15ನೇ ವಾರ್ಷಿಕೋತ್ಸವಕ್ಕೆ ಗಿಫ್ಟ್‌ ಎಂದು ಡಿವೋರ್ಸ್ ನೀಡಿದ ಪತಿ: ಮಕ್ಕಳ ಭೇಟಿ ಮಾಡಲಾಗದೇ ಕೊರಗುತ್ತಿರುವ ನಟಿ

Published : Jan 13, 2026, 08:53 PM IST

ಬಾಲಿವುಡ್ ನಟಿ ಸೆಲೀನಾ ಜೇಟ್ಲಿ ತಮ್ಮ ದಾಂಪತ್ಯ ಜೀವನದ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ವಿವಾಹ ವಾರ್ಷಿಕೋತ್ಸವದ ಉಡುಗೊರೆ ನೀಡುವುದಾಗಿ ಕರೆದು ಪತಿ ವಿಚ್ಛೇದನ ನೋಟಿಸ್ ನೀಡಿದ್ದನ್ನು ನೆನೆದ ಅವರು

PREV
18
ಸೆಲೀನಾ ಜೇಟ್ಲಿ ಬಾಳಲ್ಲಿ ವಿಧಿಯಾಟ

ಬಾಲಿವುಡ್‌ ನಟಿ ಸೆಲೀನಾ ಜೇಟ್ಲಿ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಕಳೆದುಕೊಂಡು ಹಲವು ದಿನಗಳೇ ಕಳೆದಿವೆ. ಒಂದೆಡೆ ತಮ್ಮ ಸೋದರ ಯುಎಇಯ ಜೈಲಿನಲ್ಲಿ ಸಿಲುಕಿರುವ ಬಗ್ಗೆ ದುಃಖದಲ್ಲಿರುವ ಸೆಲೀನಾಗೆ ಅವರ ದಾಂಪತ್ಯ ಜೀವನವು ಕವಲು ದಾರಿಯನ್ನು ಹಿಡಿದಿರುವುದರಿಂದ ಮೂವರು ಮಕ್ಕಳನ್ನು ನೋಡುವುದಕ್ಕೆ ಸಾಧ್ಯವಾಗದೇ ನೋವನುಭವಿಸುತ್ತಿದ್ದಾರೆ. ಪತಿ ನಡೆಸಿರುವ ದೌರ್ಜನ್ಯವನ್ನು ವಿರೋಧಿಸಿ ಜೀವ ಉಳಿಸಿಕೊಳ್ಳುವುದಕ್ಕಾಗಿ ಮಕ್ಕಳನ್ನು ಕೂಡ ಬಿಟ್ಟು ಬಂದಿರುವ ಸೆಲೀನಾಗೆ ಮಕ್ಕಳ ನೆನಪು ಕಾಡುತ್ತಿದ್ದು, ಈ ಬಗ್ಗೆ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಉದ್ದನೇಯ ಪೋಸ್ಟ್ ಮೂಲಕ ಬರೆದುಕೊಂಡಿದ್ದಾರೆ.

28
ವಿವಾಹ ವಾರ್ಷಿಕೋತ್ಸವದ ಉಡುಗೊರೆ ಎಂದು ಡಿವೋರ್ಸ್ ನೀಡಿದ ಪತಿ

ತುಂಬಾ ಭಾವನಾತ್ಮಕವಾದ ಉದ್ದನೇಯ ಬರಹದಲ್ಲಿ ಸೆಲೀನಾ, ಸೆಪ್ಟೆಂಬರ್‌ ಆರಂಭದಲ್ಲಿ ತಮ್ಮ ಆಸ್ಟ್ರೀಯಾದಲ್ಲಿರುವ ಮನೆ ಸಮೀಪದ ಪೋಸ್ಟ್ ಆಫೀಸ್‌ಗೆ ಕರೆದೊಯ್ದ ಆಕೆಯ ಗಂಡ ಪೀಟರ್ ಹಾಗ್ ಅಲ್ಲಿ ನಿನಗೆ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಬಂದಿದೆ ತೆಗೆದುಕೋ ಎಂದಿದ್ದ. ಅಲ್ಲಿ ನನಗೆ 15ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಉಡುಗೊರೆ ಎಂದು ಆತ ಡಿವೋರ್ಸ್ ನೋಟೀಸ್ ನೀಡಿದ್ದ. ಪೋಸ್ಟ್‌ ಆಫೀಸ್‌ವರೆಗೆ ಗಿಫ್ಟ್ ಕೊಡುವೆ ಎಂದು ಆತನೇ ಕರೆದುಕೊಂಡು ಹೋಗಿ ಕಾನೂನು ನೊಟೀಸ್ ನೀಡಿದ್ದ.

