ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, ಬೀದಿ ಜಗಳವಾದ ಡಿವೋರ್ಸ್ ಕಲಹ

Published : Jan 13, 2026, 03:09 PM IST

ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗಪಡಿಸಿದ ಪತಿ, 2013, 2017ರಲ್ಲಿನ ಮೇರಿ ಕೋಮ್ ಅಫೈರ್ ಕುರಿತ ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ. ಪತಿ ವಿರುದ್ದ ಮೇರಿ ಕೋಮ್ ಮಾಡಿದ ಆರೋಪದ ಬೆನ್ನಲ್ಲೇ ಇದೀಗ ಕಲಹ ಬೀದಿ ಜಗಳವಾಗಿದೆ. 

PREV
18
ಮೇರಿ ಕೋಮ್ ಪತಿಯಿಂದ ಸ್ಫೋಟಕ ಹೇಳಿಕೆ

ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಹಾಗೂ ಪತಿ ಒನ್ಲರ್ (ಕರುಂಗ್ ಒಂಖೋಲರ್) ನಡುವಿನ ಡಿವೋರ್ಸ್ ಜಟಾಪಟಿ ಇದೀಗ ಬೀದಿ ರಂಪಾಟವಾಗಿ ಬದಲಾಗಿದೆ. ಇತ್ತೀಚೆಗೆ ಮೇರಿ ಕೋಮ್ ಪತಿ ಕರುಂಗ್ ಒಂಖೋಲರ್ ತನ್ನ ಹೆಸರಿನಲ್ಲಿ ಕೋಟಿ ಕೋಟಿ ಸಾಲ ಮಾಡಿದ್ದ. ನಾನು ನಂಬಿದ್ದ ವ್ಯಕ್ತಿಯಾಗಿರಲಿಲ್ಲ ಎಂದು ಮೇರಿ ಕೋಮ್ ಹೇಳಿದ್ದರು. ಪತಿ ವಿರುದ್ದ ಹಲವು ಗಂಭೀರ ಆರೋಪಕ್ಕೆ ಇದೀ ಪತಿ ಒನ್ಲರ್ ತಿರುಗೇಟು ನೀಡಿದ್ದಾರೆ. ಆದರೆ ಈ ಹೇಳಿಕೆ ಡಿವೋರ್ಸ್ ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟಿದೆ.

28
ಮೇರಿ ಕೋಮ್‌ಗೆ ಇದೆ ಅಕ್ರಮ ಸಂಬಂಧ

ಮದುವೆಯಾಗಿ ಮಕ್ಕಳು ಸಂಸಾರ ನಡೆಯುತ್ತಿತ್ತು. ಹಲವು ಅಡತಡೆಗಳು, ಆಕೆಯ ಅಭ್ಯಾಸ ಟೂರ್ನಿ ನಡುವೆ ಇಡೀ ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಿ ಆಕೆಯನ್ನು ಸಂಪೂರ್ಣವಾಗಿ ಬಾಕ್ಸಿಂಗ್ ಫೋಕಸ್ ಮಾಡುವ ವಾತಾವರಣ ನೀಡಿದ್ದೆ. ಆದರೆ 2013ರಲ್ಲಿ ಆಕೆಗೆ ಜೂನ್ಯಿಯರ್ ಬಾಕ್ಸರ್ ಜೊತೆಗೆ ಅಕ್ರಮ ಸಂಬಂಧವಿತ್ತು. ಇದು ಬಹಿರಂಗವಾದ ಬಳಿಕ ಕಿತ್ತಾಟ, ಜಗಳ ನಡೆದಿತ್ತು. ಬಳಿಕ ಮಾತುಕತೆ, ಸಂಧಾನ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಲಾಗಿತ್ತು.

38
2017ರಲ್ಲಿ ಮತ್ತೊಂದು ಅಫೈರ್

2013ರಲ್ಲಿ ಕುಟುಂಬಸ್ಥರು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲಾಗಿತ್ತು. ಎಲ್ಲವೂ ಒಕೆ ಎಂದುಕೊಂಡಾಗಲೆ 2017ರಲ್ಲಿ ಮತ್ತೆ ಮೇರಿ ಕೋಮ್ ಅಕ್ರಮ ಸಂಬಂಧ ಬಹಿರಂಗವಾಗಿತ್ತು. ಮೇರಿ ಕೋಮ್ ಬಾಕ್ಸಿಂಗ್ ಅಕಾಡೆಮಿ ಸಂಬಂಧಿಸಿದ್ದ ವ್ಯಕ್ತಿಯೊಬ್ಬನ ಜೊತೆ ಅಫೈರ್ ಬೆಳೆದಿತ್ತು. ಈ ವೇಳೆ ಮತ್ತೆ ಆಕೆ ಜೊತೆ ಜಗಳವಾಡಿದರೆ ಪ್ರಯೋಜನವಿಲ್ಲ ಎಂಬುದು ಅರಿತಿದ್ದೆ. ಆತನ ಜೊತೆಗಿನ ವ್ಯಾಟಾಸ್ಪ್ ಮೆಸೇಜ್, ಆತನ ಹೆಸರು ಎಲ್ಲವೂ ನನ್ನ ಬಳಿ ಸಾಕ್ಷ್ಯವಿದೆ ಎಂದು ಒನ್ಲರ್ ಆರೋಪಿಸಿದ್ದಾರೆ.

48
ನಾವು ಡಿವೋರ್ಸ್ ಪಡೆದಿದ್ದೇವೆ, ಆದರೆ

ಆಕೆ ಮತ್ತೊಂದು ಸಂಬಂಧ ಇಟ್ಟುಕೊಂಡು, ನಿರ್ಧಾರ ತೆಗೆದುಕೊಂಡಿದ್ದಾಳೆ. ನಾವಿಬ್ಬರು ಡಿವೋರ್ಸ್ ಅರ್ಜಿ ಹಾಕಿ ಬೇರೆ ಬೇರೆಯಾಗಿದ್ದೇವೆ. ಆಕೆ ಸಂಬಂಧ ಬೆಳೆಸುವುದು, ಇಟ್ಟಕೊಳ್ಳುವುದು ಆಕೆಯ ಆಯ್ಕೆ. ಆದರೆ ಸಾರ್ವಜನಿಕವಾಗಿ ಈ ರೀತಿ ಆರೋಪ ಮಾಡುವುದು ಸರಿಯಲ್ಲ. ಆಕೆ ಮತ್ತೊಂದು ಮದುವೆಯಾಗುವುದಕ್ಕೂ ನನ್ನ ಅಭ್ಯಂತರವಿಲ್ಲ. ಆದರೆ ನನ್ನ ವಿರದ್ದ ಆರೋಪ ಮಾಡುವಾಗ ದಾಖಲೆ ಇಲ್ಲದೆ ಮಾಡಬಾರದು. ವಿನಾ ಕಾರಣ ನಾನು, ನನ್ನ ಕುಟುಂಬ ಮಕ್ಕಳ ಮೇಲೂ ಪರಿಣಾಮ ಬೀರುತ್ತದೆ ಎಂದು ಒನ್ಲರ್ ಹೇಳಿದ್ದಾರೆ.

58
ಕೋಟಿ ಕೋಟಿ ವಂಚನೆ ಆರೋಪಕ್ಕೆ ಸ್ಪಷ್ಟನೆ

ಮೇರಿ ಕೋಮ್ ಖಾತೆಯಿಂದ, ಆಕೆಯ ಹಣವನ್ನು ಪೋಲು ಮಾಡಿದ್ದೇನೆ. ಆಕೆಯ ಹೆಸರಲ್ಲಿ ಕೋಟಿ ಕೋಟಿ ಸಾಲ ಮಾಡಿದ್ದೇನೆ ಎಂದು ಆರೋಪ ಮಾಡಿದ್ದಾರೆ. ಆದರೆ ನನ್ನ ಖಾತೆ, ಟ್ರಾನ್ಸಾಕ್ಷನ್ ಪರಿಶೀಲನೆ ಮಾಡಿ ನೋಡಲಿ, ಯಾರು ವಂಚಿಸಿದ್ದರೆ. ಯಾರು ಹಣ ಪಡೆದಿದ್ದಾರೆ ಅನ್ನೋದು ಗೊತ್ತಾಗಲಿದೆ. 18 ವರ್ಷ ಸಂಸಾರ ಮಾಡಿದ್ದೇವೆ.ಈಗ ವಂಚನೆ ಆರೋಪ ಮಾಡುತ್ತಿದ್ದಾರೆ ಎಂದು ಓನ್ಲರ್ ಹೇಳಿದ್ದಾರೆಯ.

68
ನಾನು ಬಾಡಿಗೆ ಮನೆಯಲ್ಲಿದ್ದೇನೆ

ಮೇರಿ ಕೋಮ್ ಸೆಲೆಬ್ರೆಟಿ. ಆಕೆಯ ಆರ್ಥಿಕತೆ, ವ್ಯವಹಾರ, ಆದಾಯದ ಕುರಿತು ನಾನು ಕಮೆಂಟ್ ಮಾಡಲ್ಲ. ಆದರೆ ನಾನು ಆಕೆಯಿಂದ ಕೋಟಿ ಕೋಟಿ ಪಡೆದಿರುವ ಆರೋಪ ಸುಳ್ಳು. ನಾನು ಈಗಲೂ ದೆಹಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದೇನೆ. ನಾನು ಕೋಟಿ ಕೋಟಿ ಹಣದಿಂದ ಮನೆ, ಜಮೀನು ಖರೀದಿಸಿದ್ದೇನೆ ಎಂದರೆ ದಾಖಲೆ ಇರಬೇಕಲ್ಲ. ತೋರಿಸಲಿ ಎಂದು ಸವಾಲು ಹಾಕಿದ್ದಾರೆ.

ನಾನು ಬಾಡಿಗೆ ಮನೆಯಲ್ಲಿದ್ದೇನೆ

78
ನನ್ನ ಮಕ್ಕಳ ಮೇಲಿನ ಪ್ರೀತಿಯಿಂದ ನಾನು ಮೌನವಾಗಿದ್ದೇನೆ

ಆರೋಪ ಪ್ರತ್ಯಾರೋಪ ಏನೇ ಇರಬಹುದು. ಆದರೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ. ನಮ್ಮ ಪ್ರಕರಣ ಕೋರ್ಟ್‌ನಲ್ಲಿ ವಿಚಾರಣೆಗೆ ಬರಬೇಕಿದೆ. ಏನಾದರು ಹೇಳುವುದಿದ್ದರೆ ಕೋರ್ಟ್‌ನಲ್ಲಿ ಹೇಳಬಹುದು. ಆದರೆ ಮೇರಿ ಕೋಮ್ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಮಕ್ಕಳ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನಾನು ಮಕ್ಕಳ ಮೇಲಿನ ಪ್ರೀತಿಯಿಂದ, ಅವರಿಗೆ ಸಮಸ್ಯೆ ಆಗಬಾರದು ಎಂದು ಮೌನವಾಗಿದ್ದೇನೆ ಎಂದು ಒನ್ಲರ್ ಹೇಳಿದ್ದಾರೆ.

88
ಬಳಕೆ ಮಾಡಿ ಬಿಸಾಡಿದಳು

ಆಕೆಯ ಕಷ್ಟ ಸುಖ ಸೇರಿದಂತೆ ಹಲವು ಸವಾಲುಗಳಲ್ಲಿ ಜೊತೆಯಾಗಿ ನಿಂತಿದ್ದೇನೆ. ಕರಿಯರ್‌ನಲ್ಲಿ ಎದುರಾದ ಪ್ರತಿ ಸವಾಲಿಗೆ ನಾನು ಬೆನ್ನೆಲುಬಾಗಿ ನಿಂತಿದ್ದೆ. ನನ್ನ 18 ವರ್ಷ ಮೇರಿ ಕೋಮ್ ಹಾಗೂ ಕುಟುಂಬಕ್ಕಾಗಿ ನೀಡಿದ್ದೇನೆ. ಕೊನೆಗೆ ನನ್ನನ್ನು ಬಳಕೆ ಮಾಡಿ ಬಿಸಾಡಿದಳು. ನಾನು ಯಾವುತ್ತಿಗೂ ಮರೆಯುವುದಿಲ್ಲ ಎಂದು ಓನ್ಲರ್ ಹೇಳಿದ್ದಾರೆ.

ಬಳಕೆ ಮಾಡಿ ಬಿಸಾಡಿದಳು

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories