ಅಬ್ಬಬ್ಬಾ..ಶೋಯೆಬ್‌ ಮಲಿಕ್‌ರಿಂದ ಸಾನಿಯಾ ಮಿರ್ಜಾಗೆ ಸಿಗೋ ಜೀವನಾಂಶ ಇಷ್ಟೊಂದ್ ಕೋಟಿನಾ?

First Published | Jan 25, 2024, 11:11 AM IST

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನ ಡಿವೋರ್ಸ್‌ನಲ್ಲಿ ಕೊನೆಗೊಂಡಿದೆ. ಶೋಯೆಬ್‌ ಮಲಿಕ್‌, ಪಾಕಿಸ್ತಾನಿ ನಟಿಯನ್ನು ಮೂರನೇ ವಿವಾಹವಾಗಿದ್ದಾರೆ. ಈ ಡಿವೋರ್ಸ್‌ನಿಂದ ಸಾನಿಯಾ ಮಿರ್ಜಾಗೆ ಸಿಗೋ ಜೀವನಾಂಶ ಎಷ್ಟು ಗೊತ್ತಾ?

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ದಾಂಪತ್ಯ ಜೀವನ ಡಿವೋರ್ಸ್‌ನಲ್ಲಿ ಕೊನೆಗೊಂಡಿದೆ. ಶೋಯೆಬ್ ಮಲಿಕ್ ಮೂರನೇ ಮದುವೆಯಾಗಿದ್ದಾರೆ.

ಶೋಯೆಬ್ ಮಲಿಕ್,ಪಾಕಿಸ್ತಾನಿ ನಟಿ ಸನಾ ಜಾವೇದ್‌ರನ್ನು ವಿವಾಹವಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸನಾ ಅವರೊಂದಿಗಿನ ಮದುವೆಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. 

Tap to resize

ಶೋಯೆಬ್ ಮತ್ತು ಸಾನಿಯಾ ನಡುವಿನ ವಿಚ್ಛೇದನದ ವದಂತಿಗಳು 2022ರಿಂದಲೂ ಆರಂಭವಾಗಿತ್ತು. ಆದರೆ ಇಬ್ಬರೂ ಇದನ್ನು ಬಹಿರಂಗ ಪಡಿಸಿರಲ್ಲಿಲ್ಲ. ಆದರೆ ಶೋಯೆಬ್ ಅವರ ಮೂರನೇ ಮದುವೆಯ ನಂತರ, ಎಲ್ಲವೂ ಸ್ಪಷ್ಟವಾಗಿದೆ. ಹೀಗಿರುವಾಗ ಶೋಯೆಬ್‌ನಿಂದ ವಿಚ್ಛೇದನ ಪಡೆದ ಸಾನಿಯಾ ಮಿರ್ಜಾ ಜೀವನಾಂಶವಾಗಿ ಎಷ್ಟು ಹಣ ಪಡೆಯಬಹುದು ಎಂಬ ಚರ್ಚೆ ತೀವ್ರಗೊಂಡಿದೆ. 

ಶೋಯೆಬ್ ಮಲಿಕ್ 2010ರಲ್ಲಿ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದಾಗ ಸಾಕಷ್ಟು ವಿವಾದಗಳು ಉಂಟಾಗಿದ್ದವು. ಶೋಯೆಬ್‌ಗೆ ವಿಚ್ಛೇದನ ನೀಡದೆ ಸಾನಿಯಾಳನ್ನು ಮದುವೆಯಾಗಲಿದ್ದಾನೆ ಎಂದು ಶೋಯೆಬ್‌ನ ಮೊದಲ ಪತ್ನಿ ಆಯೇಷಾ ಸಿದ್ದಿಕಿ ಆರೋಪಿಸಿದ್ದರು. ತಾನು ಮತ್ತು ಶೋಯೆಬ್ 2002 ರಲ್ಲಿ ವಿವಾಹವಾಗಿದ್ದಾಗಿ ಆಯೇಶಾ ಹೇಳಿದ್ದರು. 

ಶೋಯೆಬ್ ವಿರುದ್ಧ ತನಗೆ ಮೋಸ ಮಾಡಿದ್ದಕ್ಕಾಗಿ ಪೊಲೀಸ್ ದೂರು ನೀಡಿದ್ದರು. ಅದಕ್ಕೆ ಪುರಾವೆಯಾಗಿ ತನ್ನ ಮದುವೆಯ ವೀಡಿಯೊ ಕ್ಲಿಪ್‌ನ್ನು ಹಂಚಿಕೊಂಡಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಆಯೇಶಾ ಕೇವಲ ಶೋಯೆಬ್‌ಗೆ ವಿಚ್ಛೇದನ ನೀಡಲು ಬಯಸಿದ್ದರು. 

ಶೋಯೆಬ್‌ ತನ್ನ ಮೊದಲ ಹೆಂಡತಿ ಆಯೇಶಾ ಸಿದ್ದಿಕಿಗೆ ಏಪ್ರಿಲ್ 2010ರಲ್ಲಿ ಸಾನಿಯಾಳನ್ನು ಮದುವೆಯಾಗುವ ಕೆಲವು ದಿನಗಳ ಮೊದಲು ವಿಚ್ಛೇದನ ನೀಡಿದ್ದರು. ಆದರೆ ನಂತರ ಅವಳು ಶೋಯೆಬ್‌ನಿಂದ 15 ಕೋಟಿ ರೂಪಾಯಿ ಜೀವನಾಂಶವನ್ನು ಪಡೆದಿದ್ದರು ಎಂದು ತಿಳಿದುಬಂದಿದೆ. 

ಶೋಯೆಬ್ ಮಲಿಕ್ ಪಾಕಿಸ್ತಾನದ ಹೆಸರಾಂತ ಕ್ರಿಕೆಟಿಗ. ರಾಷ್ಟ್ರೀಯ ತಂಡದ ನಾಯಕತ್ವದ ಜೊತೆಗೆ ದೇಶ-ವಿದೇಶಗಳ ಎಲ್ಲಾ ಸಣ್ಣ ಮತ್ತು ದೊಡ್ಡ ಲೀಗ್‌ಗಳಲ್ಲಿ ಆಡಿದ್ದಾರೆ. ಪಾಕಿಸ್ತಾನದ ಶ್ರೀಮಂತ ಕ್ರಿಕೆಟಿಗರಲ್ಲಿ ಶೋಯೆಬ್ ಮಲಿಕ್ ಅವರನ್ನು ಪರಿಗಣಿಸಲು ಇದೇ ಕಾರಣ. ವರದಿಯ ಪ್ರಕಾರ ಶೋಯೆಬ್ ಮಲಿಕ್ ಅವರ ಒಟ್ಟು ಆಸ್ತಿ ಮೌಲ್ಯ 230 ಕೋಟಿ ರೂ.

ಅದೇ ಸಮಯದಲ್ಲಿ, ಸಾನಿಯಾ ಮಿರ್ಜಾ ಟೆನಿಸ್ ತಾರೆ ಕೂಡ. ಹಾಗಾಗಿ ಶೋಯೆಬ್ ಮೊದಲ ಪತ್ನಿಗಿಂತ ಸಾನಿಯಾ ಮಿರ್ಜಾ ಹೆಚ್ಚಿನ ಜೀವನಾಂಶವನ್ನು ಪಡೆಯಬಹುದೆಂದು ನಿರೀಕ್ಷಿಸಲಾಗಿದೆ. ಅಂದರೆ ಸರಿ ಸುಮಾರು 15 ಕೋಟಿಗಿಂತಲೂ ಹೆಚ್ಚು. ಆದರೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

Latest Videos

click me!