38
ರಾತ್ರೋರಾತ್ರಿ ಆಸ್ಟ್ರೀಯಾವನ್ನು ತೊರೆದ ಸೆಲೀನಾ

ಇದೊಂದು ವ್ಯವಸ್ಥಿತವಾದ ಅವಮಾನ ಹಾಗೂ ದಬ್ಬಾಳಿಕೆಯ ಭಾಗವಾಗಿತ್ತು. ಆತನ ಕಿರುಕುಳ ತಾಳಲಾರದೇ 2025ರ ಆಕ್ಟೋಬರ್ 11 ರಂದು ರಾತ್ರಿ 1 ಗಂಟೆ ಸುಮಾರಿಗೆ ತಾನು ನೆರೆಮನೆಯವರ ಸಹಾಯದಿಂದ ಆಸ್ಟ್ರೀಯಾವನ್ನು ತೊರೆದೆ. ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ, ನನ್ನ ಘನತೆ, ನನ್ನ ಮಕ್ಕಳು ಹಾಗೂ ನನ್ನ ಸೋದರನಿಗಾಗಿ ದೇಶ ಬಿಟ್ಟು ಪಲಾಯನ ಮಾಡದೇ ಬೇರೆ ವಿಧಿ ಇರಲಿಲ್ಲ ಎಂದು ಸೆಲೀನಾ ಹೇಳಿಕೊಂಡಿದ್ದಾರೆ. ತಾನು ಬಹಳ ಕಡಿಮೆ ಹಣದೊಂದಿಗೆ ಭಾರತಕ್ಕೆ ಮರಳಿದೆ ಮತ್ತು ಈಗ ತಾನು ತನ್ನ ಜೀವನವನ್ನೂ ಶೂನ್ಯದಿಂದ ಆರಂಭಿಸಬೇಕಿದೆ ಎಂದು ಸೆಲೀನಾ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

48
ಮಕ್ಕಳೊಂದಿಗೆ ಸಂವಹನಕ್ಕೆ ಅವಕಾಶ ನೀಡದ ಪತಿ

ಆಸ್ಟ್ರಿಯನ್ ಕೌಟುಂಬಿಕ ನ್ಯಾಯಾಲಯದ ಆದೇಶದಂತೆ ಮಕ್ಕಳ ಜಂಟಿ ಕಸ್ಟಡಿ ವ್ಯವಸ್ಥೆಯ ಅಸ್ತಿತ್ವದಲ್ಲಿರುವ ಆದೇಶದ ಹೊರತಾಗಿಯೂ ತನ್ನ ಪತಿ ತನ್ನ ಮೂವರು ಮಕ್ಕಳೊಂದಿಗೆ ನನಗೆ ಸಂವಹನ ನಡೆಸಲು ನಿರಾಕರಿಸುತ್ತಿದ್ದಾನೆ ನನ್ನ ಹೃದಯ ಇದರಿಂದ ಒಡೆದು ಹೋಗಿದೆ. ಮಕ್ಕಳನ್ನು ಸಂಪರ್ಕಿಸುವ ಪ್ರಯತ್ನಗಳೆಲ್ಲಾ ವಿಫಲವಾಗುತ್ತಿವೆ. ನನ್ನ ಮಕ್ಕಳನ್ನು ನನ್ನ ವಿರುದ್ಧವೇ ಉಪಾಯವಾಗಿ ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

58
ಭಾರತದಲ್ಲಿ ಎದುರಿಸುತ್ತಿರುವ ಕಾನೂನು ಹೋರಾಟದ ಬಗ್ಗೆಯೂ ಸೆಲೀನಾ ಮಾತು

ಇದರ ಜೊತೆಗೆ ಭಾರತದಲ್ಲಿ ತಾನು ಎದುರಿಸುತ್ತಿರುವ ಕಾನೂನು ಸವಾಲುಗಳ ಬಗ್ಗೆಯೂ ಮಾತನಾಡಿದ ನಟಿ, 2004ರಲ್ಲಿ ತನ್ನ ಮದುವೆಗೆ ವರ್ಷಗಳ ಮೊದಲು ಖರೀದಿಸಿದ ಆಸ್ತಿಯಾದ ತನ್ನ ಸ್ವಂತ ಮನೆಗೆ ಪ್ರವೇಶಿಸಲು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ತನ್ನ ಪತಿ ಈಗ ಅದರ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚುತ್ತಿರುವ ಕಾನೂನು ವೆಚ್ಚಗಳನ್ನು ನಿರ್ವಹಿಸಲು ತಾನು ಗಣನೀಯ ಪ್ರಮಾಣದ ಸಾಲವನ್ನು ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದಾರೆ.

68
ಸೌಹಾರ್ದಯುತವಾಗಿ ಬೇರ್ಪಡುವುದಕ್ಕೆ ಪ್ರಯತ್ನಿಸಿದ್ದೆ

ವಿಚ್ಛೇದನ ನೋಟಿಸ್ ನಂತರ, ಮಕ್ಕಳ ಕಲ್ಯಾಣಕ್ಕೆ ಆದ್ಯತೆ ನೀಡಿ, ಸೌಹಾರ್ದಯುತವಾಗಿ ಬೇರ್ಪಡುವುದಕ್ಕೆ ತಾನು ಪದೇ ಪದೇ ಪ್ರಯತ್ನಿಸಿದೆ. ಆದರೆ ಈ ಪ್ರಯತ್ನಗಳಿಗೆ ಪ್ರತಿಯಾಗಿ ಪತಿ ತನ್ನ ವಿವಾಹಪೂರ್ವ ಆಸ್ತಿಗಳು ಮತ್ತು ಷರತ್ತುಗಳಿಗೆ ಸಂಬಂಧಿಸಿದ ಬೇಡಿಕೆಗಳನ್ನಿಟ್ಟರು. ಇದು ವಿಚ್ಛೇದನದ ನಂತರವೂ ತನ್ನ ಸ್ವಾತಂತ್ರ್ಯ ಮತ್ತು ಘನತೆಯನ್ನು ಕಸಿದುಕೊಳ್ಳುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ.

78
ಇಡೀ ಪ್ರಪಂಚವು ಒಂದೇ ಕ್ಷಣದಲ್ಲಿ ತಲೆಕಳಗಾಯಿತು

ಮಕ್ಕಳಿಗೆ ಪ್ರಾಥಮಿಕ ಆರೈಕೆದಾರನಾಗಿದ್ದರೂ, ರಾತ್ರೋರಾತ್ರಿ, ನಾನು ತಾಯಿಯಾಗಿ ನನ್ನ ಪಾತ್ರವನ್ನು ಸಮರ್ಥಿಸಿಕೊಳ್ಳಬೇಕಾಯಿತು. ತನ್ನ ಇಡೀ ಪ್ರಪಂಚವು ಒಂದೇ ಕ್ಷಣದಲ್ಲಿ ತಲೆಕಳಗಾಯಿತು ಎಂದು ಹೇಳಿದ ಅವರು ತಮ್ಮ ಬರಹದ ಕೊನೆಗೆ ಈ ರೀತಿ ನರಕ ಅನುಭವಿಸುತ್ತಿರುವ ಅನೇಕರಿಗೆ ಧೈರ್ಯ ತುಂಬಿದ್ದು, ಅವರಿಗೆ ನೀವೊ ಒಂಟಿ ಅಲ್ಲ ನಿಮ್ಮೊಂದಿಗೆ ನಾನು ಇದ್ದೇನೆ ಎಂದಿದ್ದಾರೆ.

88
2011 ರಲ್ಲಿ ಆಸ್ಟ್ರಿಯಾದ ಹೋಟೆಲ್ ಉದ್ಯಮಿ ಪೀಟರ್ ಹಾಗ್‌ ಮದುವೆಯಾಗಿದ್ದ ಸೆಲೀನಾ

ಸೆಲೀನಾ ಅವರು ಪೀಟರ್ ವಿರುದ್ಧ ಕೌಟುಂಬಿಕ ಹಿಂಸಾಚಾರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಅವರ ಮೇಲೆ ಕೌಟುಂಬಿಕ ಹಿಂಸೆ, ಕ್ರೌರ್ಯದ ಆರೋಪ ಹೊರಿಸಿದ್ದಾರೆ. ಕೃತ್ಯದಿಂದ ತನಗಾದ ಆದಾಯ ಮತ್ತು ಆಸ್ತಿ ನಷ್ಟಕ್ಕೆ ಹೆಚ್ಚುವರಿ ಪರಿಹಾರದ ಜೊತೆಗೆ 50 ಕೋಟಿ ರೂ. ಪರಿಹಾರವನ್ನು ಕೋರಿದ್ದಾರೆ. ಸೆಲೀನಾ 2011 ರಲ್ಲಿ ಆಸ್ಟ್ರಿಯಾದ ಹೋಟೆಲ್ ಉದ್ಯಮಿ ಪೀಟರ್ ಹಾಗ್‌ ಅವರನ್ನು ವಿವಾಹವಾಗಿದ್ದು,. ದಂಪತಿಗೆ ಮೂವರು ಗಂಡು ಮಕ್ಕಳಿದ್ದಾರೆ 2012 ರಲ್ಲಿ ಅವಳಿ ಮಕ್ಕಳಾದ ವಿನ್ಸ್ಟನ್ ಮತ್ತು ವಿರಾಜ್ ಜನಿಸಿದ್ದು, 2017 ರಲ್ಲಿ ಆರ್ಥರ್ ಎಂಬ ಮಗ ಜನಿಸಿದ್ದಾನೆ. ಈ ದಂಪತಿಗೆ ಶಂಶೇರ್ ಎಂಬ ಇನ್ನೊಬ್ಬ ಮಗನಿದ್ದು ಹೃದಯಾಘಾತದಿಂದ ಮೊದಲೇ ನಿಧನರಾಗಿದ್ದರು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories