ಪ್ರಪೋಸ್ ಮಾಡುವ ಮೊದಲೇ ಲವ್ ಇನ್ಶೂರೆನ್ಸ್ ಪಡೆದ ಯುವತಿ, ಪ್ರೀತಿಸಿದ ಯುವಕನನ್ನೇ ಮದುವೆಯಾಗಿ ಇದೀಗ ಭರ್ಜರಿ ವಿಮೆ ಮೊತ್ತ ಕ್ಲೈಮ್ ಮಾಡಿಕೊಂಡಿದ್ದಾಳೆ. ಮದುವೆಯೂ ಆಯ್ತ, ದುಬಾರಿ ಮೊತ್ತದ ಮೊತ್ತವೂ ಪಡೆದಿದ್ದಾಳೆ. ಏನಿದು ಲವ್ ಇನ್ಶೂರೆನ್ಸ್?
ಹೆಲ್ತ್ ಇನ್ಶೂರೆನ್ಸ್, ಟರ್ಮ್ ಇನ್ಶೂರೆನ್ಸ್, ವಾಹನ ಇನ್ಶೂರೆನ್ಸ್ ಸೇರಿದಂತೆ ಹಲವು ವಿಮೆಗಳು ಲಭ್ಯವಿದೆ. ಆದರೆ ಲವ್ ಇನ್ಶೂರೆನ್ಸ್ ಬಗ್ಗೆ ಗೊತ್ತಾ? ಬಹುತೇಕರಿಗೆ ಗೊತ್ತೇ ಇಲ್ಲದ ಈ ಇನ್ಶೂರೆನ್ಸ್‌ನ್ನು ಯುವತಿ ಪಡೆದುಕೊಂಡಿದ್ದಾಳೆ. ತನ್ನು ಪ್ರೀತಿ ಶುರುವಾದಾಗಲೇ ಲವ್ ಇನ್ಶೂರೆನ್ಸ್ ಪಡೆದುಕೊಂಡಿದ್ದಾಳೆ. ಬಳಿಕ ಪ್ರೀತಿ,ಪ್ರಪೋಸ್ ಮಾಡಿ, ಆತನನ್ನೇ ಮದುವೆಯಾಗಿದ್ದಾಳೆ. ಇದೀಗ ಬಂಪರ್ ಮೊತ್ತ ಪಡೆದಿದ್ದಾಳೆ.
26
10 ವರ್ಷದ ಪಾಲಿಸಿ
ಲವ್ ಇನ್ಶೂರೆನ್ಸ್ ಭಾರತದಲ್ಲಿ ಇಲ್ಲ. ಇದು ಚೀನಾದಲ್ಲಿ ಆರಂಭಿಸಿದ ವಿಮೆ. 10 ವರ್ಷದ ಬಳಿಕ ವಿಮೆ ಮೊತ್ತ ಸಿಗಲಿದೆ. ಶಾಂಕ್ಸಿ ಪ್ರಾಂತ್ಯದ ವು ಅನ್ನೋ ಯುವತಿ ಈ ಪ್ರೀತಿ ವಿಮೆ ಪಡೆದು ಇದೀಗ ಮೊತ್ತ ಕ್ಲೈಮ್ ಮಾಡಿದ್ದಾಳೆ. 2016ರಲ್ಲಿ 29 ಡಾಲರ್ ನೀಡಿ ಈ ವಿಮೆ ಖರೀದಿಸಿದ್ದರು. ಇದೀಗ 2026ರಲ್ಲಿ 1,400 ಅಮೆರಿಕನ್ ಡಾಲರ್ ಅಂದರೆ 1.25 ಲಕ್ಷ ರೂಪಾಯಿ ಮೊತ್ತ ಪಡೆದಿದ್ದಾಳೆ.
36
ಏನಿದು ಲವ್ ಇನ್ಶೂರೆನ್ಸ್
ಇದು ಚೀನಾದಲ್ಲಿ ಆರಂಭಿಸಿದ ವಿಮೆ. ಹಲವು ವಿವಾದ, ಸಮಸ್ಯೆಗಳ ಬಳಿಕ 2017ರಲ್ಲಿ ಈ ವಿಮೆ ಸ್ಥಗಿತಗೊಳಿಸಲಾಗಿದೆ. ಆದರೆ ವು ಅನ್ನೋ ಯುವತಿ 2016ರಲ್ಲಿ ಈ ವಿಮೆ ಖರೀದಿಸಿದ್ದರು. 10 ವರ್ಷದ ಬಳಿಕ, ಮದುವೆಯಾ ಮೇಲೆ ಈ ವಿಮೆ ಕ್ಲೈಮ್ ಮಾಡಲು ಸಾಧ್ಯ. ಇದರ ಜೊತೆಗೆ ಕೆಲ ಷರತ್ತುಗಳು ಇವೆ. 2016ರಲ್ಲಿ ಬಾಯ್‌ಫ್ರೆಂಡ್‌ಗೆ ಗಿಫ್ಟ್ ಆಗಿ ಈ ವಿಮೆ ಖರೀದಿಸಿದ್ದರು.
ಪ್ರೀತಿ ಶುರುಮಾಡಿದಾಗ ಈ ವಿಮೆ ಖರೀದಿಸಬೇಕು. ವಿಶೇಷ ಅಂದರೆ ಇತರ ವಿಮೆಗಳ ರೀತಿ ಡ್ಯಾಮೇಜ್ ಆದರೆ ಈ ವಿಮೆ ಸಿಗುವುದಿಲ್ಲ. ಅಂದರೆ ಹಾರ್ಟ್ ಬ್ರೇಕ್ ಅಪ್‌ಗೆ ಈ ವಿಮೆ ಸಿಗುವುದಿಲ್ಲ. ಪ್ರೀತಿಸಿದ ವ್ಯಕ್ತಿ ಜೊತೆ ಮದುವೆಯಾದ ಬಳಿಕವೇ ಈ ವಿಮೆ ಕ್ಲೈಮ್ ಮಾಡಲು ಸಾಧ್ಯ. ಈ ವಿಮೆ ಪ್ರೀತಿಸಿದ ವ್ಯಕ್ತಿ ಜೊತೆ ಮದುವೆಯಾದ ಬಳಿಕ ಈ ವಿಮೆ ಕ್ಲೈಮ್ ಮಾಡಲು ಸಾಧ್ಯವಿದೆ. ಹೀಗೆ ವು ಕ್ಲೈಮ್ ಮಾಡಿ ಮೊತ್ತ ಪಡೆದಿದ್ದಾಳೆ.
56
ಶಾಲಾ ದಿನಗಳಿಂದ ಜೊತೆಯಲ್ಲಿದ್ದ ಕಪಲ್
ವು ತನ್ನ ಶಾಲಾ ದಿನಗಳಲ್ಲಿ ವಾಂಗ್ ಅನ್ನೋ ಹುಡುಗನ ಇಷ್ಟಪಟ್ಟಿದ್ದಳು. ಶಾಲೇ, ಕಾಲೇಜು ಬಳಿಕ ಉನ್ನತ ವ್ಯಾಸಾಂಗ ಜೊತೆಯಾಗಿ ಮಾಡಿದ್ದಾರೆ. 2016ರಲ್ಲಿ ಪ್ರೀತಿ ಗಾಢವಾಗಿದೆ. ಆದರೆ ಪ್ರಪೋಸ್ ಮಾಡಿರಲಿಲ್ಲ. ಇದೇ ವೇಳೆ ಲವ್ ಇನ್ಶೂರೆನ್ಸ್ ಖರೀದಿಸಿದ್ದಳು. ಪ್ರೀತಿ ಮುಂದುವರಿದಿತ್ತು. ಇದರ ನಡುವೆ ಪ್ರಪೋಸ್ ಮಾಡಿದ್ದಳು. ವಾಂಗ್ ಕೂಡ ಒಪ್ಪಿಕೊಂಡಿದ್ದಾನೆ. ಸುದೀರ್ಘ ಪ್ರೀತಿಯಲ್ಲಿದ್ದ ಈ ಜೋಡಿ 2025ರಲ್ಲಿ ಮದುವೆಯಾಗಿತ್ತು. ಇದೀಗ 2026ರಲ್ಲಿ ಲವ್ ಇನ್ಶೂರೆನ್ಸ್ ಕ್ಲೈಮ್ ಮಾಡಿದ್ದಾರೆ.
66
10 ಸಾವಿರ ಗುಲಾಬಿ ಅಥವಾ ಕ್ಯಾಶ್
ವಿಮೆಯ ಷರತ್ತಿನಲ್ಲಿ ಕ್ಲೈಮ್ ಸಂದರ್ಭದಲ್ಲಿ 10 ಸಾವಿರ ಗುಲಾಬಿ ಅಥವಾ ಹಾರ್ಟ್ ಶೇಪ್ ಡೈಮಂಡ್ ರಿಂಗ್ ಅಥವಾ ನಗದು ಹಣ ಎಂಬುದು ಷರತ್ತು ಈ ಮೂರರಲ್ಲಿ ಯಾವುದಾದರೂ ಒಂದು ಕ್ಲೈಮ್ ಮಾಡಲು ಸಾಧ್ಯವಿದೆ. ಈ ಪೈಕಿ ವು ನಗದು ಹಣ ಕ್ಲೈಮ್ ಮಾಡಿದ್ದಾಳೆ. 2017ರಿಂದ ಚೀನಾದಲ್ಲಿ ಈ ಇನ್ಶೂರೆನ್ಸ್ ಪಾಲಿಸಿ ಲಭ್ಯವಿಲ್ಲ.
10 ಸಾವಿರ ಗುಲಾಬಿ ಅಥವಾ ಕ್ಯಾಶ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.