ಬೆಂಗಳೂರಿನಲ್ಲಿ, "ಲವ್ ಮಾಕ್ಟೇಲ್" ಸಿನಿಮಾದಂತೆ ತನ್ನ ಪತ್ನಿ ಕ್ಯಾನ್ಸರ್‌ನಿಂದ ನಿಧನಳಾಗಿದ್ದಾಳೆ ಎಂದು ಸುಳ್ಳು ಹೇಳಿ ಪವನ್ ಎಂಬಾತ ನರ್ಸ್ ಒಬ್ಬರನ್ನು ಮದುವೆಯಾಗಿದ್ದಾನೆ. ಮದುವೆಯಾದ ಎಂಟು ತಿಂಗಳ ನಂತರ, ಅಪರಿಚಿತ ಮಹಿಳೆಯ ಕರೆಯಿಂದ ಪವನ್‌ನ ಮೊದಲ ಪತ್ನಿ ಜೀವಂತವಿರುವ ಸತ್ಯ ಬಯಲಾಗಿದೆ.
ಲವ್ ಮಾಕ್ಟೇಲ್ ಸಿನಿಮಾ ಕಥೆಯಂತೆ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಸುಳ್ಳು ಹೇಳಿ ಮದುವೆಯಾಗಿರುವ ಗಂಡನ ವಿರುದ್ಧ ಮಹಿಳೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಂಡನ ಸುಳ್ಳಿನ ಕಥೆ ಬಯಲಾಗಿದ್ದು ಹೇಗೆ ಎಂಬುದನ್ನು ನೋಡೋಣ ಬನ್ನಿ.
24
ಲವ್ ಮಾಕ್ಟೇಲ್ ಸಿನಿಮಾ ಕಥೆ
ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕೆಲಸ ಮಾಡಿಕೊಂಡಿದ್ದು ಸಂಗೀತಾ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೆ ಒಂದು ವರ್ಷದ ಹಿಂದೆ ಪವನ್ ಎಂಬಾತನ ಪರಿಚಯವಾಗಿತ್ತು. ಪತ್ನಿ ಕ್ಯಾನ್ಸರ್‌ನಿಂದ ನಿಧನವಾಗಿದ್ದಾಳೆ ಎಂದು ಲವ್ ಮಾಕ್ಟೇಲ್ ಸಿನಿಮಾ ಕಥೆಯನ್ನು ಎಮೋಷನಲ್ ಆಗಿ ಹೇಳಿದ್ದನು. ಪವನ್ ಹೇಳಿದೆಲ್ಲವನ್ನು ಸಂಗೀತಾ ನಂಬಿದ್ದರು.
34
ಪವನ್ ಪ್ರೀತಿ ಒಪ್ಪಿಕೊಂಡ ಸಂಗೀತಾ
ಇದೇ ನೆಪದಲ್ಲಿ ಸಂಗೀತಾ ಅವರಿಗೆ ಪವನ್ ಹತ್ತಿರವಾಗಿ ಸ್ನೇಹ ಬೆಳೆಸಿಕೊಂಡಿದ್ದನು. ಪರಿಚಯದ ಬಳಿಕ ಸಂಗೀತಾಗೆ ಪವನ್ ಲವ್ ಪ್ರಪೋಸ್ ಸಹ ಮಾಡಿದ್ದನು. ಒಳ್ಳೆಯವನೆಂದು ಪವನ್ ಪ್ರೀತಿಯನ್ನು ಸಂಗೀತಾ ಒಪ್ಪಿಕೊಂಡಿದ್ದರು. ಎಂಟು ತಿಂಗಳ ಹಿಂದೆಯಷ್ಟೇ ಸಂಗೀತಾ ಮತ್ತು ಪವನ್ ಮದುವೆಯಾಗಿತ್ತು. ಮದುವೆ ಬಳಿಕ ಸಂಗೀತಾ ಕೆಲ ತಿಂಗಳು ವಿದೇಶದಲ್ಲಿ ನೆಲೆಸಿದ್ದರು.
ಇತ್ತೀಚೆಗೆ ವಿದೇಶದಿಂದ ಬಂದ ಸಂಗೀತಾ ಅವರಿಗೆ ಅಪರಿಚಿತ ಮಹಿಳೆಯೊಬ್ಬರು ಕರೆ ಮಾಡಿ, ತಾನು ಪವನ್ ಹೆಂಡತಿ ಎಂಬ ವಿಷಯ ತಿಳಿಸಿದ್ದಾರೆ. ಹಾಗೆಯೇ ಪವನ್, ಮತ್ತೋರ್ವ ಯುವತಿ ಜೊತೆ ರಿಲೇಶನ್‌ಶಿಪ್ ಇಟ್ಕೊಂಡಿರೋ ವಿಷಯ ಗೊತ್ತಾಗಿದೆ. ಸದ್ಯ ಗಂಡ ಪವನ್ ವಿರುದ್ಧ ಸಂಗೀತಾ ದೂರು ದಾಖಲಿಸಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.