'ಲಕ್ಷ್ಮೀ ಬಾರಮ್ಮ' ಖ್ಯಾತಿಯ ನಟಿ ಕವಿತಾ ಗೌಡ, ತಮ್ಮ ಪತಿ ಚಂದನ್ ಗೌಡಗೆ ಎರಡನೇ ಮದುವೆಯ ಆಫರ್ ನೀಡಿದ ತಮಾಷೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋಗೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ.
ಲಕ್ಷ್ಮೀ ಬಾರಮ್ಮ ಖ್ಯಾತಿಯ ಕವಿತಾ ಗೌಡ ಹಾಗೂ ನಟ ಚಂದನ್ ಗೌಡ ಮೇ 14, 2021 ರಂದು ಬೆಂಗಳೂರಿನಲ್ಲಿ ಸರಳವಾಗಿ ವಿವಾಹವಾದರು. ಕೋವಿಡ್ ಲಾಕ್‌ಡೌನ್ ನಿರ್ಬಂಧಗಳ ಕಾರಣ, ಈ ಜೋಡಿ ನಿಕಟವರ್ತಿಗಳ ಸಮ್ಮುಖದಲ್ಲಿ Lakshmi Baramma ಧಾರಾವಾಹಿ ಖ್ಯಾತಿಯ ದಂಪತಿ ಹೊಸ ಜೀವನಕ್ಕೆ ಕಾಲಿಟ್ಟರು
26
ಗಂಡು ಮಗು ಜನನ
2024ರಲ್ಲಿ ಜೋಡಿ ಗಂಡು ಮಗುವನ್ನು ಸ್ವಾಗತಿಸಿದೆ. ಕವಿತಾ ಅವರಿಗೆ ಹೆಣ್ಣು ಮಗು ಇಲ್ಲವೇ ಅವಳಿ ಮಕ್ಕಳಾಗಲಿದೆ ಎಂದು ಹಲವರು ಭವಿಷ್ಯ ನುಡಿದಿದ್ದರು. ಆದರೆ ಅವೆಲ್ಲವೂ ಸುಳ್ಳಾಗಿ ಕವಿತಾಗೆ ಗಂಡು ಮಗುವಾಗಿದೆ. ಮಗನಿಗೆ ಈಗ ಒಂದೂವರೆ ವರ್ಷ ವಯಸ್ಸು.
36
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್
ಸದ್ಯ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್. ಮಗುವಿನ ಆರೈಕೆಗಾಗಿ ಕವಿತಾ ಸದ್ಯ ಬಣ್ಣದ ಲೋಕದಿಂದ ದೂರ ಇದ್ದರೂ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹೊಸ ಹೊಸ ವಿಡಿಯೋ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಇದೀಗ ಕವಿತಾ, ತಮ್ಮ ಪತಿಗೆ ಎರಡನೆಯ ಮದುವೆಯ ಆಫರ್ ಕೊಟ್ಟಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಡಿಯರ್ ಹಸ್ಬೆಂಡ್ ನಿಮಗೊಂದು ಅಫರ್ ಕೊಡುತ್ತಿದ್ದೇನೆ ಎಂದು ಚೀಟಿಯಲ್ಲಿ ಅವರು ಬರೆದಿದ್ದಾರೆ.
56
ನಗಬೇಕು
ಈ ವಿಡಿಯೋದಲ್ಲಿ ‘ಎರಡನೇ ಪತ್ನಿ ಬೇಕು ಅಂತಾದ್ರೆ ನಗಬೇಕು’ ಎಂದು ಬರೆಯಲಾಗಿದೆ. ಆಗ ನಗು ತಡೆದುಕೊಳ್ಳಲು ಆಗದ ಚಂದನ್, ‘ಒಂದನ್ನೇ ತಡೆದುಕೊಳ್ಳೋಕೆ ಆಗ್ತಿಲ್ಲ, ಇನ್ನೊಂದಾ, ಬೇಡಪ್ಪಾ ಬೇಡ ಎಂದಿದ್ದಾರೆ.
66
ಮತ್ತೊಂದರ ಮೇಲೆ ಆಸೆ
ಎರಡನೆಯ ಪತ್ನಿ ಬೇಡ ಎಂದರೂ ನಕ್ಕಿರುವ ಕಾರಣ, ಅವರಿಗೆ ಮತ್ತೊಂದು ಮದುವೆಯಾಗುವ ಆಸೆ ಇದೆ. ಪತ್ನಿ ಭಯಕ್ಕೆ ಬೇಡ ಅಂತಿದ್ದಾರೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಕೆಲವರು ಸೀರಿಯಲ್ ಆಗಿದ್ದು, ತಮಾಷೆಗೂ ಹೀಗೆಲ್ಲಾ ಮಾತನಾಡಬೇಡಿ.ಕೆಲವೊಮ್ಮೆ ಮಾತನಾಡಿದ್ದೇ ಏನೋ ಆಗಿಬಿಡುತ್ತದೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.