ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ತಮ್ಮ ಪ್ರತ್ಯೇಕತೆಯನ್ನು ಖಚಿತಪಡಿಸಿದ್ದಾರೆ. ಇದೇ ಸಮಯದಲ್ಲಿ, ದಿಶಾ ಪಟಾನಿ ಜೊತೆ ಮೌನಿ ಮದುವೆಯಾಗುತ್ತಿದ್ದಾರೆ ಎಂಬ ನಕಲಿ ಸುದ್ದಿ ವೈರಲ್ ಆಗಿದ್ದು, ಆ ಫೋಟೋದ ಹಿಂದಿನ ಅಸಲಿಯತ್ತನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
ಬಾಲಿವುಡ್ ನಟಿ ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ಡಿವೋರ್ಸ್ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ. ಈ ಮಧ್ಯೆ, ಮೌನಿ ರಾಯ್ ಅವರು ದಿಶಾ ಪಟಾನಿಯೊಂದಿಗಿನ ತಮ್ಮ ಸಂಬಂಧವನ್ನು ದೃಢಪಡಿಸಿದ್ದಾರೆ ಮತ್ತು ಅವರ ಮದುವೆಯನ್ನು ಘೋಷಿಸಿದ್ದಾರೆ ಎಂದು ಹೇಳುವ ವೈರಲ್ ಪೋಸ್ಟ್ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಇಬ್ಬರೂ ಹಾರ ಹಾಕಿಕೊಂಡಿರುವ ಫೋಟೋ ವೈರಲ್ ಆಗುತ್ತಿವೆ.
26
ಪ್ರತ್ಯೇಕವಾಗ್ತಿರೋದು ನಿಜ ಎಂದ ನಟಿ
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ತಮ್ಮ ಪ್ರತ್ಯೇಕತೆಯನ್ನು ದೃಢೀಕರಿಸುವ ಮತ್ತು ತಮ್ಮ ವೈಯಕ್ತಿಕ ಜೀವನಕ್ಕೆ ಗೌರವವನ್ನು ನೀಡುವಂತೆ ಜಂಟಿ ಹೇಳಿಕೆ ನೀಡಿದ್ದಾರೆ. ಈ ಜೋಡಿ ಪ್ರತ್ಯೇಕ ಆಗುವ ಬಗ್ಗೆ ಹೇಳಿಕೆ ನೀಡಿದ್ದಾರೆ. "ನಮ್ಮ ವೈಯಕ್ತಿಕ ಜೀವನದಲ್ಲಿ ಕೆಲವು ಅನಗತ್ಯ ಕಮೆಂಟ್ಸ್ ಬರುತ್ತಿವೆ. ಇದು ತುಂಬಾ ನೋವಿನ ಸಂಗತಿ. ನಾವು ಬೇರೆಯಾಗಲು ನಿರ್ಧರಿಸಿರುವುದು ನಿಜ. ಈ ಪರಿಸ್ಥಿತಿಯನ್ನು ಖಾಸಗಿ ಮತ್ತು ಶಾಂತಿಯುತ ರೀತಿಯಲ್ಲಿ ಪ್ರಕ್ರಿಯೆಗೊಳಿಸಲು ಅಗತ್ಯ ಸಮಯವನ್ನು ತೆಗೆದುಕೊಳ್ಳುತ್ತಿದ್ದೇವೆ. ದಯವಿಟ್ಟು ನಮ್ಮ ಸಂಬಂಧದ ಬಗ್ಗೆ ಸುಳ್ಳು ಕಥೆಗಳು ಮತ್ತು ತಪ್ಪು ಮಾಹಿತಿಗಳನ್ನು ಹರಡಬೇಡಿ ಎಂದು ಜೋಡಿ ಹೇಳಿಕೊಂಡಿದೆ.
36
ಜೋಡಿ ಹೇಳಿದ್ದೇನು?
ಚರ್ಚೆಯ ನಂತರ, ನಾವು ಪರಸ್ಪರ ಗೌರವ ಮತ್ತು ತಿಳಿವಳಿಕೆಯೊಂದಿಗೆ ಪ್ರತ್ಯೇಕವಾಗುತ್ತಿದ್ದೇವೆ. ಸದ್ಯಕ್ಕೆ, ನಾವು ಈ ಸಮಯವನ್ನು ಖಾಸಗಿಯಾಗಿ, ಶಾಂತಿ ಮತ್ತು ತಿಳಿವಳಿಕೆಯಿಂದ ನಿರ್ವಹಿಸುವತ್ತ ಗಮನಹರಿಸುತ್ತಿದ್ದೇವೆ. ಭವಿಷ್ಯದಲ್ಲಿ ನಮ್ಮ ಸ್ನೇಹವನ್ನು ಪಾಲಿಸಲು ನಾವು ಶ್ರಮಿಸುತ್ತೇವೆ. ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಮತ್ತು ನಿಮ್ಮ ನಿರಂತರ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಮೌನಿ ಮತ್ತು ಸೂರಜ್ ಹೇಳಿದ್ದಾರೆ.
ಇದರ ನಡುವೆಯೇ, ನಟಿ ದಿಶಾ ಪಟಾನಿ ಜೊತೆಗಿನ ಫೋಟೋಗಳು ಮತ್ತಷ್ಟು ಕುತೂಹಲ ಕೆರಳಿಸಿವೆ. ಅದನ್ನು ಖುದ್ದು ಮೌನಿ ಅವರೇ ಪೋಸ್ಟ್ ಮಾಡಿದಂತೆ ಹರಡಲಾಗುತ್ತಿದೆ. "ಒಂದು ಅಧ್ಯಾಯ ಮುಗಿದ ನಂತರ, ನಾನು ನನ್ನ ಶಾಶ್ವತ ಪ್ರೀತಿಯನ್ನು ಕಂಡುಕೊಂಡಿದ್ದೇನೆ. ಹೌದು... ದಿಶಾ ಮತ್ತು ನಾನು ಈ ಪ್ರೇಮಕಥೆಯನ್ನು ಮದುವೆಯನ್ನಾಗಿ ಪರಿವರ್ತಿಸಲು ಸಿದ್ಧರಿದ್ದೇವೆ. ಈಗ ನೋವಿನಿಂದ ಸಂತೋಷದ ಪ್ರಯಾಣ ಶಾಶ್ವತವಾಗಿ ಪ್ರಾರಂಭವಾಗುತ್ತದೆ ಎಂಬಂತೆ ಬರೆಯಲಾಗಿದೆ.
56
ಅಸಲಿತ್ತೇನು?
ಆದರೆ ಇದರ ಅಸಲಿಯತ್ತೇ ಬೇರೆ. ಇದು ಫೇಕ್ ಸುದ್ದಿ. ಈ ನಟಿಯರ ಫೋಟೋ ಅಸಲಿಯದ್ದೇ. ಆದರೆ ಹರಡುತ್ತಿರುವ ಸುದ್ದಿ ಮಾತ್ರ ನಕಲಿ ಎನ್ನುವುದು ಫ್ಯಾಕ್ಟ್ ಚೆಕ್ನಿಂದ ತಿಳಿದುಬಂದಿದೆ. ಅಸಲಿಗೆ ಈ ವೈರಲ್ ಫೋಟೋ ಕಳೆದ ವರ್ಷ, ಜೂನ್ 2025 ರಲ್ಲಿ ಇಬ್ಬರು ನಟಿಯರು ದಿಶಾ ಪಟಾನಿಯವರ ಹುಟ್ಟುಹಬ್ಬದಂದು ಇಸ್ಕಾನ್ ದೇವಸ್ಥಾನಕ್ಕೆ ಭೇಟಿ ನೀಡಿದಾಗ ತೆಗೆದುಕೊಂಡದ್ದು.
66
ನೆಟ್ಟಿಗರ ಕಮೆಂಟ್ಸ್
ಮೌನಿ ರಾಯ್ ಮತ್ತು ಸೂರಜ್ ನಂಬಿಯಾರ್ ಅವರ ಪ್ರತ್ಯೇಕತೆಯ ವದಂತಿಗಳು ಹಲವಾರು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಹರಡುತ್ತಿದ್ದವು. ವೈರಲ್ ಪೋಸ್ಟ್ ನಂತರ, ಅನೇಕ ಬಳಕೆದಾರರು ಸತ್ಯವನ್ನು ತಿಳಿಯದೆ ದಿಶಾ ಪಟಾನಿಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಕಾಮೆಂಟ್‌ಗಳು ಕಂಡುಬಂದವು. ಆದಾಗ್ಯೂ, ಸತ್ಯಗಳು ಬೆಳಕಿಗೆ ಬಂದ ನಂತರ, ಅನೇಕ ಜನರು ನಕಲಿ ಸುದ್ದಿಗಳನ್ನು ಹರಡುವವರನ್ನು ಟೀಕಿಸಿದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.