ಬಿಗ್‌ಬಾಸ್ 13ರ ಸ್ಪರ್ಧಿ ಸೌಂದರ್ಯ ಶೆಟ್ಟಿ ಸಹಸ್ಪರ್ಧಿ ಯಶಸ್ ಬಳಿ ತಮ್ಮ ಮದುವೆ ಬಗ್ಗೆ ಅಚ್ಚರಿಯ ಪ್ರಶ್ನೆ ಕೇಳಿದ್ದಾರೆ. ಯಾರೂ ಮದುವೆಗೆ ಒತ್ತಾಯಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರ ವಿಡಿಯೋ ವೈರಲ್ ಆಗಿದೆ. ಇದಲ್ಲದೆ, ತಮ್ಮ ಹಿನ್ನೆಲೆ ಹಾಗೂ ಹಿಂದಿನ ಬ್ರೇಕ್‌ಅಪ್ ಬಗ್ಗೆಯೂ ಹೇಳಿಕೊಂಡಿದ್ದಾರೆ.
ಬಿಗ್‌ಬಾಸ್ 13 (Bigg Boss 13) ಮನೆಯಲ್ಲಿ ಸದ್ದು ಮಾಡ್ತಿರುವವರ ಪೈಕಿ ನಟಿ ಸೌಂದರ್ಯ ಶೆಟ್ಟಿ ಕೂಡ ಒಬ್ಬರು. ಅವರೀಗ ಇನ್ನೋರ್ವ ಸ್ಪರ್ಧಿ ಯಶಸ್ ಜೊತೆ ಒಡನಾಟ ಬೆಳೆಸಿಕೊಂಡಿದ್ದು, ಈ ಸಂದರ್ಭದಲ್ಲಿ ಮದುವೆಯ ಬಗ್ಗೆ ಮಾತನಾಡಿದ್ದಾರೆ.
26
ಯಶಸ್‌ಗೆ ಸೌಂದರ್ಯ ಪ್ರಶ್ನೆ
ಒಂದು ಕಡೆ ಯಶಸ್, ಇನ್ನೊಂದು ಕಡೆ ಸೌಂದರ್ಯ ಮಲಗಿಕೊಂಡಿದ್ದು, ಇದ್ದಕ್ಕಿಂತೆಯೇ ಸೌಂದರ್ಯ ನಾನು ಮದುವೆ ಆಗಬಹುದಾ ಎಂದು ಯಶಸ್‌ಗೆ ಕೇಳಿದಾಗ, ಶಾಕ್ಗೊಂಡ ಯಶಸ್, ಇದೇನಿದು ಏಕಾಏಕಿ ಯೋಚನೆ ಬಂತು, ಇಷ್ಟೊಂದು ಎಕ್ಸೈಟೆಡ್ ಆಗಿ ಮದುವೆ ಬಗ್ಗೆ ಕೇಳ್ತೀದ್ದೀಯಾ ಎಂದು ಕೇಳ್ತಾರೆ. ಜೊತೆಗೆ ನನಗೆ ಗೊತ್ತಿಲ್ಲ ಎಂದೂ ಹೇಳ್ತಾರೆ..
36
ನಾನೊಂದು ಮದ್ವೆ ಆಗ್ಬೋದಾ?
ಆಗ ಸೌಂದರ್ಯ, ನಾನೊಂದು ಮದುವೆ ಆಗಬಹುದಾ ಅನ್ನೋದನ್ನೇ ನಾನು ಯೋಚಿಸಿಯೇ ಇಲ್ಲ. ನನಗೆ ಯಾರು ಮದುವೆ ಆಗೋಕೆ ಒತ್ತಾಯವೇ ಮಾಡುತ್ತಿಲ್ಲ. ನನ್ನ ಅಕ್ಕಾ ಮಾತ್ರ ನನಗೆ ಒತ್ತಾಯ ಮಾಡುತ್ತಿರುತ್ತಾಳೆ. ನನ್ನ ಅಮ್ಮನಿಗೆ ಗಂಡುಮಕ್ಕಳು ಅಂದ್ರೆ ಬಹಳ ಪ್ರೀತಿ. ಯಾರೂ ಮದುವೆಗೆ ಫೋರ್ಸೇ ಮಾಡಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ. ಕೊನೆಗೆ ನಮ್ಮಿಬ್ಬರ ಮಕ್ಕಳನ್ನು ಮುಂಬೈನಲ್ಲಿ ಬೆಳೆಸುವ, ಮಂಡ್ಯದಲ್ಲಿ ಬೆಳೆಸುವ ಎಂದೆಲ್ಲಾ ಯಶಸ್ ಸೌಂದರ್ಯ ಬಳಿ ಹೇಳಿದ್ದಾರೆ. ಒಟ್ಟಿನಲ್ಲಿ ಮದುವೆಯ ವಿಷ್ಯದ ಪ್ರೊಮೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಇನ್ನು ಸೌಂದರ್ಯ ಶೆಟ್ಟಿ (Bigg Boss Soundarya Shetty) ಕುರಿತು ಹೇಳುವುದಾದರೆ, ಅವರೇ ತಮ್ಮನ್ನು ಬಿಗ್ಬಾಸ್ನಲ್ಲಿ ಹೀಗೆ ಇಂಟ್ರಡ್ಯೂಸ್ ಮಾಡಿಕೊಂಡಿದ್ದರು. ನಾನು ತುಂಬಾ ಕನ್ಫಿಡೆಂಟ್, ಸ್ಟೈಲಿಶ್ ಹುಡುಗಿ. ನಾನು ಹುಟ್ಟಿದ್ದು ಮಸ್ಕಟ್‌ನಲ್ಲಿ. ಬೆಳೆದಿದ್ದು ಮಂಗಳೂರಿನಲ್ಲಿ. ಸದ್ಯ ನಾನು ಇರೋದು ಮುಂಬೈನಲ್ಲಿ. ನಾನು ಕರ್ನಾಟಕದವಳು. ನನಗೆ ಕನ್ನಡಿಗರ ಸಪೋರ್ಟ್ ಬೇಕು. ಕನ್ನಡಿಗರ ಪ್ರೀತಿ ಬೇಕು. ನನ್ನನ್ನ ಕನ್ನಡಿಗರು ಇಷ್ಟ ಪಡ್ತಾರೆ ಅಂದುಕೊಳ್ತೀನಿ’’ ಎಂದಿದ್ದರು.
56
ಡ್ಯಾನ್ಸ್ ನನ್ನ ವೈಬ್
‘’ನನಗೆ ಚಿಕ್ಕವಯಸ್ಸಿನಿಂದಲೂ ಡ್ಯಾನ್ಸ್, ಸ್ಟೈಲಿಂಗ್ ಅಂದ್ರೆ ಇಷ್ಟ. ವೀಕೆಂಡ್ ಬಂತೂಂದ್ರೆ ಪಾರ್ಟಿ, ನೈಟ್ ಲೈಫ್, ಮ್ಯೂಸಿಕ್, ಡ್ಯಾನ್ಸ್ ನನ್ನ ವೈಬ್ ಎಂದಿದ್ದರು. ನನಗೆ ಟ್ರಾವೆಲ್ ಮಾಡೋದು ಇಷ್ಟ. ಎಲ್ಲೇ ಟ್ರಾವೆಲ್ ಮಾಡಿದರೂ, ಅಲ್ಲಿಂದ ಒಂದು ಮೆಮೊರಿ ತರ್ತೀನಿ. ನನ್ನ ಮೈಮೇಲೆ ಇರುವ ಒಂದೊಂದು ಟ್ಯಾಟೂಗೂ ಒಂದೊಂದು ಸ್ಟೋರಿ ಇದೆ’’ ಎಂದಿದ್ದರು ಸೌಂದರ್ಯ ಶೆಟ್ಟಿ.
66
ಬ್ರೇಕ್‌ಅಪ್
ಈ ಹಿಂದೆ ಸೌಂದರ್ಯ ಶೆಟ್ಟಿ ಅವರು ಭಾಗವಹಿಸಿದ ಹಿಂದಿ ರಿಯಾಲಿಟಿ ಶೋ ‘ಎಂಟಿವಿ ಸ್ಪ್ಲಿಟ್ಸ್ ವಿಲ್ಲಾ’ದಲ್ಲಿ ತಮ್ಮ ಬ್ರೇಕ್ ಅಪ್ ಕಹಾನಿ ಹೇಳಿಕೊಂಡಿದ್ದರು. 4ವರ್ಷಗಳ ಕಾಲ ಓರ್ವ ವ್ಯಕ್ತಿಯನ್ನ ಪ್ರೀತಿಸಿ, ಬೇರೆಯಾದ ಕಹಿ ಅನುಭವವನ್ನ ಹಂಚಿಕೊಂಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.