ಗಂಡ ಡ್ಯೂಟಿಗೆ, ಹೆಂಡ್ತಿ ಪ್ರಿಯಕರನ ಭೇಟಿಗೆ..ಶಾಪಿಂಗ್‌ ಮಾಲ್‌ನಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದವಳಿಗೆ ಗೂಸಾ ಇಟ್ಟ ಪತಿರಾಯ!

Published : Jun 06, 2026, 05:09 PM IST

ನೋಯ್ಡಾದ ಜುಡಿಯೋ ಸ್ಟೋರ್‌ನಲ್ಲಿ ತನ್ನ ಪ್ರಿಯಕರನೊಂದಿಗೆ ಶಾಪಿಂಗ್ ಮಾಡುತ್ತಿದ್ದ ಪತ್ನಿಯನ್ನು ಪತಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾನೆ. ಬಳಿಕ ಇಬ್ಬರನ್ನೂ ರಸ್ತೆಗೆಳೆದು ಥಳಿಸಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV
15
ಜುಡಿಯೋ ಸ್ಟೋರ್ ಎದುರು ಹೈಡ್ರಾಮಾ

ನೋಯ್ಡಾದ ಸೆಕ್ಟರ್-49ರಲ್ಲಿರುವ ಪ್ರಸಿದ್ಧ ಹನುಮಾನ್ ಮಂದಿರದ ಬಳಿ ಇರುವ ‘ಜುಡಿಯೋ’ (Zudio) ಸ್ಟೋರ್‌ ಹೊರಗಡೆ ಶುಕ್ರವಾರ ಭಾರಿ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಪತಿಯೊಬ್ಬ ತನ್ನ ಪತ್ನಿಯನ್ನು ಆಕೆಯ ಪ್ರಿಯಕರನ ಜೊತೆ ಇರುವುದನ್ನು ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದೇ ಈ ಇಡೀ ಗಲಾಟೆಗೆ ಪ್ರಮುಖ ಕಾರಣವಾಯಿತು.

25
ಪ್ರಿಯಕರನ ಜೊತೆ ಶಾಪಿಂಗ್ ಮಾಡುತ್ತಿದ್ದಾಗ ಎಂಟ್ರಿ ಕೊಟ್ಟ ಗಂಡ!

ಲಭ್ಯವಿರುವ ಮಾಹಿತಿಯ ಪ್ರಕಾರ, ಮಹಿಳೆ ತನ್ನ ಪ್ರಿಯಕರನ ಜೊತೆಗೂಡಿ ಜುಡಿಯೋ ಸ್ಟೋರ್ ಒಳಗಡೆ ಖುಷಿಯಿಂದ ಬಟ್ಟೆಗಳ ಶಾಪಿಂಗ್ ಮಾಡುತ್ತಿದ್ದಳು. ಆದರೆ, ಇದೇ ವೇಳೆ ಮಹಿಳೆಯ ಪತಿ ಯಾವುದೇ ಇದ್ದಕ್ಕಿದ್ದಂತೆ ಅದೇ ಸ್ಟೋರ್‌ಗೆ ಭೇಟಿ ನೀಡಿದ್ದಾನೆ. ಅಲ್ಲಿ ತನ್ನ ಪತ್ನಿ ಮತ್ತೊಬ್ಬ ಯುವಕನ ಜೊತೆ ಆಪ್ತವಾಗಿ ಇರುವುದನ್ನು ಕಂಡು ಆತ ತೀವ್ರ ಆಕ್ರೋಶಗೊಂಡಿದ್ದಾನೆ.

35
ಸ್ಟೋರ್‌ನಿಂದ ಹೊರಗೆಳೆದು ಗೂಸಾ ಕೊಟ್ಟ ಗಂಡ

ಪತ್ನಿ ಮತ್ತು ಆಕೆಯ ಪ್ರಿಯಕರನನ್ನು ಒಟ್ಟಿಗೆ ನೋಡಿ ಸಿಟ್ಟಾದ ಪತಿ, ತಕ್ಷಣವೇ ಪತ್ನಿಯನ್ನು ಹಿಡಿದು ಸ್ಟೋರ್‌ನಿಂದ ಹೊರಗಡೆ ಎಳೆದುಕೊಂಡು ಬಂದಿದ್ದಾನೆ. ಅಂಗಡಿಯಿಂದ ಹೊರಗೆ ಬರುತ್ತಿದ್ದಂತೆ ರಸ್ತೆಯಲ್ಲೇ ಪತ್ನಿ ಮತ್ತು ಆಕೆಯ ಪ್ರಿಯಕರನಿಗೆ ಮನಬಂದಂತೆ ರಕ್ತ ಬರುವಂತೆ ಥಲಿಸಿದ್ದಾರೆ. ಈ ಹಠಾತ್ ದಾಳಿಯಿಂದಾಗಿ ಇಡೀ ಜುಡಿಯೋ ಸ್ಟೋರ್ ಮುಂಭಾಗದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು.

45
ಸ್ಥಳದಲ್ಲಿ ನೆರೆದ ಜನಸಾಗರ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್!

ಗಂಡ-ಹೆಂಡತಿ ಮತ್ತು ಪ್ರಿಯಕರನ ನಡುವಿನ ಈ ಬೀದಿ ಜಗಳವನ್ನು ನೋಡಲು ನೋಡನೋಡುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದರು. ಕೊನೆಗೆ ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಅಲ್ಲಿದ್ದ ಸ್ಥಳೀಯರು ಮಧ್ಯಪ್ರವೇಶಿಸಿ, ಪತಿಯನ್ನು ಸಮಾಧಾನಪಡಿಸಿ ಜಗಳವನ್ನು ಬಿಡಿಸಿದ್ದಾರೆ. ಶುಕ್ರವಾರ ನಡೆದ ಈ ಇಡೀ ನಾಟಕೀಯ ಘಟನೆಯ ದೃಶ್ಯಗಳನ್ನು ಅಲ್ಲಿದ್ದ ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಪ್ರಸ್ತುತ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

55
ಕಾನೂನು ಕ್ರಮದ ಕುರಿತು ಪೊಲೀಸರು ನೀಡಿದ ಮಹತ್ವದ ಹೇಳಿಕೆ

ಜುಡಿಯೋ ಸ್ಟೋರ್ ಮುಂಭಾಗ ಸಾಕಷ್ಟು ಸಮಯದವರೆಗೆ ಈ ಹೈಡ್ರಾಮಾ ನಡೆದಿದ್ದರೂ, ಸ್ಥಳೀಯ ಪೊಲೀಸರ ಪ್ರಕಾರ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಕಡೆಯಿಂದ ಅಧಿಕೃತವಾಗಿ ಲಿಖಿತ ದೂರು ದಾಖಲಾಗಿಲ್ಲ. "ಪ್ರಸ್ತುತ ಘಟನೆಯ ವಿಡಿಯೋ ನಮಗೂ ಲಭ್ಯವಾಗಿದೆ. ಆದರೆ ಸಂತ್ರಸ್ತರಿಂದ ಅಥವಾ ಸಂಬಂಧಪಟ್ಟವರಿಂದ ಅಧಿಕೃತ ದೂರು ಬಂದ ನಂತರವಷ್ಟೇ ಮುಂದಿನ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories