರುತ್ತದೆ. ಇದರ ಪರಿಣಾಮ ಮಕ್ಕಳು ಬಳಲುತ್ತಾರೆ. ಇದು ಬರೀ ಜನಸಾಮಾನ್ಯರೆನಿಸಿದವರ ಮನೆಯ ಕತೆ ಅಲ್ಲ ಸೆಲೆಬ್ರಿಟಿಗಳ ಮನೆಯಲ್ಲೂ ಇದೆ ಕತೆ. ಹಾಗೆಯೇ ಸಿನಿಮಾ ರಂಗದಲ್ಲೂ ಅಷ್ಟೇ ಅಪ್ಪ ಅಮ್ಮ ಸಾಕಷ್ಟು ಹೆಸರು ಮಾಡಿದ್ದರೆ ಮಕ್ಕಳ ಮೇಲೆ ಸಮಾಜದ ನಿರೀಕ್ಷೆ ತೀವ್ರವಾಗಿರುತ್ತದೆ. ಇದಕ್ಕೊಂದು ಉತ್ತಮ ಉದಾಹರಣೆ ಅಮಿತಾಭ್ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್, ಮಗ ಅಭಿಷೇಕ್ ಬಚ್ಚನ್ ಅವರು ಕೂಡ ಒಳ್ಳೆಯ ನಟರೆ ಗೂಮರ್, ರೆಫ್ಯೂಜಿ, ಧೂಮ್, ಬಂಟಿ ಔರ್ ಬಬ್ಲಿ ಮುಂತಾದ ಸಿನಿಮಾಗಳಲ್ಲಿ ಅವರ ಅದ್ಭುತ ನಟನೆಯನ್ನು ಕಾಣಬಹುದು. ಆದರೆ ಅಮಿತಾಭ್ ಬಚ್ಚನ್ ಅವರ ಯಶಸ್ಸು ಜನಪ್ರಿಯತೆಯನ್ನು ತಲೆಯಲ್ಲಿಟ್ಟುಕೊಂಡೆ ಜನರು ಅಭಿಷೇಕ್ ಬಚ್ಚನ್ ಅವರ ಸಿನಿಮಾಗಳನ್ನು ನೋಡಿ ಅಳತೆ ಮಾಡಲು ಶುರು ಮಾಡಿದ್ದರಿಂದಾಗಿ ಅಪ್ಪನ ಖ್ಯಾತಿಯ ಪ್ರಭೆಯ ಮುಂದೆ ಮಗನ ಪ್ರತಿಭೆ ಯಾರಿಗೂ ಕಾಣಿಸಲೇ ಇಲ್ಲ, ಇದೊಂತರ ಸೂರ್ಯನ ಮುಂದೆ ನಕ್ಷತ್ರ ಮಂಕಾದಂತಹ ಸ್ಥಿತಿ. ಅದೇ ರೀತಿ ಈಗ ಪ್ರಿಯಾಂಕಾ ಚೋಪ್ರಾಗೆ ಬಾಲ್ಯದಲ್ಲೇ ಒದಗಿ ಬಂದ ಯಶಸ್ಸಿನ ಪರಿಣಾಮ ಅವರ ಸೋದರ ಸಿದ್ಧಾರ್ಥ್‌ ಚೋಪ್ರಾ ಮೇಲೆ ಹೇಗಾಯ್ತು ಎಂಬುದನ್ನು ಅವರ ತಾಯಿ ಮಧು ಚೋಪ್ರಾ ಅವರು ಹೇಳಿಕೊಂಡಿದ್ದಾರೆ.

26
18 ನೇ ವಯಸ್ಸಿನಲ್ಲಿ ಮಿಸ್ ವರ್ಲ್ಡ್ ಆಗಿದ್ದ ಪ್ರಿಯಾಂಕಾ ಚೋಪ್ರಾ

18 ನೇ ವಯಸ್ಸಿನಲ್ಲಿ ಮಿಸ್ ವರ್ಲ್ಡ್ ಆದ ಪ್ರಿಯಾಂಕಾ ಚೋಪ್ರಾ ಅವರಿಗೆ ತಮ್ಮ ವೃತ್ತಿಜೀವನದ ಆರಂಭದಲ್ಲೇ ತಾರಾಪಟ್ಟ ಲಭಿಸಿತು. ಶೀಘ್ರದಲ್ಲೇ, ಅವರಿಗೆ ಚಲನಚಿತ್ರಗಳಲ್ಲಿ ನಟನೆಗೆ ಒಳ್ಳೊಳ್ಳೆಯ ಆಫರ್‌ಗಳು ಬರಲಾರಂಭಿಸಿದವು. ಪ್ರಿಯಾಂಕಾ ಅವರ ಈ ಯಶಸ್ಸಿನ ಹಿಂದೆ ಜೊತೆಯಾಗಿ ನಿಂತವರು ಅವರ ತಾಯಿ ಮಧು ಚೋಪ್ರಾ. ವೈದ್ಯೆಯಾಗಿದ್ದ ಅವರಿಗೆ ಮಗಳು ಸಿನಿಮಾಗಿಂತ ಶೈಕ್ಷಣಿಕ ಕ್ಷೇತ್ರದಲ್ಲಿ ಒಳ್ಳೆ ಸಾಧನೆ ಮಾಡಬೇಕು ಎಂದು ಬಯಸಿದ್ದರು. ಆದರೂ ಪ್ರಿಯಾಂಕಾ ಚೋಪ್ರಾ ಅವರು ವಿಜಯ್ ಜೊತೆಗಿನ ತಮ್ಮ ಮೊದಲ ಸಿನಿಮಾ ತಮಿಳನ್‌ಗಾಗಿ ಒಪ್ಪಂದಕ್ಕೆ ಸಹಿ ಹಾಕುವಾಗ ಮಧು ಚೋಪ್ರ ಕಣ್ಣೀರಿಟ್ಟಿದರಂತೆ ಇದನ್ನು ಹಿಂದೆ ಸಂದರ್ಶನವೊಂದರಲ್ಲಿ ಸ್ವತಃ ಮಧು ಚೋಪ್ರಾ ಹೇಳಿಕೊಂಡಿದ್ದರು.

36
ಪೋಷಕರ ಹೆಚ್ಚಿನ ಕಾಳಜಿ ಇಲ್ಲದೇ ಬೆಳೆದ ಸಿದ್ಧಾರ್ಥ್ ಚೋಪ್ರಾ

ಮಗಳ ವೃತ್ತಿಜೀವನಕ್ಕೆ ಬೆಂಬಲವಾಗಿ ಮಧು ಚೋಪ್ರಾ ಅವರು ನಿಂತಿದ್ದರಿಂದ ಪ್ರಿಯಾಂಕಾ ಜೊತೆ ಅವರು ಕೂಡ ನಿರಂತರ ಪ್ರಯಾಣಿಸಬೇಕಿತ್ತು. ಇದರಿಂದ ಕುಟುಂಬದ ಚಲನಶೀಲತೆಯ ಬದಲಾಯಿತು. ವಿಶೇಷವಾಗಿ ಇದು ಅವರ ಮಗ ಪ್ರಿಯಾಂಕಾ ಅವರ ಕಿರಿಯ ಸೋದರ ಮಧು ಚೋಪ್ರಾ ಮೇಲೆ ತೀವ್ರ ಪರಿಣಾಮ ಬೀರಿತ್ತು. ಮಧು ಚೋಪ್ರಾ ಅವರ ಪತಿ ಕೂಡ ವೈದ್ಯರಾಗಿದ್ದರು, ಅವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಬ್ಯುಸಿ ಆಗಿದ್ದರು. ಇತ್ತ ತಾಯಿ ಮಧು ಚೋಪ್ರಾ ಪ್ರಿಯಾಂಕಾ ಜೊತೆಗೆ ಓಡಾಡುವುದೇ ಆಗಿತ್ತು. ಇದರಿಂದ ಸಿದ್ಧಾರ್ಥ ಚೋಪ್ರಾ ಪೋಷಕರ ಹೆಚ್ಚಿನ ಕಾಳಜಿ ಇಲ್ಲದೇ ಏಕಾಂಗಿಯಾಗಿ ಆದರೆ ಸ್ವತಂತ್ರವಾಗಿ ಬೆಳೆಯಬೇಕಾಯ್ತು. ಆತನನ್ನು ಯಾರೂ ಕಾಳಜಿ ಮಾಡಲಿಲ್ಲ, ಆತ ಆತನಾಗಿಯೇ ಬೆಳೆದ ಎಂದು ಮಧು ಚೋಪ್ರಾ ಬೇಸರಿಸಿದ್ದಾರೆ.

46
ಪ್ರಿಯಾಂಕಾಳ ಈ ಎಲ್ಲಾ ಯಶಸ್ಸಿನ ಹಿಂದೆ ಸೋದರ ಸಿದ್ಧಾರ್ಥ್‌ನ ತ್ಯಾಗ ಇದೆ

ಈ ಹಂತದ ಬಗ್ಗೆ ಚಿಂತಿಸುತ್ತಾ ಮಧು ಚೋಪ್ರಾ ಅವರು ಹೀಗೆ ಹೇಳಿದ್ದಾರೆ. ಸಿದ್ಧಾರ್ಥ್‌ನ ಬಾಲ್ಯದ ವರ್ಷಗಳಲ್ಲಿ ಪೋಷಕರ ಉಪಸ್ಥಿತಿ ಎಷ್ಟು ಕಡಿಮೆ ಇತ್ತು ಎಂಬುದರ ಬಗ್ಗೆ ನನಗೆ ಬಹಳ ವಿಷಾದವಿದೆ. ಪ್ರಿಯಾಂಕಾಳ ಈ ಎಲ್ಲಾ ಯಶಸ್ಸಿನ ಹಿಂದೆ ಸೋದರ ಸಿದ್ಧಾರ್ಥ್‌ನ ತ್ಯಾಗ ಇದೆ. ಪ್ರಿಯಾಂಕಾಳ ಹಿಂದೆಯೇ ನಾನು ಹೋಗಬೇಕಾಗಿದ್ದರಿಂದ ಆತನಿಗೆ ತಾಯಿಯಾಗಿ ನೀಡಬೇಕಾದ ಗಮನವನ್ನು ನೀಡಲಾಗಲಿಲ್ಲ. ಆತನ ತಂದೆ ಅಶೋಕ್ ಚೋಪ್ರಾ ಅವರು ವೃತ್ತಿಯಲ್ಲಿ ಬ್ಯುಸಿಯಾಗಿದ್ದರು. ಆ ಸಮಯದಲ್ಲಿ ಸಿದ್ಧಾರ್ಥ್ ಹದಿಹರೆಯದವನಾಗಿದ್ದ ಆದರೂ ಆತ ಒಂಟಿಯಾಗಿಯೇ ಬೆಳೆದ ಎಂದು ಅವರು ಹೇಳಿದ್ದಾರೆ.

56
ಮಕ್ಕಳಿಗಾಗಿ ಸಮಯ ಕಾಯ್ದಿರಿಸುವ ಬಗ್ಗೆ ಮಧು ಚೋಪ್ರಾ ಮಾತು

ಒತ್ತಡದ ನಡುವೆಯೂ ತಾವು ಮಕ್ಕಳಿಗಾಗಿ ಸಮಯವನ್ನು ಕಾಯ್ದಿರಿಸಿದ ಬಗ್ಗೆ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದಾರೆ. ನಾನು ಅವರೊಂದಿಗೆ ಇದ್ದಾಗ, ಅದು 100 ಪ್ರತಿಶತ ಮಕ್ಕಳ ಸಮಯವಾಗಿತ್ತು. ಅದು ನಿಜವಾಗಿಯೂ ಒಳ್ಳೆಯದಾಗಿತ್ತು. ನೀವು ಏನನ್ನಾದರೂ ಸಾಧಿಸಲು ಬಯಸಿದರೆ ನೀವು ಕಷ್ಟಪಟ್ಟು ಕೆಲಸ ಮಾಡಬೇಕು ಮತ್ತು ನಿಮಗಾಗಿ, ನಿಮ್ಮ ಕುಟುಂಬಕ್ಕೆ ಮತ್ತು ನಿಮ್ಮ ಜೀವನಕ್ಕೆ ಸಮಯವನ್ನು ನೀಡಬೇಕು ಎಂಬ ಕೆಲಸದ ನೀತಿಯನ್ನು ಅವರು ಕೂಡ ಹೇಗೆ ಅಳವಡಿಸಿಕೊಳ್ಳಬಹುದು ಎಂದು ನಾನು ಭಾವಿಸಿದ್ದೆ ಎಂದು ಮಧು ಚೋಪ್ರಾ ಹೇಳಿದರು.

