'ಭಾಗ್ಯಲಕ್ಷ್ಮಿ' ಸೀರಿಯಲ್ ಖ್ಯಾತಿಯ ನಟಿ ಸುಷ್ಮಾ ಕೆ. ರಾವ್ ಅವರು ತಮ್ಮ ಪತಿ ಮಧುಕರ್ ಆದಿಮೂರ್ತಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ನಟನಾ ವೃತ್ತಿಜೀವನದ ಪುನರಾಗಮನಕ್ಕೆ ಪತಿಯೇ ಕಾರಣ, ಅವರು ನನ್ನ ಪಾಲಿನ ಏಂಜಲ್ ಎಂದು ಸುಷ್ಮಾ ತಮ್ಮ ಯಶಸ್ಸಿನ ಹಿಂದಿನ ಶಕ್ತಿಯನ್ನು ಬಹಿರಂಗಪಡಿಸಿದ್ದಾರೆ.
ನಟಿ ಸುಷ್ಮಾಕೆ. ರಾವ್ (Sushma K.Rao) ಎಂದರೆ ಬಹುತೇಕ ಮಂದಿಗೆ ತಿಳಿಯಲಿಕ್ಕಿಲ್ಲ. ಆದರೆ ಭಾಗ್ಯಲಕ್ಷ್ಮಿ ಸೀರಿಯಲ್ ಭಾಗ್ಯ ಎಂದಾಕ್ಷಣ ಲಕ್ಷಾಂತರ ಸೀರಿಯಲ್ ಪ್ರಿಯರ ಅದರಲ್ಲಿಯೂ ಮಹಿಳೆಯರ ಕಿವಿ ಚುರುಕಾಗುತ್ತದೆ. ಭಾಗ್ಯ ಪಾತ್ರದ ಮೂಲಕ ನಾಲ್ಕು ವರ್ಷ ಎಲ್ಲರ ಮನಸ್ಸಿಗೆ ಹತ್ತಿರವಾಗಿ, ಇದ್ದರೆ ಮಹಿಳೆ ಹೀಗೆ ಇರಬೇಕು ಎಂದು ತೋರಿಸಿಕೊಟ್ಟವರು ನಟಿ ಸುಷ್ಮಾಕೆ. ರಾವ್.
26
10 ವರ್ಷಗಳ ಗ್ಯಾಪ್
ಸುಮಾರು ಹತ್ತು ವರ್ಷಗಳ ಗ್ಯಾಪ್ ತೆಗೆದುಕೊಂಡು ಬಳಿಕ ಭಾಗ್ಯಲಕ್ಷ್ಮಿ (Bhagyalkashmi Serial) ಮೂಲಕ ಕಾಣಿಸಿಕೊಂಡರು ನಟಿ. ಮೊದಲ ಮದುವೆಯಿಂದ ಉಂಟಾಗಿರುವ ನೋವಿನ ಬಳಿಕ ಸುಷ್ಮಾ ಅವರು ಬಣ್ಣದ ಲೋಕಕ್ಕೆ ವಿದಾಯ ಹೇಳಿದ್ರು ಎಂದೇ ಅಂದುಕೊಂಡವರು ಎಲ್ಲಾ. ಬಳಿಕ ಮತ್ತೊಂದು ಮದುವೆಯಾಗಿದ್ದು ಹಾಗೂ ಅವರಿಗೆ ಕ್ಯೂಟ್ ಮಗ ಇದದ್ದು ತಿಳಿದದ್ದು ರಿಯಾಲಿಟಿ ಷೋ ಒಂದರಲ್ಲಿ.
36
ಪತಿಯ ಪರಿಚಯ
ಅಲ್ಲಿಯವರೆಗೂ ನಟಿಯ ಪರ್ಸನಲ್ ಲೈಫ್ ಬಗ್ಗೆ ತಲೆಕೆಡಿಸಿಕೊಳ್ಳದವರು ದಿಢೀರ್ ಎಂದು ಮಾತನಾಡಿದ್ದು ಇದೆ. ಆದರೆ ಪತಿಯ ಬಗ್ಗೆ ಎಂದಿಗೂ ಎಲ್ಲಿಯೂ ಅಷ್ಟೊಂದು ಮಾತನಾಡದಿದ್ದ ನಟಿ ಸುಷ್ಮಾ ಅವರು ಇದೀಗ ಮಾಧ್ಯಮ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಹಲವಾರು ವಿಷಯಗಳನ್ನು ಮಾತನಾಡಿದ್ದು, ಅದರಲ್ಲಿ ಪತಿಯ ಬಗ್ಗೆಯೂ ರಿವೀಲ್ ಮಾಡಿದ್ದಾರೆ.
ನನ್ನ ಪತಿ (ಮಧುಕರ್ ಆದಿಮೂರ್ತಿ) ನನಗೆ ದೇವರು, ಅವನು ಏಂಜಲ್ ಇದ್ದಂತೆ ಎಂದು ಹೊಗಳಿದ್ದಾರೆ ಸುಷ್ಮಾ. ಇದು ಬರಿಯ ಹೊಗಳಿಕೆ ಅಲ್ಲ. ಅದು ಮನದಾಳದ ಮಾತು ಕೂಡ. ನಾಲ್ಕು ಜನರ ಎದುರು ಚಿನ್ನ, ರನ್ನ ಎಂದು ಹೇಳುವುದು, ಸೋಷಿಯಲ್ ಮೀಡಿಯಾದಲ್ಲಿ ಗಂಡ-ಹೆಂಡತಿಯನ್ನು ನಾಲ್ಕು ಜನ ನೋಡಲಿ ಎಂದು ಹೊಗಳುವ ತೋರೈಕೆ ಮಾಡುವುದು ಇಂದು ಸರ್ವೇ ಸಾಮಾನ್ಯ. ಇಂಥ ಪೋಸ್ಟ್ಗಳನ್ನು ನೋಡಿದಾಗ ಡೌಟ್ ಬರುವುದೂ ಇದೆ. ಇಂಥ ಬೂಟಾಟಿಕೆಯಿಲ್ಲದೇ ನಿಜವಾಗಿಯೂ ಪ್ರೀತಿ ಮಾಡುತ್ತಿದ್ದರೆ, ಅದರ ತೋರೈಕೆ ಅಗತ್ಯವಿಲ್ಲ ಎನ್ನುವುದು ಸುಷ್ಮಾ ಅವರ ಮಾತಿನಿಂದ ಸ್ಪಷ್ಟವಾಗಿ ಗೋಚರವಾಗುತ್ತದೆ.
56
ತೋರಿಕೆ ಮುಖ್ಯವಲ್ಲ
'ನಾನು ನನ್ನ ಗಂಡನಿಗೆ ಏಕವಚನದಿಂದಲೇ ಮಾತಾಡುವುದು. ಏನು ಹೀಗೆಲ್ಲಾ ಮಾತಾಡ್ತಿಯಾ ಅಂತ ಕೇಳ್ತಾರೆ. ಆದರೆ ಮರ್ಯಾದೆ ಕೊಡುವುದು ಇದರಿಂದ ಅಲ್ಲ, ನಾವು ಹೇಗೆ ಇದ್ದೇವೆ ಎನ್ನುವುದು ಮುಖ್ಯ, ಎಷ್ಟು ಪರಸ್ಪರ ಸಪೋರ್ಟಿವ್ ಆಗಿದ್ದೇವೆ ಎನ್ನುವುದು ಮುಖ್ಯ' ಎನ್ನುವ ಮೂಲಕ ನಟಿ ತಮ್ಮ ಖುಷಿ ದಾಂಪತ್ಯದ ಬಗ್ಗೆ ವಿವರಿಸಿದ್ದಾರೆ.
66
ನನ್ನ ಪಾಲಿನ ಏಂಜಲ್
ಸುಮಾರು 12 ಗಂಟೆ ನಾನು ಹೊರಗೇ ಇರುತ್ತೇನೆ. ಆ ಸಮಯದಲ್ಲಿ ತಮ್ಮ ಆಫೀಸ್ ಕೆಲಸದ ನಡುವೆಯೂ ಮಗನ ಸಂಪೂರ್ಣ ಜವಾಬ್ದಾರಿಯನ್ನು ಹೊರುತ್ತಾರೆ. ಭಾಗ್ಯಲಕ್ಷ್ಮಿ ಸೀರಿಯಲ್ಗೆ ಕರೆ ಬಂದಾಗ ಎಂಟು ಸಲ ರಿಜೆಕ್ಟ್ ಮಾಡಿದ್ದೆ. ಆದರೆ ನೀನು ಹೋಗು, ನಾನು ಎಲ್ಲಾ ನೋಡಿಕೊಳ್ತೇನೆ ಎಂದು ಗಂಡನೇ ಸಪೋರ್ಟ್ ಮಾಡಿದ್ದರಿಂದ ಅದನ್ನು ಒಪ್ಪಿಕೊಂಡೆ. ನಾನು ಇಂದು ಹೀಗೆ ಇರುವುದಕ್ಕೆ ಅವನೇ ಕಾರಣ, ಅವನು ನನ್ನ ಪಾಲಿನ ಏಂಜಲ್ ಎಂದಿದ್ದಾರೆ ಸುಷ್ಮಾ ರಾವ್.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.