ಸೌತ್‌ನಲ್ಲಿ ಬಹುಬೇಡಿಕೆಯಲ್ಲಿದ್ದ ನಟಿ; ಕನ್ನಡದ ವಿವಾಹಿತ ನಟನೊಂದಿಗೆ ಅಫೇರ್ ಇಟ್ಕೊಂಡಿದ್ದಕ್ಕೆ ಕೆರಿಯರ್ ಹಾಳಾಯ್ತು!

First Published | Jan 24, 2024, 3:35 PM IST

ಒಂದು ಕಾಲದಲ್ಲಿ ದಕ್ಷಿಣಭಾರತದಲ್ಲಿ ಸೂಪರ್‌ಸ್ಟಾರ್ ಆಗಿದ್ದ ನಟಿಯಾಕೆ. ನಿರ್ಮಾಪಕರು ಆಕೆಯ ಕಾಲ್‌ಶೀಟ್‌ಗಾಗಿ ಕಾಯ್ತಿದ್ರು. ಆದರೆ ವಿವಾಹಿತ ನಟನೊಂದಿಗಿನ ಸಂಬಂಧದ ನಂತರಆಕೆ  ವೃತ್ತಿಜೀವನ ಸಂಪೂರ್ಣ ಹಾಳಾಯ್ತು. ಯಾರು ಆ ನಟಿ? ಈಗೆಲ್ಲಿದ್ದಾರೆ?

ಚಿತ್ರರಂಗದಲ್ಲಿ ನೇಮ್‌-ಫೇಮ್‌ ಗಳಿಸುವುದು ಅಷ್ಟು ಸುಲಭವಲ್ಲ. ಕೆಲವೊಬ್ಬರಿಗೆ ಪ್ರತಿಭೆ, ಬ್ಯಾಕ್‌ಗ್ರೌಂಡ್ ಚೆನ್ನಾಗಿದ್ದರೂ ಅವಕಾಶಗಳು ಸಿಗುವುದಿಲ್ಲ. ಇನ್ನು ಕೆಲವರು ಅವಕಾಶಗಳು ಸಿಕ್ಕಿದರೂ, ಉತ್ತಮ ಸಿನಿಮಾಗಳನ್ನು ಮಾಡಿದರೂ ತಮ್ಮ ಕೆಲವು ತಪ್ಪುಗಳಿಂದ ಚಿತ್ರರಂಗದಿಂದ ದೂರವಾಗಿ ಬಿಡುತ್ತಾರೆ. ಈಕೆ ಸಹ ಅಂಥಾ ನಟಿಯರಲ್ಲೊಬ್ಬರು.

ಹಿಂದೂ ಪಂಜಾಬಿ ಕುಟುಂಬದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದು ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಿಖಿತಾ ತುಕ್ರಾಲ್‌. ಮುಂಬೈನ ಕಿಶಿಂಚಂದ್ ಚೆಲ್ಲರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಓದುತ್ತಿದ್ದಾಗ ಆಕೆಯನ್ನು ನಿರ್ಮಾಪಕ ಡಿ ರಾಮನಾಯ್ಡು ಗುರುತಿಸಿದರು. ನಂತರ ಅವರು ತಮ್ಮ ಮುಂಬರುವ ಚಿತ್ರ 'ಹೈ' (2002) ನಲ್ಲಿ ಪಾತ್ರವನ್ನು ನೀಡಿದರು. ನಟಿ ಶೀಘ್ರದಲ್ಲೇ ಚಿತ್ರರಂಗದಲ್ಲಿ ಸಕ್ರಿಯರಾದರು 

Tap to resize

'ಹೈ' ಚಿತ್ರದಲ್ಲಿ ಮೊದಲ ಬಾರಿಗೆ ಅಭಿನಯಿಸಿದ ನಿಕಿತಾ ತುಕ್ರಾಲ್ ನಂತರ ಮಲಯಾಳಂ ಸೂಪರ್‌ಸ್ಟಾರ್‌ ಫಹಾದ್ ಫಾಜಿಲ್ ಜೊತೆ 'ಕೈಯೇತುಂ ದೂರತ್' ಚಿತ್ರದಲ್ಲಿ ನಟಿಸಿದರು. ಆದರೆ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಲಿಲ್ಲ. ನಂತರ ಅವರು 'ಕುರುಂಬು' ಮತ್ತು 'ಸಂಬರಂ' ನಂತಹ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯಿಸಿದರು. 

2005ರಲ್ಲಿ ಕನ್ನಡ ಸಿನಿಮಾವೊಂದರಲ್ಲಿ ಅಭಿಯಿಸಿ ನಂತರ ತಮಿಳು ಚಿತ್ರದಲ್ಲಿ ನಟಿಸಲು ಮರಳಿದರು. ವೆಂಕಟ್ ಪ್ರಭು ಅವರ 'ಸರೋಜಾ' ಚಿತ್ರದಲ್ಲಿ ಕಾಣಿಸಿಕೊಂಡರು. 'ಕೊಡನ ಕೊಡಿ' ಹಾಡಿನಲ್ಲಿ ಆಕೆಯ ಪಾತ್ರ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ನಿಕಿತಾ ದಕ್ಷಿಣ ಚಿತ್ರರಂಗದ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡರು.

Nikita Thukral

ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಹತ್ತಾರು ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ, ವಿವಾಹಿತ ನಾಯಕನೊಂದಿಗಿನ ಸಂಬಂಧದಿಂದಾಗಿ ಆಕೆಯ ವೃತ್ತಿಜೀವನವು ನಾಶವಾಯಿತು. ಕನ್ನಡದ ನಟನೊಬ್ಬನೊಂದಿಗೆ ನಿಖಿತಾ ಸಂಬಂಧ ಹೊಂದಿದ್ದರು. ಇಬ್ಬರೂ ಜೊತೆಗೆ ಕೆಲಸ ಮಾಡುವಾಗ ಪ್ರೀತಿಸುತ್ತಿದ್ದರು. 

Nikita Thukral

ಆದರೆ, ಆ ನಟನಿಗೆ ಈಗಾಗಲೇ ಮದುವೆಯಾಗಿದ್ದು, ಇವರಿಬ್ಬರ ಸಂಬಂಧದ ಸುದ್ದಿ ಕನ್ನಡ ಇಂಡಸ್ಟ್ರಿಯಾದ್ಯಂತ ಹಬ್ಬಿದ್ದು, ಈ ಕಾರಣಕ್ಕೆ ಸಾಕಷ್ಟು ಕೋಲಾಹಲ ಎದ್ದಿತ್ತು. ನಂತರ ಆ ನಟನ ಪತ್ನಿ, ನಿಖಿತಾ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸರಲ್ಲಿ ಪ್ರಕರಣವನ್ನೂ ದಾಖಲಿಸಿದರು.

Nikita Thukral

ನಟನ ಪತ್ನಿ ತನ್ನ ಗಂಡನ ಅನೈತಿಕ ಸಂಬಂಧದಿಂದ ಕುಪಿತಳಾಗಿದ್ದು, ಆತನ ಮೇಲೆ ಹಲ್ಲೆ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪವನ್ನೂ ಮಾಡಿದರು. ಗಂಡ ಗನ್ ತೋರಿಸಿ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು. ಇದಾದ ಬಳಿಕ, ಚಿತ್ರರಂಗದಲ್ಲಿ ಭಾರೀ ಗದ್ದಲದ ನಂತರ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಿಕಿತಾ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಿತು. 

ನಂತರ ಕೆಲವು ತಿಂಗಳಲ್ಲಿ ಈ ನಿಷೇಧವನ್ನು ನಂತರ ತೆಗೆದುಹಾಕಲಾಗಿದ್ದರೂ, ಆ ಹೊತ್ತಿಗೆ, ನಿಕಿತಾ ತುಕ್ರಾಲ್ ನಿರ್ದೇಶಕರ ದೃಷ್ಟಿಯಲ್ಲಿ ವಿವಾದಾತ್ಮಕ ಮುಖವಾಗಿದ್ದರು. ಇದರಿಂದಲೇ ಆಕೆಗೆ ಯಾವುದೇ ಕೆಲಸ ಸಿಗದೆ ಚಿತ್ರರಂಗದಿಂದ ದೂರಸರಿಯಬೇಕಾಯಿತು.

ನಂತರ, ನಟಿ 2017ರಲ್ಲಿ ಉದ್ಯಮಿ ಗಗನ್‌ದೀಪ್ ಸಿಂಗ್ ಮಾಗೊ ಅವರನ್ನು ವಿವಾಹವಾದರು. ಚಲನಚಿತ್ರ ಪ್ರಪಂಚದಿಂದ ಸಂಪೂರ್ಣವಾಗಿ ದೂರವಾದರು.. ಈಗ ನಿಕಿತಾ ಮಗಳ ತಾಯಿಯಾಗಿದ್ದು, ಕುಟುಂಬದೊಂದಿಗೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ.

Latest Videos

click me!