66
ಇಬ್ಬರು ಮಕ್ಕಳ ದಿನಚರಿಯ ಬಗ್ಗೆ ಮಧು ಚೋಪ್ರಾ ಹೇಳಿದ್ದಿಷ್ಟು!

ಮಧು ತನ್ನ ಇಬ್ಬರು ಮಕ್ಕಳ ಕೆಲಸದ ವಿಧಾನ ಮತ್ತು ದಿನಚರಿಯ ಬಗ್ಗೆ ಮಾತನಾಡುತ್ತಾ ಇಬ್ಬರ ನಡುವಿನ ವ್ಯತ್ಯಾಸದ ಬಗ್ಗೆ ಹೇಳಿದ್ದಾರೆ. ಪ್ರಿಯಾಂಕಾಗೆ ಶಿಸ್ತಿನ ಮನಸ್ಥಿತಿ ಅನುವಂಶಿಕವಾಗಿ ಬಂದಿದೆ. ನಾನು ಬೇಗನೆ ಎದ್ದೇಳುವವಳು. ನಾನು ಬೆಳಿಗ್ಗೆ 5:30 ಕ್ಕೆ ಏಳುತ್ತೇನೆ ಹಾಗೂ ನನ್ನ ದಿನವನ್ನು ಆರಂಭಿಸುತ್ತೇನೆ ಆದರೆ ನನ್ನ ಮಗ ಅಷ್ಟು ಬೇಗ ಏಳುವವನಲ್ಲ, ಅವನು ಬೆಳಗ್ಗೆ 8.30ಕ್ಕೆ ಏಳುತ್ತಾನೆ. ಆದರೆ ಪ್ರಿಯಾಂಕಾ ಹಾಗಲ್ಲ, ಕೆಲಸವಿದೆ ಎಂದಾದರೆ ಆಕೆ ಬೆಳಗ್ಗೆ 4 ಗಂಟೆಗೂ ಏಳುತ್ತಾಳೆ ಎಂದು ಮಧು ಚೋಪ್ರಾ ಹೇಳಿದ್ದಾರೆ. ಪ್ರಿಯಾಂಕಾ ಚೋಪ್ರಾ ವೈಯಕ್ತಿಕ ಬದುಕಿನ ಬಗ್ಗೆ ಹೇಳುವುದಾದರೆ ಅವರು ನಿಕ್ ಜೋನಾಸ್ ಅವರನ್ನು ಮದುವೆಯಾಗಿ ಒಬ್ಬ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಹೆಚ್ಚಾಗಿ ವಿದೇಶದಲ್ಲೇ ವಾಸ ಮಾಡುವ ಪ್ರಿಯಾಂಕಾ ಅವರು ಎಸ್ ಎಸ್ ರಾಜಮೌಳಿ ಅವರ ವಾರಣಾಸಿ ಸಿನಿಮಾದ ಶೂಟಿಂಗ್‌ಗಾಗಿ ಭಾರತಕ್ಕೆ ಬಂದು ಹೋಗ್ತಿರ್ತಾರೆ. ಈ ಸಿನಿಮಾದಲ್ಲಿ ಮಹೇಶ್ ಬಾಬು ಜೊತೆ ಪ್ರಿಯಾಂಕಾ ಚೋಪ್ರಾ ನಟಿಸುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories