ಚಾಣಕ್ಯ(Chanikya) ತನ್ನ ನೀತಿಯನ್ನು ಹಲವಾರು ವಿಷಯಗಳನ್ನು ತಿಳಿಸಿದ್ದಾರೆ. ಅದರಲ್ಲಿ ಕೇವಲ ಆರ್ಥಿಕತೆಗೆ ಸಂಬಂಧಿಸಿದ ವಿಷಯ ಮಾತ್ರವಲ್ಲ, ಜೀವನ, ದಾಂಪತ್ಯ, ಸಂಬಂಧಗಳ ಬಗ್ಗೆ ಸಹ ಬರೆಯಲಾಗಿದೆ. ದಾಂಪತ್ಯ ಸುಖಮಯವಾಗಿರಲು ವಿವಾಹಿತ ಜೋಡಿಗಳು ಏನು ಮಾಡಬಾರದು ಎನ್ನುವ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಸುಳ್ಳುಗಳು(Lie)- ಚಾಣಕ್ಯನ ನೀತಿಯ ಪ್ರಕಾರ ಗಂಡ-ಹೆಂಡತಿ ಸಂಬಂಧದಲ್ಲಿ ಸುಳ್ಳುಗಳಿಗೆ ಸ್ಥಾನ ಇರಬಾರದು. ಸುಳ್ಳಿನಿಂದ ಸಂಬಂಧಗಳಲ್ಲಿ ಹೆಚ್ಚು ಸಮಸ್ಯೆ ಉಂಟಾಗುತ್ತದೆ. ವಿಷಯ ಎಷ್ಟೇ ಚಿಕ್ಕದಾಗಿರಲಿ, ನೀವು ಆರಂಭಿಸಿದ ಸಣ್ಣ ಸುಳ್ಳು ಮುಂದೆ ದೊಡ್ಡ ಕಲಹವಾಗಿ ಬೆಳೆಯಬಹುದು. ಆದುದರಿಂದ ಸುಳ್ಳನ್ನು ಹೇಳಬಾರದು.
ಸುಳ್ಳುಗಳು ಈ ಸಂಬಂಧದಲ್ಲಿ ಪ್ರವೇಶಿಸಿದಾಗ, ಈ ಸಂಬಂಧ(Relationship)ವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಆದ್ದರಿಂದ ನೀವು ಸುಳ್ಳುಗಳಿಂದ ದೂರವಿರಬೇಕು. ಒಬ್ಬರು ಒಬ್ಬರಿಗೊಬ್ಬರು ಸಮರ್ಪಿತರಾಗಿರಬೇಕು. ಈ ಪವಿತ್ರ ಸಂಬಂಧದಲ್ಲಿ ಸುಳ್ಳುಗಳನ್ನು ಎಂದಿಗೂ ಪ್ರವೇಶಿಸಲು ಬಿಡಬೇಡಿ.
ಮೋಸ(Cheat) : ಚಾಣಕ್ಯನ ಪ್ರಕಾರ ಮೋಸ ಮಾಡುವುದು ಅತ್ಯಂತ ಕೆಟ್ಟ ಅಭ್ಯಾಸಗಳಲ್ಲಿ ಒಂದಾಗಿದೆ. ಮೋಸ ಎಂದರೆ ನಂಬಿಕೆ ದ್ರೋಹ ಎಂದು ಅರ್ಥ. ಗಂಡ ಹೆಂಡತಿ ಸಂಬಂಧದಲ್ಲಿ ನಂಬಿಕೆ ದ್ರೋಹ ಉಂಟಾದರೆ ಅದರಿಂದ ಮುಂದೆ ದಾಂಪತ್ಯದಲ್ಲಿ ಬಿರುಕು ಮೂಡುತ್ತದೆ.
ಗಂಡ ಹೆಂಡತಿಯ ಸಂಬಂಧದಲ್ಲಿ ಮಾತ್ರವಲ್ಲ, ಬೇರೆ ಯಾವುದೇ ಸಂಬಂಧದಲ್ಲಿ ಮೋಸ ಮಾಡಬಾರದು. ಮೋಸವನ್ನು ವಿಷದಂತೆಯೇ ಪರಿಗಣಿಸಲಾಗಿದೆ. ಗಂಡ-ಹೆಂಡತಿಯ ನಡುವಿನ ಸಂಬಂಧವನ್ನು ಈ ತಪ್ಪು ಅಭ್ಯಾಸದಿಂದ ದೂರವಿಡಬೇಕು. ಇದರಿಂದ ಸಂಬಂಧ ಉತ್ತಮವಾಗಿರುತ್ತದೆ.
ಅಹಂಕಾರ : ಚಾಣಕ್ಯನ ಪ್ರಕಾರ ಅಹಂನಿಂದ ದೂರವಿರಬೇಕು. ಅಹಂ ಗಂಡ ಹೆಂಡತಿಯ ನಡುವಿನ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಈ ಸಂಬಂಧವು ಪರಸ್ಪರ ಮೀಸಲಾಗಿರಬೇಕು. ಪರಸ್ಪರ ಸಮರ್ಪಣೆಯ ಭಾವನೆ ಕಡಿಮೆಯಾದಾಗ, ಈ ಸಂಬಂಧವು ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. ಈ ಸಂಬಂಧದಲ್ಲಿ ಅಹಂ ಮತ್ತು ಕೋಪಕ್ಕೆ ಅವಕಾಶ ಇರಬಾರದು.
ಕೋಪ(Angry): ಚಾಣಕ್ಯನ ನೀತಿಯ ಪ್ರಕಾರ ಕೋಪದಿಂದ ದೂರವಿರಬೇಕು. ಕೋಪವು ಗಂಡ-ಹೆಂಡತಿಯ ನಡುವಿನ ಸಂಬಂಧವನ್ನು ದುರ್ಬಲಗೊಳಿಸುತ್ತದೆ. ಇದರಿಂದ ವಿವಾದ, ವಿರಸದ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ನೀವು ಅದರಿಂದ ದೂರವಿರಲು ಪ್ರಯತ್ನಿಸಬೇಕು.