ವಿಶ್ವ ಅಮ್ಮಂದಿರ ದಿನದಂದು 'ಕರ್ಣ' ಸೀರಿಯಲ್ ಖ್ಯಾತಿಯ ನಟ ಕಿರಣ್ ರಾಜ್ ತಮ್ಮ ತಾಯಿಗೆ ಮಹೀಂದ್ರಾ ಥಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ನಿಜ ಜೀವನದಲ್ಲಿಯೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ಅವರು, ತಮ್ಮ ಆದಾಯದ ಒಂದು ಭಾಗವನ್ನು ಅನಾಥರಿಗೆ ಸಹಾಯ ಮಾಡಲು ಮೀಸಲಿಟ್ಟಿದ್ದಾರೆ.
ಇಂದು ಅರ್ಥಾತ್ ಮೇ 10, ವಿಶ್ವ ಅಮ್ಮಂದಿರ ದಿನ. ಪ್ರತಿ ದಿನವೂ ಅಮ್ಮನ ದಿನವೇ ಆಗಿದ್ದರೂ, ಈ ಧಾವಂತದ ಬದುಕಿನಲ್ಲಿ ಅಮ್ಮನ ಬಗ್ಗೆ ಕಾಳಜಿ ತೋರುವುದನ್ನೇ ಮರೆಯುತ್ತಾರೆ, ಅಮ್ಮನಿಗಾಗಿ ಒಂದಿಷ್ಟು ಕ್ಷಣ ಮೀಸಲು ಇಡುವುದನ್ನೇ ಮರೆಯುವುದು ಇದೆ. ಅದೇ ಕಾರಣಕ್ಕೆ ಅಮ್ಮನ ದಿನ ಆಚರಿಸಲಾಗುತ್ತಿದೆ.
26
ಅಮ್ಮನಿಗೆ ಕರ್ಣನ ಭರ್ಜರಿ ಗಿಫ್ಟ್
ಅಮ್ಮನ ದಿನದ ಅಂಗವಾಗಿ ಕರ್ಣ ಸೀರಿಯಲ್ ಖ್ಯಾತಿಯ ಕರ್ಣ ಉರ್ಫ್ ಕಿರಣ್ ರಾಜ್ ಅವರು, ಅಮ್ಮನಿಗೆ ಭರ್ಜರಿ ಗಿಫ್ಟ್ ನೀಡಿದ್ದಾರೆ. ಅಮ್ಮನಿಗೆ ಕೇಕ್ ತಿನ್ನಿಸಿ ವಿಷ್ ಮಾಡಿರುವ ನಟ, ಮಹೀಂದ್ರಾ ಥಾರ್ ಅನ್ನು ಗಿಫ್ಟ್ ಆಗಿ ನೀಡಿದ್ದು, ಅದರ ವಿಡಿಯೋ ಶೇರ್ ಮಾಡಿದ್ದಾರೆ.
36
ನಟನ ಕುರಿತು ಹೇಳುವುದಾದರೆ...
ಇನ್ನು ಕಿರಣ್ ರಾಜ್ ಅವರ ಕುರಿತು ಹೇಳುವುದಾದರೆ, ಕಿರಣ್ ರಾಜ್ ಎಂದರೆ ಬಹಳಷ್ಟು ಮಂದಿಗೆ ತಿಳಿಯದೇ ಹೋಗಬಹುದು. ಆದರೆ ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ (Karna Serial) ಕರ್ಣ ಎಂದರೆ ಸಾಕು, ಅಗತ್ಯಕ್ಕಿಂತ ಹೆಚ್ಚು ಒಳ್ಳೆಯವನಾಗಿರುವ ನಾಯಕ ಕಣ್ಮುಂದೆ ಬರುತ್ತಾರೆ. ಈ ಹ್ಯಾಂಡ್ಸಮ್ ಯುವಕನೇ ಕಿರಣ್ ರಾಜ್ (Kiran Raj). TRP King ಎಂದೇ ಫೇಮಸ್ ಆಗಿದ್ದಾರೆ ಕಿರಣ್ ರಾಜ್.
ಅಷ್ಟಕ್ಕೂ ಕಿರಣ್ ರಾಜ್ ಅವರು ನಿಜ ಜೀವನದಲ್ಲಿಯೂ ಕರ್ಣನೇ. ಅನಾಥ ಮಕ್ಕಳಿಗೆ ನೆರವು ನೀಡುವ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡವರು ಕಿರಣ್ ರಾಜ್ (Karna urf Kiran Raj). ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ.
56
ಜನರಿಗೆ ಸಹಾಯ
ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.
66
ನಟನ ಹಿನ್ನೆಲೆ
ಮೈಸೂರಿನರಾದ ಕಿರಣ್ ಹುಟ್ಟಿ ಬೆಳೆದಿದ್ದೆಲ್ಲಾ ಉತ್ತರ ಭಾರತದಲ್ಲಿ. ಲವ್ ಬೈ ಚಾನ್ಸ್, ಯೇ ರಿಸ್ತಾ ಕ್ಯಾ ಕೆಹಲಾತಾ ಹೈ, ಹೀರೋಸ್, ಕನೆಕ್ಷನ್ ಆಫ್ ಟೀನೇಜರ್ಸ್ ಧಾರಾವಾಹಿಗಳಲ್ಲಿ ನಟಿಸಿದರು. ದೇವತಿ ಸೀರಿಯಲ್ ಮೂಲಕ ಸೀರಿಯಲ್ಗೆ ಎಂಟ್ರಿ ಕೊಟ್ಟ ಇವರು, ಗುಂಡ್ಯಾನ್ ಹೆಂಡ್ತಿ, ಚಂದ್ರಮುಖಿ, ಕಿನ್ನರಿ, ಕನ್ನಡತಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕನ್ನಡತಿ ಧಾರಾವಾಹಿಯಲ್ಲಿನ ಅಭಿನಯಕ್ಕಾಗಿ ಜನಮೆಚ್ಚಿದ ನಾಯಕ ಪ್ರಶಸ್ತಿ ಪಡೆದಿದ್ದಾರೆ. ಡ್ಯಾನ್ಸ್ ಡ್ಯಾನ್ಸ್ ಹಾಗೂ ಲೈಫ್ ಸೂಪರ್ ಗುರು, ಬಿಗ್‌ಬಾಸ್ ರಿಯಾಲಿಟಿ ಶೋಗಳಲ್ಲಿಯೂ ಭಾಗವಹಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.