ದಕ್ಷಿಣ ಭಾರತದ ಈ ನಗರದಲ್ಲಿ ಜೋರಾಗಿದೆ 'ರಹಸ್ಯ ಡೇಟಿಂಗ್'; ಜಾಗತಿಕ ಮಟ್ಟದಲ್ಲೂ ದೇಶಕ್ಕೆ ಈಗ 3ನೇ ಸ್ಥಾನ!

Published : Jun 21, 2026, 03:35 PM IST

Extramarital relationships India tier 2 cities: ಮದುವೆಯ ನಂತರ ರಹಸ್ಯ ಸಂಬಂಧ ಹೊಂದಲು ಇರುವ ಜಾಗತಿಕ ಡೇಟಿಂಗ್ ಆಪ್‌ನಲ್ಲಿ ಅತಿ ಹೆಚ್ಚು ಜನರು ನೋಂದಾಯಿಸಿಕೊಳ್ಳುವ ಮೂಲಕ ಈ ನಗರ ಇಡೀ ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಹಾಗಾದರೆ ಆ ನಗರ ಯಾವುದು? 

PREV
17
ಬದಲಾಗುತ್ತಿವೆ ಭಾರತೀಯರ ಆಲೋಚನೆಗಳು

ಬದಲಾಗುತ್ತಿವೆ ಭಾರತೀಯರ ಆಲೋಚನೆಗಳು
ರೇಷ್ಮೆ ಮತ್ತು ದೇವಸ್ಥಾನಗಳಿಗೆ ಹೆಸರಾದ ಕಾಂಚೀಪುರಂ ಈಗ ಭಾರತದ 'ರಹಸ್ಯ ಸಂಬಂಧ' (Extramarital relationship) ಪಟ್ಟಿಯಲ್ಲಿ ಮುಂಚೂಣಿಗೆ ಬಂದಿದೆ! ಹೌದು, ಮದುವೆ ಮತ್ತು ಸಂಬಂಧಗಳ ಕುರಿತು ಭಾರತೀಯರ ಆಲೋಚನೆಗಳು ಹೇಗೆ ಬದಲಾಗುತ್ತಿವೆ ಎಂಬುದಕ್ಕೆ ಈ ಸಾಂಪ್ರದಾಯಿಕ ನಗರವೇ ಸಾಕ್ಷಿ. ರಹಸ್ಯ ಡೇಟಿಂಗ್‌ಗಾಗಿ ಇರುವ 'ಆಶ್ಲೇ ಮ್ಯಾಡಿಸನ್' ಆಪ್ ಬಳಕೆಯಲ್ಲಿ ಕಾಂಚೀಪುರಂ ಇಡೀ ಭಾರತದಲ್ಲೇ ನಂಬರ್ ಒನ್ ಸ್ಥಾನದಲ್ಲಿದ್ದು, ಭಾರತೀಯರ ಬದಲಾಗುತ್ತಿರುವ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಹಾಗಾದರೆ ಎರಡನೇ ಸ್ಥಾನದಲ್ಲಿರುವ ನಗರ ಯಾವುದು? ಸಮೀಕ್ಷೆ ಹೇಳುವುದೇನು? ಸಂಪೂರ್ಣ ಮಾಹಿತಿ ಇಲ್ಲಿದೆ.

27
ಸತತ ಎರಡನೇ ಬಾರಿಗೆ ಅಗ್ರಸ್ಥಾನ

ಸತತ ಎರಡನೇ ಬಾರಿಗೆ ಅಗ್ರಸ್ಥಾನ
ಆಶ್ಲೇ ಮ್ಯಾಡಿಸನ್ ಸಂಸ್ಥೆ ಬಿಡುಗಡೆ ಮಾಡಿರುವ ಮೇ 2026ರ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಕಾಂಚೀಪುರಂ ನಗರದಿಂದಲೇ ಅತಿ ಹೆಚ್ಚು ಜನರು ಈ ಆಪ್‌ಗೆ ಸೈನ್-ಅಪ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಕಾಂಚೀಪುರಂ ಮೊದಲ ಸ್ಥಾನ ಪಡೆಯುತ್ತಿರುವುದು ಇದು ಸತತ ಎರಡನೇ ಬಾರಿಯಾಗಿದೆ. ಕಳೆದ ವರ್ಷದ ಬೇಸಿಗೆಯಲ್ಲೂ ಸಹ ಈ ನಗರವೇ ಮೊದಲ ಸ್ಥಾನದಲ್ಲಿತ್ತು.

37
ದಕ್ಷಿಣ ಭಾರತದ ನಗರಗಳೇ ಮುಂಚೂಣಿಯಲ್ಲಿವೆ

ದಕ್ಷಿಣ ಭಾರತದ ನಗರಗಳೇ ಮುಂಚೂಣಿಯಲ್ಲಿವೆ
ಈ ವರ್ಷದ ಪಟ್ಟಿಯಲ್ಲಿ ಕಾಂಚೀಪುರಂ ನಂತರದ ಸ್ಥಾನಗಳಲ್ಲಿ ಕೊಯಮತ್ತೂರು, ತಿರುವಳ್ಳೂರು ಮತ್ತು ಚೆನ್ನೈ ನಗರಗಳಿದ್ದು, ಈ ಡೇಟಿಂಗ್ ಆಪ್ ಬಳಕೆಯಲ್ಲಿ ದಕ್ಷಿಣ ಭಾರತದ ನಗರಗಳೇ ಮುಂಚೂಣಿಯಲ್ಲಿರುವುದು ಎದ್ದು ಕಾಣುತ್ತಿದೆ. 

47
ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ

ಜಾಗತಿಕ ಮಟ್ಟದಲ್ಲಿ ಭಾರತಕ್ಕೆ 3ನೇ ಸ್ಥಾನ
ಮತ್ತೊಂದು ಪ್ರಮುಖ ವಿಷಯವೆಂದರೆ, ಈ ಆಪ್ ಬಳಸುವ ವಿಶ್ವದ 20 ದೇಶಗಳ ಪಟ್ಟಿಯಲ್ಲಿ ಭಾರತವು ಈಗ 3ನೇ ಸ್ಥಾನಕ್ಕೆ ಜಿಗಿದಿದೆ. ಕಳೆದ ವರ್ಷ ಭಾರತವು 8ನೇ ಸ್ಥಾನದಲ್ಲಿತ್ತು.

ಭಾರತೀಯರಲ್ಲಿ ಇಂತಹ ರಹಸ್ಯ ಡೇಟಿಂಗ್ ಮೇಲಿನ ಆಸಕ್ತಿ ಹೆಚ್ಚುತ್ತಿರುವುದಕ್ಕೆ ಇದು ಮಾತ್ರ ಸಾಕ್ಷಿಯಲ್ಲ. ಇದೇ ವರ್ಷದ ಆರಂಭದಲ್ಲಿ, ಮದುವೆಯಾಚೆಗಿನ ಸಂಬಂಧಗಳಿಗಾಗಿಯೇ ಇರುವ ಮತ್ತೊಂದು ಪ್ರಸಿದ್ಧ ಡೇಟಿಂಗ್ ಆಪ್ 'ಗ್ಲೀಡನ್' (Gleeden), ಭಾರತದಲ್ಲಿ ತನ್ನ ಚಂದಾದಾರರ (Subscribers) ಸಂಖ್ಯೆ 40 ಲಕ್ಷ ದಾಟಿದೆ ಎಂದು ಘೋಷಿಸಿತ್ತು.

57
ಬದಲಾಗುತ್ತಿರುವ ಭಾರತೀಯರ ಮನಸ್ಥಿತಿ

ಬದಲಾಗುತ್ತಿರುವ ಭಾರತೀಯರ ಮನಸ್ಥಿತಿ
ಈ ಅಂಕಿ-ಅಂಶಗಳು ಭಾರತದಲ್ಲಿ ಮದುವೆ ಮತ್ತು ಸಂಬಂಧಗಳ ಬಗ್ಗೆ ಜನರ ದೃಷ್ಟಿಕೋನ ಬದಲಾಗುತ್ತಿರುವುದನ್ನು ತೋರಿಸುತ್ತವೆ. ವಿಶೇಷವೆಂದರೆ ಈ ಬದಲಾವಣೆ ಕೇವಲ ದೊಡ್ಡ ಮೆಟ್ರೋ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ.

"ಜಾಗತಿಕವಾಗಿ ಭಾರತವು 8ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಏರಿರುವುದು, ಇಲ್ಲಿನ ವಯಸ್ಕರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಗೌಪ್ಯತೆಗೆ ನೀಡುತ್ತಿರುವ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಕೇವಲ ಮೆಟ್ರೋ ನಗರಗಳಷ್ಟೇ ಅಲ್ಲದೆ, ಬೇರೆ ಬೇರೆ ಪ್ರದೇಶಗಳ ನಗರಗಳೂ ಇದರಲ್ಲಿ ಭಾಗಿಯಾಗುತ್ತಿರುವುದು ಕುತೂಹಲಕಾರಿಯಾಗಿದೆ" ಎಂದು ಆಶ್ಲೇ ಮ್ಯಾಡಿಸನ್ ಸಂಸ್ಥೆಯ ಮುಖ್ಯ ಕಾರ್ಯತಂತ್ರ ಅಧಿಕಾರಿ ಪಾಲ್ ಕೀಬಲ್ ಹೇಳಿದ್ದಾರೆ.

67
ಸಮೀಕ್ಷೆ ಏನು ಹೇಳುತ್ತದೆ?

ಸಮೀಕ್ಷೆ ಏನು ಹೇಳುತ್ತದೆ?
2024 ರಲ್ಲಿ 'ಗ್ಲೀಡನ್' ಸಂಸ್ಥೆಯು ಭಾರತದ ಪ್ರಮುಖ ನಗರಗಳಲ್ಲಿ 25 ರಿಂದ 50 ವರ್ಷದೊಳಗಿನ 1,503 ವಿವಾಹಿತ ಭಾರತೀಯರನ್ನು ಸಮೀಕ್ಷೆ ನಡೆಸಿತ್ತು. ಈ ಅಧ್ಯಯನದಲ್ಲಿ ಶೇಕಡ 60 ಕ್ಕಿಂತ ಹೆಚ್ಚು ಜನರು ಸಾಂಪ್ರದಾಯಿಕವಲ್ಲದ ಮುಕ್ತ ಸಂಬಂಧಗಳಿಗೆ (Non-traditional relationships) ಒಲವು ತೋರಿದ್ದಾರೆ. ಇದರಲ್ಲಿ ಪರಸ್ಪರ ಒಪ್ಪಿಗೆಯಿಂದ ಇತರರೊಂದಿಗೆ ಲೈಂಗಿಕ ಅನುಭವ ಹಂಚಿಕೊಳ್ಳುವ 'ಸ್ವಿಂಗಿಂಗ್' (Swinging) ಪ್ರವೃತ್ತಿಯೂ ಸೇರಿದೆ.

77
ಕಾಂಚೀಪುರಂ ಮೊದಲ ಸ್ಥಾನದಲ್ಲಿರಲು ಕಾರಣವೇನು?

ಕಾಂಚೀಪುರಂ ಮೊದಲ ಸ್ಥಾನದಲ್ಲಿರಲು ಕಾರಣವೇನು?
ದೊಡ್ಡ ಮೆಟ್ರೋ ನಗರಗಳಲ್ಲಿ ಇಂತಹ ಆಪ್‌ಗಳ ಬಳಕೆ ಸಾಮಾನ್ಯ ಎನಿಸಿದರೂ, ಸಂಪ್ರದಾಯ ಹಾಗೂ ಧಾರ್ಮಿಕತೆಗೆ ಹೆಸರಾದ ಕಾಂಚೀಪುರಂ ಮೊದಲ ಸ್ಥಾನದಲ್ಲಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಆದರೆ ಸಂಬಂಧಗಳ ತಜ್ಞರಾದ (Relationship expert) ರುಚಿ ರೂಹ್ ಅವರ ಪ್ರಕಾರ, ಇದಕ್ಕೊಂದು ಕಾರಣವಿದೆ.

"ಕಾಂಚೀಪುರಂನಂತಹ ಸಾಂಪ್ರದಾಯಿಕ ಮತ್ತು ಶ್ರೀಮಂತ ಸಮುದಾಯಗಳಲ್ಲಿ ಜನರು ತಮ್ಮ ರಹಸ್ಯಗಳನ್ನು ಗೌಪ್ಯವಾಗಿಡಲು ಬಯಸುತ್ತಾರೆ. ಇಂತಹ ಆಪ್‌ಗಳು ಅವರಿಗೆ ಗುರುತು ಸಿಗದಂತೆ ಗೌಪ್ಯತೆಯನ್ನು ನೀಡುತ್ತವೆ" ಎನ್ನುತ್ತಾರೆ ಅವರು. ಇದರೊಂದಿಗೆ, ತಂತ್ರಜ್ಞಾನದ ಬೆಳವಣಿಗೆ ಹಾಗೂ ಇಂತಹ ಆಪ್‌ಗಳ ಬಳಕೆಯಲ್ಲಿ ಸದಾ ಮುಂದಿರುವ ಚೆನ್ನೈ ನಗರಕ್ಕೆ ಕಾಂಚೀಪುರಂ ಹತ್ತಿರದಲ್ಲಿರುವುದು ಸಹ ಒಂದು ಪ್ರಮುಖ ಕಾರಣವಾಗಿರಬಹುದು. 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories