'ಕಾಮಿಡಿ ಕಿಲಾಡಿಗಳು' ಖ್ಯಾತಿಯ ವಾಣಿ ಗೌಡ ಅವರು ಜನರನ್ನು ನಗಿಸಿದರೂ, ಅವರ ಬಾಲ್ಯ ತೀವ್ರ ಬಡತನದಿಂದ ಕೂಡಿತ್ತು. ಅವರ ತಾಯಿ 15 ಮನೆಗಳಲ್ಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದರು. ಬೇರೆಯವರು ಕೊಟ್ಟ ಹಳೆಯ ಬಟ್ಟೆಗಳನ್ನೇ ಧರಿಸಿ ಬೆಳೆದ ಕಷ್ಟದ ದಿನಗಳನ್ನು ವಾಣಿ ನೆನಪಿಸಿಕೊಂಡಿದ್ದಾರೆ.
ಒಬ್ಬ ಕಲಾವಿದರನ್ನು ನೋಡಿದಾಗ ಎಷ್ಟು ಅದೃಷ್ಟವಂತರು, ಅವರು ತುಂಬಾ ಲಕ್ಕಿಗಳು, ಸೆಲೆಬ್ರಿಟಿಗಳಾಗಿದ್ದಾರೆ ಎಂದೆಲ್ಲಾ ಅಂದುಕೊಳ್ಳುವುದು ಉಂಟು ಆದರೆ ಹಲವು ಕಲಾವಿದರ ಹಿಂದೆ ಇರೋದು ನೋವಿನ ಘಟನೆ. ಅವರು ಬೆಳೆದ ರೀತಿ, ಅವರ ಬಾಲ್ಯ. ಅವರ ಹಿನ್ನೆಲೆ ಎಲ್ಲವೂ ನೋವಿನ ಪಯಣವೇ ಆಗಿರುತ್ತದೆ.
26
ಹಾಸ್ಯ ಕಲಾವಿದೆ ವಾಣಿ
ಅಂಥವರಲ್ಲಿ ಒಬ್ಬರು ಹಾಸ್ಯ ಕಲಾವಿದೆಯಾಗಿ ಎಲ್ಲರನ್ನೂ ರಂಜಿಸುವ ನಟಿ ವಾಣಿ ಗೌಡ. ಜೀ ಕನ್ನಡ ವಾಹಿನಿಯ 'ಕಾಮಿಡಿ ಕಿಲಾಡಿಗಳು' ರಿಯಾಲಿಟಿ ಶೋ ಮೂಲಕ ಅಪಾರ ಜನಪ್ರಿಯತೆ ಗಳಿಸಿ, ಮನೆಮಾತಾಗಿರುವ ಪ್ರತಿಭಾನ್ವಿತ ಕಲಾವಿದೆ ವಾಣಿ ಗೌಡ ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್ ಆಯಕ್ಟೀವ್ ಇದ್ದಾರೆ. ಅವರ ಹಾಸ್ಯಕ್ಕೆ ಜನರು ನಕ್ಕೂ ನಕ್ಕೂ ಸುಸ್ತಾಗುವುದು ಇದೆ.
36
ಬಡತನದ ಆ ದಿನಗಳು
ಆದರೆ, ಅಸಲಿಗೆ ವಾಣಿ ಗೌಡ ಅವರ ಬಾಲ್ಯ ಬಡತನದಿಂದ ಕೂಡಿದ್ದು, ಅದನ್ನು ನ್ಯೂಸೋ ನ್ಯೂಸು ಚಾನೆಲ್‌ನಲ್ಲಿ ವಿವರಿಸಿದ್ದಾರೆ. ನನ್ನಮ್ಮ 15 ಮನೆಗಳಲ್ಲಿ ಕೆಲಸ ಮಾಡಿ ನಮ್ಮನ್ನು ಸಾಕಿದ್ದಾರೆ. ಎಲ್ಲರೂ 9-5 ಜಾಬ್ ಬೇಕು ಎಂದರೆ, ನನ್ನಮ್ಮ ಬೆಳಿಗ್ಗೆ 5 ರಿಂದ ರಾತ್ರಿ 9ರ ಅಂದರೆ 5-9 ಜಾಬ್ ಮಾಡುತ್ತಿದ್ದರು. ಹಾಗೆ ಮಾಡಿ ನಮ್ಮನ್ನು ಸಾಕಿದ್ದಾರೆ ಎಂದಿದ್ದಾರೆ.
ಅವರಿವರ ಮನೆಯಲ್ಲಿ ಕೆಲಸ ಮಾಡುವಾಗ, ಅವರು ಹಳೆಯ ಬಟ್ಟೆ, ಚಪ್ಪಲಿ ಕೊಟ್ಟರೆ ನಮಗೆ ಅದುವೇ ಸಿಕ್ಕಾಪಟ್ಟೆ ಖುಷಿ. ಅದನ್ನು ವಾಷ್ ಮಾಡಿ ಹೊಸ ಬಟ್ಟೆಯಂತೆ ತೊಟ್ಟಿಕೊಳ್ಳುತ್ತಿದ್ದೆವು. ಹೊಸ ಬಟ್ಟೆ ಅಂಗಡಿಯಿಂದ ತಂದು ಹಾಕಿಕೊಂಡಷ್ಟೇ ಖುಷಿ ನಮಗೆಲ್ಲಾ ಅಗುತ್ತಿತ್ತು ಎಂದಿದ್ದಾರೆ.
56
ಹಳೆಯ ಬಟ್ಟೆ, ಚಪ್ಪಲಿಗಳೇ ಖುಷಿ
ನಾನು ಕೆಲಸಕ್ಕೆ ಸೇರಿದ ಮೇಲೂ ಬೇರೆಯವರ ಬಟ್ಟೆ, ಚಪ್ಪಲಿ ಹಾಕಿಕೊಂಡಿದ್ದು ಇದೆ. ಇದನ್ನು ಹೇಳಿಕೊಳ್ಳಲು ನನಗೆ ನಾಚಿಕೆ ಇಲ್ಲ. ಏಕೆಂದರೆ ನಮ್ಮ ಸ್ಥಿತಿ ಹಾಗಿತ್ತು. ಅದು ಅಂದು ನಮಗೆ ಕೊಟ್ಟಿದ್ದ ಸಂತೋಷವಾಗಿತ್ತು ಎಂದಿದ್ದಾರೆ.
66
ಬಾಲ್ಯದ ನೆನಪು
ಹೀಗೆ ತಮ್ಮ ಬಾಲ್ಯ ಹೇಗಿತ್ತು. ಅಮ್ಮ ಎಷ್ಟು ಕಷ್ಟಪಟ್ಟು ಮಕ್ಕಳನ್ನು ಸಾಕಿದ್ದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ ವಾಣಿ ಗೌಡ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.