ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ Virat Kohli ಮತ್ತು ಬಾಲಿವುಡ್ ನಟಿ Anushka Sharma ಇಂದಿಗೂ ಅಭಿಮಾನಿಗಳ ನೆಚ್ಚಿನ ಸೆಲೆಬ್ರಿಟಿ ಜೋಡಿಯಾಗಿದ್ದಾರೆ. ಆದರೆ ಅನೂಷ್ಕಾ ಅವರ ಜೀವನಕ್ಕೆ ಬರುವ ಮೊದಲು ಕೊಹ್ಲಿ ಹಲವಾರು ನಟಿ ಹಾಗೂ ಮಾಡೆಲ್‌ಗಳೊಂದಿಗೆ ಡೇಟಿಂಗ್ ವದಂತಿಗಳಿಂದ ಸುದ್ದಿಯಾಗಿದ್ದರು.
ಅಂಡರ್-19 ವಿಶ್ವಕಪ್ ಗೆದ್ದ ನಂತರ ವಿರಾಟ್ ಮತ್ತು ಮಾಜಿ ಮಿಸ್ ಇಂಡಿಯಾ ಸಾರಾ ಜೇನ್ ಡಯಾಸ್ ನಡುವೆ ಪ್ರೀತಿಯ ಸಂಬಂಧವಿದೆ ಎಂಬ ವದಂತಿಗಳು ಹರಡಿದ್ದವು. ಇಬ್ಬರೂ ತಮ್ಮ ಸಂಬಂಧವನ್ನು ಎಂದಿಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ.
25
Izabelle Leite
ವಿರಾಟ್ ಅವರ ಜೀವನದಲ್ಲಿ ಹೆಚ್ಚು ಚರ್ಚೆಯಾದ ಸಂಬಂಧಗಳಲ್ಲಿ ಇದು ಒಂದು. ಬ್ರೆಜಿಲಿಯನ್ ಮಾಡೆಲ್ ಇಸಬೆಲ್ ಲೈಟ್ ಮತ್ತು ವಿರಾಟ್ 2012 ರಿಂದ 2014ರ ನಡುವೆ ಸಂಬಂಧದಲ್ಲಿದ್ದರು ಎಂದು ವರದಿಗಳು ಹೇಳಿವೆ. ಇಸಬೆಲ್ ಕೂಡ ಒಂದು ಸಂದರ್ಶನದಲ್ಲಿ ಇಬ್ಬರೂ ಎರಡು ವರ್ಷ ಸಂಬಂಧದಲ್ಲಿದ್ದೆವು ಎಂದು ಹೇಳಿದ್ದರು.
35
Sanjjanaa Galrani
ಐಪಿಎಲ್ ಸಮಯದಲ್ಲಿ ಸ್ಯಾಂಜನಾ ಗಲ್ರಾಣಿ ಮತ್ತು ವಿರಾಟ್ ನಡುವೆ ಸ್ನೇಹಕ್ಕಿಂತ ಹೆಚ್ಚಿನ ಸಂಬಂಧವಿದೆ ಎಂಬ ವರದಿಗಳು ಬಂದಿದ್ದವು. ಆದರೆ ನಂತರ ಇದನ್ನು ಇಬ್ಬರೂ ಕೇವಲ ವದಂತಿ ಎಂದು ಹೇಳಿದ್ದರು.
45
Tamannaah Bhatia
ಒಂದು ಜಾಹೀರಾತಿನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ವಿರಾಟ್ ಮತ್ತು ತಮನ್ನಾ ಭಾಟಿಯಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇಬ್ಬರೂ ಈ ವಿಚಾರವನ್ನು ದೃಢಪಡಿಸಿರಲಿಲ್ಲ.
55
Sakshi Agarwal
ವಿರಾಟ್ ಕ್ರಿಕೆಟ್ ಲೋಕದಲ್ಲಿ ಬೆಳೆಯುತ್ತಿದ್ದ ಆರಂಭಿಕ ದಿನಗಳಲ್ಲಿ ಸಾಕ್ಷಿ ಅಗರ್ವಾಲ್ ಅವರೊಂದಿಗೆ ಹೆಸರು ತಳುಕಿಕೊಂಡಿತ್ತು. ಆದರೆ ಈ ಸಂಬಂಧ ಹೆಚ್ಚು ಕಾಲ ಮುಂದುವರೆಯಲಿಲ್ಲ ಎಂದು ವರದಿಗಳು ತಿಳಿಸಿವೆ.
ಕೊನೆಗೆ ಅನೂಷ್ಕಾ ಜೊತೆ ಪ್ರೀತಿಗೆ ಬಿದ್ದ ವಿರಾಟ್
2013ರಲ್ಲಿ ಜಾಹೀರಾತು ಶೂಟಿಂಗ್ ವೇಳೆ ಪರಿಚಯವಾದ ವಿರಾಟ್ ಮತ್ತು ಅನೂಷ್ಕಾ ಬಳಿಕ ಪ್ರೀತಿಯಲ್ಲಿ ಬಿದ್ದರು. ಕೆಲವು ಏರಿಳಿತಗಳ ನಂತರ ಇಬ್ಬರೂ 2017ರಲ್ಲಿ ಇಟಲಿಯಲ್ಲಿ ವಿವಾಹವಾದರು ಮತ್ತು ಈಗ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.