ಮ್ಯೂಚ್ಯೂವಲ್ ಡಿವೋರ್ಸ್ ಪ್ರಕರಣದ ವೇಳೆ ತನಗೆ ಅಕ್ರಮ ಸಂಬಂಧವಿರುವುದನ್ನು ಪತ್ನಿ ಒಪ್ಪಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಪತ್ನಿಗೆ ಘೋಷಿಸಿದ್ದ 10 ಲಕ್ಷ ರೂಪಾಯಿ ಜೀವನಾಂಶ ಪರಿಹಾರ ಕುರಿತು ಕೋರ್ಟ್ ಮಹತ್ವದ ಆದೇಶ ನೀಡಿದೆ.
ಮ್ಯೂಚ್ಯುವಲ್ ಡಿವೋರ್ಸ್ ಪ್ರಕರಣ ಒಂದರಲ್ಲಿ ಹೈಕೋರ್ಟ್ ನೀಡಿದ ತೀರ್ಪು ಇದೀಗ ಎಲ್ಲರ ಗಮನಸೆಳೆದಿದೆ. ಕಾರಣ ಡಿವೋರ್ಸ್ ವೇಳೆ ತನಗೆ ಅಕ್ರಮ ಸಂಬಂಧ ಇರುವುದನ್ನು ಪತ್ನಿ ಒಪ್ಪಿಕೊಂಡಿದ್ದಾಳೆ. ಇದೇ ಕಾರಣದಿಂದ ಪತಿ ಹಾಗೂ ಪತ್ನಿ ಯಾವುದೇ ಹಗ್ಗಜಗ್ಗಾಟವಿಲ್ಲದೆ, ಜಗಳವಿಲ್ಲದೆ ಬೇರೆಯಾಗುತ್ತಿದ್ದರು. ಆದರೆ ಅಕ್ರಮ ಸಂಬಂಧವನ್ನು ಪತ್ನಿ ಒಪ್ಪಿಕೊಂಡಿದ್ದಾಳೆ ಎಂದ ತಕ್ಷಣವೇ ವಿಚ್ಚೇದಿತ ಪತ್ನಿಗೆ ನೀಡಲು ಆದೇಶಿಸಿದ್ದ 10 ಲಕ್ಷ ರೂಪಾಯಿ ಜೀವನಾಂಶ ಕುರಿತು ಗುವ್ಹಾಟಿ ಹೈಕೋರ್ಟ್ ಮಹತ್ವದ ಆದೇಶ ನೀಡಿದ ಘಟನೆ ನಡೆದಿದೆ.
26
ಏನಿದು ಘಟನೆ?
ಮದುವೆಯಾಗಿ ಕೆಲ ವರ್ಷಗಳ ಬಳಿಕ ಗಂಡ ಹಾಗೂ ಹೆಂಡತಿ ಪರಸ್ಪರ ಒಪ್ಪಿಗೆ ಮೇರೆ ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ. ಇದರಂತೆ ಸ್ಥಳೀಯ ನ್ಯಾಯಾಲದಲ್ಲಿ ಪ್ರಕರಣದ ವಿಚಾರಣೆ ಆರಂಭಗೊಂಡಿತು. ಮ್ಯೂಚ್ಯೂವಲ್ ಡಿವೋರ್ಸ್ ಕಾರಣ ಕೆಳಹಂತದ ನ್ಯಾಯಾಲದಲ್ಲಿ ವಿಚ್ಚೇದಿತ ಪತ್ನಿಗೆ 10 ಲಕ್ಷ ರೂಪಾಯಿ ಜೀವನಾಂಶ ನೀಡಬೇಕು ಎಂದು ಆದೇಶ ನೀಡಿತ್ತು. ಈ ಆದೇಶದ ವಿರುದ್ಧ ಗಂಡ ಹೈಕೋರ್ಟ್ ಮೊರೆ ಹೋಗಿದ್ದ.
36
ಜೀವನಾಂಶ ರದ್ದು
ಕೆಳಹಂತದ ನ್ಯಾಯಾಲದ ಆದೇಶ ಪ್ರಶ್ನಿಸಿ ಗಂಡ ಗುವ್ಹಾಟಿ ಹೈಕೋರ್ಟ್ ಮೆಟ್ಟಿಲೇರಿದ್ದ. ಗುವ್ಹಾಟಿ ಹೈಕೋರ್ಟ್ ವಿಚಾರಣೆ ವೇಳೆ ಪತ್ನಿ ತನಗೆ ಅಕ್ರಮ ಸಂಬಂಧ ಒಪ್ಪಿಕೊಂಡಿರುವುದನ್ನು ಗಮನಿಸಿದೆ. ಅಕ್ರಮ ಸಂಬಂಧ ಕಾರಣ ಇಬ್ಬರು ಬೇರೆಯಾಗುತ್ತಿದ್ದಾರೆ. ಇಂತಹ ನಡವಳಿಕೆ ಇರುವಾಗ ಪತ್ನಿಗೆ 10 ಲಕ್ಷ ರೂ ಜೀವನಾಂಶ ಆದೇಶ ಸರಿಯಲ್ಲ ಎಂದು ಹೈಕೋರ್ಟ್, ಸ್ವಯಂಪ್ರೇರಿತವಾಗಿ ಜೀವನಾಂಶ ಆದೇಶ ರದ್ದುಗೊಳಿಸಿದೆ.
ಪತ್ನಿಯ ನಡವಳಿಕೆ ಕಾರಣ ಇಬ್ಬರು ಬೇರೆಯಾಗುತ್ತಿದ್ದಾರೆ. ಇಬ್ಬರು ಒಪ್ಪಿಗೆ ಮೇರೆಗೆ ದೂರವಾಗುತ್ತಿದ್ದಾರೆ. ಇತ್ತ ಪತ್ನಿ ಕಡೆಯಿಂದ ಜೀವನಾಂಶಕ್ಕಾಗಿ ಯಾವುದೇ ಅರ್ಜಿ ಇಲ್ಲ. ಹೀಗಿರುವಾಗ ಕೋರ್ಟ್ ಸ್ವಯಂಪ್ರೇರಿತವಾಗಿ ಇತರ ಪ್ರಕರಣಗಳಂತೆ ಜೀವನಾಂಶಕ್ಕೆ ಆದೇಶ ನೀಡಲು ಸಾಧ್ಯವಿಲ್ಲ ಎಂದ ಹೈಕೋರ್ಟ್, ಪತ್ನಿಗೆ ನೀಡಿದ್ದ 10 ಲಕ್ಷ ರೂಪಾಯಿ ಜೀವನಾಂಶ ಆದೇಶವನ್ನು ರದ್ದು ಮಾಡಿದೆ.
56
ಅಕ್ರಮ ಸಂಬಂಧ ಇದ್ದರೆ ಜೀವನಾಂಶ ಸಿಗಲ್ಲ
ಹಿಂದೂ ವಿವಾಹ ಕಾಯ್ದೆ 1955 ರ ಸೆಕ್ಷನ್ 25 ರ ಅಡಿಯಲ್ಲಿ ಕಾಯಂ ಜೀವನಾಂಶವನ್ನು ಮಂಜೂರು ಮಾಡುವಾಗ, ವಿಚಾರಣಾ ನ್ಯಾಯಾಲಯವು ಕಡ್ಡಾಯವಾಗಿ ದಂಪತಿಗಳ ನಡವಳಿಕೆ (Conduct) ಮತ್ತು ಪ್ರಕರಣದ ಇತರೆ ಸಂದರ್ಭಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.
66
ಇಬ್ಬರು ಮಕ್ಕಳಿಗೆ ಸಂಕಷ್ಟ
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತ್ನಿಯ ಅಕ್ರಮ ಸಂಬಂಧ ಕಾರಣ ಇದೀಗ ಮಕ್ಕಳಿಗೂ ಸಂಕಷ್ಟ ಎದುರಾಗಿದೆ. 2022ರಲ್ಲಿ ಪರಸ್ಪರ ಒಪ್ಪಿಗೆ ಮೇರೆಗೆ ಕೋರ್ಟ್‌ನಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಳಹಂತದ ನ್ಯಾಯಲದ ಆದೇಶದ ಬಳಿಕ ಇದೀಗ ಹೈಕೋರ್ಟ್ ಮೂಲಕ ಆದೇಶ ಹೊರಬಿದ್ದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.