ಬಿಗ್ ಬಾಸ್ (Bigg Boss 12) ಮೂಲಕ ಸಕತ್ ಫೇಮಸ್ ಆಗಿರೋ ರಕ್ಷಿತಾ ಶೆಟ್ಟಿ ಅವರಿಗೆ ಈಗಲೂ ಸಕತ್ ಡಿಮಾಂಡ್ ಇದ್ದೇ ಇದೆ. ರಿಯಾಲಿಟಿ ಷೋಗಳಲ್ಲಿ, ವಿವಿಧ ಕಾರ್ಯಕ್ರಮಗಳಲ್ಲಿ ಅವರಿಗೆ ಆಫರ್ಸ್ ಬರುತ್ತಿರುತ್ತವೆ. ರಕ್ಷಿತಾ ಬಾಯಿ ಬಿಟ್ಟರೆ ಅಲ್ಲಿ ಹಾಸ್ಯ ಇದ್ದದ್ದೇ. ಅದರಲ್ಲಿಯೂ ಅವರ ಅರೆಬರೆ ಕನ್ನಡ ಕೇಳಲು ಖುಷಿಕೊಡುವ ಜೊತೆಗೆ ಹಾಸ್ಯದ ಲೇಪನವೂ ಅಲ್ಲಿರುತ್ತದೆ. ಆದರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕನ್ನಡವನ್ನು ಮಾತನಾಡಲು ಅವರು ಪಡುವ ಪ್ರಯತ್ನದಿಂದಲೇ ಎಲ್ಲರ ಮನ ಗೆದ್ದಿದ್ದಾರೆ ರಕ್ಷಿತಾ.
26
ಕ್ವಾಟ್ಲೆ ಕಿಚನ್ ಷೋನಲ್ಲಿ...
ಸದ್ಯ ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕ್ವಾಟ್ಲೆ ಕಿಚನ್ ಅಡುಗೆ ಷೋನಲ್ಲಿ ಕಾಣಿಸಿಕೊಳ್ಳುತ್ತಿರುವ ರಕ್ಷಿತಾ ಅಲ್ಲಿಯೂ ಹಾಸ್ಯದಿಂದ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಹೇಳಿ ಕೇಳಿ ರಕ್ಷಿತಾ ಅಡುಗೆಯಲ್ಲಿ ಎಕ್ಸ್ಪರ್ಟ್. ಅದರಂತೆ ಕ್ವಾಟ್ಲೆ ಕಿಚನ್ ಷೋನಲ್ಲಿಯೂ ತಮ್ಮ ಅಡುಗೆಯ ಮೂಲಕ ಹಾಗೂ ಕಾಮಿಡಿಯಿಂದಾಗಿ ಎಲ್ಲರನ್ನೂ ರಂಜಿಸುತ್ತಿದ್ದಾರೆ.
36
ಮದುಮಗಳ ಲುಕ್ನಲ್ಲಿ..
ಇದೀಗ ಮಂಗಳೂರು ಪುಟ್ಟಿ ಎಂದೇ ಫೇಮಸ್ ಆಗಿರೋದ ರಕ್ಷಿತಾ ಶೆಟ್ಟಿಯ ಹೊಸ ಲುಕ್ ವೈರಲ್ ಆಗಿದೆ. ಇದರಲ್ಲಿ ಅವರು ಮದುಮಗಳಂತೆ ಮಿಂಚುತ್ತಿದ್ದಾರೆ. ಇದನ್ನು ನೋಡಿದ ನೆಟ್ಟಿಗರು Somethin special? ಎಂದು ಪ್ರಶ್ನಿಸುತ್ತಿದ್ದಾರೆ.
ಅಷ್ಟಕ್ಕೂ, ಕೆಲ ದಿನಗಳಿಂದ ಜಾಲತಾಣದಲ್ಲಿ, ಗಿಲ್ಲಿ ಮತ್ತು ರಕ್ಷಿತಾ ಜೋಡಿ ಹವಾ ಸೃಷ್ಟಿಸ್ತಿದೆ. ಇದಕ್ಕೆ ಕಾರಣ, ರಕ್ಷಿತಾ ಶೆಟ್ಟಿ ಸದ್ಯ ಕ್ವಾಟ್ಲೆ ಕಿಚನ್ ರಿಯಾಲಿಟಿ ಷೋನಲ್ಲಿ ಭಾಗಿಯಾಗಿದ್ದು, ಅದಕ್ಕೀಗ ಗಿಲ್ಲಿ ನಟನ ಎಂಟ್ರಿಯಾಗಿದೆ. ರಕ್ಷಿತಾ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಗಿಲ್ಲಿ ನಟನ ಜೊತೆಗಿನ ಫೋಟೋ ಶೇರ್ ಮಾಡಿದ್ದೇ ತಡ, ಮತ್ತೆ ಅವರ ಫ್ಯಾನ್ಸ್ ಎದ್ದು ಬಿಟ್ಟಿದ್ದಾರೆ. ಥರಹೇವಾರಿ ಮ್ಯೂಸಿಕ್ ಹಿನ್ನೆಲೆಯಲ್ಲಿ ಈ ಜೋಡಿ ಒಂದಾಗಬೇಕು ಎಂದು ಪೋಸ್ಟ್ ಶೇರ್ ಮಾಡಿಕೊಳ್ಳುತ್ತಿದ್ದಾರೆ. ಕೆಲ ಸಮಯದಿಂದ ಸೈಲಾಂಟಿದ್ದ ಜೋಡಿಯ ವಿಷ್ಯ ಮತ್ತೆ ಮುನ್ನೆಲೆಗೆ ಬರುತ್ತಿದೆ.
56
ಆಸೆ ಈಡೇರಲಿ
ಈಚೆಗಷ್ಟೇ ರಕ್ಷಿತಾ ಶೆಟ್ಟಿಗೆ ಗಿಲ್ಲಿ ನಟನಿಂದ ಏನು ಗಿಫ್ಟ್ ಬೇಕು ಎಂದು ಪ್ರಶ್ನಿಸಿದ್ದಾಗ ಅವರು ಲೈಫ್ಲಾಂಗ್ ಫ್ರೆಂಡ್ಷಿಪ್ ಎಂದು ಹೇಳಿದ್ದರು. ಅದರ ಬೆನ್ನಲ್ಲೇ ಮದುಮಗಳ ಲುಕ್ನಲ್ಲಿ ಮಿಂಚುತ್ತಿರುವ ರಕ್ಷಿತಾಗೆ ಥಹರೇವಾರಿ ಪ್ರಶ್ನೆಗಳ ಸುರಿಮಳೆಯಾಗುತ್ತಿದೆ. ತಮ್ಮ ಆಸೆ ಬೇಗ ಈಡೇರಲಿ. ಪುಟ್ಟಿ ಮದುಮಗಳಾಗಿ ಮಿಂಚಲಿ ಎಂದು ಹಾರೈಸುತ್ತಿದ್ದಾರೆ.
66
ಸಿನಿಮಾ ಆಫರ್ಸ್ ರಿಜೆಕ್ಟ್
ಸಾಮಾನ್ಯವಾಗಿ ಬಿಗ್ಬಾಸ್ನಲ್ಲಿ ಪ್ರಸಿದ್ಧಿ ಹೊಂದಿದ ಮೇಲೆ ಅವರಿಗೆ ಚಿತ್ರದಲ್ಲಿ ಆಫರ್ಬರುವುದು ಸಹಜವೇ. ಅದೇ ರೀತಿ ಬಿಗ್ಬಾಸ್ ರನ್ನರ್ ಅಪ್ ಆಗಿರುವ ರಕ್ಷಿತಾ ಶೆಟ್ಟಿ ಅವರಿಗೆ ಕೂಡ ಸಿನಿಮಾದಲ್ಲಿ ಆಫರ್ ಬಂದಿತ್ತಂತೆ. ಇದಾಗಲೇ ಗಿಲ್ಲಿ ನಟ ಸಿನಿಮಾ ಒಪ್ಪಿಕೊಂಡಿದ್ದಾರೆ. ಆದರೆ, ರಕ್ಷಿತಾ ಶೆಟ್ಟಿ ತಾವು ಸಿನಿಮಾ ಒಪ್ಪಿಕೊಳ್ಳಲಿಲ್ಲ ಎಂದು ಹೇಳಿದ್ದು, ಅದಕ್ಕೆ ಕಾರಣ ನೀಡಿದ್ದಾರೆ. ಈ ಕುರಿತು ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿರುವ ರಕ್ಷಿತಾ ಶೆಟ್ಟಿ, ನನಗೆ ಸಿನಿಮಾ ಆಫರ್ಸ್ ಬಂದಿದ್ದವು. ಆದರೆ, ಕೇವಲ ಗ್ಲಾಮರ್ ಗೊಂಬೆಯಾಗಿ ತೆರೆಮೇಲೆ ಕಾಣಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಯಾವ ರೀತಿಯ ಪಾತ್ರ ಎನ್ನುವುದು ಮುಖ್ಯವಾಗುತ್ತದೆ. ಆ ಪಾತ್ರ ನನಗೆ ಸೂಟ್ ಆಗಬೇಕು. ಅದಕ್ಕಾಗಿ ಸದ್ಯ ಯಾವುದೇ ಸಿನಿಮಾ ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.