ವಿಚ್ಛೇದನವಾದರೂ ಮಾಜಿ ಪತ್ನಿ , ಮಗನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಲಕ್ಸುರಿ ಕಾರ್ ಉಡುಗೊರೆ ನೀಡಿದ ಹಾರ್ದಿಕ್ ಪಾಂಡ್ಯ

Published : Feb 22, 2026, 11:59 AM ISTUpdated : Feb 22, 2026, 12:03 PM IST

Hardik Pandya car gift to ex wife:  ವಿಚ್ಛೇದನದ ನಂತರವೂ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿ ನತಾಶಾ ಸ್ಟಂಕೋವಿಕ್ ಮತ್ತು ಪುತ್ರ ಅಗಸ್ತ್ಯನಿಗೆ 4 ಕೋಟಿ ಮೌಲ್ಯದ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. 

PREV
16
ವೈಯಕ್ತಿಕ ಕಾರಣಕ್ಕೆ ಸಿಕ್ಕಾಪಟ್ಟೆ ಟ್ರೇಡಿಂಗ್‌ನಲ್ಲಿರುವ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ

ಕೆಲ ದಿನಗಳಿಂದ ಹಾರ್ದಿಕ್ ಪಾಂಡ್ಯ ಸಖತ್ ಸುದ್ದಿಯಲ್ಲಿದ್ದಾರೆ. ವಿಚ್ಛೇದನದ ನಂತರ ತಮ್ಮ ಹೊಸ ಗರ್ಲ್‌ಫ್ರೆಂಡ್ ಮಹೀಕಾ ಶರ್ಮಾ ಜೊತೆ ಸುತ್ತಾಡ್ತಿರುವ ಹಾರ್ದಿಕ್ ಪಾಂಡ್ಯ ಆಕೆಯ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ಫೋಟೋಗಳು, ಆಕೆಯ ಹೆಸರಿನ ಮೊದಲ ಅಕ್ಷರವನ್ನು ಕತ್ತಿನ ಹಿಂಭಾಗದ ಮೇಲೆ ಟ್ಯಾಟೂ ಹಾಕಿಸಿಕೊಂಡ ಫೋಟೋಗಳು ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಆಕೆಯ ಹುಟ್ಟುಹಬ್ಬವನ್ನು ಬಹಳ ಗ್ರ್ಯಾಂಡ್ ಆಗಿ ಆಚರಿಸುವ ಮೂಲಕ ಹಾರ್ದಿಕ್ ಸಾಕಷ್ಟು ಸುದ್ದಿಯಲ್ಲಿದ್ದರು. ಆದರೆ ಈಗ ಹಾರ್ದಿಕ್ ಪಾಂಡ್ಯ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ತನ್ನ ಸಾಕುನಾಯಿಗೆ ವರನ ಕಡೆಯವರು ಥಳಿಸಿದ್ದಕ್ಕೆ ಮದುವೆಯನ್ನೇ ಕ್ಯಾನ್ಸಲ್ ಮಾಡಿದ ವಧು

26
ಮಾಜಿ ಪತ್ನಿ ನತಾಶಾ ಹಾಗೂ ಮಗನಿಗೆ ದುಬಾರಿ ಉಡುಗೊರೆ

ಹೌದು ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ಪತ್ನಿ ಸೈಬೀರಿಯಾ ಮೂಲದ ನತಾಶಾ ಸ್ಟಂಕೋವಿಕ್ ಹಾಗೂ ಮಗ ಆಗಸ್ತ್ಯನಿಗಾಗಿ 4 ಕೋಟಿ ಮೌಲ್ಯದ ಲಕ್ಸುರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಲ್ಯಾಂಡ್ ರೋವರ್ ಡಿಫೆಂಡರ್‌ ಅನ್ನು ಹಾರ್ದಿಕ್ ಪಾಂಡ್ಯ ನತಾಶಾ ಹಾಗೂ ಆಗಸ್ತ್ಯಗೆ ಉಡುಗೊರೆಯಾಗಿ ನೀಡಿದ್ದಾರೆ. ಹಾರ್ದಿಕ್ ಪಾಂಡ್ಯಾ ಹಾಗೂ ನತಾಶ 2024ರ ಜುಲೈನಲ್ಲಿ ಪರಸ್ಪರ ದೂರ ಆಗಿದ್ದಾರೆ. ಹೀಗಿದ್ದೂ ಮಾಜಿ ಪತ್ನಿ ಹಾಗೂ ಮಗನಿಗೆ ಅವರು ನೀಡಿದ ಈ ದುಬಾರಿ ಉಡುಗೊರೆ ಅಚ್ಚರಿಯ ಜೊತೆಗೆ ಹಾರ್ದಿಕ್ ಅವರ ದೊಡ್ಡತನಕ್ಕೆ ಕಾರಣವಾಗಿದೆ. ಅನೇಕರು ಹಾರ್ದಿಕ್ ಅವರನ್ನು ಕಾಮೆಂಟ್‌ಗಳಲ್ಲಿ ಹೊಗಳುತ್ತಿದ್ದಾರೆ.

ಇದನ್ನೂ ಓದಿ: ದೇಶದ ಮಾನ ವಿಶ್ವಮಟ್ಟದಲ್ಲಿ ಹರಾಜು ಹಾಕಲು ಕಾಂಗ್ರೆಸ್ ಯತ್ನ: ಎಐ ಶೃಂಗಸಭೆಯಲ್ಲಿ 'ಕೈ' ಟಾಪ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಆಕ್ರೋಶ

36
4 ಕೋಟಿ ಮೌಲ್ಯದ ರೇಂಜ್ ರೋವಾರ್ ಡಿಫೆಂಡರ್ ಕೊಡುಗೆ

ನಿಜವಾಗಿ ಈ ಉಡುಗೊರೆಯನ್ನು ಹಾರ್ದಿಕ್ ಅವರು ಮಾಜಿ ಪತ್ನಿಗಾಗಿ ನೀಡಿದ್ದಲ್ಲ, ಬದಲಾಗಿ ಪುತ್ರ ಅಗಸ್ತ್ಯನ ಮೇಲಿನ ಪ್ರೀತಿಗಾಗಿ ನೀಡಿದ್ದಾರೆ. ಅಗಸ್ತ್ಯನನ್ನು ಅವರ ಮಾಜಿ ಪತ್ನಿ ನತಾಶಾ ನೋಡಿಕೊಳ್ಳುತ್ತಿರುವುದರಿಂದ ಈಗ ಅವರೇ ಮಗನ ಜೊತೆಗೆ ಬಂದು ಈ ದುಬಾರಿ ಉಡುಗೊರೆಯನ್ನು ಸ್ವೀಕರಿಸಿದ್ದಾರೆ. ಮುಂಬೈ ಲ್ಯಾಂಡ್ ರೋವರ್ ಸಂಸ್ಥೆ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಸುಂದರ ಕ್ಷಣದ ಫೋಟೋ ವೀಡಿಯೋಗಳನ್ನು ಪೋಸ್ಟ್ ಮಾಡಿದೆ.

ಇದನ್ನೂ ಓದಿ: ಕಲಬುರಗಿ: ಪರೀಕ್ಷೆಯಲ್ಲಿ ನಕಲು ಪ್ರಶ್ನಿಸಿದ್ದಕ್ಕೆ ರೌಡಿಯಾಗಿ ಬದಲಾದ ಮೆಡಿಕಲ್ ವಿದ್ಯಾರ್ಥಿ: ಪ್ರೊಫೆಸರ್ ಮೇಲೆಯೇ ಹಲ್ಲೆ: ವೀಡಿಯೋ

46
ಅಪ್ಪ ಹಾರ್ದಿಕ್ ಕೊಟ್ಟ ಕಾರನ್ನು ಸ್ವೀಕರಿಸಿದ ಮಗ ಅಗಸ್ತ್ಯ ಮಾಜಿ ಪತ್ನಿ ನತಾಶಾ

ಫೋಟೋಗಳಲ್ಲಿ ಆಗಸ್ತ್ಯ ಹಾಗೂ ನತಾಶಾ ಸ್ಟಂಕೋವಿಕ್ ಇಬ್ಬರು ಜೊತೆಯಾಗಿ ಈ ಲಕ್ಸುರಿ ಕಾರನ್ನು ಸ್ವೀಕರಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತೊಮ್ಮೆ ತಮ್ಮ ಡಿಫೆಂಡರ್ ಖರೀದಿಸಲು ನವನೀತ್ ಮೋಟಾರ್ಸ್ ಅನ್ನು ಆಯ್ಕೆ ಮಾಡಿಕೊಂಡರು. ನಂಬಿಕೆಯ ಮೇಲೆ ನಿರ್ಮಿಸಲಾದ ಸಂಬಂಧ. ಶ್ರೇಷ್ಠತೆಯಲ್ಲಿ ಆಧಾರವಾಗಿರುವ ನಿರ್ಧಾರ. ಲ್ಯಾಂಡ್ ರೋವರ್ ಡಿಫೆಂಡರ್‌ನ್ನು ಮುಂಬೈನಲ್ಲಿ ಅಗಸ್ತ್ಯ ಪಾಂಡ್ಯ ಮತ್ತು ಶ್ರೀಮತಿ ಸ್ಟಾಂಕೋವಿಕ್ ಅವರಿಗೆ ವಿತರಿಸಲಾಗಿದೆ ಎಂದು ಬರೆದುಕೊಂಡಿದ್ದಾರೆ. ಸುಮಾರು 4 ಕೋಟಿ ರೂ. ಮೌಲ್ಯದ ಐಷಾರಾಮಿ ಎಸ್‌ಯುವಿ, ಲ್ಯಾಂಡ್ ರೋವರ್ ಡಿಫೆಂಡರ್ ಇದಾಗಿದೆ.

ಇದನ್ನೂ ಓದಿ: ಅಮ್ಮನ ಅಂಬಾರಿ: ಮೇವಿನ ಹೊರೆಯ ಜೊತೆ ಮಗನನ್ನು ಕಟ್ಟಿ ತಲೆಯ ಮೇಲಿಟ್ಟು ಸಾಗಿದ ತಾಯಿ

56
ಹಾರ್ದಿಕ್ ನಿರ್ಧಾರಕ್ಕೆ ಅಭಿಮಾನಿಗಳು ಅಚ್ಚರಿ

ಹಾರ್ದಿಕ್ ಅವರ ನಿರ್ಧಾರಕ್ಕೆ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ನತಾಶಾ ಮಗನ ಜೊತೆಗೆ ಈ ಕಪ್ಪು ಲ್ಯಾಂಡ್ ರೋವರ್ ಡಿಫೆಂಡರ್‌ನೊಂದಿಗೆ ಪೋಸ್ ನೀಡಿದ್ದಾರೆ. ಈ ಐಷಾರಾಮಿ ವಾಹನಕ್ಕೆ ಕಸ್ಟಮೈಸೇಶನ್ ಮತ್ತು ರೂಪಾಂತರವನ್ನು ಅವಲಂಬಿಸಿ 3 ಕೋಟಿಯಿಂದ 4 ಕೋಟಿ ರೂ.ಗಳವರೆಗೆ ವೆಚ್ಚವಾಗುತ್ತದೆ. ನತಾಶಾ ಹಾಗೂ ಹಾರ್ದಿಕ್ ಜುಲೈ 2024 ರಲ್ಲಿ ಅಧಿಕೃತವಾಗಿ ಬೇರ್ಪಟ್ಟಿದ್ದು, ಮಗ ಆಗಸ್ತ್ಯನನ್ನು ಇಬ್ಬರು ನೋಡಿಕೊಳ್ಳುತ್ತಾರೆ. ಆದರೆ ಹಾರ್ದಿಕ್ ಹೆಚ್ಚಾಗಿ ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿರುವುದರಿಂದ ಹೆಚ್ಚಿನ ಸಮಯವನ್ನು ಆಗಸ್ತ್ಯ ಅಮ್ಮನ ಜೊತೆಗೆ ಕಳೆಯುತ್ತಾನೆ.

ಇದನ್ನೂ ಓದಿ: ನಾವು ದೇಶಕ್ಕಾಗಿ ಹೋರಾಡಿದೆವು ಆದರೆ ದೇಶ ನಮ್ಮ ಕೈ ಬಿಟ್ಟಿತು: ಬಲೂಚ್‌ ಹೋರಾಟಗಾರರ ಕೈಗೆ ಸಿಕ್ಕಿದ ಪಾಕ್ ಯೋಧರ ಅಳಲು

66
ಹೊಸ ಗೆಳತಿ ಮಹಿಕಾ ಜೊತೆ ಎಂಜಾಯ್ ಮಾಡ್ತಿರುವ ಹಾರ್ದಿಕ್

ಹಾರ್ದಿಕ್ ಇತ್ತೀಚೆಗೆ ಮಹಿಕಾ ಶರ್ಮಾ ಅವರೊಂದಿಗಿನ ಓಡಾಟ ಡೇಟಿಂಗ್ ಕಾರಣಕ್ಕೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಆದರೂ ತಮ್ಮ ಮಗನಿಗೆ ತಾನು ಯಾವುದೇ ರೀತಿಯಲ್ಲಿ ಕಡಿಮೆ ಮಾಡಿಲ್ಲ ಎಂಬುದನ್ನು ತೋರಿಸಿಕೊಳ್ಳುವ ಪ್ರಯತ್ನವನ್ನು ಅವರು ಮುಂದುವರೆಸುವ ಜೊತೆಗೆ ಆತನೂ ತನ್ನ ಪ್ರಮುಖ ಆದ್ಯತೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಮಹಿಕಾ ಶರ್ಮಾ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ ವೀಡಿಯೋ ಫೋಟೋಗಳು ಇತ್ತೀಚೆಗೆ ಇಂಟರ್‌ನೆಟ್‌ನಲ್ಲಿ ಸಾಕಷ್ಟು ವೈರಲ್ ಆಗಿವೆ. ಮತ್ತೊಂದೆಡೆ ಅಭಿಮಾನಿಗಳು ಕೂಡ ಹಾರ್ದಿಕ್ ಅವರು ಮಾಜಿ ಪತ್ನಿ ಮಗನಿಗೆ ನೀಡಿದ ಉಡುಗೊರೆ ನೋಡಿ ಭಾವುಕರಾಗಿದ್ದಾರೆ.

ಇದನ್ನೂ ಓದಿ: ಚೆನ್ನೈ ಶಿವ ದೇಗುಲಕ್ಕೆ ಭೇಟಿ ನೀಡಿ ನಿರರ್ಗಳವಾಗಿ ಶಿವ ತಾಂಡವ ಪಠಿಸಿದ ಪಾಪ್ ಗಾಯಕ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories