ಅಮ್ಮಂದಿರ ದಿನಕ್ಕೆ ಮಗನನ್ನು ಕೂಸುಮರಿ ಮಾಡಿಕೊಂಡ ಲಕ್ಷ್ಮೀ ಬಾರಮ್ಮ ಕವಿತಾ: ಕ್ಯೂಟ್​ ಫೋಟೋ ವೈರಲ್​

Published : May 11, 2026, 10:15 PM IST

ಲಕ್ಷ್ಮೀ ಬಾರಮ್ಮ ಖ್ಯಾತಿಯ ನಟಿ ಕವಿತಾ ಗೌಡ ಅವರು ವಿಶ್ವ ಅಮ್ಮಂದಿರ ದಿನದಂದು ತಮ್ಮ ಮಗನೊಂದಿಗೆ ವಿಶೇಷವಾಗಿ ಸಂಭ್ರಮಿಸಿದ್ದಾರೆ. ಪತಿ ಚಂದನ್ ಗೌಡ ಅವರು ಹಂಚಿಕೊಂಡಿರುವ ಫೋಟೋದಲ್ಲಿ, ಕವಿತಾ ತಮ್ಮ ಮಗನನ್ನು ಬೆನ್ನ ಮೇಲೆ ಕೂರಿಸಿಕೊಂಡಿದ್ದು, ಈ ಫೋಟೋಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

PREV
16
ವಿಶ್ವ ಅಮ್ಮಂದಿರ ದಿನ

ನಿನ್ನೆಯಷ್ಟೇ ವಿಶ್ವಾದ್ಯಂತ ಅಮ್ಮಂದಿರ ದಿನವನ್ನು ಆಚರಿಸಲಾಯಿತು. ಧಾವಂತದ ಬದುಕಿನಲ್ಲಿ ಕಳೆದುಹೋಗಿರುವ ಅಮ್ಮ-ಮಕ್ಕಳ ಸಂಬಂಧವನ್ನು ನೆನಪಿಸುವ ಸಲುವಾಗಿ ಈ ದಿನವನ್ನು ಆಚರಿಸುತ್ತಾ ಬರಲಾಗಿದೆ. ಅದೇ ರೀತಿ ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಕೂಡ ಅಮ್ಮನ ದಿನವನ್ನು ಆಚರಿಸಿದ್ದಾರೆ.

26
ಮಗನ ಕೂಸುಮರಿ

ನಟಿ ಕವಿತಾ ಗೌಡ ತಮ್ಮ ಮಗನ ಜೊತೆಗಿರುವ ಕ್ಯೂಟ್​ ಫೋಟೋ ಅನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನು ಅವರ ಪತಿ, ನಟ, ಚಂದನ್​ ಗೌಡ ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

36
ಲಾಕ್​ಡೌನ್​ನಲ್ಲಿ ಮದುವೆ

ಈ ಜೋಡಿ ಮೇ 14, 2021 ರಂದು ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾದರು. ಕೋವಿಡ್ ಲಾಕ್‌ಡೌನ್ ನಿರ್ಬಂಧಗಳ ಕಾರಣ, ಈ ಜೋಡಿ ನಿಕಟವರ್ತಿಗಳ ಸಮ್ಮುಖದಲ್ಲಿ Lakshmi Baramma ಧಾರಾವಾಹಿ ಖ್ಯಾತಿಯ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು

46
2024ರಲ್ಲಿ ಮಗು ಜನನ

2024ರಲ್ಲಿ ಜೋಡಿ ಗಂಡು ಮಗುವನ್ನು ಸ್ವಾಗತಿಸಿದೆ. ಕವಿತಾ ಅವರಿಗೆ ಹೆಣ್ಣು ಮಗು ಇಲ್ಲವೇ ಅವಳಿ ಮಕ್ಕಳಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿ ಕವಿತಾಗೆ ಗಂಡು ಮಗುವಾಗಿದೆ. ಮಗನಿಗೆ ಈಗ ಒಂದೂವರೆ ವರ್ಷ ವಯಸ್ಸು.

56
ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟೀವ್​

ಸದ್ಯ ಜೋಡಿ ಸೋಷಿಯಲ್​​ ಮೀಡಿಯಾದಲ್ಲಿ ಸಕತ್​ ಆ್ಯಕ್ಟೀವ್​. ಮಗುವಿನ ಆರೈಕೆಗಾಗಿ ಕವಿತಾ ಸದ್ಯ ಬಣ್ಣದ ಲೋಕದಿಂದ ದೂರ ಇದ್ದರೂ ದಂಪತಿ ಸೋಷಿಯಲ್​ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋ ಪೋಸ್ಟ್​ ಮಾಡುತ್ತಲೇ ಇರುತ್ತಾರೆ.

66
ಶುಭಾಶಯಗಳ ಸುರಿಮಳೆ

ಅದೇ ರೀತಿ ಈಗ ಬೆನ್ನ ಮೇಲೆ ಮಗನನ್ನು ಕೂಸುಮರಿ ಮಾಡಿಕೊಂಡಿರುವ ಕವಿತಾ ಗೌಡ ಅವರ ಫೋಟೋಗೆ ಅಭಿಮಾನಿಗಳು ಶುಭಾಶಯಗಳ ಸುರಿಮಳೆಯನ್ನೇಗೈಯುತ್ತಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories