ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಅಧಿಕಾರ ಸ್ವೀಕರಿಸಿದ ನಂತರ, ಅವರ ಪತ್ನಿ ಸಂಗೀತಾರ ವಿಚ್ಛೇದನ ಅರ್ಜಿಯ ಹಿನ್ನೆಲೆಯಲ್ಲಿ ನಟಿ ತ್ರಿಷಾ ಜೊತೆಗಿನ ಸಂಬಂಧದ ಬಗ್ಗೆ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಪ್ರಮಾಣವಚನ ಸಮಾರಂಭದಲ್ಲಿ ತ್ರಿಷಾ ಕಾಣಿಸಿಕೊಂಡಿದ್ದರು.
ತಮಿಳುನಾಡಿನಲ್ಲಿ ನಡೆದ ವಿಧಾನಸಭೆ ಚುನಾವಣೆ, ರಾಜ್ಯ ರಾಜಕಾರಣದಲ್ಲಿ ದೊಡ್ಡ ಬದಲಾವಣೆಯನ್ನೇ ತಂದಿದೆ. ದಕ್ಷಿಣ ಭಾರತದ ಸೂಪರ್‌ಸ್ಟಾರ್ ಮತ್ತು ಟಿವಿಕೆ ಪಕ್ಷದ ಅಧ್ಯಕ್ಷರಾದ ವಿಜಯ್ ಅಧಿಕಾರಕ್ಕೆ ಬಂದಿದ್ದಾರೆ. ಇನ್ನು ಮುಂದೆ ತಮಿಳುನಾಡು ರಾಜಕೀಯದಲ್ಲಿ ಏನೆಲ್ಲಾ ಆಗಲಿದೆ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದಾರೆ. ವಿಜಯ್ ಅಧಿಕಾರಕ್ಕೇರಿದ್ದು ಒಂದು ಕಡೆಯಾದರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ನಟಿ ತ್ರಿಷಾ ಕೃಷ್ಣನ್ ಅವರದ್ದೇ ಚರ್ಚೆ.
25
ಸಂಗೀತಾ ಡಿವೋರ್ಸ್ ಅರ್ಜಿ
ವಿಜಯ್ ಪತ್ನಿ ಸಂಗೀತ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ, ವಿಜಯ್-ತ್ರಿಷಾ ಸಂಬಂಧದ ಬಗ್ಗೆ ತಮಿಳುನಾಡಿನಲ್ಲಿ ಮತ್ತೆ ಮಾತುಗಳು ಶುರುವಾಗಿವೆ. ವಿಜಯ್‌ಗೆ ಚಿತ್ರರಂಗದ ಪ್ರಮುಖ ನಟಿಯೊಬ್ಬರ ಜೊತೆ ಸಂಬಂಧವಿದೆ ಎಂದು ಸಂಗೀತ ತಮ್ಮ ವಿಚ್ಛೇದನ ಅರ್ಜಿಯಲ್ಲಿ ಆರೋಪಿಸಿದ್ದರು.
35
ಇಬ್ಬರ ನಡುವಿನ ರಿಲೇಶನ್‌ಶಿಪ್
ಚುನಾವಣೆ ಫಲಿತಾಂಶ ಬಂದ ನಂತರ ವಿಜಯ್ ಜೊತೆ ತ್ರಿಷಾ ಕಾಣಿಸಿಕೊಂಡಿದ್ದನ್ನು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸಂಭ್ರಮಿಸಲಾಯಿತು. ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತ್ರಿಷಾ ಬಂದಿದ್ದು, ವಿಜಯ್ ಅವರ ತಾಯಿಯನ್ನು ಅಪ್ಪಿಕೊಂಡಿದ್ದು, ಸಮಾರಂಭದ ನಂತರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಫೋಟೋಗಳು. ಇವೆಲ್ಲವೂ ದೊಡ್ಡ ಸುಳಿವು ನೀಡುತ್ತಿವೆ ಎಂದು ದಳಪತಿ ಅಭಿಮಾನಿಗಳು ಹೇಳುತ್ತಿದ್ದಾರೆ. ಆದರೆ, ತಮ್ಮ ಸಂಬಂಧದ ಬಗ್ಗೆ ಹಬ್ಬಿರುವ ಈ ಸುದ್ದಿಗಳ ಬಗ್ಗೆ ವಿಜಯ್ ಆಗಲಿ, ತ್ರಿಷಾ ಆಗಲಿ ಇದುವರೆಗೂ ಎಲ್ಲೂ ಬಾಯಿ ಬಿಟ್ಟಿಲ್ಲ ಅನ್ನೋದು ಕೂಡ ಗಮನಿಸಬೇಕಾದ ಅಂಶ.
ಈಗ ತ್ರಿಷಾ ಅವರದ್ದೇ ಒಂದು ಹೊಸ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಕಾರಿನಲ್ಲಿ ಕುಳಿತಿದ್ದ ತ್ರಿಷಾ ಅವರನ್ನು ಸುತ್ತುವರಿದ ಅಭಿಮಾನಿಗಳು ಕೇಳಿದ ಪ್ರಶ್ನೆ ಮತ್ತು ಅದಕ್ಕೆ ಅವರು ಕೊಟ್ಟ ಉತ್ತರ ಎಲ್ಲರ ಗಮನ ಸೆಳೆದಿದೆ. 'ದಳಪತಿಗೆ ನಾವು ಕೇಳಿದ್ವಿ ಅಂತ ಹೇಳಿ' ಎಂದು ಹೊರಗೆ ನೆರೆದಿದ್ದ ಅಭಿಮಾನಿಗಳು ತ್ರಿಷಾಗೆ ಹೇಳುತ್ತಾರೆ. ಇದಕ್ಕೆ ತ್ರಿಷಾ, 'ಕಂಡಿಪಾ' (ಖಂಡಿತ) ಅಂತ ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಇದೆಲ್ಲದರ ನಡುವೆ, ವಿಜಯ್ ಮುಖ್ಯಮಂತ್ರಿಯಾದ ಮೇಲೆ ಅವರ ವಿಚ್ಛೇದನ ಅರ್ಜಿಯ ಕಥೆ ಏನಾಗಲಿದೆ ಎಂಬುದನ್ನು ಕೂಡ ತಮಿಳುನಾಡು ಜನತೆ ಕಾದು ನೋಡುತ್ತಿದೆ. ಈ ಹಿಂದೆ ಕೋರ್ಟ್‌ನಿಂದ ಹೊರಗೆ ಈ ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ ಎಂಬ ವರದಿಗಳು ಕೂಡ ಬಂದಿದ್ದವು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.